ನನ್ನ ಬಗ್ಗೆ

ನಾನು ಡಾ. ಬೇವಿಂಜೆ ಶ್ರೀನಿವಾಸ ಕಕ್ಕಿಲ್ಲಾಯ, ಕರ್ನಾಟಕದ ಕಡಲ ತೀರದ ಮಂಗಳೂರಿನಲ್ಲಿ ವೃತ್ತಿ ನಿರತನಾಗಿರುವ ತಜ್ಞ ವೈದ್ಯ.

ನನ್ನ ಪ್ರಿಯ ಅರ್ಧಾಂಗಿ ಡಾ. ಬಾಲಸರಸ್ವತಿ, ಮಂಗಳೂರಿನಲ್ಲಿ ಚರ್ಮರೋಗ ತಜ್ಞೆ. ನಮ್ಮ ಮಗ ಅಕ್ಷಯ. [ನನ್ನ ಕುಟುಂಬದ ಬಗ್ಗೆ ಇನ್ನಷ್ಟು ಇಲ್ಲಿದೆ]

ಉಪಾಪಚಯ ಸಂಬಂಧಿ ಕಾಹಿಲೆಗಳಾದ ಬೊಜ್ಜು, ಮಧುಮೇಹ, ಕೆಲವೊಂದು ಚರ್ಮದ ತೊಂದರೆಗಳು ಇವೇ ಮುಂತಾದವನ್ನು ನಿಭಾಯಿಸಲು ವಿನೂತನವಾದ ಆಹಾರ ಕ್ರಮ ಹಾಗೂ ಜೀವನ ಶೈಲಿಯ ಸಲಹೆಗಳನ್ನು ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಸ್ಪಂದನ ಉಪಾಪಚಯ ವಿಜ್ಞಾನ ಕೇಂದ್ರದ ಮೂಲಕ  ನಾವಿಬ್ಬರೂ ನೀಡುತ್ತಿದ್ದೇವೆ.

ಆರೋಗ್ಯ ಕ್ಷೇತ್ರದ ವಿವಿಧ ಮಜಲುಗಳ ಬಗ್ಗೆ ನನ್ನ ಪಾಕ್ಷಿಕ ಅಂಕಣ ಆರೋಗ್ಯ ಪ್ರಭ ಹೆಸರಾಂತ ದಿನಪತ್ರಿಕೆ ಕನ್ನಡ ಪ್ರಭ ದಲ್ಲಿ ಪ್ರಕಟವಾಗುತ್ತಿತ್ತು. ಅದಕ್ಕೆ ಮೊದಲು ನನ್ನ ಅಂಕಣ ಆರೋಗ್ಯ ಆಶಯ ಹೆಸರಾಂತ ದಿನಪತ್ರಿಕೆ ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿತ್ತು. [ಕೊಂಡಿಗಳು ಬಲಗಡೆಗಿವೆ] ಈ ಅಂಕಣಗಳಲ್ಲಿ ಪ್ರಕಟವಾದ 77 ಲೇಖನಗಳ ಸಂಕಲನವನ್ನು ‘ಆರೋಗ್ಯ ಆಶಯ’ ಎಂಬ ಹೆಸರಲ್ಲಿ ನವಕರ್ನಾಟಕ ಪ್ರಕಾಶನವು ಹೊರತಂದಿದೆ. ಈ ಸಂಕಲನಕ್ಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವೈದ್ಯಕೀಯ ಶ್ರೇಷ್ಠ ಲೇಖಕ ಪ್ರಶಸ್ತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಬಿಸಲೇರಿ ಜಯಣ್ಣ ಮತ್ತು ಬಿಸಲೇರಿ ಬ್ರದರ್ಸ್ ದತ್ತಿ ಪ್ರಶಸ್ತಿಗಳು ಸಂದಿವೆ.

‘ದಕ್ಷಿಣ ಭಾರತದಲ್ಲಿ ಮಲೇರಿಯಾ ಸಂಶೋಧನಾ ತರಬೇತಿ’ ಎಂಬ ಹೆಸರಿನ ಸಂಶೋಧನಾ ಯೋಜನೆಯಲ್ಲಿ ಸಹ ಸಂಶೋಧಕನಾಗಿಯೂ ನಾನೀಗ ಕಾರ್ಯ ನಿರ್ವಹಿಸುತ್ತಿದ್ದೇನೆ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಸಂಶೋಧನಾ ತಂಡ ಹಾಗೂ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಜೀವ ರಸಾಯನ ಶಾಸ್ತ್ರ ಹಾಗೂ ಅಣುಜೀವ ವಿಜ್ಞಾನ ವಿಭಾಗಗಳ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯನ್ನು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಫೊಗಾರ್ಟಿ ಅಂತರರಾಷ್ಟ್ರೀಯ ಕೇಂದ್ರವು ಪ್ರಾಯೋಜಿಸಿದೆ. ಈ ಯೋಜನೆಯ ಭಾಗವಾಗಿ ನವೆಂಬರ್ 2016ರಲ್ಲಿ ಅಮೆರಿಕಾದ ಅಟ್ಲಾಂಟಾ ನಗರದಲ್ಲಿ ನಡೆದ ಅಮೆರಿಕನ್ ಸೊಸೈಟಿ ಆಫ್ ಟ್ರಾಪಿಕಲ್ ಮೆಡಿಸಿನ್ ಅಂಡ್ ಹೈಜೀನ್ ವಾರ್ಷಿಕ ಸಮ್ಮೇಳನದಲ್ಲಿ ಮಂಗಳೂರಿನ ಮಲೇರಿಯಾ ಸಮಸ್ಯೆಯ ಬಗ್ಗೆ ಭಿತ್ತಿಪತ್ರವನ್ನು ಪ್ರದರ್ಶಿಸಿದ್ದೇನೆ. [ನೋಡಿ ಪುಟ 290]

ಇನ್ನಷ್ಟು

ಮೊದಲು ನನ್ನ ಹೆಸರಿನ ಬಗ್ಗೆ. ನನ್ನ ಹೆತ್ತವರು ನನಗಿತ್ತ ಹೆಸರು ಶ್ರೀನಿವಾಸ. ಕಕ್ಕಿಲ್ಲಾಯ ಅಂದರೆ ಕಕ್ಕೋಲು ಮನೆಯವನು (ಕಕ್ಕೋಲು – ಇಲ್ಲ್ – ಆಯ; ತುಳುವಿನಲ್ಲಿ ಇಲ್ಲ್ ಅಂದರೆ ಮನೆ) ಎಂದರ್ಥ. ಬೇವಿಂಜೆ ನನ್ನ ತಂದೆಯವರು ಹುಟ್ಟಿದ ಮನೆ; ಕಾಸರಗೋಡಿನಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿ, ಪಯಸ್ವಿನೀ ನದಿಯ ತೀರದ ಕಣಿವೆಯಲ್ಲಿರುವ ಪುಟ್ಟ ಹಳ್ಳಿ ಅದು. ನಮ್ಮ ಮನೆತನದ ಮೂಲ ಮನೆಯಾಗಿದ್ದ ಕಕ್ಕೋಲು ಬೇವಿಂಜೆಯ ನೆರೆಯಲ್ಲೇ ಇದೆ.

ನಾನು ಹುಟ್ಟಿ ಬೆಳೆದದ್ದು ಮಂಗಳೂರಿನಲ್ಲಿ. ಮೊದಲೆರಡು ವರ್ಷ ಇಲ್ಲೇ ಶಾಲೆಗೆ ಹೋದ ಬಳಿಕ ಕಾಸರಗೋಡು ತಾಲೂಕಿನ ಬದಿಯಡ್ಕಕ್ಕೆ ನಾವು ಸ್ಥಳಾಂತರಗೊಂಡೆವು, ಮುಂದಿನ ನಾಲ್ಕು ವರ್ಷ ಅಲ್ಲೇ ನನ್ನ ವಿದ್ಯಾಭ್ಯಾಸವೂ ಮುಂದುವರಿಯಿತು. ಮಂಗಳೂರಿಗೆ 1976-77 ರಲ್ಲಿ ಮರಳಿ ಬಂದ ಬಳಿಕ ನಾವು ಇಲ್ಲೇ ನೆಲೆಸಿದ್ದೇವೆ. ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ 1987-88ರಲ್ಲಿ ಎಂ.ಬಿ.ಬಿ.ಎಸ್. ಪದವಿಯನ್ನು ಪಡೆದ ಬಳಿಕ ಹುಬ್ಬಳ್ಳಿಯ ಪ್ರತಿಷ್ಠಿತ ಕರ್ನಾಟಕ ವೈದ್ಯಕೀಯ ಕಾಲೇಜಿನಲ್ಲಿ 1992ರಲ್ಲಿ ವೈದ್ಯ ವಿಜ್ಞಾನದಲ್ಲಿ ಎಂ.ಡಿ. ಪದವಿಯನ್ನು ಪಡೆದೆ. ನನ್ನ ಬೆಳವಣಿಗೆ ಹಾಗೂ ಚಿಂತನೆಗಳ ಮೇಲೆ ನನ್ನ ಹೆತ್ತವರ ಪ್ರಭಾವವು ಗಾಢವಾಗಿಯೇ ಇದೆ – ನನ್ನ ತಂದೆ ಶ್ರೀ ಬಿ.ವಿ. ಕಕ್ಕಿಲ್ಲಾಯರು ಸ್ವಾತಂತ್ರ್ಯ ಹೋರಾಟಗಾರರು, ಕರ್ನಾಟಕ ಏಕೀಕರಣ ಚಳುವಳಿಯ ನಾಯಕರಲ್ಲೊಬ್ಬರು, ರಾಜಕೀಯ ನಾಯಕರು, ಚಿಂತಕರು, ಪ್ರಶಸ್ತಿ ವಿಜೇತ ಲೇಖಕರು, ಅತ್ಯುತ್ತಮ ವಾಗ್ಮಿಗಳು ,ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನ ಸಭೆಗಳ ಸದಸ್ಯರಾಗಿದ್ದವರು. ನನ್ನ ತಾಯಿ ದಿ. ಅಹಲ್ಯ ನಮ್ಮನ್ನೆಲ್ಲ ಅತ್ಯಂತ ಕಾಳಜಿಯಿಂದ ಬೆಳೆಸಿ, ನಮ್ಮ ಹಿಂದೆಯೇ ಇದ್ದು ವಿದ್ಯಾವಂತರನ್ನಾಗಿಸಿದವರು.

ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ನಾನು ಪ್ರಗತಿಪರ ಹಾಗೂ ವೈಚಾರಿಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದು ವೈಜ್ಞಾನಿಕ ಮನೋಭಾವವನ್ನು ಪ್ರಚೋದಿಸುವ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. 1987ರ ಅಕ್ಟೋಬರ್ 2ರಿಂದ ನವೆಂಬರ್ 7ರವರೆಗೆ ನಡೆದ ಭಾರತ ಜನ ವಿಜ್ಞಾನ ಜಾಥಾದ ಸಕ್ರಿಯ ಕಾರ್ಯಕರ್ತನಾಗಿ ದುಡಿದದ್ದು ನನ್ನ ಅವಿಸ್ಮರಣೀಯ ಅನುಭವಗಳಲ್ಲೊಂದು. [ಇಲ್ಲಿ ನೋಡಿ]

ಹುಬ್ಬಳ್ಳಿಯಲ್ಲಿ ಸ್ನಾತಕೋತ್ತರ ವ್ಯಾಸಂಗದ ವೇಳೆ ಕಿರಿಯ ವೈದ್ಯರ ಸಂಘದ ಸ್ಥಾಪಕ ಸದಸ್ಯನಾಗಿ ನಮ್ಮ ಕಾಲೇಜು ಹಾಗೂ ಆಸ್ಪತ್ರೆಗಳ ಸೌಲಭ್ಯಗಳನ್ನು ಸುಧಾರಿಸುವುದಕ್ಕಾಗಿ ಶ್ರಮಿಸಿದ್ದೆ. ಕರ್ನಾಟಕ ರಾಜ್ಯ ಕಿರಿಯ ವೈದ್ಯರ ಸಂಘದ ಸ್ಥಾಪಕರಲ್ಲೊಬ್ಬನಾಗಿ 1989-1992 ರವರೆಗೆ ಅದರ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದೆ.

ಎಂ.ಡಿ. ಪದವಿಯನ್ನು ಪಡೆದು 1992ರಲ್ಲಿ ಮಂಗಳೂರಿಗೆ ಮರಳಿದ ಬಳಿಕ ನಂತೂರಿನಲ್ಲಿದ್ದ ಪದ್ಮಶ್ರೀ ಆಸ್ಪತ್ರೆ (ನಿಟ್ಟೆ ವಿದ್ಯಾ ಸಂಸ್ಥೆ ಹಾಗೂ ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜುಗಳ ಅಧೀನದಲ್ಲಿತ್ತು) ಯನ್ನು ಸೇರಿ ತಜ್ಞ ವೈದ್ಯನಾಗಿ ಹಾಗೂ ವೈದ್ಯ ವಿಜ್ಞಾನದಲ್ಲಿ ಪ್ರಾಧ್ಯಾಪಕನಾಗಿ ದುಡಿದೆ. ನಂತರ 1998ರ ಡಿಸೆಂಬರ್ ನಲ್ಲಿ ದೇರಳಕಟ್ಟೆಯಲ್ಲಿ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯನ್ನು ಸೇರಿ 2005ರ ಮಾರ್ಚ್ ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಹುದ್ದೆಗೆ ರಾಜೀನಾಮೆಯಿತ್ತು ಪೂರ್ಣ ಪ್ರಮಾಣದ ವೈದ್ಯ ವೃತ್ತಿಯಲ್ಲಿ ತೊಡಗಿಕೊಂಡೆ.

ಜುಲೈ 1995ರಲ್ಲಿ ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ತಜ್ಞರು ಹಾಗೂ ಕೆಲವು ಆಸಕ್ತ ಸಹೋದ್ಯೋಗಿಗಳೆಲ್ಲರೂ ಜೊತೆ ಸೇರಿ ನಗರದಲ್ಲಿ ಆಗಲೇ ಬಹಳಷ್ಟು ಹರಡ ತೊಡಗಿದ್ದ ಮಲೇರಿಯಾ ರೋಗವನ್ನು ನಿಯಂತ್ರಿಸುವ ಕಾರ್ಯಕ್ರಮವೊಂದನ್ನು ನಾವು ಆರಂಭಿಸಿದೆವು. ಆಗ ಜಿಲ್ಲಾಧಿಕಾರಿಯಾಗಿದ್ದ ಶ್ರೀ ಭರತ್ ಲಾಲ್ ಮೀನಾ ಅವರಿಂದ ಮಲೇರಿಯ ನಿಯಂತ್ರಣ ಕ್ರಿಯಾ ಸಮಿತಿಯ ಕಾರ್ಯದರ್ಶಿಯಾಗಿ ನಿಯುಕ್ತನಾದೆ. ಅಂದಿನಿಂದ ಇಂದಿನವರೆಗೆ ನಗರದಲ್ಲಿ ಮಲೇರಿಯಾ ನಿಯಂತ್ರಣ ಕಾರ್ಯಕ್ರಮಗಳಲ್ಲಿ ನನ್ನಿಂದ ಅಪೇಕ್ಷಿಸಲಾಗುವ ನೆರವನ್ನು ನೀಡುತ್ತಾ ಬಂದಿದ್ದೇನೆ. ಸುರತ್ಕಲ್ ಹಾಗೂ ಆಸುಪಾಸಿನ ಹಳ್ಳಿಗಳಲ್ಲಿ ಆಗಸ್ಟ್-ಸೆಪ್ಟೆಂಬರ್ 1999ರಲ್ಲಿ ವ್ಯಾಪಕವಾಗಿ ಹರಡಿದ್ದ ಇಲಿಜ್ವರದ ಬಗ್ಗೆ ತನಿಖೆ ನಡೆಸಲು ಜಿಲ್ಲಾಡಳಿತವು ರಚಿಸಿದ್ದ ಸಾಂಕ್ರಾಮಿಕ ತ್ವರಿತ ಕ್ರಿಯಾತಂಡ (E-RAT)ದ ಸದಸ್ಯನಾಗಿಯೂ ದುಡಿದಿದ್ದೆ. ಮಂಗಳೂರಿನಲ್ಲಿ ಸೆಪ್ಟೆಂಬರ್ 2006 ರಲ್ಲಿ ಕಂಡು ಬಂದಿದ್ದ ಚಿಕುಂಗುನ್ಯಾ ಪ್ರಕರಣಗಳನ್ನು ಪರಿಶೀಲಿಸುವಲ್ಲಿ ನಗರಪಾಲಿಕೆಯ ಆರೋಗ್ಯ ಇಲಾಖೆಗೆ ನೆರವಾಗಿದ್ದೇನೆ. ಜಿಲ್ಲಾ ಕ್ಷಯರೋಗ ನಿಯಂತ್ರಣ ಸಮಿತಿಯ ಸದಸ್ಯನಾಗಿಯೂ ನಾನು ಕಾರ್ಯ ನಿರ್ವಹಿಸಿದ್ದೇನೆ.

ನಾನು 1993ರಲ್ಲಿ ಭಾರತೀಯ ತಜ್ಞ ವೈದ್ಯರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಕಾರ್ಯದರ್ಶಿಯಾಗಿದ್ದಾಗ ಮಂಗಳೂರಲ್ಲೇ ಮೊದಲ ಬಾರಿಗೆ ಲೈಂಗಿಕ ವಿಜ್ಞಾನದ ಬಗ್ಗೆ ವಿಶೇಷವಾದ ನಿರಂತರ ಶಿಕ್ಷಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಂಗಳೂರಿನ ಲಯನ್ಸ್ ಸಂಸ್ಥೆಯ ಪತ್ರ ’ಲಯನ್ಸ್ ರೋರ್’ ಗೆ 1994ರಲ್ಲಿ ಸಂಪಾದಕನಾಗಿದ್ದು, ಅತ್ಯುತ್ತಮ ಸಂಪಾದಕ ಪ್ರಶಸ್ತಿಯನ್ನೂ ಪಡೆದಿದ್ದೇನೆ. ಭಾರತೀಯ ವೈದ್ಯರ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ದ್ವೈಮಾಸಿಕ ಮುಖಪತ್ರ ‘ಮೆಡಿಲೋರ್’ ನ ಸ್ಥಾಪಕ ಸಂಪಾದಕನಾಗಿ 1994 ಹಾಗೂ 1995ರಲ್ಲಿ ದುಡಿದಿದ್ದೇನೆ.

ನಾನು ಪದ್ಮಶ್ರೀ ಆಸ್ಪತ್ರೆ ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಗಳಲ್ಲಿ ಹಲವಾರು ನಿರಂತರ ಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಕ್ಲಿನಿಕಲ್ ಸೊಸೈಟಿಯ ಸ್ಥಾಪಕ ಕಾರ್ಯದರ್ಶಿಯಾಗಿಯೂ, ಸಂಸ್ಥೆಯ ಪತ್ರಿಕೆ ‘ಕ್ಷೇಮ’ ದ ಸ್ಥಾಪಕ ಸಂಪಾದಕನಾಗಿಯೂ ಕಾರ್ಯ ನಿರ್ವಹಿಸಿದ್ದೇನೆ. ಅಷ್ಟೇ ಅಲ್ಲದೆ, ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಹಾಗೂ ನಿಟ್ಟೆ ವಿದ್ಯಾ ಸಂಸ್ಥೆಗಳ ಮೊದಲ ಜಾಲತಾಣಗಳಾಗಿದ್ದ kshema.edu ಹಾಗೂ nittetrust.org ಗಳನ್ನು ರೂಪಿಸಿದ್ದೆ. ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ವಯೋ ವೄದ್ಧರ ಆರೋಗ್ಯ ರಕ್ಷಣೆಗಾಗಿ ‘ಸಹಾರ’ ಎಂಬ ವಿನೂತನ ಕಾರ್ಯಕ್ರಮವನ್ನೂ, ಕ್ಷಯ ರೋಗಿಗಳ ಚಿಕಿತ್ಸೆಗಾಗಿ ’ಅಕ್ಷಯ’ಎಂಬ ಯೋಜನೆಯನ್ನೂ ಆರಂಭಿಸಿದ್ದೆ.

ಫೆಬ್ರವರಿ 2000ರಲ್ಲಿ ಅಮೆರಿಕದ ಪ್ರತಿಷ್ಠಿತ ಟೆಕ್ಸಾಸ್ ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾಲಯಕ್ಕೆ ಭೇಟಿಯಿತ್ತು, ಮಲೇರಿಯಾ ಮತ್ತಿತರ ಸೋಂಕು ರೋಗಗಳ ಬಗ್ಗೆ ಜಂಟಿ ಸಂಶೋಧನೆ ನಡೆಸುವ ಬಗ್ಗೆ ಚರ್ಚಿಸಿದ್ದೆ. ಅದರ ಫಲವಾಗಿ ಆಗಸ್ಟ್ 2000ದಲ್ಲಿ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಪ್ರಾದೇಶಿಕ ಸೋಂಕು ರೋಗ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿತ್ತು. ಮಂಗಳೂರಿನಲ್ಲಿ ಮಲೇರಿಯ ನಿಯಂತ್ರಣ ಕಾರ್ಯಕ್ರಮದ ಬಗ್ಗೆ ಹಾಗೂ ಸುರತ್ಕಲ್ ನ ಇಲಿ ಜ್ವರದ ಅಧ್ಯಯನದ ಬಗ್ಗೆ 2000ದ ಸೆಪ್ಟೆಂಬರ್ 18-22 ರವರೆಗೆ ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಉಷ್ಣವಲಯದ ವೈದ್ಯಕೀಯ ಸಮಸ್ಯೆಗಳು ಹಾಗೂ ಪರೋಪಜೀವಿ ಸೋಂಕುಗಳ ಬಗೆಗಿನ ಸಮ್ಮೇಳನದಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದೆ.

ಫಿಶ್ ತಂತ್ರಜ್ಞಾನವನ್ನು ಬಳಸಿ ರಕ್ತ ಲೇಪನಗಳಲ್ಲಿ ಮಲೇರಿಯ ರೋಗಾಣುವನ್ನು ಪತ್ತೆ ಹಚ್ಚುವ ವಿನೂತನವಾದ ವಿಧಾನವನ್ನು ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೋದಲ್ಲಿರುವ ಐಡಿ ಫಿಶ್ ಸಂಸ್ಥೆಯ ಸಂಶೋಧಕರೊಂದಿಗೆ ನಾನು ಭಾಗಿಯಾಗಿದ್ದೇನೆ. ಅದೀಗ ಪ್ರತಿಷ್ಠಿತ ಪ್ಲಾಸ್ ಒನ್ ವಿದ್ವತ್ಪತ್ರಿಕೆಯಲ್ಲಿ ಪ್ರಕಟವಾಗಿದೆ [ಇಲ್ಲಿದೆ] ಮತ್ತು ಅಮೆರಿಕದ ಎಫ್ ಡಿ ಎ ಅನುಮೋದನೆಯನ್ನೂ ಪಡೆದಿದೆ.

ಮಲೇರಿಯಾದ ಕಾರಣಗಳು, ಲಕ್ಷಣಗಳು, ಪತ್ತೆ, ಚಿಕಿತ್ಸೆ, ಗಂಭೀರ ಸಮಸ್ಯೆಗಳು ಹಾಗೂ ನಿಯಂತ್ರಣಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುವ ಜಾಲತಾಣವೊಂದನ್ನು(http://www.malariasite.comನಾನು ರೂಪಿಸಿದ್ದು, ಸಾಕಷ್ಟು ಜನ ಅದನ್ನು ಬಳಸುತ್ತಿದ್ದಾರೆ.

ಭಾರತದ ಮೊತ್ತ ಮೊದಲ ವೈದ್ಯ ವಿಜ್ಞಾನದ ಮುಕ್ತ ವಿದ್ವತ್ ಪತ್ರಿಕೆ Online Journal of Health and Allied Sciences (www.ojhas.org) ಗೆ 2002 ರಿಂದ ಮೊದಲ್ಗೊಂಡು ಪ್ರಧಾನ ಸಂಪಾದಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. Cogprints, HINARI, Open Med, Scopus, DOAJ ಮುಂತಾದ ಮುಕ್ತ ವಿದ್ವತ್ ಪತ್ರಾಗಾರಗಳಲ್ಲಿ ಈ ಪತ್ರಿಕೆಯೂ ಸೇರಿಸಲ್ಪಟ್ಟಿದೆ.

ವೈದ್ಯ ವೃತ್ತಿಯಲ್ಲಿ ವೈಚಾರಿಕತೆಯನ್ನು ಪ್ರಚೋದಿಸುವ ಪ್ರಯತ್ನವಾಗಿ http://www.rationalmedicine.org ಎನ್ನುವ ಜಾಲತಾಣವನ್ನು ನಾನು ರೂಪಿಸಿದ್ದು, ಆಧುನಿಕ ರೋಗ ಪತ್ತೆ ಹಾಗೂ ಚಿಕಿತ್ಸೆಗಳ ಬಗ್ಗೆ ಹಲವು ವೈಚಾರಿಕ ಲೇಖನಗಳನ್ನೂ, ಅಂತಹ ಇನ್ನಿತರ ತಾಣಗಳಿಗೆ ಕೊಂಡಿಗಳನ್ನೂ ಅದು ಒಳಗೊಂಡಿದೆ.

ನಮ್ಮ ಕಕ್ಕಿಲ್ಲಾಯ ಕುಟುಂಬದ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿಯನ್ನೊಳಗೊಂಡ http://www.kakkilaya.com ಜಾಲತಾಣವನ್ನು ಸಹ ನಾನು ರೂಪಿಸಿದ್ದೇನೆ.

ಆನೆಕಾಲು ರೋಗದ ಬಗೆ ನಾನು ಬರೆದು ಸಿದ್ಧಪಡಿಸಿದ ಸಾಕ್ಷ್ಯಚಿತ್ರವು ಈಗಾಗಲೇ ದೂರದರ್ಶನದ ಯುಜಿಸಿ ವಾಹಿನಿಯಲ್ಲಿ ಬಿತ್ತರಗೊಂಡಿದೆ.

ನಾನು ರಚಿಸಿದ ಕೆಲವು ರೂಪಕಗಳು ಆಕಾಶವಾಣಿಯಲ್ಲಿ ಬಿತ್ತರಗೊಂಡಿವೆ. ವೈದ್ಯನೊಬ್ಬನ ಆತ್ಮ ನಿವೇದನೆ ಎಂಬ ರೂಪಕವು ಮೊದಲನೆಯದು; 1987 ಆಗಸ್ಟ್-ಸೆಪ್ಟೆಂಬರ್ ನಲ್ಲಿ ಅದು ಬಿತ್ತರಗೊಂಡಿತ್ತು. ಆ ಬಳಿಕ ದೇಹದೊಳಗಿನ ಅತಿ ಸಂಕೀರ್ಣ ಕಾರ್ಯಗಳನ್ನು ಪರಿಚಯಿವ ನಮ್ಮ ದೇಹ ಎಂಬ ರೂಪಕವು ಬಿತ್ತರಗೊಂಡಿತ್ತು. ನಾನು ರಚಿಸಿದ್ದ ಆರೋಗ್ಯ ಸಂಪದ ಎನ್ನುವ 13 ಕಂತುಗಳ ರೇಡಿಯೋ ರೂಪಕಗಳ ಸರಣಿಯು 2001ರಲ್ಲಿ ಮಂಗಳೂರು ಹಾಗೂ ಮಡಿಕೇರಿ ನಿಲಯಗಳಿಂದ ಪ್ರಸಾರವಾಗಿತ್ತು. ಸೆಪ್ಟಂಬರ್ 27, 2015ರಂದು ಹೃದ್ರೋಗಗಳ ಬಗ್ಗೆ ಹೃದಯ ಕೂಗುತಿದೆ ಕೇಳುವಿರಾ ಎಂಬ ರೂಪಕವನ್ನು ಮಂಗಳೂರು ಆಕಾಶವಾಣಿಯಲ್ಲಿ ಸಿದ್ದಪಡಿಸಿ, ರಾಜ್ಯದ ಎಲ್ಲ ನಿಲಯಗಳಿಂದಲೂ ಪ್ರಸಾರ ಮಾಡಲಾಗಿತ್ತು [ಇಲ್ಲಿದೆ]

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ನೆರವನ್ನೀಯುವ ಉದ್ದೇಶದಿಂದ ನಾವು ಧೃತಿ ಫೌಂಡೇಶನ್ ಎಂಬ ಸಂಸ್ಥೆಯೊಂದನ್ನು ಸ್ಥಾಪಿಸಿದ್ದು, ನಾನು ಅದರ ಕಾರ್ಯದರ್ಶಿಯಾಗಿದ್ದೇನೆ. ಧಾರವಾಡದ ವಿದ್ಯಾಪೋಷಕ್ ಹಾಗೂ ಮಂಗಳೂರಿನ ಇನ್ಫೋಸಿಸ್ ಸಿಬ್ಬಂದಿಗಳ ಪ್ರೇರಣಾ ಸಂಸ್ಥೆಗಳ ಸಹಯೋಗದೊಂದಿಗೆ 2006ರಿಂದೀಚೆಗೆ ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರೂ. 60 ಲಕ್ಕ್ಕೂ ಹೆಚ್ಚು ಮೌಲ್ಯದ ನೆರವನ್ನು ಧೃತಿ ಫೌಂಡೇಶನ್ ಮೂಲಕ ಒದಗಿಸಲಾಗಿದೆ.

ನಾನು ಎಂಟು ಪುಸ್ತಕಗಳನ್ನುಇಂಗ್ಲಿಷ್ ನಿಂದ ಕನ್ನಡಕ್ಕೆಅನುವಾದಿಸಿದ್ದು, ಅವೆಲ್ಲವೂ ನವಕರ್ನಾಟಕ ಪ್ರಕಾಶನದಿಂದ ಪ್ರಕಟಿಸಲ್ಪಟ್ಟಿವೆ. ಆ ಪೈಕಿ, ನಾನು ಹತ್ತನೇ ತರಗತಿಯ ಪರೀಕ್ಷೆಗಳ ಬಳಿಕ ಮೊತ್ತಮೊದಲು ಅನುವಾದಿಸಿದ್ದ ವಿಜ್ಞಾನದಲ್ಲಿ ವಿನೋದ ಎನ್ನುವ ಪುಸ್ತಕವು ಈಗಾಗಲೇ ಇಪ್ಪತ್ತು ಮುದ್ರಣಗಳನ್ನು ಕಂಡಿದೆ. ನಾನು ಸ್ವಂತವಾಗಿ ಬರೆದ ಮೊದಲ ಪುಸ್ತಕ ಫ್ಲೂ ಎಂದು ಹೆದರುವಿರೇಕೆ ಎರಡು ಬಾರಿ ಮುದ್ರಿತಗೊಂಡಿದ್ದು, ಶಿವಮೊಗ್ಗದ ಕರ್ನಾಟಕ ಸಂಘದಿಂದ ಅತ್ಯುತ್ತಮ ವೈದ್ಯಕೀಯ ಸಾಹಿತ್ಯಕ್ಕಾಗಿ 2010ರ ಪ್ರತಿಷ್ಠಿತ ಡಾ. ಚಂದ್ರಪ್ಪ ಗೌಡ ಬಹುಮಾನವನ್ನು ಪಡೆದಿದೆ.

ಮುಂಬೈಯಿಂದ ಪ್ರಕಟಗೊಳ್ಳುತ್ತಿರುವ ಕಂಪ್ಲೀಟ್ ವೆಲ್ ಬಿಯಿಂಗ್ ಎನ್ನುವ ಮಾಸ ಪತ್ರಿಕೆಯಲ್ಲೂ ನನ್ನ ಲೇಖನಗಳು ಪ್ರಕಟಗೊಂಡಿವೆ.

ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಹಲವೆಡೆ ಆರೋಗ್ಯ ಹಾಗೂ ವೈಚಾರಿಕತೆಗಳ ಬಗ್ಗೆ ಹಲವು ಶಿಕ್ಷಣ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನಾನು ಭಾಗವಹಿಸಿದ್ದೇನೆ.

  • AMBKCC on Sep 19, 2018

    September 19, 2018: 5th State level Conference of Association of Medical Biochemists Karnataka Chapter, at K.S. Hegde Medical Academy, Derlakatte, Mangalore: Lecture on EFGHI of Diabesity

  • April 18, 2018: Lecture on Gut Microbiome – Life Within Life at Indian Academy of Paediatrics and Association of Physicians of India joint meeting, Kasaragod
  • April 1, 2018: Lecture on Gut Feelings at Indian Academy of Paediatrics, Udupi Chapter at Udupi
  • February 24, 2018: National symposium on Recent advances in malarial research, K.S. Hegde Medical Academy, Derlakatte, Mangalore: Lecture on Progress of malarial control in Dakshina Kannada
  • January 1, 2018: Chief Guest at Alcohol Abstinence Camp, AV Baliga Memorial Hosiptal, Udupi
  • September 16, 2017, National Health Summit, Organised by IMA, PHANA and FHA, Bengaluru: Moderator for Panel Discussion on Healthcare Ethics and Governance; panelist on Healthcare Costs: Myth and Reality
  • April 23, 2017, KPMEA State Conference 2017, Shimoga: Introspection or Self-Deceit
  • March 17, 2017, International conference on Malaria in Global Health, K.S Hegde Medical Academy, Nitte University, Deralakatte, Mangalore: Lecture on Current Clinical & Lab approach to Malaria
  • September 20, 2015: International Cardio Diabetology Conference, Fr. Muller’s Medical College, Mangalore: Lecture on Cardio Diabetic Diet: Turning on its Head
  • May 2, 2015, KMC, Manipal: CME on Parasitic Diseases in India – Diagnosis and Prevention : Lecture on Challenges in the management of malaria in India
  • January 24, 2015, Srinivas Medical College, Mukka, Biochemistry CME: Lecture on Gut Feelings
  • December 21, 2014, KMC, Manipal, CME on Antimicrobial Resistance: Lecture on Emerging Drug resistance in Malaria
  • November 9, 2014, FOGSI-JOGI-PICSEP Scientific Programme: Lecture on Vested interests, Misdeeds and Misconduct in Scientific Research, Art of presenting at a conference, judging a paper at conference
  • March 23, 2014, IMA Shimoga: CME lecture on Devil in the Drugs
  • October 2013, API – MERT CME Programme at Bangalore: Lecture on Acute Severe Malaria
  • June 4, 2013, Yenepoya Medical College, Deralakatte, Biochemistry CME: Lecture on Nutrient Keys to Modern Diseases
  • August 7, 2011, API, IMA Shimoga: CME lecture on Malaria – Current status of management
  • April 21, 2012, KMC, Manipal, ICMR Symposium on Infectious Diseases: Lecture on Current Challenges in the treatment of malaria
  • Others: CMEs and Lectures at KMC, Mangalore, IMA Kasaragod, IMA Udupi, IMA Mangaluru, IMA Kanhangad, IMA Suratkal, IMA Puttur, IMA Buntwal, IMA Moodabidare, IMA Bellary, IMA Hubballi, API Mangaluru, Fr Muller’s Medical College, Mangalore, KS Hegde Medical Academy, AJ Hosiptal and Research Centre, Padmashree Hospital, and elsewhere

ರಾಷ್ಟ್ರೀಯ, ಅಂತರರಾಷ್ಟ್ರೀಯ ಹಾಗೂ ಅಂತರ್ಜಾಲಗಳ ವಿದ್ವತ್ ಪತ್ರಿಕೆಗಳಲ್ಲೂ, ಅಂತರರಾಷ್ಟ್ರೀಯ ವೈದ್ಯ ವಿಜ್ಞಾನದ ಸಮ್ಮೇಳನಗಳಲ್ಲೂ ಪ್ರಕಟಿಸಲ್ಪಟ್ಟಿರುವ ನನ್ನ ಕೆಲವು ಲೇಖನಗಳ ವಿವರಗಳು ಇಲ್ಲಿವೆ:

  1. Acquired antibody responses against merozoite surface protein-119 antigen during Plasmodium falciparum and P.vivax infections in South Indian city of Mangaluru. Kishore Punnath, Kiran K. Dayanand, Vishal Midya, Valleesha N. Chandrashekar, Rajeshwara N. Achur, Srinivas B. Kakkilaya, Susanta K. Ghosh, Suchetha N. Kumari, D. Channe Gowda.  J Parasit Dis. 2021;45:176–190. https://doi.org/10.1007/s12639-020-01288-4 Available at https://link.springer.com/article/10.1007%2Fs12639-020-01288-4
  2. Palmar Erythema as the Sole Manifestation of COVID-19. Panambur Balasaraswathy, Kakkilaya Srinivas B. Cureus. November 02, 2020;12(11): e11291. doi:10.7759/cureus.11291. Available at https://www.cureus.com/articles/44181-palmar-erythema-as-the-sole-manifestation-of-covid-19
  3. Clinical Features and Haematological Parameters among Malaria Patients in Mangaluru City Area in the Southwestern Coastal Region of India. Kishore Punnath, Kiran K. Dayanand, Valleesha N. Chandrashekar, Rajeshwara N. Achur, Srinivas B. Kakkilaya, Susanta K. Ghosh, Benudhar Mukhi, Vishal Midya, Suchetha N. Kumari, D. Channe Gowda. Parasitology Research 2020 Mar;119(3):1043-1056. doi:10.1007/S00436-019-06540-2. Available at https://link.springer.com/article/10.1007%2Fs00436-019-06540-2
  4. Association between Inflammatory Cytokine Levels and Thrombocytopenia during Plasmodium falciparum and P. vivax Infections in South-Western Coastal Region of India. Kishore Punnath, Kiran K. Dayanand, Valleesha N. Chandrashekar, Rajeshwara N. Achur, Srinivas B. Kakkilaya, Susanta K. Ghosh, Suchetha N. Kumari, D. Channe Gowda. Malaria Research and Treatment. Vol. 2019, Article ID 4296523, 10 pages, 2019. https://doi.org/10.1155/2019/4296523 Available at https://www.hindawi.com/journals/mrt/2019/4296523/
  5. Malarial anemia among pregnant women in the south-westerncoastal city of Mangaluru in India. Chandrashekar, Valleesha N., Kishore Punnath, Kiran K. Dayanand, Rajeshwara N. Achur, Srinivas B. Kakkilaya, Poornima Jayadev, Suchetha N. Kumari, D. Channe Gowda.  Informatics in Medicine Unlocked Feb 2019. doi: https://doi.org/10.1016/j.imu.2019.02.003.
  6. Malaria Severity in Mangaluru City in the Southwestern Coastal Region of India. Kiran K. Dayanand, Punnath Kishore, Valleesha Chandrashekar, Rajeshwara N. Achur, Susanta K. Ghosh, Srinivas B. Kakkilaya, Suchetha N. Kumari, Satyanarayan Tiwari, Archith Boloor, Rajeshwari Devi, D. Channe Gowda. The American Journal of Tropical Medicine and Hygiene. Feb 2019;100(2):275-279. Abstract
  7. Malaria prevalence in Mangaluru city area in the southwestern coastal region of India. Kiran K. Dayanand, Kishore Punnath, Valleesha Chandrashekar, Rajeshwara N. Achur, Srinivas B. Kakkilaya, Susanta K. Ghosh, Suchetha Kumari, D. Channe Gowda. Malaria Journal. 2017;16:492 Published: 19 December 2017. Full Text | PDF | https://doi.org/10.1186/s12936-017-2141-0
  8. A rare cause for a common symptom. Breathe. M. Vishnu Sharma, B. Srinivas Kakkilaya, Irfan A. Shekh, Alka C. Bhat, D.S. Harsha. 2016 12: e64-e74; DOI: 10.1183/20734735.006716. Full Text at http://breathe.ersjournals.com/content/12/3/e64
  9. Malaria Prevalence in The Urban Areas of Mangaluru in South India. Srinivasa B. Kakkilaya, Kiran K. Dayanand, Kishore Punnath, Valleesha N. Chandrashekar, Rajeshwara N. Achur, Channe D. Gowda. Poster No. 923. American Society of Tropical Medicine and Hygiene, 65th Annual Meeting, November 13–17, 2016, Atlanta, Georgia, USA. Abstract Book. The American Journal of Tropical Medicine and Hygiene. November 2016;95(5):Supplement. p 290. Available at https://www.astmh.org/ASTMH/media/Documents/ASTMH-2016-Annual-Meeting-Abstract-Book.pdf
  10. Malaria Transmission Under an Unusual Circumstance Causing Death in Two Siblings. Kiran K. Dayanand, Kishore Punnath, Valleesha N. Chandrashekar, Srinivas B. Kakkilaya, Susanta K. Ghosh, Sathyanarayan N. Tiwari, Rajeshwara N. Achur, Sudarshan S. Kadambi and D. Channe Gowda. Am J Trop Med Hyg 2016;16-0082 Published online May 2, 2016, doi: 10.4269/ajtmh.16-0082. Available at http://www.ajtmh.org/content/early/2016/04/28/ajtmh.16-0082.abstract
  11. Fluorescence In Situ Hybridization (FISH) Assays for Diagnosing Malaria in Endemic Areas. Jyotsna Shah, Olivia Mark, Helena Weltman, Nicolas Barcelo, Wai Lo, Danuta Wronska, Srinivas Kakkilaya, Aravinda Rao, Shalia T. Bhat, Ruchi Sinha, Sabah Omar, Peter O’bare, Manuel Moro, Robert H. Gilman, Nick Harris. PLOS One. September 2, 2015. DOI: 10.1371/journal.pone.0136726. Full Text at http://journals.plos.org/plosone/article?id=10.1371/journal.pone.0136726
  12. Headscarf (hijab) pin aspiration: effects of fashion phenomenon in Islam girls. Kakunje A, Angri SB, Kakkilaya BS, Puthran SS. AP J Psychological Medicine July-Dec 2014;15(2):179-80. At http://www.apjpm.org/images/thumbs/apjpm-july-dec-2014.pdf [See]
  13. Control Measures and Malaria Persistence in Mangalore City in South-Western India. Padukone S, Devaraju PB, Puttaswamy R, Kakkilaya BS, Ghosh SK, Gowda CD, Achur RN. In Proceedings of Advances in Plasmodium vivax Malaria Research, At CosmoCaixa, Barcelona, Spain [See]
  14. Epidemiology of Malaria in South-Western Region of India. Devaraju PB, Padukone S, Puttaswamy R, Kakkilaya BS, Ghosh SK, Gowda CD, Achur RN. In Proceedings of Advances in Plasmodium vivax Malaria Research, At CosmoCaixa, Barcelona, Spain [See]
  15. Fluorescent In-Situ Hybridizations Assays (P-Genus and PFV- FISH) for Detection and Differentiation of Plasmodium Species Directly on Blood Smears.Shah JS, Weltman H, Mark O, Barcelo N, Harris N, Caoili E, Kakkilaya S, Kedige AR, Gilman R.  Abstract 3207. Am Soc Trop Med Hyg. Annual Meet Nov 18–22, 2009. Washington. [List of Abstracts]
  16. Insulin Resistance: From theory to practice. Kakkilaya BS. Online J Health Allied Scs.2006;1:1 [Full Text Online]
  17. Rational Medicine. Kakkilaya BS. Physician’s Digest. Apr-May 2006;15(1):87-91
  18. Rational Medicine: Need of the hour. Kakkilaya BS. Calicut Medical Journal. 2004;2(3):e(1) [Full text Online]
  19. Rapid Diagnosis of Malaria. Kakkilaya BS. Lab Medicine. 2003 Aug;8(34):602-608 [Full Text Online]
  20. Two cases of hereditary fructose intolerance. Ananth N, Praveenkumar GS, Rao AK, Vasanthi, Kakkilaya BS. Ind Journal Clin Biochem. 2003;18(2):87-92 [Full Text Online]
  21. A case of diabetes mellitus with xanthoma disseminatum. Balasaraswathy P, Kakkilaya BS, Shetty KM, Parameshwaraiah S. Ind J Dermatol. 2002;47(1):29-31. [Full Text Online]
  22. Leptospirosis and Ground Itch. Kakkilaya BS, Balasaraswathy P, Motha B. Tropical Doctor. 2001 October 31;252
  23. Investigation of a leptospirosis outbreak in Surathkal. Kakkilaya BS, Rao R, Motha B, Venugopalan PP, Karunasagar I. Ind Journal Comm Health. 2001;7(1&2):1-11
  24. Methemoglobinemia due to p-chloroaniline. Kakkilaya BS. J Forensic Med Toxicol. 2001 Jan-Jun;18(1):4-5
  25. Effect of a community centered voluntary initiative for malaria control in Mangalore. Kakkilaya BS, Motha B, Rajeev, Venugopalan PP, Karunasagar I. In Bundy D, Warrel D, Co-Chairman, Scientific committee. Final programme and abstract book, Oxford 2000, New Challenges in tropical medicine and parasitology, 2000 Sep 18-22; Oxford. Cheshire: Complete Congress Services Ltd; 2000. p. 159
  26. Investigation of a leptospirosis outbreak in Surathkal. Kakkilaya BS, Motha B, Rajeev, Venugopalan PP, Karunasagar I. In Bundy D, Warrel D, Co-Chairman, Scientific committee. Final programme and abstract book, Oxford 2000, New Challenges in tropical medicine and parasitology, 2000 Sep 18-22; Oxford. Cheshire: Complete Congress Services Ltd; 2000. p. 139