ಜುಲೈ 22, 2021: ವರ್ಷ ಕಳೆದರೂ ಹೋಗಿಲ್ಲವೇಕೆ ಹೆದರಿಕೆ?
ಎರಡನೇ ಅಲೆ, ಮೂರನೇ ಅಲೆ, ರೂಪಾಂತರಗಳು, ರೋಗರಕ್ಷಣೆ, ಕಪ್ಪು ಶಿಲೀಂಧ್ರ, ಲಸಿಕೆಗಳ ಬಗ್ಗೆ 8 ಪುಟಗಳ ಮಾಹಿತಿಯೊಂದಿಗೆ ಎರಡನೇ ಮುದ್ರಣ ಮುಂದಿನ ವಾರದಲ್ಲಿ
ಕೊರೋನ ಹೆದರದಿರೋಣ: ಎರಡನೇ ಮುದ್ರಣ
ಪುಸ್ತಕದ ಬೆಲೆ ರೂ. 160/-
ಪುಸ್ತಕದ ಬೆಲೆ ರೂ. 160/-
ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಕೃತಜ್ಞತೆಗಳು
ಕೊರೋನ ಹೆದರದಿರೋಣ: ಮೊದಲ ಮುದ್ರಣ
ಆಗಸ್ಟ್ 15, 2020
ಪುಸ್ತಕದ ಬೆಲೆ ರೂ. 150/-
ಕೊರೋನ ಹೆದರದಿರೋಣ – ವಾರ್ತಾಭಾರತಿ ಜೊತೆ ಸಂವಾದ
ರಾಜಾರಾಂ ತಲ್ಲೂರು, ಆಗಸ್ಟ್ 18, 2020
ಸರ್ಕಾರಕ್ಕೇ ಪಠ್ಯ ಪುಸ್ತಕ ಆಗಲಿ!
– – – – – – – – – – — –
ಕೊರೊನಾ ಮಟ್ಟಿಗೆ ಕರ್ನಾಟಕದಲ್ಲಿ ಪ್ರೊಫೆಟಿಕ್ ಆಗಿ ಮಾತನಾಡುತ್ತಾ ಬಂದಿದ್ದಾರೆ ಅನ್ನಿಸುವ ಡಾ|ಕಕ್ಕಿಲ್ಲಾಯರು “ಆಧಾರ ಸಹಿತ” ಮಾತನಾಡಿದರೆ ವಿಜ್ಞಾನ ಎಷ್ಟು ನೇರಹಾದಿ ಎಂಬುದನ್ನು ಕಳೆದ ಮಾರ್ಚ್ ತಿಂಗಳಿನಿಂದೀಚೆಗೆ ಸತತವಾಗಿ ಸಾಧಿಸಿ ತೋರಿಸುತ್ತಾ ಬಂದಿದ್ದಾರೆ.
ಕಳೆದ ಆರು ತಿಂಗಳಲ್ಲಿ, ದಿನ ಕಳೆದಂತೆಲ್ಲ, ಸರ್ಕಾರ – ಅದರ ಪರಿಣತ ಸಮಿತಿ – ಅಧಿಕಾರಿಗಳು ತಮ್ಮ ಯು- ಟರ್ನ್ ಗಳ ಸುಳಿಯೊಳಗೆ ಸಿಲುಕಿಕೊಂಡು ಪೂರ್ಣ ಬಯಲಾಗುತ್ತಾ ಬಂದರೆ, ಡಾ|ಕಕ್ಕಿಲ್ಲಾಯರು ಏಕಾಂಗಿಯಾಗಿ ನಿಂತ ಸತ್ಯ ಎಷ್ಟು ಪ್ರಭಾವಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಸಕಾಲಿಕವಾಗಿ ಬಂದಿರುವ ಈ ಪುಸ್ತಕವು ಸರ್ಕಾರಕ್ಕೆ ಕೊರೊನಾ ಮ್ಯಾನೇಜ್ಮೆಂಟ್ ನಿರ್ಧಾರಗಳಿಗೆ ಪಠ್ಯ-ಪರಾಮರ್ಶೆ ಪುಸ್ತಕ ಆದರೆ ಒಳ್ಳೆಯದಿತ್ತು. ಅರ್ಥಾತ್ ಸರ್ಕಾರಿ ಅಧಿಕಾರಿಗಳು ಎಲ್ಲರೂ ಒಮ್ಮೆ ಇದನ್ನು ಕಡ್ಡಾಯವಾಗಿ ಓದಿ, ಅರ್ಥಮಾಡಿಕೊಳ್ಳುವಂತಾದರೆ ಒಳ್ಳೆಯದಿತ್ತು.
ಈ ಸಂಕಟದ ಕಾಲದಲ್ಲಿ ಪ್ರತಿಯೊಬ್ಬರೂ, ತಮಗೆ ಅರ್ಥವಾಗುವಷ್ಟಾದರೂ ಓದಲೇ ಬೇಕಾದ ಪುಸ್ತಕ ಇದು. ಕೊರೊನಾದ ವೈದ್ಯ ವಿಜ್ಞಾನ, ಸೋಷಿಯಾಲಜಿ, ಇಕನಾಮಿಕ್ಸ್, ಸ್ಟಾಟಿಸ್ಟಿಕ್ಸ್, ಸೈಕಾಲಜಿ, ಪೊಲಿಟಿಕ್ಸ್, ಎಲ್ಲವೂ ಸಮ್ಮಿಳಿತವಾಗಿರುವ ಅಪರೂಪದ ಪುಸ್ತಕ ಇದು. ಸಂತೆಗೆಂದು ನೇಯ್ದ ಒಂದು ಮೊಳದಂತೆ ಕಾಣಿಸುತ್ತಿಲ್ಲ ಎಂಬುದು ಈ ಪುಸ್ತಕದ ಹೆಚ್ಚುಗಾರಿಕೆ.
ಈ ಪುಸ್ತಕದ ಸಹಲೇಖಕಿ, ಕಕ್ಕಿಲ್ಲಾಯರ ಪತ್ನಿ ಡಾ| ಬಾಲಸರಸ್ವತಿ ಸುರತ್ಕಲ್ ವಿದ್ಯಾದಾಯಿನಿ ಹೈಸ್ಕೂಲಿನಲ್ಲಿ ಒಂದೋ ಎರಡೋ ವರ್ಷ ನನ್ನ ಬ್ಯಾಚ್ ಮೇಟು. ನಾನು ಕನ್ನಡ ಮೀಡಿಯಂ ಆದರೆ, ಅವರು ಇಂಗ್ಲೀಷ್ ಮೀಡಿಯಂ. ನಮಗೆ ಕನ್ನಡ ಭಾಷಾ ತರಗತಿಗಳು ಒಟ್ಟಿಗಿರುತ್ತಿದ್ದವು.
ಒಂದೆರಡು ವರ್ಷ ಹಿಂದೆ, ಹೈಸ್ಕೂಲ್ ಫೇಸ್ ಬುಕ್ ಗ್ರೂಪ್ ಒಂದರಲ್ಲಿ ಕಂಡಾಗ, ಅವರು ಈಗ ಮಂಗಳೂರಿನಲ್ಲಿ ಚರ್ಮರೋಗ ತಜ್ಞೆ ಎಂದು ಗಮನಕ್ಕೆ ಬಂದದ್ದು. ಈ ಪುಸ್ತಕಕ್ಕಾಗಿ ಅವರಿಗೂ ಅಭಿನಂದನೆಗಳು.
Prof. Narendra Nayak, President, FIRA – August 18, 2020
In an era in which sly crooks with dubious degrees and equally suspect knowledge, sugar pill dispensers and herbalists out to make a fast buck, with whatsapp university junk making rounds with things from killing viruses using steam to fruits with pH 22.7(where as the whole range of pH is from 0 to 14!), meditation, contortions,various types of breathing- combinations of these along with makers of grandmas soup powders, ímmunity boosting foods, drinks etc along with zapguns killing covid19 viruses specifically! With markets for Sanitisers,masks, PPE kits booming truth has become a casualty.
While on one hand the scaremonger media is aiding this on the other groups of people with devil may care attitude throwing all rules of measures to curb transmission of the infection to the winds are making a mockery of physical distancing and hygiene norms. Amidst this cacophony there is the need to take a rational approach to the whole issue and Drs.Shrinivas Kakkilaya and Balasaraswathi have done a commendable job of presenting the facts is a very rational, readable format in the form of a book in Kannada entitled- let us not be scared of corona.
While he is a physician of about 25 years of practice of rational evidence based medicine, she is a dermatologist of equal experience. The book is very informative about the scientific as well as clinical aspects and a must read for every one who needs to gain knowledge and take informed decisions when infected by the virus. With a vaccine a long way off and community spread started long back it is only a matter of time that every one gets infected. All the measures taken so far have only delayed the spread.
ಡಾ. ಕೇದಿಗೆ ಅರವಿಂದ ರಾವ್, ಆಗಸ್ಟ್ 22, 2020
ಜಾಗತಿಕ ಕೊರೋನಾ ಸಂಕಷ್ಟ ಭಯ ಗೊಂದಲ ಅಂಧಕಾರಗಳ ನಡುವೆ ಹೊಸ ಆಶಾಕಿರಣ…. ಪ್ರತಿಯೊಬ್ಬರೂ ಕೊಂಡು ಓದಲೇ ಬೇಕಾದ ಪುಸ್ತಕ #ಕೊರೋನಾಹೆದರದಿರೋಣ.
ಲೇಖಕ ಮತ್ತು ಖ್ಯಾತ ವೈದ್ಯ ತಜ್ಞ ಡಾ. ಬೇವಿಂಜೆ ಶ್ರೀನಿವಾಸ ಕಕ್ಕಿಲ್ಲಾಯ ತಮ್ಮ ಅಪಾರ ಜ್ಞಾನ, ಜಾಗತಿಕ ಮಟ್ಟದ ದಾಖಲೆಗಳ ಸಂಶೋಧನಾತ್ಮಕ ವಿಶ್ಲೇಷಣೆ, ಸ್ಪಷ್ಟತೆ, ಅಗತ್ಯವಾದ ವೈಚಾರಿಕ ನಿಲುವು ಮತ್ತು ಜನ ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವ ಸುಂದರ ಭಾಷಾ ನಿರೂಪಣೆ ಯೊಂದಿಗೆ ಬರೆದು ಕ್ಲಪ್ತ ಸಮಯದಲ್ಲಿ ಪ್ರಕಟಿಸಿ ಕೊರೋನಾ ಭಯದ ವಾತಾವರಣವನ್ನು ತಿಳಿಯಾಗಿ ಸುವ ಪ್ರಯತ್ನ ಮಾಡಿದ್ದಾರೆ. ಈ ಕೈಂಕರ್ಯ ದಲ್ಲಿ ಅವರ ಪತ್ನಿ ಖ್ಯಾತ ಚರ್ಮ ರೋಗ ತಜ್ಞೆ ಡಾ. ಬಾಲಸರಸ್ವತಿ ಯವರೂ ಕೈಜೋಡಿಸಿರುವುದು ಇನ್ನಷ್ಟು ಪೂರಕವಾಗಿದೆ. ನಮ್ಮ ಕುಟುಂಬದ ಆತ್ಮೀಯ ಡಾ. ಕಕ್ಕಿಲ್ಲಾಯ ದಂಪತಿಗಳಿಗೆ ದನ್ಯತಾಪೂರ್ವಕ ಅಭಿನಂದನೆಗಳು.
ಡಾ. ಸಿದ್ದನಗೌಡ ಪಾಟೀಲ್, ಆಗಸ್ಟ್ 25, 2020
ಕೊರೋನ ಹೆದರದಿರೋಣ
ಕೊರೋನ ಅರಿವಿನ ಆಂದೋಲನಕ್ಕೊಂದು ಅದ್ಭುತ ಆಕರ,ಕೊರೋನ ಇತಿಹಾಸದ ಜೊತೆಗೇ ಸತ್ಯ- ಮಿಥ್ಯ ಗಳ ವಿಶ್ಲೇಷಣೆ,ಸೋಂಕಿನ ಲಕ್ಷಣಗಳು, ತಕ್ಷಣದ ರಕ್ಷಣೋಪಾಯಗಳು,ಬೆದರಿಸುವ ಮಾಧ್ಯಮ ಲೋಕದ ಆರ್ಭಟ,ಅವಿವೇಕಿ ಪ್ರಭುತ್ವದ ನಡೆಗಳು,ಅಸಹಾಯಕ ವೈದ್ಯಲೋಕದ ಆತಂಕಗಳು……
ಡಾ.ಶ್ರೀನಿವಾಸ ಕಕ್ಕಿಲ್ಲಾಯ,ಡಾ.ಬಾಲಸರಸ್ವತಿ ಪಣಂಬೂರು ಅವರೇ ,
ನಿಮ್ಮ ಅಧ್ಯಯನದ ಆಳ, ವಿಶ್ಲೇಷಣೆಯ ವಿಧಾನ,ಜೊತೆಗೇ ಜನರ ಮೇಲಿನ ಪ್ರೀತಿ ಈ ಪುಸ್ತಕದ ಮೂಲಕ ವ್ಯಕ್ತವಾಗಿದೆ ,ಭಯದ ಮಧ್ಯೆಯೇ ಭರವಸೆಯ ಕಿರಣ ತೋರಿದ ನಿಮಗೆ ವಂದನೆಗಳು.
ಜ್ಯೋತಿ ಕೆ, ಬೆಂಗಳೂರು ಆಗಸ್ಟ್ 25, 2020
ಕೊರೋನ ಕುರಿತು ವೈಜ್ಞಾನಿಕ ಮಾಹಿತಿ, ತಪ್ಪು ತಿಳುವಳಿಕೆ ನಿವಾರಣೆ , ವಹಿಸಬೇಕಾದ ಎಚ್ಚರ , ಸೋಂಕಿನಿಂದ ಹೊರಬರಬೇಕಾದ ಮಾರ್ಗಗಳ ಕುರಿತ ಅದ್ಭುತವಾದ ಕೃತಿ.ಜನಪರ ಕಾಳಜಿಯ ಈ ವೈದ್ಯರಿಗೆ ವಂದನೆಗಳು.
ಕಲ್ಲೂರು ನಾಗೇಶ್, ಮಂಗಳೂರು ಆಗಸ್ಟ್ 26, 2020
ಕೊರೋನ ವೈರಸ್ ನಮ್ಮ ದೇಶದಲ್ಲಿ ಕಾಣಿಸಿಕೊಳ್ಳುವ ಹೊತ್ತಿಗೇ, ಅಂದರೆ ಮಾರ್ಚ್ ಮೊದಲ ವಾರದಿಂದಲೇ ಇದರ ಸೋಂಕಿನ ಬಗ್ಗೆ ವಿಶ್ವದಾದ್ಯಂತ ಲಭ್ಯವಿದ್ದ ಮಾಹಿತಿಗಳನ್ನು ಒದಗಿಸಿ ವೈಜ್ಞಾನಿಕವಾದ ಸಲಹೆಗಳನ್ನು ನೀಡುತ್ತ ಬಂದವರು ಡಾ. ಶ್ರೀನಿವಾಸ ಕಕ್ಕಿಲ್ಲಾಯರು. ಬಹುಶ: ಧೈರ್ಯವಾಗಿ ಅಂತಹ ವಸ್ತುನಿಷ್ಠ ಮಾಹಿತಿಗಳನ್ನು ಕೊಡುತ್ತಲೇ ಬಂದಿರುವವರು ಅವರೊಬ್ಬರೇ. ಆ ದಿನಗಳಲ್ಲಿ ಅವರು ಹೇಳಿದ ಮಾತುಗಳೇ ಇವತ್ತು ನಿಜವಾಗಿವೆ ಮತ್ತು ಆಗುತ್ತಲಿದೆ.
ಈ ಪುಸ್ತಕದಲ್ಲಿ ಅವೆಲ್ಲವನ್ನು ದಾಖಲಿಸಿ ಡಾ. ಕಕ್ಕಿಲ್ಲಾಯರು ಮತ್ತು ಡಾ. ಬಾಲಸರಸ್ವತಿಯವರು ಓದುಗರಿಗೆ ಕೊಟ್ಟಿದ್ದಾರೆ. 18 ಅಧ್ಯಾಯಗಳಲ್ಲಿ ಬೇರೆ ಬೇರೆ ವಿಷಯಗಳ ಮೂಲಕ ಕೊರೋನ ವೈರಸ್ ಬಗ್ಗೆ ವಸ್ತುನಿಷ್ಠ ಮಾಹಿತಿ ಒದಗಿಸಿದ್ದಾರೆ.
” ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಮಾಹಿತಿ, ಆರ್ಥಿಕ ಪ್ರಗತಿಗಳೆಲ್ಲವೂ ಎಷ್ಟೇ ಆಗಿರಲಿ, ಅವು ಮನುಷ್ಯರಲ್ಲಿ ಒಳ್ಳೆಯತನವನ್ನೂ, ಉಳಿದೆಲ್ಲರ ಬಗ್ಗೆ ಸಹಾನುಭೂತಿಯನ್ನು, ವೈಜ್ಞಾನಿಕ ಮನೋವೃತ್ತಿಯನ್ನು, ನಿತ್ಯ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯ- ವಿವೇಚನೆಗಳಿಂದ ಎದುರಿಸುವ ಸಾಮರ್ಥ್ಯವನ್ನು ಉಂಟುಮಾಡುವ ಖಾತರಿಯಿಲ್ಲ ಎನ್ನುವುದಕ್ಕೆ ಹೊಸ ಕೊರೋನ ಸೋಂಕು ಅತ್ಯುತ್ತಮ ನಿದರ್ಶನವಾಗಿದೆ. ಸುಶಿಕ್ಷಿತರೆನಿಸಿಕೊಂಡವರೂ ಸೇರಿದಂತೆ ಸಾಕಷ್ಟು ಜನರು ಕೊರೋನ ಸೋಂಕಿತರನ್ನು ಅಸ್ಪೃಶ್ಯ ರಂತೆ ದೂರವಿಟ್ಟು, ಅವರ ಮನೆಯವರನ್ನೂ ಬಹಿಷ್ಕರಿಸಿ, ತಮ್ಮ ಮನೆಗಳೊಳಕ್ಕೆ ಯಾರನ್ನೂ ಬರಗೊಡದೆ, ಮೃತದೇಹದ ಅಂತ್ಯ ಕ್ರಿಯೆಗಳಿಗೂ ಅಡ್ಡಿಪಡಿಸಿ ಎಲ್ಲ ಬಗೆಯ ದೌರ್ಬಲ್ಯಗಳನ್ನು ಪ್ರದರ್ಶಿಸಿದ್ದು ಕೊರೋನ ಸೋಂಕು ತೆರೆದಿಟ್ಟ ಅತಿ ದೊಡ್ಡ ಸತ್ಯವಾಗಿದೆ” – ಎಂದು ಅವರು ಬರೆಯುತ್ತ ಮುಗಿಸಿದ ಅಪೂರ್ವ ಮತ್ತು ಮಹತ್ವದ ಮಾತುಗಳು ಪುಸ್ತಕದ ಓದನ್ನು ಕೊನೆಗೊಳಿಸುತ್ತವಾರೂ ಸತ್ಯ ಗೋಚರಿಸುವ ಆರಂಭವೂ ಇಲ್ಲಿಂದಲೇ ಎನ್ನುವುದು ಈ ಪುಸ್ತಕದ ಸಾರ್ಥಕತೆ. ಪ್ರಕಟಿಸಿದ ನವಕರ್ನಾಟಕ ಪ್ರಕಾಶನ ಮತ್ತು ಸಾಕಷ್ಟು ಪರಿಶ್ರಮ ಕಾಳಜಿಗಳಿಂದ ಕೃತಿ ರಚನೆ ಮಾಡಿದ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಮತ್ತು ಡಾ ಬಾಲಸರಸ್ವತಿ ಕಕ್ಕಿಲ್ಲಾಯರಿಗೆ ಅಭಿನಂದನೆಗಳು. ಇದೀಗ ಇದರ ಇಂಗ್ಲಿಷ್ ಅವತರಣಿಕೆಗೂ ಬೇಡಿಕೆ ಬರುತ್ತಿದೆ.
ಸೆಪ್ಟೆಂಬರ್ 8, 2020
ಸೆಪ್ಟೆಂಬರ್ 8, 2021
ಪ್ರಸಾದ್ ರಕ್ಷಿದಿ
ನಂತರ ಸಾಮಾಜಿಕ ಜಾಲತಾಣ ವನ್ನು ಪತ್ರಿಕೆಗಳನ್ನು ಗಮನಿಸುತ್ತಿರುವವರಿಗೆ ಡಾ.ಶ್ರೀನಿವಾಸ ಕಕ್ಕಿಲ್ಕಾಯರು ಪರಿಚಿತರು. ಕ್ರಿಕೆಟ್ ನ ಭಾಷೆಯಲ್ಲಿ ಹೇಳುವುದಾದರೆ, ಅವರೊಬ್ಬ ಗಟ್ಟಿಯಾಗಿ ನೆಲಕಚ್ಚಿ ನಂತ ಬ್ಯಾಟ್ಸ್ ಮನ್.
ಆರೋಗ್ಯ, ಶಿಕ್ಷಣ, ವಿಜ್ಞಾನ, ಕೃಷಿ, ತಂತ್ರಜ್ಞಾನ ಮುಂತಾದ ಹಲವು ವಿಚಾರಗಳ ಬಗ್ಗೆ ತಜ್ಞರು ಮಾತಾಡಬೇಕು..ಆಡಳಿತ ನಡೆಸುವವರು ಮತ್ತು ಇತರರು ಕಡಿಮೆ ಮಾತಾಡಿ ಆ ವಿಚಾರಗಳಿಗೆ ತಜ್ಞರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದಕ್ಕೆ ಕಕ್ಕಿಲ್ಲಾಯರೇ ಉದಾಹರಣೆ.
ಅವರ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯ ಗಳಿರುವುದು ಸಾಧ್ಯ
ಆದರೆ ಆ ಭಿನ್ನಾಭಿಪ್ರಾಯಗಳನ್ನು ಹೇಳುವ ಚರ್ಚಿಸುವ ಅರ್ಹತೆ , ಜವಾಬ್ದಾರಿ, ಹಕ್ಕು ಕೂಡಾ ಆಯಾ ವಿಭಾಗದ ತಜ್ಞರದ್ದೇ ಅಲ್ಲವೇ?
ಅದನ್ನು ಹೊರತು ಯಾವುದೇ ರಾಜಕಾರಣಿ, ಬಾಬಾಗಳು, ಅಥವಾ ಏನೂ ತಿಳಿಯದ “ಸರ್ವಜ್ಞ” ರದ್ದಂತೂ ಅಲ್ಲ
ಅಲ್ಲಲ್ಲಿ ಬಿಡಿ ಬಿಡಿಯಾಗಿ ಓದಿದ ಬರಹಗಳನ್ನು ಇಂದು ಇಡಿಯಾಗಿ ಮತ್ತಷ್ಟು ಹೆಚ್ಚಿನ ವಿವರಣೆಗಳೊಂದಿಗೆ ಓದಿದೆ.
ಕೊರೋನಾ ಮಾತ್ರವಲ್ಲ ಆರೋಗ್ಯ ರಕ್ಷಿಸಿ ಕೊಳ್ಳಬೇಕಾದ ಮತ್ತು ಆ ನಿಟ್ಟಿನಲ್ಲಿ ಒಂದು ಸ್ಪಷ್ಟತೆಯನ್ನು ಗಳಿಸಿಕೊಳ್ಳುವ ದೃಷ್ಟಿಯಿಂದ ಎಲ್ಲರೂ ಓದಬೇಕಾದ ಪುಸ್ತಕವನ್ನು ನೀಡಿದ
ಡಾ. ಕಕ್ಕಿಲ್ಲಾಯ ಮತ್ತು ಡಾ. ಬಾಲಸರಸ್ವತಿ ಅವರಿಗೆ ಧನ್ಯವಾದಗಳು
Leave a Reply