Corona stats: infections are more common in 30-80+ years, deaths more common in 60+ years, with max case fatality of 15% in 80+ years. Overall case fatality rate 2.3%, and recovery in 97.7%
March 7, 2020
Corona 2019 originated in China, most likely to have spread from some animal source (like almost all our infections that have originated from animals or birds), then spread locally and now globally. It is as infectious or contagious as flu, spreading thru droplets and contact with surfaces smeared with secretions from infected persons. It has a long incubation period of 2 weeks, therefore it is impossible to contain the infected persons from moving out. The screenings at ports of entry will not serve any purpose. Almost 70% patients are asymptomatic or mildly symptomatic, and will not report to health facilities, yet can transmit the infection. Therefore it is impossible to prevent the spread of this virus. Also, by this fear mongering, quarantining and such other extreme measures, even those cases with mild to moderate symptoms are likely to stay away from health authorities due to fear of being quarantined. Severe illness and deaths have occurred in people older than 60 years, with highest fatality of 15% happening in 80+ years. Overall mortality is 2%, but may be much lower if asymptomatic and unreported and untested cases are factored in. No food, no gaumootra or gau dung, no herb can prevent or treat, and such treatment is not needed too. All we can and should do is advise our elderly to avoid crowds and visiting hospitals, and anyone with cough and fever and breathlessness must immediately report to a hospital of modern medicine. That’s all. Baki sab bakwas.
Are we dealing with Corona Virus or with Ebola, Nipah or such? 🤔🤔
March 12, 2020
Should we wear such a suit at our hospitals and consulting rooms? For years? Because corona is here to stay and spread.🤔
March 13, 2020
This is dated September 2009. As H1N1 began spreading, WHO started its scare mongering and claimed that it could kill millions, could wipe off communities and countries and economies blah blah blah and advised N90 masks, screening at airports, bus and railway stations, shutting down of schools and offices etc. It also promoted Tamiflu and vaccine development.
After 9 months, WHO apologised. By then, the damage to economy and healthcare workforce was already done.
ಈ ಸರಕಾರಕ್ಕೆ ಯಾರಾದರೂ ಬುದ್ಧಿ ಹೇಳಿ ಅಥವಾ ಆ ಮಾಲ್, ಸಿನಿಮಾ ಮಾಲಕರು, ಮದುವೆ ಏರ್ಪಡಿಸಿದವರು ಬೀದಿಗೆ ಬಂದು ಪ್ರತಿಭಟಿಸಿ. ಇದು ಯಾವ ಉಪಯೋಗಕ್ಕೂ ಇಲ್ಲದ ಮೂರ್ಖತನದ ನಿರ್ಧಾರ.
ಕೊರೊನಾ ಹರಡಿಯಾಗಿದೆ, ಭಾರತಕ್ಕೆ ಬಂದಾಗಿದೆ, ಶತಮಾನಗಳ ಕಾಲ ಉಳಿಯಲಿದೆ, ಅದು ಹರಡುವುದನ್ನು ತಡೆಯಲು ಸಾಧ್ಯವಿಲ್ಲ.
ಶೇ. 70 ಸೋಂಕಿತರಲ್ಲಿ, ಅದರಲ್ಲೂ ಮಕ್ಕಳು ಮತ್ತು ಕಿರಿವಯಸ್ಕರಲ್ಲಿ, ಯಾವ ರೋಗಲಕ್ಷಣಗಳೂ ಇಲ್ಲದೆ, ಅಥವಾ ಅತ್ಯಲ್ಪ ನೆಗಡಿ ಕೆಮ್ಮು ಉಂಟಾಗಿ ಅದು ಹೋಗಿಬಿಡುತ್ತದೆ.
60ಕ್ಕೆ ಮೇಲ್ಪಟ್ಟವರಲ್ಲಿ, ಒಟ್ಟಾರೆಯಾಗಿ ಶೇ. 15ರಷ್ಟು ಸೋಂಕಿತರಲ್ಲಿ, ಶ್ವಾಸಾಂಗಕ್ಕೆ ಸಮಸ್ಯೆಯುಂಟಾಗಿ ಉಸಿರಾಡಲು ಕಷ್ಟವೆನಿಸಬಹುದು, ಅಂತವರಷ್ಟೇ ಆಸ್ಪತ್ರೆಗೆ ಬಂದರೆ ಸಾಕು. ಅವರಲ್ಲೂ ಹೆಚ್ಚಿನವರಿಗೆ ಕೇವಲ ಆಮ್ಲಜನಕ ಕೊಟ್ಟರೆ ಸಾಕಾಗುತ್ತದೆ, ಶೇ. 5ರಷ್ಟು ಸೋಂಕಿತರಿಗಷ್ಟೇ ಕೃತಕ ಉಸಿರಾಟದ ಅಗತ್ಯ ಬರಬಹುದು, ಅವರಲ್ಲೂ ಹಲವಾರು ಗುಣಮುಖರಾಗುತ್ತಾರೆ.
ಮಾಲ್, ಮದುವೆ ಮುಚ್ಚಬೇಡಿ.
ಈ ಹಿರಿವಯಸ್ಕರು, ಅದಾಗಲೇ ಶ್ವಾಸಾಂಗದ ಸಮಸ್ಯೆಯುಳ್ಳವರು ಅತ್ತ ಹೋಗದಂತೆ ಹೇಳಿ, ಸಾಕು.
ಉಸಿರಾಟದ ಸಮಸ್ಯೆಯಾದವರು ಕೂಡಲೇ ಆಸ್ಪತ್ರೆಗೆ ಹೋಗಿ.
ತೀವ್ರ ಉಸಿರಾಟದ ಸಮಸ್ಯೆಯಿದ್ದವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಿ, ಸಾಕು.
ಮೂಗಿನ ತುದಿಗೆ ನೆಗಡಿಯಾದದ್ದಕ್ಕೆ ಕತ್ತನ್ನೇ ಕತ್ತರಿಸಬೇಡಿ.
ಮಾನ್ಯ ಮುಖ್ಯಮಂತ್ರಿಗಳೇ, ಕೊರೊನಾ ತಡೆಯುವುದಕ್ಕೆ ಇಡೀ ರಾಜ್ಯದ ಎಲ್ಲಾ ಸಾರ್ವಜನಿಕ ಸ್ಥಳಗಳನ್ನು ಮುಚ್ಚುವ ನಿರ್ಧಾರವನ್ನು ದಯವಿಟ್ಟು ಹಿಂಪಡೆಯಿರಿ. ಈಗಾಗಲೇ ನಮ್ಮ ಜನರು ಕೆಲಸವಿಲ್ಲದೆ ಕಷ್ಟದಲ್ಲಿದ್ದಾರೆ, ಅಂತಲ್ಲಿ ಇಡೀ ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭಾರೀ ಹೊಡೆತ ನೀಡುವ ಈ ನಿರ್ಧಾರ ಸಾಧುವಲ್ಲ, ಅಗತ್ಯವೂ ಇಲ್ಲ.
ಅದರ ಬದಲಿಗೆ, ಕೊರೊನಾ ಅಂದರೆ ಏನು, ಅದರ ಲಕ್ಷಣಗಳೇನು, ಹರಡುವುದು ಹೇಗೆ, ರೋಗ ತಗಲಿದವರನ್ನು ಹೇಗೆ ಆರೈಕೆ ಮಾಡಬೇಕು, ಯಾರನ್ನು ಮನೆಯಲ್ಲೇ ನೋಡಿಕೊಳ್ಳಬೇಕು(ಬಹುದು) ಯಾರನ್ನು ಆಸ್ಪತ್ರೆಗೆ ತರಬೇಕು, ಮನೆಯಲ್ಲಿ ಆರೈಕೆ ಮಾಡುವುದಿದ್ದರೆ ರೋಗಿ ಹಾಗೂ ಮನೆಯವರು ಯಾವ ಜಾಗ್ರತೆ ವಹಿಸಬೇಕು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿಯನ್ನು ರಾಜ್ಯದ ಜನರಿಗೆ ಈ ಕೂಡಲೇ ತಲುಪಿಸಲು ವ್ಯವಸ್ಥೆ ಮಾಡಿ. ಜೊತೆಗೆ, ಸೋಂಕು ಹರಡಿದಾಗ ಹಲವರು ಆಸ್ಪತ್ರೆಗಳಿಗೆ ದಾಖಲಾಗಬೇಕಾದ ಅಗತ್ಯವುಂಟಾಗಬಹುದು, ಕೆಲವರಿಗೆ ಕೃತಕ ಉಸಿರಾಟದ ಅಗತ್ಯವೂ ಬರಬಹುದು. ಅದನ್ನು ನಿಭಾಯಿಸಲು ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆಗಳನ್ನು ಈ ಕೂಡಲೇ ಒದಗಿಸಿ, ಹಾಗೂ ಅಂತಹ ರೋಗಿಗಳ ಚಿಕಿತ್ಸೆಗಾಗಿಯೇ ಕೆಲವು ಆಸ್ಪತ್ರೆಗಳನ್ನು ಪ್ರತ್ಯೇಕವಾಗಿಡುವುದು ಒಳ್ಳೆಯದು.
ಸೋಂಕು ತಗಲಿದವರ ಸಂಪರ್ಕಕ್ಕೆ ಬಂದು, ಸೋಂಕಿನ ಲಕ್ಷಣಗಳಿದ್ದವರು ಸಮೀಪದ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿ, ಮನೆಯ ಸದಸ್ಯರಿಗಾಗಲೀ, ಇತರರಿಗಾಗಲೀ ಅದು ಹರಡದಂತೆ ತಾವೇ ಜವಾಬ್ದಾರಿಯಿಂದ ಎಚ್ಚರಿಕೆ ವಹಿಸಬೇಕು. ಆದಷ್ಟು ಮಟ್ಟಿಗೆ ಮನೆಯೊಳಗೆ ಒಂದೇ ಕೋಣೆಯಲ್ಲಿ ಇದ್ದು, ಆದಷ್ಟು ಕಡಿಮೆ ಜನರ ಸಂಪರ್ಕವಿರಬೇಕು, ಇತರರೊಂದಿಗೆ ಸಂಪರ್ಕದಿಂದ ಕನಿಷ್ಠ 1 ಮೀಟರ್ ದೂರವನ್ನು ಕಾಯಬೇಕು. ಕೋಣೆಯನ್ನು ದಿನಕ್ಕೊಮ್ಮೆಯಾದರೂ ಶುಚಿಕಾರಕ ಬಳಸಿ ಸ್ವಚ್ಛಗೊಳಿಸಬೇಕು. ಬಟ್ಟೆಗಳನ್ನು ಪ್ರತ್ಯೇಕವಾಗಿಟ್ಟು, 60 ಡಿಗ್ರಿ ಬಿಸಿಯಿರುವ ನೀರಲ್ಲಿ ತೊಳೆದು ಒಣಗಿಸಿಕೊಳ್ಳಬೇಕು. ಅವರ ಸಂಪರ್ಕಕ್ಕೆ ಬಂದವರು 14 ದಿನಗಳ ಕಾಲ ತಮ್ಮ ಮೇಲೆ ನಿಗಾ ವಹಿಸಿ ರೋಗಲಕ್ಷಣಗಳಿದ್ದರೆ ತಾವೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಎಲ್ಲಾ ಜಾಗ್ರತೆಗಳನ್ನೂ ವಹಿಸಬೇಕು. ಉಸಿರಾಟದ ಸಮಸ್ಯೆಯುಂಟಾದವರು ಕೂಡಲೇ ಆಸ್ಪತ್ರೆಗೆ ಹೋಗಬೇಕು.
ಸೋಂಕುಳ್ಳವರನ್ನು ನಿರ್ಬಂಧಿಸಿದರೆ ಸಾಕು, ಇಡೀ ರಾಜ್ಯವನ್ನು ನಿರ್ಬಂಧಿಸುವ ಅಗತ್ಯ ಈಗಂತೂ ಇಲ್ಲ.
ಮಾರ್ಚ್ 14,2020
ಕರ್ನಾಟಕವನ್ನು ಸಿಂಗಾಪುರ ಮಾಡುತ್ತೇವೆ ಎನ್ನುವ ರಾಜಕಾರಣಿಗಳು ಕೊರೊನಾ ಸಾಂಕ್ರಾಮಿಕವನ್ನು ನಿಭಾಯಿಸುವಲ್ಲಿ ಸಿಂಗಾಪುರದಿಂದ ಕಲಿಯಬಹುದಿತ್ತು.
ಇಡೀ ರಾಜ್ಯದಲ್ಲಿ ಹೀಗೆ ಶಾಲೆ, ಕಾಲೇಜು, ವ್ಯಾಪಾರ ಮಳಿಗೆಗಳು, ಮದುವೆಗಳು ಎಲ್ಲವನ್ನೂ ಮುಚ್ಚಿಸಿ ಇನ್ನಷ್ಟು ಭಯವನ್ನೂ, ಗೊಂದಲವನ್ನೂ ಹರಡುವ ಬದಲು ಜನರು ಮಾಡಲೇ ಬೇಕಾದ ಜಾಗ್ರತೆಗಳ ಬಗ್ಗೆ ಸರಿಯಾದ, ಸ್ಪಷ್ಟವಾದ ಮಾಹಿತಿ ನೀಡಿ ಧೈರ್ಯ ತುಂಬುವುದು, ಯಾರಲ್ಲಿ ಗಂಭೀರ ಸಮಸ್ಯೆಯುಂಟಾಗುವ ಸಾಧ್ಯತೆಗಳಿವೆಯೋ ಅಂಥವರಿಗೆ ವಿಶೇಷ ಜಾಗ್ರತೆ ವಹಿಸುವಂತೆ ಮಾಡುವುದು, ಆಸ್ಪತ್ರೆಗಳನ್ನು ಸನ್ನದ್ಧಗೊಳಿಸುವುದು ಸರಕಾರದ ಆದ್ಯತೆಯಾಗಬೇಕಿತ್ತು. ಈ ಹಂತದಲ್ಲಿ ಈ ರೀತಿಯಾಗಿ ಇಡೀ ರಾಜ್ಯದಲ್ಲಿ ನಿರ್ಬಂಧ ಹೇರುವ ಅಗತ್ಯವಿತ್ತೇ?
ಭಾರತದಲ್ಲಿ ನಾವೀಗ ಕೊರೊನಾ ಹರಡುವಿಕೆಯ ಆರಂಭಿಕ ಹಂತದಲ್ಲಿದ್ದೇವೆ.
ಈಗ ಮಾಡಬೇಕಾದದ್ದು:
ಈಗ ಜನಸಾಮಾನ್ಯರು ಮಾಡಬೇಕಾದದ್ದು:
1. ಈಗಾಗಲೇ ಸೋಂಕಿತರಾದವರು ಅಥವಾ ಕೊರೊನಾ ಹೋಲುವ ಲಕ್ಷಣಗಳಿದ್ದವರು ಇತರರಿಗೆ ಸೋಂಕು ಹರಡದಂತೆ ನೋಡಿಕೊಳ್ಳುವುದು – ಮನೆಯೊಳಗೇ ಇದ್ದು, ಕೆಮ್ಮುವಾಗ ಶ್ವಾಸಾಂಗದ ದ್ರವಗಳು ಹೊರಬೀಳದಂತೆ, ಸುತ್ತಲಿನ ಸಾಧನಗಳಿಗೆ ತಗಲದಂತೆ ಎಚ್ಚರಿಕೆ ವಹಿಸುವುದು; ಉಸಿರಾಟದ ಸಮಸ್ಯೆಯಿದ್ದರೆ ಕೂಡಲೇ ಸರಕಾರಿ ಸಹಾಯವಾಣಿಗೆ ಕರೆ ಮಾಡಿ ತಿಳಿಸುವುದು.
2. ಕೊರೊನಾ ತಗಲಿದರೆ ಗಂಭೀರ ಸಮಸ್ಯೆಯಾಗಬಲ್ಲ ಹಿರಿವಯಸ್ಕರು, ಆಗಲೇ ಇತರ ರೋಗಗಳಿರುವವರು ಆದಷ್ಟು ಮಟ್ಟಿಗೆ ಜನಸಂದಣಿಯಿರುವಲ್ಲಿಗೆ ಹೋಗದೆ, ಮನೆಯಲ್ಲೇ ಇದ್ದು, ಸೋಂಕಿನಿಂದ ರಕ್ಷಿಸಿಕೊಳ್ಳುವುದು.
ಈಗ ಸರಕಾರವು ಮಾಡಬೇಕಾದದ್ದು:
ತಾಲೂಕು ಕೇಂದ್ರಗಳಲ್ಲೂ, ಜಿಲ್ಲಾ ಕೇಂದ್ರಗಳಲ್ಲೂ ತೀವ್ರ ರೂಪದ ಕೊರೊನಾ ಪೀಡಿತರ ಚಿಕಿತ್ಸೆಗೆ ಕೃತಕ ಉಸಿರಾಟದ ಸೌಲಭ್ಯವೂ ಒಳಗೊಂಡಂತೆ ತಾತ್ಕಾಲಿಕವಾದ ವಿಶೇಷ ಆಸ್ಪತ್ರೆಗಳನ್ನು ನಿರ್ಮಿಸುವುದು. ಇನ್ನೆರಡು ವಾರಗಳಲ್ಲಿ ಇವು ಸಿದ್ಧಗೊಳ್ಳುವಂತೆ ಮಾಡಬೇಕು. ಸರ್ಕಾರವು ಅದನ್ನು ಮಾಡುವಂತೆ ನಾವು ಒತ್ತಾಯಿಸಬೇಕು. ವಿಶೇಷ ಆಸ್ಪತ್ರೆಗಳಲ್ಲದೆ, ಕೊರೊನಾ ಸೋಂಕಿತರನ್ನು ಸಾಗಿಸಲೆಂದೇ ಪ್ರತ್ಯೇಕ ಅಂಬ್ಯುಲೆನ್ಸ್/ವಾಹನ ಸೇವೆಯನ್ನು ಏರ್ಪಡಿಸಿದರೆ ಒಳ್ಳೆಯದು.
March 16, 2020
Need of the hour is to set up special temporary hospitals at taluka and district levels for COVID respiratory care, and to train the necessary manpower in the next 2 weeks.
Despite the best efforts to contain the infected persons and their contacts, Corona cases are likely to increase substantially over the next 3 – 6 weeks, reaching stage 3 and 4. Self quarantine, no tests, no calls unless significantly ill, dedicated ambulances to carry the needy and establishment of temporary hospitals are the only measures that will be of help.
Self quarantine of infected persons (85% of cases will need only this) must be publicised and promoted widely, so that people can understand the concept and co-operate. These cases do not need testing nor do they need medicines and the infection will get cured in a week on its own. If they go out and desperately seek treatment from many doctors and the so called AYUSH practitioners, they will only spread the disease, nothing else. Media have a big role to play in this regard.
Pressuring the govt for more tests is of not much benefit for anyone, instead, the pressure must be on establishing temporary hospitals for Covid Care.
Hospital manpower must be trained immediately for Covid Care and ventilator use in ICUs.
It’s also necessary to have a dedicated ambulance service for carrying seriously ill COVID cases (mostly the elderly) so that public transport is not used by these infectious patients.
March 17, 2020
Despite the best efforts to contain the infected persons and their contacts, Corona cases are likely to increase substantially over the next 3 – 6 weeks, reaching stage 3 and 4. As it’s been proved beyond doubt by the available information that COVID 19 gets cured on its own without any treatment and without causing any problems in 85% of the cases, countries like the USA, UK and our own state of Kerala have published guidelines suggesting Self Quarantine of the patients so as to minimise the movement of the infected persons and to limit the spread of the infection. Accordingly, the following measures can be taken to manage the impending COVID 19 epidemic in the next 3-6 weeks.
Self quarantine of infected persons (85% of cases will need only this) must be publicised and promoted widely, so that people can understand the concept and co-operate. These cases do not need testing nor do they need medicines and the infection will get cured in a week on its own. If they go out and desperately seek treatment from many doctors and from the so called AYUSH practitioners, they will only spread the disease, nothing else. Media have a big role to play in this regard.
Infected persons who suffer from high grade fever, severe cough or difficulty in breathing or feeling very weak must contact the health authorities. In the US and UK, such people have been asked to call dedicated helplines and arrangements have been made for video calls to experts, who can decide on the need for hospitalization. Similar arrangements must be made in our country too, to help the patients who really need hospital care and also to avoid unnecessary visits to outpatient clinics and thereby to prevent the infected ones from spreading the disease. This can be achieved by creating dedicated 24×7 helplines with video facilities manned by trained doctors of modern medicine who are capable of identifying patients in need of hospitalization. It should also be made possible for the patients to consult their own doctors of modern medicine via video calls on WhatsApp or Google Duo etc. It may not be prudent to depend on AYUSH practitioners who are not trained to identify patients with critical problems.
Patients who are thus identified to have significant problems that require hospitalization (most of them are likely to be elderly of age 60 years or more) must be transported to the hospitals on dedicated ambulances. Therefore the government must make arrangements to have such dedicated ambulance services for the transport of COVID 19 patients. This will prevent the use of public transport or of own vehicles, which can get contaminated, leading to transmission to others.
It is also necessary to have dedicated, special hospitals on temporary basis for the next 3-4 months to take care of the seriously ill COVID patients. This will prevent other hospitals and patients and medical staff therein from getting infected and also will help in co-ordinating the treatment efforts for COVID 19. Schools, colleges, unused apartment complexes or even some hospitals in entirety can be converted to such temporary COVID Care hospitals. These should have facilities for advanced respiratory support such as ventilators.
It is also necessary to immediately train the manpower of doctors, nurses and other paramedical staff for managing such hospitals 24×7 for the next 3-4 months.
Most importantly, the public must be educated about the need for self quarantine, and the need to have patience, confidence and calmness, so that they do not move out with infection, but stay at home and prevent the spread of the infection. Countries where the people have cooperated with their governments have been hugely successful in containing COVID 19
ಮಾರ್ಚ್ 17, 2020
ಕೊರೊನಾ ಸೋಂಕು ಸಮುದಾಯ ಮಟ್ಟದಲ್ಲಿ ಹರಡಲಾರಂಭಿಸಿದಾಗ (ಮುಂದಿನ 3ನೇ ಹಂತ) ಎಲ್ಲಾ ಸೋಂಕಿತರಿಗೆ ಕೊರೊನಾ ಪರೀಕ್ಷೆ ಮಾಡುವ ಅಗತ್ಯವಿಲ್ಲ ಹಾಗೂ ಬಹುತೇಕ (85%ಕ್ಕೂ ಹೆಚ್ಚು) ಸೋಂಕಿತರು ಯಾವುದೇ ಸಮಸ್ಯೆಗಳಾಗದೆ, ಯಾವ ಚಿಕಿತ್ಸೆಯ ಅಗತ್ಯವೂ ಇಲ್ಲದೆ ಗುಣಮುಖರಾಗುವುದರಿಂದ ಅಂಥ ಸೋಂಕಿತರು ಮನೆಯೊಳಗೇ ಉಳಿದುಕೊಂಡು ಇತರರಿಗೆ ಸೋಂಕು ಹರಡದಂತೆ ನೆರವಾಗಬೇಕು ಎಂಬುದನ್ನು ಹೆಚ್ಚಿನ ದೇಶಗಳಲ್ಲಿ ಪಾಲಿಸಲಾಗುತ್ತಿದೆ. ಕೇರಳ ಸರಕಾರವೂ ಇಂಥದ್ದೇ ಮಾರ್ಗದರ್ಶಿಯನ್ನು ಈಗಾಗಲೇ ಪ್ರಕಟಿಸಿದೆ. ಹೆಚ್ಚಿನ ಸೋಂಕಿತರನ್ನು ಮನೆಗಳಲ್ಲೇ ಉಳಿಯುವಂತೆ ಮಾಡಿ, ಸಮಸ್ಯೆಗಳಾಗಬಲ್ಲವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲು ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ:
ಸಮಸ್ಯೆಯಿಲ್ಲದ ಸೋಂಕಿತರು ಮನೆಯೊಳಗೇ ಉಳಿಯಬೇಕು ಎಂಬುದನ್ನು ಸ್ಪಷ್ಟವಾಗಿ ಪ್ರಚುರಪಡಿಸಬೇಕು. ಇದರಲ್ಲಿ ಮಾಧ್ಯಮಗಳ ಪಾತ್ರ ಬಲು ದೊಡ್ಡದು.
ಚಿಕಿತ್ಸೆಯ ಅಗತ್ಯವಿಲ್ಲ ಎಂದಾಗ ಜನರು ಆತಂಕಗೊಂಡು ಆಧುನಿಕ ವೈದ್ಯರಿಂದ ಹಿಡಿದು ಆಯುರ್ವೇದ, ಹೋಮಿಯೋಪತಿ ಇತ್ಯಾದಿ ಚಿಕಿತ್ಸಕರೆಲ್ಲರ ಬಳಿಗೆ ಚಿಕಿತ್ಸೆಗಾಗಿ ಹೋಗುವ ಸಾಧ್ಯತೆಗಳಿರುತ್ತವೆ. ಕೊರೊನಾ ಸೋಂಕು ಒಂದು ವಾರದ ಕಾಲ ರೋಗಲಕ್ಷಣಗಳನ್ನುಂಟು ಮಾಡುವುದರಿಂದ ಅಷ್ಟು ದಿನ ಕಾಯುವ ತಾಳ್ಮೆಯಿಲ್ಲದೆ ಅಲ್ಲಿಲ್ಲಿ ಚಿಕಿತ್ಸೆಗೆ ಹೊರಹೋಗುವುದು, ಒಬ್ಬರು ಚಿಕಿತ್ಸಕರಿಂದ ಇನ್ನೊಬ್ಬರ ಬಳಿಗೆ ಹೋಗುವುದು, ಆಸ್ಪತ್ರೆಗಳಲ್ಲಿ ಸಾಲುಗಟ್ಟುವುದು ಇತ್ಯಾದಿಗಳಾಗುವ ಸಾಧ್ಯತೆಗಳಿದ್ದೇ ಇವೆ. ಜನರು ಆತಂಕಕ್ಕೊಳಗಾಗದೆ, ಧೈರ್ಯದಿಂದ ಮನೆಯೊಳಗೇ ಇರಬೇಕು, ಯಾವ ಚಿಕಿತ್ಸೆಗೂ ಯಾರ ಬಳಿಯೂ ಹೋಗುವ ಅಗತ್ಯವಿಲ್ಲ, ಹೋಗಕೂಡದು ಎನ್ನುವುದನ್ನು ಸ್ಪಷ್ಟವಾಗಿ ಜನರಿಗೆ ತಿಳಿಸಬೇಕು, ಧೈರ್ಯ ತುಂಬಬೇಕು.
ಜ್ವರ, ಕೆಮ್ಮು ವಿಪರೀತವಾಗಿದ್ದರೆ, ಉಸಿರಾಟಕ್ಕೆ ಸಮಸ್ಯೆಯಾದರೆ ಕೂಡಲೇ ಆರೋಗ್ಯ ಸಹಾಯವಾಣಿಯನ್ನು ಸಂಪರ್ಕಿಸಬೇಕು ಅಥವಾ ತಮ್ಮ ವೈದ್ಯರಿಗೆ ಕರೆ ಮಾಡಬೇಕು. ಅಮೆರಿಕಾ, ಇಂಗ್ಲೆಂಡ್ ಗಳಲ್ಲಿ ಅಂಥ ರೋಗಿಗಳು ವಿಡಿಯೋ ಕರೆಗಳ ಮೂಲಕ ವೈದ್ಯರನ್ನು ಸಂಪರ್ಕಿಸುವ ವ್ಯವಸ್ಥೆ ಮಾಡಲಾಗಿದೆ. ನಮ್ಮಲ್ಲಿಯೂ ಇಂಥ ಕೇಂದ್ರೀಕೃತ ವ್ಯವಸ್ಥೆಯನ್ನು ಮಾಡಿ, ಅದನ್ನು ನಿಭಾಯಿಸಲು ವೈದ್ಯರ ತಂಡವನ್ನು ಸಿದ್ಧಗೊಳಿಸುವುದು ಅಪೇಕ್ಷಣೀಯ. ಖಾಸಗಿ ವೈದ್ಯರನ್ನು (ಕೊರೊನಾ ಬಗ್ಗೆ ಅರಿವಿರುವ ಆಧುನಿಕ ವೈದ್ಯ ವಿಜ್ಞಾನದ ವೈದ್ಯರನ್ನು ಮಾತ್ರ) ಕೂಡ ಹೀಗೆ ವಿಡಿಯೋ ಕರೆಗಳ (ವಾಟ್ಸಾಪ್, ಗೂಗಲ್ ಡುವೋ) ಮೂಲಕ ಸಂಪರ್ಕಿಸುವ ವ್ಯವಸ್ಥೆ ಮಾಡುವ ಬಗ್ಗೆ ಪರಿಗಣಿಸಬಹುದು. ಹಾಗೆ ಕರೆ ಮಾಡಿದವರಲ್ಲಿ ಗಂಭೀರ ಸಮಸ್ಯೆಗಳಿದ್ದವರು ಗುರುತಿಸಲ್ಪಟ್ಟರೆ ಅಂಥವರನ್ನಷ್ಟೇ ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ.
ಸಮಸ್ಯೆಗೊಳಗಾದ ಕೊರೊನಾ ಪೀಡಿತರು (ಹೆಚ್ಚಿನವರು 60 ವರ್ಷಕ್ಕೆ ಮೇಲ್ಪಟ್ಟವರೇ ಆಗಿರುತ್ತಾರೆ) ದಾಖಲಾಗುವುದಕ್ಕೆ ಪ್ರತ್ಯೇಕ ಆಸ್ಪತ್ರೆಗಳನ್ನೇ ಸಿದ್ಧಪಡಿಸುವುದು ಅಪೇಕ್ಷಣೀಯ. ಒಂದು ಆಸ್ಪತ್ರೆಯ ಒಂದು ವಿಭಾಗವನ್ನು ಕಾಯ್ದಿರಿಸುವುದರಿಂದ ಅಲ್ಲಿರುವ ಇತರರಿಗೆ ಸೋಂಕು ಹರಡುವ ಸಾಧ್ಯತೆಗಳಿರುವುದರಿಂದಲೂ, ಇತರ ಎಲ್ಲಾ ರೋಗಿಗಳ ಚಿಕಿತ್ಸೆಗಳನ್ನೂ, ಹಾಗೂ ತುರ್ತು ಚಿಕಿತ್ಸೆಗಳನ್ನೂ ನಿರಾತಂಕವಾಗಿ ನಡೆಸಬೇಕಾಗಿರುವುದರಿಂದಲೂ ಪ್ರತ್ಯೇಕ ಆಸ್ಪತ್ರೆಗಳನ್ನೇ ಸಿದ್ಧಪಡಿಸುವುದು ಅಪೇಕ್ಷಣೀಯ.
ಗಂಭೀರವಾಗಿರುವ ಕೊರೊನಾ ಪೀಡಿತರಿಗಾಗಿ ವಿಶೇಷ ಆಸ್ಪತ್ರೆಗಳನ್ನು ತಾತ್ಕಾಲಿಕವಾಗಿ ಶಾಲೆ, ಕಾಲೇಜು, ಬಳಕೆಯಲ್ಲಿಲ್ಲದ ಕಟ್ಟಡಗಳಲ್ಲಿ ತೆರೆಯಬಹುದು, ಮೂರ್ನಾಲ್ಕು ತಿಂಗಳಲ್ಲಿ ಕೊರೊನಾ ಬಾಧೆಯು ಮರೆಯಾದಾಗ ಅವನ್ನು ಮುಚ್ಚಬಹುದು.(ಚೀನಾದಲ್ಲಿ ಮಾಡಿದಂತೆ)
ಅಂಥ ಆಸ್ಪತ್ರೆಗಳಿಗೆ ಅಗತ್ಯವಿರುವ ಉಪಕರಣಗಳನ್ನು ಸಿದ್ಧಪಡಿಸುವುದು ಹಾಗೂ ಕೃತಕ ಉಸಿರಾಟದಂತಹ ಉನ್ನತ ಚಿಕಿತ್ಸೆ ನೀಡುವುದಕ್ಕೆ ವೈದ್ಯರನ್ನೂ,ವೈದ್ಯಕೀಯ ಸಿಬ್ಬಂದಿಯನ್ನೂ ಸಿದ್ಧಪಡಿಸುವುದು ಅತ್ಯಗತ್ಯ.
ಈ ಆಸ್ಪತ್ರೆಗಳಿಗೆ ಸೋಂಕಿತರನ್ನು ಸಾಗಿಸುವುದಕ್ಕೆ ಪ್ರತ್ಯೇಕವಾದ ವಾಹನ/ಆಂಬುಲೆನ್ಸ್ ವ್ಯವಸ್ಥೆ ಇರುವುದು ಒಳ್ಳೆಯದು. ಸೋಂಕಿತರು ಸಾರ್ವಜನಿಕ ಸಾರಿಗೆಯನ್ನು ಬಳಸಿದರೆ, ಅಥವಾ ಎಲ್ಲರಿಗೂ ಬಳಕೆಯಾಗುವ ಅಂಬ್ಯುಲೆನ್ಸ್ ಬಳಸಿದರೆ ಸೋಂಕು ಹರಡುವುದಕ್ಕೆ ಅವಕಾಶವಾಗಬಹುದು. (ಯಾವುದೇ ಸಮಸ್ಯೆಯಿಲ್ಲದ ಸೋಂಕಿತರು ಮನೆಯಲ್ಲೇ ಇದ್ದು ಹೊರಹೋಗಬಾರದು ಎಂದು ಹೇಳುವುದು ಕೂಡ ಇದೇ ಕಾರಣಕ್ಕೆ)
ಮಾರ್ಚ್ 17, 2020
ದಕ್ಷಿಣ ಕೊರಿಯಾ (ನೀಲಿ) ಮತ್ತು ಇಟೆಲಿಗಳಲ್ಲಿ ಕೊರೊನಾ ಹರಡಿದ ಬಗೆಯನ್ನು ಈ ಚಿತ್ರದಲ್ಲಿ ಕಾಣಬಹುದು. ಚೀನಾದಲ್ಲಿ 72000 ಸೋಂಕಿತರ ಬಗ್ಗೆ ಪ್ರಕಟವಾಗಿರುವ ವರದಿಯೂ ಇದೇ ಬಗೆಯನ್ನು ಸೂಚಿಸುತ್ತದೆ.
ಎಲ್ಲೆಡೆ ಕೊರೊನಾ ಸೋಂಕು ಕಿರಿವಯಸ್ಕರಲ್ಲೇ ಹೆಚ್ಚಾಗಿ ಉಂಟಾಗುತ್ತದೆ. ಶೇ. 85ರಷ್ಟು ಪ್ರಕರಣಗಳು 59ವರ್ಷಕ್ಕಿಂತ ಕಿರಿಯರಲ್ಲಿ ಉಂಟಾಗುತ್ತವೆ. ಇಟಲಿಯಲ್ಲಿ ಹೆಚ್ಚಿನ ಪರೀಕ್ಷೆಗಳನ್ನು ಆಸ್ಪತ್ರೆಗಳಿಗೆ ದಾಖಲಾದವರಲ್ಲಷ್ಟೇ, ಅಂದರೆ ಗಂಭೀರ ಸಮಸ್ಯೆಗೊಳಗಾದವರಲ್ಲಷ್ಟೇ, ನಡೆಸಿರುವುದರಿಂದ ಅಲ್ಲಿನ ವರದಿಗಳಲ್ಲಿ ಹಿರಿವಯಸ್ಕರೇ ಹೆಚ್ಚು ಸೋಂಕಿತರು ಎಂದು ಕಂಡುಬರುತ್ತಿದೆ.
ಸೋಂಕಿನಿಂದ ಸಮಸ್ಯೆಗೊಳಗಾದವರಲ್ಲಿ ಹೆಚ್ಚಿನವರು 60 ವರ್ಷಕ್ಕೆ ಮೇಲ್ಪಟ್ಟವರೇ ಆಗಿದ್ದಾರೆ. ಅದಕ್ಕಿಂತ ಕಿರಿಯ ವಯಸ್ಸಿನವರಲ್ಲಿ ಸಮಸ್ಯೆಗಳು ಅಪರೂಪ, ಸಾವಿನ ಪ್ರಮಾಣವು ಶೇ. 0.5ಕ್ಕಿಂತಲೂ ಕಡಿಮೆ. 80ಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಸಾವಿನ ಪ್ರಮಾಣವು ಇಟಲಿಯಲ್ಲಿ 17%, ಚೀನಾದಲ್ಲಿ 15%, ದ ಕೊರಿಯಾದಲ್ಲಿ 8%.
ನಮ್ಮ ದೇಶದಲ್ಲಿ ಮುಂದಿನ ವಾರಗಳಲ್ಲಿ ಸೋಂಕು ಹರಡಲಾರಂಭಿಸಿದರೆ ಇದೇ ಬಗೆಯಲ್ಲಿರುತ್ತದೆ ಎಂದು ಅಂದಾಜಿಸಬಹುದು.
ಆದ್ದರಿಂದ ಹೆಚ್ಚಿನ ಸೋಂಕುಗಳು 59ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಉಂಟಾಗಬಹುದು, ಆದರೆ ಅವರಲ್ಲಿ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳು ತೀರಾ ಕಡಿಮೆ, ಬಹುತೇಕ ಅವರೆಲ್ಲರೂ ಯಾವುದೇ ಚಿಕಿತ್ಸೆ ಇಲ್ಲದೆಯೇ, ಮನೆಯಲ್ಲೇ ಉಳಿದುಕೊಂಡು, ತಾವಾಗಿ ಗುಣಮುಖರಾಗುತ್ತಾರೆ. 60ಕ್ಕಿಂತ ಮೇಲ್ಪಟ್ಟವರಲ್ಲೂ ಹೆಚ್ಚಿನವರು (ಶೇ 85-97ರಷ್ಟು) ಗುಣಮುಖರಾಗುತ್ತಾರೆ. ಗಂಭೀರ ಸಮಸ್ಯೆಗಳಾದವರಿಗೆ ಚಿಕಿತ್ಸೆ ನೀಡಲು ವಿಶೇಷ ಆಸ್ಪತ್ರೆಗಳನ್ನು ಈಗಲೇ ಸಿದ್ಧಗೊಳಿಸಿದರೆ ಈ ಹಿರಿಯರಿಗೂ ಸೂಕ್ತ ಚಿಕಿತ್ಸೆ ನೀಡಿ ನೆರವಾಗಲು ಸಾಧ್ಯವಿದೆ. ಅದೀಗ ನಮ್ಮ ಸರ್ಕಾರದ ಆದ್ಯತೆಯಾಗಬೇಕು.
ಕೊರೊನಾ ಸೋಂಕಿತರು ತಾವಾಗಿ ಇತರರಿಂದ ದೂರವಿರಬೇಕು, ಅದೇ ಅತ್ಯಂತ ಮುಖ್ಯ.
ಸೋಂಕಿತರು ಮನೆಯಲ್ಲೇ ಉಳಿಯಬೇಕು, ಅಲ್ಲಿಯೂ ತಮ್ಮ ಬಂಧುಗಳಿಂದ ದೂರವಿರಬೇಕು, ಬೇರೆಯೇ ಬಟ್ಟೆ, ತಟ್ಟೆ ಬಳಸಬೇಕು. ವೈದ್ಯರನ್ನು ದೂರವಾಣಿಯಲ್ಲಷ್ಟೇ ಸಂಪರ್ಕಿಸಬೇಕು, ಪರೀಕ್ಷೆ, ಚಿಕಿತ್ಸೆಗಳಿಗಾಗಿ ವೈದ್ಯರ ಬಳಿಗೆ, ಆಸ್ಪತ್ರೆಗಳಿಗೆ ಹೋಗಲೇಬಾರದು; ಬಹುತೇಕ (60ಕ್ಕಿಂತ ಕೆಳಗಿನವರಲ್ಲಿ ಶೇ. 99ರಷ್ಟು, ಹಿರಿಯರಲ್ಲಿ 85-96ರಷ್ಟು) ಸೋಂಕಿತರಿಗೆ ಯಾವುದೇ ಪರೀಕ್ಷೆಯ, ಚಿಕಿತ್ಸೆಯ ಆಗತ್ಯವೇ ಇಲ್ಲ, ವಾರದೊಳಗೆ ತಾವಾಗಿ ಗುಣಮುಖರಾಗುತ್ತಾರೆ.
ಗಂಭೀರ ಸಮಸ್ಯೆಗಳಾಗುವ ಸೋಂಕಿತರು (ಇವರಲ್ಲಿ ಹೆಚ್ಚಿನವರು ಹಿರಿಯ ವಯಸ್ಸಿನವರು) ವೈದ್ಯರನ್ನು ಸಂಪರ್ಕಿಸಿ, ಆಸ್ಪತ್ರೆಗೆ ದಾಖಲಾಗಬೇಕು. ಅದಕ್ಕೂ ಪ್ರತ್ಯೇಕ ಆಂಬ್ಯುಲೆನ್ಸ್, ಪ್ರತ್ಯೇಕ ಆಸ್ಪತ್ರೆ ಇರುವುದು ಅಪೇಕ್ಷಣೀಯ. ಅಂಥ ತಾತ್ಕಾಲಿಕ ಆಸ್ಪತ್ರೆಗಳನ್ನು ಈಗಲೇ ಸಿದ್ಧಗೊಳಿಸಬೇಕು.
ಕೊರೊನಾ ಸೋಂಕು 60ಕ್ಕೆ ಮೇಲ್ಪಟ್ಟ ಹಿರಿಯರಲ್ಲಿ, ಅದರಲ್ಲೂ, ಸಕ್ಕರೆ ಕಾಯಿಲೆ, ಶ್ವಾಸಾಂಗದ ಕಾಯಿಲೆ, ಹೃದ್ರೋಗ ಇತ್ಯಾದಿ ಉಳ್ಳವರಿಗಷ್ಟೇ ಸಮಸ್ಯೆಯನ್ನುಂಟು ಮಾಡುವ ಸೋಂಕು ರೋಗ. ಇನ್ನುಳಿದವರಲ್ಲಿ ಅದು ಹಾಗೆ ಬಂದು ಹೀಗೆ ಹೋಗುತ್ತದೆ, ಯಾವ ಪರೀಕ್ಷೆಯಾಗಲೀ, ವೈದ್ಯರಾಗಲೀ, ಚಿಕಿತ್ಸೆಯಾಗಲೀ ಅಗತ್ಯವೇ ಇಲ್ಲ. ಆದ್ದರಿಂದ ಸೋಂಕು ತಗಲಿದವರೆಲ್ಲರೂ ಮನೆಯಲ್ಲೇ ಉಳಿದು ಇತರರಿಗೆ ಸೋಂಕು ಹರಡದಂತೆ ಸುಮ್ಮನಿದ್ದರೆ ಸಾಕು.
ಕೊರೊನಾ ಸೋಂಕಿನ ತೀವ್ರ ಪರಿಣಾಮಗಳನ್ನು ತಡೆಯಲು ಮಾಡಬೇಕಾಗಿರುವುದು ಇಷ್ಟೇ:
ಹಿರಿಯರನ್ನು ಪ್ರತ್ಯೇಕಿಸಿ ಸುರಕ್ಷಿತವಾಗಿಟ್ಟು ಸೋಂಕು ತಗಲದಂತೆ ದೂರವಿರಿಸುವುದು (ವೃದ್ಧಾಲಯಗಳಲ್ಲಿ, ತಾತ್ಕಾಲಿಕ ಆಶ್ರಯಗಳಲ್ಲಿ)
ಸೋಂಕು ಒಮ್ಮೆಗೇ ಹಲವರಿಗೆ ಹರಡುವ ಸಾಧ್ಯತೆಗಳಿರುವುದರಿಂದ ಒಮ್ಮೆಗೇ ಅಂಥ ಹಲವು ಹಿರಿಯರಿಗೆ ಉನ್ನತ ಜೀವರಕ್ಷಕ ಚಿಕಿತ್ಸೆ ಬೇಕಾಗಬಹುದಾದ್ದರಿಂದ ಅದಕ್ಕೆಂದೇ ತಾತ್ಕಾಲಿಕವಾಗಿ ಉನ್ನತ ಸೌಲಭ್ಯಗಳಿರುವ ಆಸ್ಪತ್ರೆಯನ್ನು ಸಿದ್ಧಪಡಿಸಿಟ್ಟುಕೊಳ್ಳುವುದು
ಇವನ್ನು ಮಾಡಿದರೆ ಸಾಕು
ಮಾರ್ಚ್ 23, 2020
ಕೊರೋನದಿಂದ ನಮ್ಮ ಹಿರಿಯರನ್ನು ರಕ್ಷಿಸಿ ಎಲ್ಲವನ್ನೂ ಉಳಿಸೋಣ
ನೆರೆ, ಸುನಾಮಿಗಳಿದ್ದರೆ ಹೇಗೆ ದುರ್ಬಲರನ್ನು ಮೊದಲು ಸ್ಥಳಾಂತರಿಸುತ್ತೇವೋ, ಹಾಗೆಯೇ ಕೊರೊನಾದಿಂದ ರಕ್ಷಿಸಲು >60ರ ಹಿರಿಯರನ್ನು ಪ್ರತ್ಯೇಕಿಸಿ ದೂರವಿಡಿ
March 24, 2020
What we are seeing is not lock down, but SHUT DOWN. Of India.
LOCK DOWN is different. Cordoning off patients (cases that arrived), then houses (contacts or local spread), then areas is lock down. That’s needed as the cases occur, and more such pockets may have to be locked down as the infection spreads.
Did any other country do this shut down? Did any expert advise? Do we have cases everywhere? Is Corona in the air of India?
ಮಾರ್ಚ್ 24, 2020
ಸಣ್ಣ ಪುಟ್ಟ ಸಮಸ್ಯೆಯಿದ್ದವರು ಕೊರೊನಾ ಸೋಂಕಿನ ಬಗ್ಗೆ ಆತಂಕಕ್ಕೊಳಗಾಗಿ ದಯವಿಟ್ಟು ಅಲ್ಲಿ ಇಲ್ಲಿ ಓಡಾಡಬೇಡಿ. ಪ್ಲೀಸ್.
ಕೊರೊನಾ ಸೋಂಕು ತಗಲಿದರೂ ನೂರಕ್ಕೆ 98 ಜನ ಗುಣಮುಖರಾಗುತ್ತಾರೆ; ಆದ್ದರಿಂದ, ಹೆದರಬೇಡಿ, ಹೆದರಿಸಬೇಡಿ, ಓಡಾಡಬೇಡಿ.
ಕೊರೊನಾ ಸೋಂಕು ತಗಲಿದರೆ ಸಾಮಾನ್ಯ ಜ್ವರ, ಕೆಮ್ಮು, ನೆಗಡಿ ಅಷ್ಟೇ ಇರುತ್ತವೆ. ಅಪರೂಪಕ್ಕೆ, ಅದು ಕೂಡ 60-65ಕ್ಕೆ ಮೇಲ್ಪಟ್ಟ ಕೆಲವು ಹಿರಿಯರಲ್ಲಿ, ಸೋಂಕಿನಿಂದ ಉಸಿರಾಟಕ್ಕೆ ಸಮಸ್ಯೆಯಾಗಬಹುದು. ಈ ಸಮಸ್ಯೆಯೂ ಕೂಡ ಸೋಂಕು ತಗಲಿದ ಕೂಡಲೇ ಉಂಟಾಗುವುದಿಲ್ಲ, ಅದಕ್ಕೆ ಜ್ವರ ಆರಂಭಗೊಂಡ ಬಳಿಕ ಸುಮಾರು 7-8 ದಿನಗಳಾಗುತ್ತವೆ. ಚೀನಾ, ಇಟಲಿ ಮುಂತಾದ ದೇಶಗಳಲ್ಲಿ ಕೊರೊನಾದಿಂದ ಸಮಸ್ಯೆಗಳಾಗಿರುವುದು ಹೆಚ್ಚಾಗಿ 60-65ಕ್ಕೆ ಮೇಲ್ಪಟ್ಟ ಹಿರಿಯರಲ್ಲಿ, ವಾರದ ಬಳಿಕವೇ; ಹೆಚ್ಚಿನವರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದು 10-11ನೇ ದಿನ. ಆದ್ದರಿಂದ ಜ್ವರ, ಕೆಮ್ಮು ಆರಂಭವಾದೊಡನೆ ಯಾರೂ ಗಾಬರಿಯಾಗಬೇಡಿ, ವೈದ್ಯರಲ್ಲಿಗೆ, ಆಸ್ಪತ್ರೆಗೆ ಓಡಬೇಡಿ. ಧೈರ್ಯವಾಗಿ, ಎಚ್ಚರಿಕೆಯಿಂದ ಮನೆಯಲ್ಲೇ ಇರಿ; ಸಮಸ್ಯೆಯೆನಿಸಿದರೆ ವೈದ್ಯರಿಗೆ ಕರೆ ಮಾಡಿ.
ಕೊರೊನಾ ಸೋಂಕು ತಗಲಿದವರಲ್ಲಿ ಹೆಚ್ಚಿನವರಿಗೆ ಯಾವ ಚಿಕಿತ್ಸೆಯಾಗಲೀ, ಪರೀಕ್ಷೆಯಾಗಲೀ ಅಗತ್ಯವಿಲ್ಲ, ಅದು ಐದಾರು ದಿನಗಳಲ್ಲಿ ತಾನಾಗಿ ವಾಸಿಯಾಗುತ್ತದೆ. ಆದ್ದರಿಂದ ಅವರು ಯಾವ ವೈದ್ಯರ ಬಳಿಗೂ ಹೋಗುವ ಅಗತ್ಯವೇ ಇಲ್ಲ. ಹಾಗೊಂದು ವೇಳೆ ಅವರು ಹೋದರೂ, ವೈದ್ಯರು ಜ್ವರ ನಿವಾರಕ (ಪಾರಾಸಿಟಮಾಲ್) ಬಿಟ್ಟರೆ ಬೇರೆ ಔಷಧವನ್ನು ಕೊಡುವುದಕ್ಕೂ ಇಲ್ಲ. ಕೊರೊನಾ ಇನ್ನಷ್ಟು ಹರಡಿದರೆ, ಹಲವರಲ್ಲಿ ಅದೇ ಸಾಮಾನ್ಯ ಲಕ್ಷಣಗಳಾಗುವುದರಿಂದ, ತಾನಾಗಿ ನಾಲ್ಕೈದು ದಿನಗಳಲ್ಲಿ ವಾಸಿಯಾಗುವ ಈ ಕಾಯಿಲೆಗೆ ನಾಲ್ಕೈದು ದಿನಗಳಲ್ಲಿ ವರದಿ ದೊರೆಯುವ ಪರೀಕ್ಷೆಯನ್ನು ನಡೆಸಿದರೆ ಉಪಯೋಗವೇನಿಲ್ಲ, ಹಾಗಾಗಿ ಕೆಮ್ಮು-ಜ್ವರ ಆರಂಭಗೊಂಡ ಎಲ್ಲರಲ್ಲೂ ಕೊರೊನಾ ಪರೀಕ್ಷೆ ನಡೆಸುವ ಅಗತ್ಯವೂ ಇಲ್ಲ, ಎಲ್ಲರಿಗೆ ನಡೆಸುವುದಕ್ಕೆ ಕೋಟಿಗಟ್ಟಲೆ ಹಣ ಬೇಕಾಗುವುದರಿಂದ ಸಾಧ್ಯವೂ ಇಲ್ಲ. ಆದ್ದರಿಂದ ಕೊರೊನಾ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು, ಗಂಟಲು ನೋವು, ನೆಗಡಿ ಉಳ್ಳವರು ವೈದ್ಯರ ಬಳಿಗಾಗಲೀ, ಆಸ್ಪತ್ರೆಗಳಿಗಾಗಲೀ, ಔಷಧದ ಅಂಗಡಿಗಳಿಗಾಗಲೀ ಯಾವ ಕಾರಣಕ್ಕೂ ಹೋಗಬೇಕಾಗಿಲ್ಲ.
ಸೋಂಕಿನ ಲಕ್ಷಣಗಳುಳ್ಳವರು ಮನೆ ಬಿಟ್ಟು ಹೋಗಲೇ ಬಾರದು. ಅವರು ಮನೆಯಲ್ಲೇ ಇದ್ದು ಒಳ್ಳೆಯ ಆಹಾರ, ವಿಶ್ರಾಂತಿ ಪಡೆಯಬೇಕು, ಮನೆಯ ಇತರರಿಗೆ ಸೋಂಕು ಹರಡದಂತೆ ದೂರವಿದ್ದು ಎಚ್ಚರಿಕೆ ವಹಿಸಬೇಕು. ಕೊರೊನಾ ಸೋಂಕಿತರು ಮನೆಯಿಂದ ಹೊರಗೆ ಹೋದಾಗಲೆಲ್ಲ ಇಡೀ ಊರಿನವರಿಗೆ, ಸಹ ಪ್ರಯಾಣಿಕರಿಗೆ, ವೈದ್ಯರಿಗೆ, ಆಸ್ಪತ್ರೆ ಸಿಬಂದಿಗೆ ಸೋಂಕು ಹರಡಲು ಕಾರಣರಾಗುತ್ತಾರೆ, ಇದರಿಂದ ಎಲ್ಲರಿಗೂ ಸಮಸ್ಯೆಗಳಾಗಿ ಎಲ್ಲರೂ ಮನೆಯೊಳಕ್ಕೆ ಕುಳಿತುಕೊಳ್ಳುವ ಸ್ಥಿತಿ ಎದುರಾಗಬಹುದು.
ಹೀಗೆ ಮನೆಯಲ್ಲೇ ಉಳಿದಿರುವ ಯಾರಿಗೇ ಆದರೂ (ನೆನಪಿಡಿ: ಎಲ್ಲೆಡೆ, ಭಾರತದಲ್ಲಿಯೂ ಸಹ, ಇದುವರೆಗೆ ಆಗಿರುವ ಸಾವುಗಳನ್ನು ಗಮನಿಸಿದರೆ ಬಹುತೇಕ ಎಲ್ಲರೂ ಹಿರಿಯರು, ಸೋಂಕಿತರಾಗಿದ್ದ ತಮ್ಮ ಮನೆಯ ಸದಸ್ಯರಿಂದ ಸೋಂಕು ಪಡೆದವರು)
ಸೋಂಕಿನ ಲಕ್ಷಣಗಳು ಆರಂಭಗೊಂಡು ಏಳೆಂಟು ದಿನಗಳಲ್ಲಿ ಉಸಿರಾಟಕ್ಕೆ ಸಮಸ್ಯೆಯೇನಾದರೂ ಆರಂಭವಾದರೆ ಕೂಡಲೇ ತಮ್ಮ ವೈದ್ಯರಿಗೆ ಕರೆ ಮಾಡಿ, ಅವರು ನೀಡುವ ನಿರ್ದೇಶವನ್ನು ಪಾಲಿಸಬೇಕು, ಆಸ್ಪತ್ರೆಗೆ ಹೋಗಬೇಕಿದ್ದರೆ ಅದಕ್ಕೆ ಬೇಕಾದ ಆಂಬುಲೆನ್ಸ್ ಮತ್ತು ಆಸ್ಪತ್ರೆಗಳ ವಿವರಗಳನ್ನು ವೈದ್ಯರನ್ನೇ ಕೇಳಿ ಪಡೆಯಬಹುದು.
(ಹಿರಿಯರನ್ನು ಇಂತಹಾ ಅಪಾಯದಿಂದ ಮೊದಲೇ ರಕ್ಷಿಸಬೇಕು ಎಂದು ಬಯಸುವಿರಾದರೆ ಇನ್ನೊಂದು ವಾರದೊಳಗೆ ಅವರನ್ನು ಪ್ರತ್ಯೇಕವಾಗಿ, ಸುರಕ್ಷಿತವಾಗಿ ಇರಿಸಲು ವ್ಯವಸ್ಥೆ ಮಾಡುವ ಬಗ್ಗೆ ಆಲೋಚಿಸಿ. ಮನಸ್ಸಿದ್ದರೆ ಮಾರ್ಗವಿದೆ.)
ಮಾರ್ಚ್ 26, 2020
ಹಿರಿಯರನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತಿಸಿ, ಅಷ್ಟೇ ಸಾಕು. ಕಿರಿಯರು ಧೈರ್ಯವಾಗಿದ್ದು, ಉಳಿದೆಲ್ಲರಿಗೂ ಧೈರ್ಯ ತುಂಬಿ. ಅದೇ ಈಗ ಬೇಕು.
Secure and Save our Elders to Stave Off Corona Virus
As the new Corona virus is spreading across the globe relentlessly, panic and confusion are also rising. In such a situation, making prudent decisions becomes difficult too. But scientific knowledge and a clear understanding of the ground realities would always show the path to salvage any crisis.
The reports available from the worst affected countries such as China, Italy, Spain etc., have very clearly established by now that although the Corona virus has infected more than 5 lakh people and killed about 25000, almost 99% of the dead are elders beyond the age of 60-65. These reports have also clearly shown that none of the control measures, including the so called lock downs, have been very successful in containing the spread and also that the healthcare systems of the richest countries in the world have not been able to provide ventilators and such other advanced care because of the sheer numbers of the severely ill patients presenting to the hospitals in a short time. Considering these facts, it would be easily obvious that if the elders can be completely isolated and prevented from catching the infection, it will be fairly easy to ward off this new menace.
The most prestigious and respected institution for public health and epidemiology, the Johns Hopkins University, has released a report on March 24, titled Covid 19 for India Updates.
The most important statement in that report reads thus:
Immediate social distancing focused on the elderly population is essential. We have modeled a three-week period of complete isolation for the elderly. The longer this period, the more we are able to delay infections into the post-July period.
The modelled estimates in the report indicate that the number of cases could be halved and the seriously ill will be lesser by 6-7 folds, such that only 150 ventilators would be needed in place of a thousand!
This model of far lesser cases and complications by excluding the elders from the wave of the infections is based on a simple fact that it’s the patients with severe illness who transmit the infection the most and for longer time, and most such patients are elderly. Therefore, by keeping the elders safe from Corona, not only they can be saved, but also the infections can be curtailed, and the burden on the hospitals, doctors, nurses and paramedical personnel can all be reduced very considerably.
How do we save our elders?
The plan may appear difficult or an overreaction. Some may even find it hard to separate their beloved ones. But desperate times call for innovative actions, howsoever hard they may be.
It’s a fact that many elders are already living on their own, away from their children who are working in different cities within or outside India, communicating through the new media. For this Corona crisis, we are not sending them anywhere far away, but to a secure and quarantined dwelling within the city or area. Can’t we do so to save the situation for everyone?
Think of this. In the event of a warning of impending floods or a cyclone or a tsunami, it’s the elders and the weaker who are shifted to the safer locations on priority, because they will not be able to save themselves from the fury, while the able bodied ones would be. The Corona epidemic is also a tsunami of sorts and this tsunami too affects the elderly, while leaving the younger ones unscathed, almost all of whom recover without any complications in 4-6 days. Therefore the need of the hour is to immediately shift the elderly to safe quarantines. As the government may not be able to do so anytime soon, it shall be our own responsibility to save our elders, and thereby, all others.
It is better to keep them in complete quarantine, rather than keeping them separately in the same household with children and grandchildren. There’s always a risk that these younger ones may catch the infection from outside and infect the elders.
How to quarantine the elders?
It is desirable to quarantine all the elders above the age of 60 (UK has issued guidelines to safeguard elders above 70), particularly those with high blood pressure, diabetes, heart disease, obesity, cancer and smoking. They must be accommodated in a separate house, with all the inhabitants staying therein for at least 2 months, with no one going out or coming in. If anyone leaves the accommodation, he/she shouldn’t return in.
Therefore the younger ones who wish to stay with the elders to take care of their food, medicines and care, should be prepared to stay in. Therefore, those who need to go for work everyday, or often, cannot take up this responsibility. But those, for example, who can work from home, can take care of the elders.
Example 1
Siblings of a family can accommodate their parents and respective in-laws in one house, and one couple, may be with their children too, can stay in. All their daily needs such as grocery, vegetables etc., must be supplied at the gate, and the inmates must get them cleaned/wiped before using.
Example 2:
In an apartment complex, the seniors, may be of different families too, can be accommodated in one wing or one floor, that must be completely quarantined, with some younger ones staying there for support. Other younger residents of that wing/floor can relocate to the ones vacated by the elders. We should be willing for such adjustments under these difficult circumstances.
Example 3:
Those senior citizens and the poor and destitute, who cannot make any such arrangements on their own, must be accommodated in hotels, hostels, charitable institutions, resting facilities at religious centres etc., that are now vacant due to the lock down. These accommodations must also have adequate staff for preparing the food and for helping the elders, and all of them must stay in strict quarantine.
It’s very important that the people living in these quarantined accommodations must adhere to the isolation norms strictly. Also, it’s important to shift the elders to such arrangements within the next week; once the community transmission gets established, expected by mid April as per ICMR statements, there are chances of the elderly getting infected and then developing the symptoms after entering the quarantine, risking everyone else.
Those young ones who remain outside may get infected with Corona, but almost all of them will recover within 4-5 days on their own, simply by staying at home, and without the need for any medicines. Once the epidemic gets over, in a few weeks, the elders can return to their homes gradually.
Let’s secure our elders in isolation, and stave off the Corona scare.
ಮಾರ್ಚ್ 27, 2020
ಇನ್ನು ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ನೋಡುತ್ತಾ ಕುಳಿತುಕೊಳ್ಳಬೇಡಿ; ನಿಮ್ಮ ಹಿರಿಯರ ರಕ್ಷಣೆಗೆ ಕೂಡಲೇ ವ್ಯವಸ್ಥೆ ಮಾಡಿ, ಅಷ್ಟೇ ಸಾಕು.
ಮಾರ್ಚ್ 28, 2020
ಎಲ್ಲಾ ಮತಗಳ ಪ್ರಾರ್ಥನಾ ಸ್ಥಳಗಳಲ್ಲಿ, ಮಠಗಳಲ್ಲಿ ಇರುವ ಎಲ್ಲಾ ಛತ್ರಗಳಲ್ಲಿ ಮುಂದಿನ ಎರಡು ತಿಂಗಳಿಗೆ ಹಿರಿಯರಿಗೆ ಸುರಕ್ಷಿತ ವಾಸ್ತವ್ಯ ಕಲ್ಪಿಸಲಿ
ಮಾರ್ಚ್ 29, 2020
ಭೂಲೋಕದಲ್ಲಿ, ಭಾರತ ದೇಶದಲ್ಲಿ ಎಲ್ಲಿಯೂ ಇರದಂತಹ ವಿಶೇಷ ಕೊರೊನಾ ದಕ ಜಿಲ್ಲೆಯಲ್ಲಿ ಉಂಟಾ? ಯಾಕಿದು 3 ದಿನ ಬಂದ್?
ಮುಂದಿನ ದಿನಗಳಲ್ಲಿ ಕೊರೊನಾ ಹರಡತೊಡಗಿದಾಗ ಕೇವಲ ಜ್ವರ ಕೆಮ್ಮು ಅಷ್ಟೇ ಇದ್ದವರು ದಯವಿಟ್ಟು ಮನೆಯಲ್ಲೇ ಇರಿ, ವೈದ್ಯರ ಬಳಿಗೆ ಹೋಗಬೇಡಿ ಎಂದು ಹಲವು ಸಲ ವಿನಂತಿರುವುದು ಇದೇ ಕಾರಣಕ್ಕೆ. ಕೊರೊನಾ ಸೋಂಕು ತಗಲಿ ಜ್ವರ ಕೆಮ್ಮು ಆರಂಭವಾದೊಡನೆ ಗಾಬರಿಯಾಗಬೇಡಿ, ಹೆಚ್ಚಿನವರಿಗೆ ಏನೂ ಆಗುವುದಿಲ್ಲ, ನಾಲ್ಕೈದು ದಿನಗಳಲ್ಲಿ ಮನೆಯಲ್ಲೇ ತಾನಾಗಿ ವಾಸಿಯಾಗುತ್ತದೆ; ಹೊರಗಡೆ ತಿರುಗಾಡಿದರೆ ಊರವರಿಗೂ, ವೈದ್ಯರಿಗೂ, ಆಸ್ಪತ್ರೆ ಸಿಬಂದಿಗೂ ಹರಡುತ್ತದೆ, ಅವರೆಲ್ಲರೂ ಒಂದೆರಡು ವಾರ ಮನೆಯಲ್ಲಿರಬೇಕಾಗುತ್ತದೆ, ಎಲ್ಲಾ ವೈದ್ಯಕೀಯ ಸೇವೆಗಳೂ ಮುಚ್ಚಿ ಹೋಗಬಹುದು. ಯಾರಿಗಾದರೂ ಹಾಗೆ ಜ್ವರ ಕೆಮ್ಮು ಆರಂಭವಾಗಿ ಆರೇಳು ದಿನಗಳಲ್ಲಿ (ಕೊರೊನಾದಿಂದ ಸಮಸ್ಯೆಗಳಾಗಲು ಕನಿಷ್ಠ ಆರೇಳು ದಿನಗಳು ಬೇಕು) ಉಸಿರಾಟಕ್ಕೆ ಕಷ್ಟವಾದರೆ, ಕೆಮ್ಮು ಜೋರಾದರೆ ವೈದ್ಯರಿಗೆ ಕರೆ ಮಾಡಿ, ಅವರು ಹೇಳಿದಂತೆ ಮಾಡಬೇಕು.
Locking down an apartment, or locality or taluk or district, based on the transmission level, is the correct approach. Not a national shut down or shutting down areas where there are no cases.
ಮಾರ್ಚ್ 31, 2020
ನಾಳೆಯಿಂದ ದಕ್ಷಿಣ ಕನ್ನಡದಲ್ಲಿ ಮತ್ತೆ ಮೂರು ದಿನಗಳಿಗೆ (ಆ ಮೇಲೆ ಎಷ್ಟು ದಿನಗಳೋ) ಸಂಪೂರ್ಣ ದಿಗ್ಬಂಧನವನ್ನು ಮುಂದುವರಿಸುವ ನಿರ್ಧಾರವನ್ನು ಮಾಡುವುದಿದ್ದರೆ ಮಂಗಳೂರು ಸಂಸದರು, ಶಾಸಕರು, ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ದಯವಿಟ್ಟು ಈ ಪ್ರಶ್ನೆಗಳಿಗೆ ಉತ್ತರ ಒದಗಿಸಬೇಕು:
ಭಾರತ ದೇಶದ ಯಾವುದೇ ಜಿಲ್ಲೆಯಲ್ಲಿ ವಿಧಿಸಿಲ್ಲದ ಸಂಪೂರ್ಣ ದಿಗ್ಬಂಧನವನ್ನು ದಕ್ಷಿಣ ಕನ್ನಡದಲ್ಲಿ ವಿಧಿಸುತ್ತಿರುವುದಕ್ಕೆ ಕಾರಣಗಳೇನು?
ದಕ್ಷಿಣ ಕನ್ನಡದಲ್ಲಿ ಈಗ ಪತ್ತೆಯಾಗಿರುವ ಒಟ್ಟು ಪ್ರಕರಣಗಳೆಷ್ಟು? ಅವುಗಳಲ್ಲಿ ಸ್ಥಳೀಯ ನಿವಾಸಿಗಳೆಷ್ಟು, ಅನ್ಯ ಜಿಲ್ಲೆ/ರಾಜ್ಯಗಳವರು ಎಷ್ಟು?
ಈ ಸೋಂಕಿತರು ಈಗ ಎಲ್ಲಿದ್ದಾರೆ – ಆಸ್ಪತ್ರೆಗಳಲ್ಲಿ ಪ್ರತ್ಯೇಕಿತರಾಗಿದ್ದಾರೆಯೇ ಅಥವಾ ಅಲ್ಲಿಲ್ಲಿ ಸುತ್ತಾಡುತ್ತಿದ್ದಾರೆಯೇ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಥ ಸೋಂಕಿತರಿಂದ ಇತರ ಸ್ಥಳೀಯರಿಗೆ ಸೋಂಕು ಹರಡಿರುವ (ಅಂದರೆ ಸಮುದಾಯ ಹರಡುವಿಕೆ) ಯಾವುದಾದರೂ ಪ್ರಕರಣಗಳು ವರದಿಯಾಗಿವೆಯೇ? ಆಗಿದ್ದರೆ ಎಷ್ಟು, ಎಲ್ಲಿ?
ಭೂಲೋಕದಲ್ಲೇ ಎಲ್ಲೂ ಮಾಡಿರದಂತಹ 3,6 ಅಥವಾ ಇನ್ನೂ ಹೆಚ್ಚು ದಿನಗಳ ಸಂಪೂರ್ಣ ದಿಗ್ಬಂಧನವನ್ನು ದಕ ಜಿಲ್ಲೆಯಲ್ಲಿ ಮಾಡುತ್ತಿರುವುದಕ್ಕೆ ಭೂಲೋಕದಲ್ಲೇ ಎಲ್ಲೂ ಇರದಷ್ಟು ಹೆಚ್ಚಿನ ಅಪಾಯ ಈ ಜಿಲ್ಲೆಗೆ ಇದೆ ಎನ್ನುವುದು ಕಾರಣವೇ?
ಇದೆ ಎಂದಾದರೆ ಈವರೆಗೆ ಜಿಲ್ಲೆಯಲ್ಲಿ ಕೊರೊನಾ ಹರಡುವುದನ್ನು ತಡೆಯಲು ಕೈಗೊಂಡಿರುವ ಕ್ರಮಗಳು ಯಶಸ್ವಿಯಾಗಿಲ್ಲ ಎನ್ನುವುದನ್ನು ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮತ್ತು ಅಧಿಕಾರಿಗಳು ಒಪ್ಪಿಕೊಂಡಂತಾಯಿತಲ್ಲವೇ? ಆ ಬಗ್ಗೆ ಅವರು ಬಹಿರಂಗವಾಗಿ ಒಪ್ಪಿಕೊಳ್ಳಬೇಡವೇ?
ಇಲ್ಲ, ಇದುವರೆಗಿನ ಕ್ರಮಗಳು ವಿಫಲವಾಗಿಲ್ಲ ಎಂದಾದರೆ ಈ ರೀತಿಯ ದಿಗ್ಬಂಧನಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳು ಇಲ್ಲ ಎಂದು ಸ್ಪಷ್ಟವಾಗುವುದಿಲ್ಲವೇ? ಹಾಗಿರುವಾಗ ಎಲ್ಲೂ ಇಲ್ಲದ ಈ ಅತಿ ವಿಶೇಷ ದಿಗ್ಬಂಧನ ದಕ ಜಿಲ್ಲೆಗೆ ಅಗತ್ಯವೇ ಇಲ್ಲ ಅನ್ನುವುದೂ ಸ್ಪಷ್ಟವಾಗುವುದಿಲ್ಲವೇ?
ನಿರ್ಧರಿಸುವ ಮುನ್ನ ದಯವಿಟ್ಟು ಉತ್ತರಿಸಿ. ಇದು ನಮ್ಮ ಬದುಕು, ನಮ್ಮ ಊಟ, ನಮ್ಮ ಮನೋದೈಹಿಕ ಆರೋಗ್ಯಗಳ ಪ್ರಶ್ನೆ.
ಎಪ್ರಿಲ್ 1, 2020
ಕೊರೊನಾ ಗಾಯದ ಮೇಲೆ ಸರಕಾರದ ಬರೆ
ಕೆಲಸ ಹೋಯಿತು
ಕೆಲಸವಿದ್ದ ಊರು ಬಿಟ್ಟು ಕಾಲ್ನಡಿಗೆಯಲ್ಲಿ ಮೂರಾರು ಕಿಮೀ ದೂರದ ಮನೆಗಳಿಗೆ ಮರಳುವಂತಾಯಿತು
ಸರಿಯಾದ ಊಟ ಇಲ್ಲವಾಯಿತು
ಸಂಬಳ ಇಲ್ಲವಾಯಿತು; ಸರಕಾರಿ ನೌಕರರ ಸಂಬಳ ಕಡಿತವಾಯಿತು
ಉಳಿತಾಯ ಕರಗಿತು
ಇದ್ದ ಉಳಿತಾಯದ ಮೇಲೆ ಬಡ್ಡಿ ಇಳಿಯಿತು
ತೈಲ ಬೆಲೆ ಪಾತಾಳಕ್ಕಿಳಿದರೂ ನಮ್ಮಲ್ಲಿ ಆಕಾಶದಲ್ಲೇ ಉಳಿಯಿತು
ಕೆಟ್ಟ ಆರ್ಥಿಕ ನೀತಿಗಳಿಂದ ಮೊದಲೇ ದಿವಾಳಿಯಾಗಿದ್ದ ಕೇಂದ್ರ-ರಾಜ್ಯ ಸರಕಾರಗಳು ಜನರಿಂದಲೇ ಭಿಕ್ಷೆ ಎತ್ತುವಂತಾಯಿತು
ಕೊರೊನಾ ಸೋಂಕು ಸಮುದಾಯದಲ್ಲಿ ಹರಡಲು ಇನ್ನೂ ಆರಂಭಿಸಿಲ್ಲ ಎಂದು ಕೇಂದ್ರ ಸರಕಾರವೇ ಹೇಳಿದೆ. ಈಗ ವಿಧಿಸಿರುವ ಈ ಕಠಿಣ ದಿಗ್ಬಂಧನದಿಂದ ಅದರ ಹರಡುವಿಕೆ ಆಗುವುದೇ ಇಲ್ಲ, ಖಂಡಿತಕ್ಕೂ ಈಗಿರುವ ಹಂತದಲ್ಲೇ ಮೊಟಕಾಗುತ್ತದೆ ಎಂಬ ಖಚಿತ ಆಶ್ವಾಸನೆಯನ್ನೂ ಸರಕಾರ ನೀಡುತ್ತಿಲ್ಲ, ಅಂತಹ ವಿಶ್ವಾಸ ಸರಕಾರಕ್ಕೆ ಇದೆಯೆನ್ನುವ ಯಾವುದೇ ಸೂಚನೆಗಳೂ ಕಾಣಿಸುತ್ತಿಲ್ಲ. ಹಾಗಾದರೆ, ಈ ದಿಗ್ಬಂಧನದ ಅವಧಿ ಮುಗಿದ ಬಳಿಕ ಮುಂದೇನು? ಗಾಯದ ಮೇಲೆ ಎಳೆದಿರುವ ಬರೆಗಳು ಮಾಯುವುದು ಹೇಗೆ, ಯಾವಾಗ?
ಎಪ್ರಿಲ್ 1, 2020
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು (ಐಸಿಎಂಆರ್) ಮೊದಲೇ ಹೇಳಿದ್ದಂತೆ, ಕೊರೊನಾ ಸೋಂಕಿನ ಹರಡುವಿಕೆಯು ಸಮುದಾಯದೊಳಗೆ ನಿಧಾನವಾಗಿ ಹೆಚ್ಚತೊಡಗಿದ್ದು, ಏಪ್ರಿಲ್ ಎರಡನೇ – ಮೂರನೇ ವಾರದಿಂದ ಈ ಮೂರನೇ ಹಂತವು ವ್ಯಾಪಕವಾಗುವ ಸಾಧ್ಯತೆಗಳಿವೆ. ಪ್ರಧಾನಿ ಘೋಷಿಸಿರುವ ರಾಷ್ಟ್ರೀಯ ದಿಗ್ಬಂಧನದಿಂದ ಇಂಥ ಹರಡುವಿಕೆಯು ನಿಧಾನಗೊಳ್ಳಲಿದೆಯೋ ಅಥವಾ ಸಂಪೂರ್ಣವಾಗಿ ಇಲ್ಲವಾಗಲಿದೆಯೋ ಎಂಬ ಬಗ್ಗೆ ಒಮ್ಮತಾಭಿಪ್ರಾಯವಿಲ್ಲ; ಸರ್ಕಾರವಾಗಲೀ, ತಜ್ಞರಾಗಲೀ ಈ ಬಗ್ಗೆ ಯಾವುದೇ ಖಚಿತ ಆಶ್ವಾಸನೆಯನ್ನೂ ನೀಡುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಕೊರೊನಾ ಹರಡಲಾರಂಭಿಸಿದರೆ ಈ ದೇಶದ ನಾಗರಿಕರಾದ ನಾವು ಏನೇನು ಮಾಡಬೇಕು ಎಂಬ ಬಗ್ಗೆ ನಮ್ಮೆಲ್ಲರಿಗೂ ವಿಷಯ ಸ್ಪಷ್ಟತೆ ಇರಬೇಕಾಗುತ್ತದೆ. ಸರ್ಕಾರ ಮಾಡಬಯಸುವುದನ್ನು ಸರಕಾರ ಮಾಡುತ್ತದೆ, ನಮ್ಮಿಂದಾದ ವೈಜ್ಞಾನಿಕ ಕ್ರಮಗಳನ್ನು ನಾವೂ ಕೈಗೊಳ್ಳಬೇಕಾಗುತ್ತದೆ.
ಈ ನಿಟ್ಟಿನಲ್ಲಿ ಇಂದಿನ ಪ್ರಜಾವಾಣಿ (ಏಪ್ರಿಲ್ 1, 2020)ಯಲ್ಲಿ ಪ್ರಕಟವಾಗಿರುವ ಎರಡು ವರದಿಗಳನ್ನು ಇಲ್ಲಿ ಲಗತ್ತಿಸಿ ಕೆಲವು ಅತಿ ಮುಖ್ಯವಾದ ಮಾಹಿತಿಯನ್ನು ಬರೆಯುತ್ತಿದ್ದೇನೆ. ಇಲ್ಲಿ ಬರೆದಿರುವ ಮಾಹಿತಿಯನ್ನು ಮತ್ತು ಅದಕ್ಕೆ ಪೂರಕವಾದ ಎಲ್ಲಾ ವರದಿಗಳನ್ನು ಇಂದು ಬೆಳಗ್ಗೆಯೇ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ| ಸುಧಾಕರ್ ಅವರ ಗಮನಕ್ಕೆ ತಂದಿದ್ದೇನೆ, ನಾನು ಕರೆ ಮಾಡಿದಾಕ್ಷಣ, ನನ್ನ ದೂರವಾಣಿ ಸಂಖ್ಯೆ ಅವರಿಗೆ ಪರಿಚಿತವಿಲ್ಲದಿದ್ದರೂ ಕೂಡ, ಅದನ್ನು ಸ್ವೀಕರಿಸಿ ನನ್ನ ಅನಿಸಿಕೆಯನ್ನು ತಾಳ್ಮೆಯಿಂದ ಅವರು ಕೇಳಿಸಿಕೊಂಡದ್ದು ಆಶ್ಚರ್ಯವನ್ನೂ, ಸಂತೋಷವನ್ನೂ ಉಂಟುಮಾಡಿದೆ ಎನ್ನುವುದನ್ನು ಇಲ್ಲಿ ದಾಖಲಿಸಲೇ ಬೇಕಾಗಿದೆ. ಈ ಮಾಹಿತಿಯ ಆಧಾರದಲ್ಲಿ ತಕ್ಕ ಕ್ರಮವನ್ನು ಅವರು ಕೈಗೊಳ್ಳುವರೆಂದು ಆಶಿಸುತ್ತೇನೆ.
ಮೊದಲ ವರದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ವೆಂಕಟ್ ಅವರದ್ದು. ಮಾಧ್ಯಮಗಳ ಜೊತೆ ಅವರು ಹಂಚಿಕೊಂಡ ವಿವರಗಳಲ್ಲಿರುವ ಅಂಶಗಳು ಉಳಿದೆಲ್ಲರಿಗೆ ಪಾಠವಾಗಬೇಕು. ಸೋಂಕು ಹರಡಲಾರಂಭಿಸಿದ್ದ ಮೊದಲ ದಿನಗಳಲ್ಲಿ ಪೀಡಿತರಾದ ಅವರು ಹೆಚ್ಚಿನ ಮಾಹಿತಿಯಿಲ್ಲದ ಕಾರಣಕ್ಕೆ ಅಲ್ಲಿಲ್ಲಿ ತಿರುಗಾಡಿದರು; ಆದರೆ ಈಗ ಸೋಂಕಿನ ಹರಡುವಿಕೆಯ ಬಗ್ಗೆ ಬಹಳಷ್ಟು ಮಾಹಿತಿ ಲಭ್ಯವಿರುವುದರಿಂದ, ನಮ್ಮೂರಲ್ಲೇ ಸೋಂಕು ಹರಡತೊಡಗಿದಾಗ ಸೋಂಕು ತಗಲಬಹುದಾದ ಇತರರು ಇಂಥ ತಿರುಗಾಟಗಳಿಗೆ ಅವಕಾಶ ನೀಡಬಾರದು. ಅವರು ಹೋದಲ್ಲೆಲ್ಲ ಅವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಗುರುತಿಸಿ ಬೇರ್ಪಡಿಸಿಟ್ಟಂತೆ, ನಾಳೆ ಪ್ರತಿಯೋರ್ವ ಸೋಂಕಿತನೂ ಹೀಗೆ ತಿರುಗಾಡಿದರೆ ಆ ಪ್ರತಿಯೊಬ್ಬರ ಸಂಪರ್ಕಕ್ಕೆ ಬಂದವರನ್ನು ಗುರುತಿಸುವುದಾಗಲೀ, ಪ್ರತ್ಯೇಕಿಸುವುದಾಗಲೀ ಸಾಧ್ಯವೇ ಆಗಲಿಕ್ಕಿಲ್ಲ, ಮಾತ್ರವಲ್ಲ, ಅವರೆಲ್ಲರಿಗೆ, ಮತ್ತು ಅವರಿಂದ ಇನ್ನೂ ಹಲವರಿಗೆ ಸೋಂಕು ಹರಡುವುದಕ್ಕೆ ಕಾರಣವಾಗುತ್ತದೆ. ಈ ವರದಿಯಲ್ಲಿರುವ ವೆಂಕಟ್ ಅವರು ಗುಣ ಹೊಂದಿದರು, ಹಾಗೆಯೇ ಇನ್ನು ಸೋಂಕಿತರಾಗುವವರಲ್ಲಿ ಹೆಚ್ಚಿನವರೂ ಗುಣಹೊಂದುತ್ತಾರೆ, ಆದರೆ ನೂರಕ್ಕೊಬ್ಬರು ಸಮಸ್ಯೆಗೀಡಾಗಬಹುದು. ವೆಂಕಟ್ ಅವರಿಗೆ ಯಾವ ಸಮಸ್ಯೆಗಳಿಲ್ಲದಿದ್ದರೂ ಅದು ಇತರರಿಗೆ ಹರಡಬಾರದೆನ್ನುವ ಕಾರಣಕ್ಕೆ ಆಸ್ಪತ್ರೆಯಲ್ಲಿರಿಸಲಾಯಿತು ಎನ್ನುವುದು ಈ ವರದಿಯಲ್ಲಿ ತಿಳಿಯುತ್ತದೆ; ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಗೊಳಗಾದವರನ್ನಷ್ಟೇ ಆಸ್ಪತ್ರೆಗಳಲ್ಲಿ ದಾಖಲಿಸಬಹುದಲ್ಲದೆ, ಸೋಂಕಿತರಾಗುವ ಎಲ್ಲರಿಗೂ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡುವುದು ಹೇಗೆ?
ಈಗ ಎರಡನೇ ವರದಿಯನ್ನು ಓದಿ. ಜಿಲ್ಲೆಯಲ್ಲಿ 13 ಜ್ವರ ಕ್ಲಿನಿಕ್ ಆರಂಭಿಸಲಾಗುವುದು, ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವವರು ತಕ್ಷಣವೇ ಈ ಕ್ಲಿನಿಕ್ ಗಳಿಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ಅಂತಿದೆ. ಜ್ವರವಿದ್ದವರು ತಕ್ಷಣವೇ ಹೀಗೆ ಬಂದು ತಪಾಸಣೆ ಮಾಡಿಸಿಕೊಳ್ಳುವುದಿದ್ದರೆ ಅವರೆಲ್ಲರೂ ಮನೆಯಿಂದ ಆ ಕ್ಲಿನಿಕ್ ಗೆ ಬರುವ ದಾರಿಯಲ್ಲಿ ಯಾರೆಲ್ಲ ಸಂಪರ್ಕಕ್ಕೆ ಬರುತ್ತಾರೋ ಅವರೆಲ್ಲರಿಗೆ ಸೋಂಕನ್ನು ಹರಡುತ್ತಾರೆ, ಆ ಕ್ಲಿನಿಕ್ ನಲ್ಲಿ ಸರದಿಯಲ್ಲಿ ನಿಂತವರಲ್ಲಿ ಕೊರೊನಾ ಸೋಂಕು ಇಲ್ಲದವರಿದ್ದರೆ ಅವರಿಗೂ ಹಂಚುತ್ತಾರೆ, ಅಲ್ಲಿರುವ ವೈದ್ಯರಿಗೂ, ಸಿಬಂದಿಗೂ ಹರಡುತ್ತಾರೆ. ಅಷ್ಟು ಹರಡುವಿಕೆಗೆ ಕಾರಣವಾದ ಮೇಲೆ ಆ ಕ್ಲಿನಿಕ್ ನಲ್ಲಿ ಅವರಿಗೆ ಮಾಡುವುದೇನಾದರೂ ಇದೆಯೇ? ಅದೂ ಇಲ್ಲ! ಕೊರೊನಾ ಸೋಂಕಿಗೆ ಚಿಕಿತ್ಸೆ ಇದೆಯೇ? ಇಲ್ಲ. ಚಿಕಿತ್ಸೆಯ ಅಗತ್ಯವಿದೆಯೇ? ಅದೂ ಇಲ್ಲ. ವಿಶೇಷ ಪರೀಕ್ಷೆಯಿದೆಯೇ? ಈಗೇನೋ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಿ ಪ್ರತ್ಯೇಕಿಸಿಡಲು 4500 ರೂಪಾಯಿ ವೆಚ್ಚದ ಪರೀಕ್ಷೆಯನ್ನು ಮಾಡಲಾಗುತ್ತಿದೆ, ಆದರೆ ಒಮ್ಮೆ ಮೂರನೇ ಹಂತದಲ್ಲಿ ಹಲವರಿಗೆ ಹರಡತೊಡಗಿದಾಗ ಆ ಪರೀಕ್ಷೆಯನ್ನು ಜ್ವರ-ಕೆಮ್ಮು ತೊಡಗಿದ ಎಲ್ಲರಲ್ಲೂ ಮಾಡುವುದಕ್ಕೆ ಸಾಧ್ಯವೂ ಇಲ್ಲ, ಇಟಲಿ, ಇಂಗ್ಲೆಂಡ್ ಗಳಂತಹ ಹೆಚ್ಚಿನ ದೇಶಗಳಲ್ಲಿ ಮಾಡುತ್ತಲೂ ಇಲ್ಲ, ಇಲ್ಲೂ ಮಾಡುವ ಯೋಜನೆಗಳಿಲ್ಲ. ಹಾಗಿರುವಾಗ ಜ್ವರವಿದ್ದವರು ತಕ್ಷಣವೇ ಈ ಕ್ಲಿನಿಕ್ ಗಳಿಗೆ ಬಂದು ತಪಾಸಣೆ ಮಾಡಿಸಿಕೊಳ್ಳುವುದಕ್ಕೆ ಏನಿದೆ – ತಮ್ಮ ಸೋಂಕನ್ನು ಊರಿಗಿಡೀ ಹರಡುವುದನ್ನು ಬಿಟ್ಟು? ಕೊರೊನಾ ಸೋಂಕು ತಗಲಿದವರಲ್ಲಿ ಬಹುತೇಕ ಜನರು, ಅದರಲ್ಲೂ ಕಿರಿಯ ವಯಸ್ಸಿನವರು ಮತ್ತು ಮಕ್ಕಳು, ಯಾವುದೇ ತಪಾಸಣೆ ಇಲ್ಲದೆಯೇ, ಚಿಕಿತ್ಸೆಯಿಲ್ಲದೆಯೇ, ತಾವಾಗಿ ಗುಣಮುಖರಾಗುತ್ತಾರೆ. ಆದ್ದರಿಂದ ಇಂಥ ಜ್ವರ ಕ್ಲಿನಿಕ್ ಗಳು ಅಗತ್ಯವಿಲ್ಲ, ಅವುಗಳಿಗೆ ಜ್ವರವಿದ್ದವರು ಹೋಗುವುದರಿಂದ ಜ್ವರವಿದ್ದವರಿಗೆ ಯಾವ ಪ್ರಯೋಜನವೂ ಇಲ್ಲ, ಆದರೆ ಸೋಂಕು ಇನ್ನಷ್ಟು ತ್ವರಿತವಾಗಿ ಹರಡುವುದಕ್ಕೆ ಅವಕಾಶವಾಗುತ್ತದೆ. ಆದ್ದರಿಂದ ಜ್ವರವಿದ್ದವರು ಮನೆಯಲ್ಲೇ ಪ್ರತ್ಯೇಕವಾಗಿ ಉಳಿದು, ಮನೆಯವರಿಗೂ ಸೋಂಕು ಹರಡದಂತೆ ದೂರವನ್ನು ಕಾಪಾಡಿಕೊಂಡು, ತಮ್ಮ ವೈದ್ಯರನ್ನು ದೂರವಾಣಿಯಲ್ಲಷ್ಟೇ ಸಂಪರ್ಕಿಸಿದರೆ ಸಾಕು. ಜ್ವರಕ್ಕೆ ಯಾವ ಔಷಧವೂ ಅಗತ್ಯವಿಲ್ಲ, ಹಾಗೊಂದು ವೇಳೆ ಜ್ವರ-ನೋವು ಬಹಳವಿದ್ದರೆ ಕೇವಲ ಪಾರಸಿಟಮಾಲ್ ಮಾತ್ರ ಸಾಕಾಗುತ್ತದೆ (ಕ್ಲೋರೋಕ್ವಿನ್ ಆಗಲೀ, ಇತರ ಯಾವುದೇ ಔಷಧಗಳಾಗಲೀ ಬೇಡ). ಯಾರಿಗೆ ಆದರೂ ಜ್ವರವು ಏರುತ್ತಲೇ ಇದ್ದರೆ, ಅಥವಾ ಕೆಮ್ಮು ವಿಪರೀತವಾಗುತ್ತಿದ್ದರೆ ಕೂಡಲೇ ವೈದ್ಯರಿಗೆ ಈ ವಿಷಯ ತಿಳಿಸಿ, ತಮ್ಮನ್ನು ಪರೀಕ್ಷಿಸಿಕೊಳ್ಳಲು ವೈದ್ಯರು ಸೂಚಿಸುವ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು; ಕೊರೊನಾ ಹರಡುತ್ತಿರುವಾಗ ಎಲ್ಲಾ ವೈದ್ಯಕೀಯ ವ್ಯವಸ್ಥೆಗಳೂ ಬಹಳಷ್ಟು ಒತ್ತಡದಲ್ಲಿರುವ ಸಾಧ್ಯತೆಗಳಿರುವುದರಿಂದ ಅಲ್ಲೂ ಕೂಡ, ಅನಗತ್ಯ ಗಾಬರಿ, ಆತಂಕಗಳಿಂದ ಕರೆ ಮಾಡದೇ, ನಿಜಕ್ಕೂ ಸಮಸ್ಯೆಗಳಿದ್ದಾಗಲಷ್ಟೇ ಕರೆ ಮಾಡಿ ಸಹಕರಿಸಬೇಕು.
ಒಟ್ಟಿನಲ್ಲಿ ಕೊರೊನಾ ನಿಭಾಯಿಸಲು ಸರಕಾರದ ಕ್ರಮಗಳಿಗಿಂತ ಸಾರ್ವಜನಿಕರ ಸಹಕಾರ, ಧೈರ್ಯ, ತಾಳ್ಮೆಗಳೇ ಅತಿ ಮುಖ್ಯ. ಕೊರೊನಾದಿಂದ ಸಮಸ್ಯೆಗಳಾಗುವುದು ಕೆಲವರಿಗಷ್ಟೇ, ಹೆಚ್ಚಿನವರು ನಾಲ್ಕೈದು ದಿನಗಳಲ್ಲಿ ಯಾವ ಸಮಸ್ಯೆಗಳೂ ಆಗದೆ ತಾವಾಗಿ ಗುಣಮುಖರಾಗುತ್ತಾರೆ. ಅಂಥವರೆಲ್ಲರೂ ತಾವು ಸಂಪೂರ್ಣವಾಗಿ ಗುಣಮುಖರಾಗುವವರೆಗೆ, ಸುಮಾರು ಒಂದು ವಾರದವರೆಗೆ, ಮನೆಯೊಳಗೇ ಇದ್ದು ಸಹಕರಿಸಬೇಕು; ಕೊರೊನಾ ತಡೆಯಲು ಈ ದೇಶಕ್ಕೆ ಮಾಡಬಹುದಾದ ಅದಕ್ಕಿಂತ ದೊಡ್ಡ ಉಪಕಾರ ಬೇರೊಂದಿಲ್ಲ.
ಬ್ರಿಟಿಷ್ ಸರ್ಕಾರ ಕೊರೊನಾ ನಿಭಾಯಿಸಲು ತನ್ನ ಪ್ರಜೆಗಳಿಗೆ ನೀಡಿರುವ ಸೂಚನೆ ಇಲ್ಲಿದೆ:
ಘ್ರಾಣಹೀನತೆ ಕೊರೊನಾ 19 ಸೋಂಕಿನ ಸಾಮಾನ್ಯ ಲಕ್ಷಣ (30-70%)
Anosmia is a common symptom of COVID 19 (30-70%)
Loss of sense of smell as marker of COVID-19 infection
There is new evidence for the loss of smell as a symptom of COVID-19 infection. We are circulating the following intelligence to Public Health England with regards to anosmia. As a result, this information highlights the importance for healthcare personnel to employ full PPE and in turn help stem the rates of infection. Full details can be read below:
Post-viral anosmia is one of the leading causes of loss of sense of smell in adults, accounting for up to 40% cases of anosmia. Viruses that give rise to the common cold are well known to cause post-infectious loss, and over 200 different viruses are known to cause upper respiratory tract infections. Previously described corona viruses are thought to account for 10-15% cases. It is therefore perhaps no surprise that the novel COVID-19 virus would also cause anosmia in infected patients.
There is already good evidence from South Korea, China and Italy that significant numbers of patients with proven COVID-19 infection have developed anosmia/hyposmia. In Germany it is reported that more than 2 in 3 confirmed cases have anosmia. In South Korea, where testing has been more widespread, 30% of patients testing positive have had anosmia as their major
presenting symptom in otherwise mild cases.
In addition, there have been a rapidly growing number of reports of a significant increase in the number of patients presenting with anosmia in the absence of other symptoms – this has been widely shared on medical discussion boards by surgeons from all regions managing a high incidence of cases. Iran has reported a sudden increase in cases of isolated anosmia, and many colleagues from the US, France and Northern Italy have the same experience. I have personally seen four patients this week, all under 40, and otherwise asymptomatic except for the recent onset of anosmia – I usually see roughly no more than one a month. I think these patients may be some of the hitherto hidden carriers that have facilitated the rapid spread ofCOVID-19. Unfortunately, these patients do not meet current criteria for testing or self-
isolation.
While there is a chance the apparent increase in incidence could merely reflect the attention COVID-19 has attracted in the media, and that such cases may be caused by typical rhinovirus and coronavirus strains, it could potentially be used as a screening tool to help identify otherwise asymptomatic patients, who could then be better instructed on self-isolation.
Given the potential for COVID-19 to present with anosmia, and the reports that corticosteroid use may increase the severity of infection, we would advise against use of oral steroids in the
treatment of new onset anosmia during the pandemic, particularly if it is unrelated to head trauma or nasal pathology (such as nasal polyps).
ಯುಕೆ: ಸೋಂಕಿನ ಲಕ್ಷಣಗಳು (ಜ್ವರ, ಕೆಮ್ಮು) ಉಳ್ಳವರು ಮನೆಯಲ್ಲೇ ಉಳಿಯಬೇಕು, 111 ಸಹಾಯವಾಣಿಗೆ ಕರೆ ಮಾಡಬೇಕು, ಅವರು ನೀಡುವ ಸೂಚನೆಗಳನ್ನು ಪಾಲಿಸಬೇಕು.
ಕ್ಯಾಲಿಫೋರ್ನಿಯಾ, ಅಮೆರಿಕ: ಸೋಂಕಿನ ಲಕ್ಷಣಗಳುಳ್ಳವರು ಮನೆಯಲ್ಲೇ ಉಳಿಯಬೇಕು, ವಿಶೇಷ ಸಹಾಯವಾಣಿಗೆ ಕರೆ ಮಾಡಬೇಕು, ಅವರು ನೀಡುವ ಸೂಚನೆಗಳನ್ನು ಪಾಲಿಸಬೇಕು.
ಇಟಲಿ: ಸೋಂಕಿನ ಲಕ್ಷಣಗಳುಳ್ಳವರು ಮನೆಯಲ್ಲೇ ಉಳಿಯಬೇಕು, ವಿಶೇಷ ಸಹಾಯವಾಣಿಗೆ ಕರೆ ಮಾಡಬೇಕು, ಅವರು ನೀಡುವ ಸೂಚನೆಗಳನ್ನು ಪಾಲಿಸಬೇಕು.
ಕೇರಳ: ಸೋಂಕಿನ ಲಕ್ಷಣಗಳುಳ್ಳವರು ಮನೆಯಲ್ಲೇ ಉಳಿಯಬೇಕು, ದಿಶಾ ಸಹಾಯವಾಣಿಗೆ ಕರೆ ಮಾಡಬೇಕು, ಅವರು ನೀಡುವ ಸೂಚನೆಗಳನ್ನು ಪಾಲಿಸಬೇಕು.
ಕರ್ನಾಟಕ: ವಿಶೇಷ ಜ್ವರ ತಪಾಸಣಾ ಕೇಂದ್ರಗಳಿಗೆ ತಾವಾಗಿ ಬರಬೇಕು, ಅದಕ್ಕೆ ಗೂಗಲ್ ಸ್ಪ್ರೆಡ್ ಶೀಟ್ ಆಧಾರಿತ ಜಾಲತಾಣಕ್ಕೆ ಹೋಗಿ ಸಮಯ ನಿಗದಿ ಪಡಿಸಬೇಕು, ಬಂದವರನ್ನು ನೋಡಿ ಅಗತ್ಯವಿದ್ದರೆ ಕೊರೊನಾ ಪತ್ತೆಗೆ ಗಂಟಲ ದ್ರವದ ಪರೀಕ್ಷೆ ನಡೆಸಲಾಗುವುದು; ಖಾಸಗಿಯಾಗಿ ಮಾಡಿಸಿಕೊಳ್ಳಬಯಸುವವರು ಮೊದಲು 3000, ಮತ್ತೆ ಬೇಕಾದರೆ 1500 ತೆರಬೇಕು.
ಬೇರೆ ಟಿಪ್ಪಣಿ ಅಗತ್ಯವಿದೆಯೇ?
Management Protocols for COVID 19
UK: Stay home if experiencing fever and/or cough, call 111 and follow the instructions
California, USA: Stay home if experiencing fever and/or cough, call helpline and follow the instructions
Italy: Stay home if experiencing fever and/or cough, call helpline and follow the instructions
Kerala: Stay home if experiencing fever and/or cough, call Disha Helpline and follow the instructions
Karnataka: Go to specially established Fever Clinics, after fixing an appointment online on a Google spreadsheet based link, get examined, and if suspected so at the clinic, throat swab test will be done and if so desiring, get corona test done at private labs by paying 3000 for the first test and 1500 if interesting a second test.
Any need for comments?
ಎಪ್ರಿಲ್ 2, 2020
ಕೊರೊನಾ ಬಂದಾಗಿದೆ, ಹರಡಲಿದೆ, ಹಿರಿಯರನ್ನು ಉಳಿಸಿಕೊಳ್ಳೋಣ ಎಂದು 13/3 ರಂದು ಹೇಳಿದ್ದೆ. ಈಗಲೂ ಅದಷ್ಟೇ ಸತ್ಯ. ತಂದವರು, ಹರಡಿದವರು ಯಾರೆನ್ನುವುದು ಅಮುಖ್ಯ
ಎಪ್ರಿಲ್ 3, 2020
ಕೊರೊನಾ ಮತ್ತು ವಿಟಮಿನ್ ಡಿ
(ಇದು ಕೇವಲ ಕೊರೊನಾದಿಂದ ರಕ್ಷಿಸಿಕೊಳ್ಳುವುದರಲ್ಲಿ ನಿಜಕ್ಕೂ ಆಸಕ್ತಿಯುಳ್ಳವರಿಗಾಗಿ ವೈಜ್ಞಾನಿಕ ಮಾಹಿತಿಯಾಧರಿಸಿ ಬರೆದಿರುವಂಥದ್ದು. ರಾಜಕೀಯ ಪ್ರೇರಿತ ಟಿಪ್ಪಣಿಗಳನ್ನು ಕೂಡಲೇ ಕಿತ್ತು ಹಾಕಲಾಗುವುದು)
ವಿಟಮಿನ್ ಡಿ ನಮ್ಮ ದೇಹದಲ್ಲಿ ನಡೆಯುವ ಹಲವು ಜೈವಿಕ ಪ್ರಕ್ರಿಯೆಗಳಿಗೆ ಗೇರ್ ಇದ್ದಂತೆ; ಈ ಪ್ರಕ್ರಿಯೆಗಳನ್ನು ಸರಿಯಾದ ರೀತಿಯಲ್ಲಿ ಆರಂಭಿಸಿ, ಸರಿಯಾದ ಗತಿಯಲ್ಲಿ ನಡೆಸುವ ಗೇರ್ ಅದು. ಸೂರ್ಯನ ಬೆಳಕು ಈ ಗೇರ್ ಮೇಲಿರುವ ಕೈ; ಸೂರ್ಯನ ಬೆಳಕಿನಿಂದ ನಮ್ಮ ಚರ್ಮದಲ್ಲಿ ವಿಟಮಿನ್ ಡಿ ತಯಾರಾಗುತ್ತದೆ, ಈ ಜೈವಿಕ ಪ್ರಕ್ರಿಯೆಗಳನ್ನು ಸುಸೂತ್ರವಾಗಿ ನಡೆಸುತ್ತದೆ.
ವಿಟಮಿನ್ ಡಿ ಸಾಕಷ್ಟಿದ್ದರೆ ಶ್ವಾಸಾಂಗದ ಜೀವಕಣಗಳು ಆರೋಗ್ಯವಂತವಾಗಿರುತ್ತವೆ, ವೈರಾಣುಗಳನ್ನು ನಾಶ ಪಡಿಸುವ ಕೆಥೆಲಿಸಿಡಿನ್ ಮತ್ತು ಡಿಫೆನ್ಸಿನ್ ನಂತಹ ಸಂಯುಕ್ತಗಳ ಉತ್ಪಾದನೆಯು ಚುರುಕಾಗುತ್ತದೆ, ಮತ್ತು ವಿಪರೀತ ಉರಿಯೂತಕ್ಕೆ, ಹಾಗೂ ಅದರಿಂದ ಶ್ವಾಸಾಂಗ ಮತ್ತಿತರ ಅಂಗಗಳ ಹಾನಿಗೆ, ಕಾರಣವಾಗುವ ಸೈಟೊಕೈನ್ ಸಂಯುಕ್ತಗಳ ಉತ್ಪಾದನೆಯು ನಿಯಂತ್ರಿಸಲ್ಪಡುತ್ತದೆ.
ಆದ್ದರಿಂದ ನಮ್ಮ ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆ ಹೆಚ್ಚಿಸಿಕೊಳ್ಳಲು ಬೆಳಗ್ಗೆ 11ರಿಂದ ಅಪರಾಹ್ನ 3ರ ನಡುವೆ ಒಂದಷ್ಟು ಹೊತ್ತು ಸೂರ್ಯನಿಗೆ ಮೈ ಒಡ್ಡಿದರೆ ಒಳ್ಳೆಯದು. ಮೀನು (ಬೂತಾಯಿ, ಬಂಗುಡೆ), ಮೊಟ್ಟೆ, ಮಾಂಸಗಳಲ್ಲೂ ವಿಟಮಿನ್ ಡಿ ದೊರೆಯುತ್ತದೆ.
ಕೊರೊನಾ ಎದುರಿಸಲು ಸೂರ್ಯನ ಬೆಳಕು ಬೇಕು, ಕತ್ತಲೆಯ ದೀಪಗಳಲ್ಲ
(This write-up, based on scientific facts, is meant for the information of those who are interested in protecting themselves from the new corona infection. Any politically motivated comment will be removed immediately)
Vitamin D is like a complex gear that initiates and delicately regulates several biological functions in our body. And this gear in turn is controlled by sun light which stimulates the production of vitamin D in our skin; sun light is therefore the hand on the gear that regulates our body!
Vitamin D reduces risk of respiratory infections by maintaining tight junctions, by killing enveloped viruses through induction of cathelicidin and defensins, and by reducing the production of proinflammatory cytokines by the innate immune system, thereby reducing the risk of a cytokine storm, that can otherwise lead to damage to the lungs and other organs.
We can get enough vitamin D by exposing ourselves to the midday sun, between 11am and 3 pm. We also get some vitamin D from oily fish such as salmon, mackerel, herring and sardines, as well as red meat and eggs.
Sun light can help us to fight corona, not candles on a dark night.
ಸಂಧಿವಾತದವರಿಗೆ ಈಗಾಗಲೇ ಕ್ಲೋರೋಕ್ವಿನ್ ದುರ್ಲಭವಾಗಿಬಿಟ್ಟಿದೆ. ಅಮೆರಿಕಕ್ಕೆ ಕಳಿಸಿದರೆ ಹೇಗೆ?
ಎಪ್ರಿಲ್ 7, 2020
ಎಲ್ಲಾ ಸಂಸದರು, ಶಾಸಕರಲ್ಲಿ ಸವಿನಯ ಪ್ರಾರ್ಥನೆ: ದಯವಿಟ್ಟು ಕೊರೊನಾ ನಿಯಂತ್ರಣದ ನಿರ್ಧಾರಗಳನ್ನು ಅಧಿಕಾರಿಗಳಿಗೂ, ವೈದ್ಯಕೀಯ ತಜ್ಞರಿಗೂ ವಹಿಸಿಬಿಡಿ.
April 8, 2020
Corona Virus Disease (COVID) 2019: Comparison of Cases in India and Abroad
Summary:
The trends of COVID 19 infections, complications and mortality are similar in almost all the countries, including India.
Risk of developing severe disease and death is higher in those aged 60+ years, and particularly in those with modern diseases such as hypertension, diabetes and coronary artery disease.
In India, 8.5% of the population is aged 60+ years, and 4-11% of the population aged less than 40 years is afflicted with hypertension and diabetes, and these are vulnerable to severe COVID 19.
The common factor for increased risk of severe COVID 19 is the presence of the so called metabolic syndrome at any age, old or young. These disorders are related to consumption of sugars and sweets, fruit juices, sweetened beverages, processed and fast foods, fried foods etc., and also alcohol consumption, and smoking. Avoiding these will be helpful in combating COVID 19.
COVID 19 remains a mild illness in almost 80-90% of those infected, and many patients lesser than 30 years of age are likely to have very mild or no symptoms.
Details:
India has already recorded about 5500 cases and more than 160 deaths due to COVID 19. The following analysis is based on the scientific and media reports published so far from India and elsewhere.
Corona Virus Infections – Age Distribution:
India:
47% of infections in age <40 years
34% in age 40-60 years
19% in age >60 years.
Wuhan, China:
27.2% in the age 0-39 years
41.6% in 40-59 years
31.2% in >60 years
It’s almost identical in India and China and it correlates with the age distribution of population.
China:
<60 years – 82% of the population, 69% of infections
>60 years – 18% of the population, 31% of the infections.
India:
<60 years – 91.5% of the population, 83% of the infections
>60 years – 8.5% of the population, 19% of the infections
The higher percentage of infections in the elderly is likely due to more prominent symptoms than the younger population and hence presentation to the hospitals in more numbers.
COVID 19 Deaths: Age Distribution and Risk Factors
India
63% of deaths in those 60+ years of age 30% in those aged 40-60
7% in those below 40 years
Average age of victims – 60 years
Average Case Fatality Rate -2.7%
0.4% for those below 40 years
2.4% for 40-60 years
8.9% for those above 60 years
86% had pre-existing conditions
17% had more than three diseases
40% had two
35% had one
56% had diabetes
47% had hypertension
20% had lung disease
16% had heart disease with diabetes and/or hypertension.
This pattern is also comparable with other countries.
China
81% deaths in age 60+ years
16.4% in 40-60 years
2.6% in 10-40 years
0 in <10 years
The average case fatality rate 2.3%;
0.2% for those below 40
0.85% for 40-60
8.8% for those above 60 years
(14.8% in patients above 80 years)
Italy
95% deaths in age 60+ years
4.7% in 40-60 years
0.27% in 0-40 years
99.2% had one or more pre-existing diseases (75% had high blood pressure, 35% had diabetes and 33% had coronary heart disease)
United States (of the first 1150 deaths)
89.9% in 55 years and above
9.4% in 35-54 years
0.7% in 0-34 years
UK (of 750 deaths)
69% aged above 75+ years
96% had pre-existing conditions
These details clearly show that in all the countries, the case fatality of COVID 19 has shown direct correlation with age of the patients and with age-related diseases such as hypertension, diabetes and coronary artery disease and that the mortality was higher in men compared to women.
In India, 63% of deaths occurred in those above 60 years of age, and 30% deaths occurred in those aged 40-60. Considering the fact that 86-90% of the deaths occurred in those who had pre-existing diseases, the higher number of deaths in the 40-60 years age group seen in India is attributable to younger onset of these diseases in Indians. In India, the overall prevalence of hypertension is about 30%, and about 11% in the age group of 40 years or lesser. Type 2 Diabetes has an overall prevalence of 16-19%, whereas in the young, it is about 4-8%. These diseases, coupled with consumption of alcohol and tobacco, increase the risk for COVID 19 complications in those aged above 60 and also in those who are younger. Otherwise, COVID remains a mild illness in almost 80-90% of those infected, and many patients lesser than 30 years of age are very likely to have very mild or no symptoms.
ಎಪ್ರಿಲ್ 9, 2020
ಕೊರೊನಾ ವೈರಸ್ ಕಾಯಿಲೆ (ಕೋವಿಡ್): ಭಾರತ ಮತ್ತು ಅನ್ಯ ದೇಶಗಳ ಪ್ರಕರಣಗಳ ಹೋಲಿಕೆ, ವಿಶ್ಲೇಷಣೆ
ಸಾರಾಂಶ:
ಭಾರತದಲ್ಲಿ ಇದುವರೆಗೆ ಕಂಡುಬಂದಿರುವ ಕೊರೊನಾ ಸೋಂಕಿನ ಪ್ರಕರಣಗಳು, ಅವುಗಳಿಂದಾಗಿರುವ ಸಮಸ್ಯೆಗಳು ಹಾಗೂ ಸಾವುಗಳು ಅನ್ಯ ದೇಶಗಳಲ್ಲಿ ಕಂಡುಬಂದಿರುವಂತೆಯೇ ಇವೆ.
ಕೊರೊನಾ ಸೋಂಕಿನಿಂದ ಸಮಸ್ಯೆಗಳಾಗುವ ಸಾಧ್ಯತೆಗಳು 60 ವರ್ಷಕ್ಕೆ ಮೇಲ್ಪಟ್ಟವರಲ್ಲಿ, ಅದರಲ್ಲೂ ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ ಹಾಗೂ ಹೃದ್ರೋಗವುಳ್ಳವರಲ್ಲಿ ಹೆಚ್ಚಾಗಿರುತ್ತವೆ.
ಭಾರತದಲ್ಲಿ 8.5% ಜನರು 60ಕ್ಕೆ ಮೇಲ್ಪಟ್ಟವರಾಗಿದ್ದಾರೆ, ಮತ್ತು 40ಕ್ಕಿಂತ ಕೆಳಗಿನವರಲ್ಲಿ 4-11% ರಷ್ಟು ಜನರು ರಕ್ತದ ಏರೊತ್ತಡ ಹಾಗೂ ಸಕ್ಕರೆ ಕಾಯಿಲೆಯನ್ನು ಹೊಂದಿರುತ್ತಾರೆ. ಇವರು ಕೊರೊನಾದಿಂದ ಸಮಸ್ಯೆಗೀಡಾಗುವ ಸಾಧ್ಯತೆಗಳಿವೆ.
ಯಾವುದೇ ವಯಸ್ಸಿನವರಲ್ಲಾದರೂ, ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ ಮತ್ತು ಹೃದ್ರೋಗಗಳಂತಹ ಆಧುನಿಕ ಕಾಯಿಲೆಗಳೇ ಕೊರೊನಾದಿಂದ ಗಂಭೀರ ಸಮಸ್ಯೆಗಳಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ. ಈ ಎಲ್ಲಾ ಕಾಯಿಲೆಗಳಿಗೂ ಸಕ್ಕರೆ, ಸಿಹಿ ತಿನಿಸುಗಳು, ಸಕ್ಕರೆಭರಿತ ಪೇಯಗಳು, ಹಣ್ಣಿನ ರಸಗಳು, ಸಂಸ್ಕರಿತ ಹಾಗೂ ಶೀಘ್ರ ತಿನಿಸುಗಳು, ಕರಿದ ತಿಂಡಿಗಳು ಹಾಗೂ ಮದ್ಯಪಾನ ಮತ್ತು ಧೂಮಪಾನಗಳು ಕಾರಣವಾಗಿದ್ದು, ಇವೆಲ್ಲವನ್ನೂ ದೂರವಿಟ್ಟರೆ ಕೊರೊನಾದ ಗಂಭೀರ ಸಮಸ್ಯೆಗಳನ್ನೂ ದೂರವಿಡಲು ಸಾಧ್ಯವಾಗಬಹುದು.
ಹೆಚ್ಚಿನವರಲ್ಲಿ (80-90%) ಕೊರೊನಾ ಸೋಂಕು ತೀರಾ ಸೌಮ್ಯವಾಗಿ ಕಾಡಿ ಹೋಗಿಬಿಡುತ್ತದೆ, ಅದರಲ್ಲೂ 30 ವರ್ಷಕ್ಕಿಂತ ಕೆಳಗಿನವರಲ್ಲಿ ಯಾವುದೇ ರೋಗಲಕ್ಷಣಗಳೂ ಇಲ್ಲದೆಯೇ ಅದು ಗುಣ ಹೊಂದಬಹುದು.
ವಿವರಗಳು:
ಭಾರತದಲ್ಲಿ ಇದುವರೆಗೆ 5500ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳನ್ನು ದೃಢಪಡಿಸಲಾಗಿದ್ದು, ಅದರಿಂದಾಗಿ 160ಕ್ಕೂ ಹೆಚ್ಚು ಸಾವುಗಳಾಗಿವೆ. ಇಲ್ಲಿ ಹಾಗೂ ಇತರೆಡೆಗಳಲ್ಲಿ ಪ್ರಕಟವಾಗಿರುವ ವೈಜ್ಞಾನಿಕ ಹಾಗೂ ಮಾಧ್ಯಮ ಪ್ರಕಟಣೆಗಳಲ್ಲಿ ದೊರೆತ ಮಾಹಿತಿಯನ್ನಾಧರಿಸಿ ಈ ವಿಶ್ಲೇಷಣೆಯನ್ನು ಸಿದ್ಧಪಡಿಸಲಾಗಿದೆ.
ಹಿರಿವಯಸ್ಕರಲ್ಲಿ ಸೋಂಕಿನ ಲಕ್ಷಣಗಳು ಹೆಚ್ಚು ಪ್ರಖರವಾಗಿದ್ದು, ಅವರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳಿಗೆ ದಾಖಲಾಗುವುದರಿಂದಾಗಿ ಹಿರಿಯರಲ್ಲಿ ಸೋಂಕಿನ ಪ್ರಮಾಣವು ಹೆಚ್ಚು ಗುರುತಿಸಲ್ಪಟ್ಟಿರುವುದಕ್ಕೆ ಕಾರಣವಾಗಿರಬಹುದು.
ಕೋವಿಡ್ 19 ಸಾವುಗಳು – ವಯೋವರ್ಗಕ್ಕನುಗುಣವಾಗಿ ವಿಂಗಡಣೆ ಮತ್ತು ಸಂಭಾವ್ಯ ಕಾರಣಗಳು
ಸೋಂಕು ದೃಢಪಟ್ಟವರಲ್ಲಿ ಸಾವಿನ ಸರಾಸರಿ ಪ್ರಮಾಣ -2.7%
0.4% – 40 ವರ್ಷಕ್ಕಿಂತ ಕಿರಿಯರಲ್ಲಿ
2.4% – 40-60 ವಯೋವರ್ಗದಲ್ಲಿ
8.9% – 60 ವರ್ಷಕ್ಕಿಂತ ಹಿರಿಯರಲ್ಲಿ
86% ಮೃತರು ಮೊದಲೇ ಇತರ ಕಾಯಿಲೆಗಳನ್ನು ಹೊಂದಿದ್ದವರಾಗಿದ್ದರು
17% ಮೃತರಲ್ಲಿ 3ಕ್ಕಿಂತ ಹೆಚ್ಚು ಅನ್ಯ ಕಾಯಿಲೆಗಳಿದ್ದವು
40% ಮೃತರಲ್ಲಿ 2 ಅನ್ಯ ಕಾಯಿಲೆಗಳಿದ್ದವು
35% ಮೃತರಲ್ಲಿ 1 ಅನ್ಯ ಕಾಯಿಲೆ ಇತ್ತು
56% ಮೃತರಲ್ಲಿ ಸಕ್ಕರೆ ಕಾಯಿಲೆ
47% ಮೃತರಲ್ಲಿ ರಕ್ತದ ಏರೊತ್ತಡ
20% ಮೃತರಲ್ಲಿ ಶ್ವಾಸಾಂಗದ ಕಾಯಿಲೆ
16% ಮೃತರಲ್ಲಿ ಹೃದ್ರೋಗ, ಜೊತೆಗೆ ಸಕ್ಕರೆ ಕಾಯಿಲೆ ಅಥವಾ/ಮತ್ತು ರಕ್ತದ ಏರೊತ್ತಡ.
ಅನ್ಯ ದೇಶಗಳಲ್ಲಿ ಸಂಭವಿಸಿದ ಸಾವುಗಳು ಕೂಡ ಇದೇ ತೆರನಾಗಿದ್ದವು.
ಸೋಂಕು ದೃಢಪಟ್ಟವರಲ್ಲಿ ಸಾವಿನ ಸರಾಸರಿ ಪ್ರಮಾಣ 2.3%;
0.2% – 40 ವರ್ಷಕ್ಕಿಂತ ಕಿರಿಯರಲ್ಲಿ
0.85% – 40-60 ವಯೋವರ್ಗದಲ್ಲಿ
8.8% – 60 ವರ್ಷಕ್ಕಿಂತ ಹಿರಿಯರಲ್ಲಿ
(14.8% – 80 ವರ್ಷಕ್ಕಿಂತ ಹಿರಿಯರಲ್ಲಿ)
69% – 75+ ಮೇಲ್ಪಟ್ಟವರು
96% – ಮೊದಲೇ ಇತರ ಕಾಯಿಲೆಗಳನ್ನು ಹೊಂದಿದ್ದವರು
ಈ ವಿವರಗಳನ್ನು ನೋಡಿದಾಗ, ಎಲ್ಲಾ ದೇಶಗಳಲ್ಲೂ ಕೋವಿಡ್ ನಿಂದ ಉಂಟಾಗಿರುವ ಸಾವುಗಳು ಸೋಂಕಿತರ ಹೆಚ್ಚು ವಯಸ್ಸು ಮತ್ತು ಹೆಚ್ಚು ವಯಸ್ಸಿಗನುಗುಣವಾಗಿ ಉಂಟಾಗುವ ಕಾಯಿಲೆಗಳಾದ ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗಗಳೊಂದಿಗೆ ನೇರವಾದ ಸಂಬಂಧ ಹೊಂದಿರುವುದು ಸ್ಪಷ್ಟವಾಗುತ್ತದೆ. ಹಾಗೆಯೇ, ಮಹಿಳೆಯರಿಗಿಂತ ಪುರುಷರಲ್ಲಿ ಸಾವುಂಟಾಗುವ ಸಾಧ್ಯತೆಗಳು ಹೆಚ್ಚಿರುವುದು ಕಂಡುಬರುತ್ತವೆ.
ಭಾರತದಲ್ಲಿ 63% ಸಾವುಗಳು 60 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಆಗಿದ್ದರೆ, 30% ಸಾವುಗಳು 40-60 ವರ್ಷಗಳವರಲ್ಲಿ ಆಗಿವೆ. ಸಾವನ್ನಪ್ಪಿದವರಲ್ಲಿ 86-90% ರಷ್ಟು ಮೊದಲೇ ಅನ್ಯ ಕಾಯಿಲೆಗಳುಳ್ಳವರಾಗಿದ್ದರು ಎಂಬುದನ್ನು ಪರಿಗಣಿಸಿದರೆ, 40-60 ವರ್ಷಗಳವರಲ್ಲೂ ಸಾವುಂಟಾಗಿರುವುದಕ್ಕೆ ಆ ವಯೋವರ್ಗದ ಭಾರತೀಯರಲ್ಲೂ ಈ ವಯೋಸಹಜ ಕಾಯಿಲೆಗಳಿದ್ದುದೇ ಕಾರಣವೆಂದರೆ ತಪ್ಪಾಗದು. ಭಾರತದಲ್ಲಿ ಒಟ್ಟಾರೆಯಾಗಿ 30% ಜನರಲ್ಲಿ ರಕ್ತದ ಏರೊತ್ತಡವಿದೆ, 40 ವರ್ಷಕ್ಕಿಂತ ಕೆಳಗಿನ 11% ಜನರಲ್ಲಿ ಆ ಸಮಸ್ಯೆಯಿದೆ. ಸಕ್ಕರೆ ಕಾಯಿಲೆಯು ಒಟ್ಟಾರೆಯಾಗಿ 16-19% ಜನರಲ್ಲಿದ್ದರೆ, ಕಿರಿಯ ವಯಸ್ಸಿನ 4-8% ಜನರಲ್ಲಿದೆ. ಈ ಕಾಯಿಲೆಗಳೂ, ಜೊತೆಗೆ ಮದ್ಯಪಾನ ಮತ್ತು ಧೂಮಪಾನಗಳೂ 60ಕ್ಕಿಂತ ಮೇಲ್ಪಟ್ಟವರಲ್ಲೂ, ಕೆಳ ವಯಸ್ಸಿನವರಲ್ಲೂ ಕೋವಿಡ್ ಸಮಸ್ಯೆಗಳಾಗುವ ಅಪಾಯವನ್ನು ಹೆಚ್ಚಿಸುತ್ತವೆ ಎನ್ನುವುದು ಇದರಿಂದ ತಿಳಿಯುತ್ತದೆ.
ಉಳಿದೆಲ್ಲರಲ್ಲಿ, ಸೋಂಕು ತಗಲಿದ 80-90% ಜನರಲ್ಲಿ, ಕೋವಿಡ್ ಅತಿ ಸೌಮ್ಯ ಕಾಯಿಲೆಯಾಗಿ ಹೋಗಿಬಿಡುತ್ತದೆ, 30 ವರ್ಷಕ್ಕಿಂತ ಕಿರಿಯರಲ್ಲಂತೂ ಹೆಚ್ಚಿನ ಸೋಂಕಿತರು ಅತ್ಯಲ್ಪವಾದ ರೋಗಲಕ್ಷಣಗಳೊಂದಿಗೆ ಅಥವಾ ಯಾವುದೇ ರೋಗಲಕ್ಷಣಗಳಿಲ್ಲದೆಯೇ ಗುಣಮುಖರಾಗುತ್ತಾರೆ.
Doing what shouldn’t be done. Fever clinics will only help in spreading the infection.
ಮಾಡಬೇಕಾದದ್ದನ್ನು ಮಾಡದೆ, ಮಾಡಬಾರದ್ದನ್ನು ಮಾಡಿದರೆ ಆಗಬೇಕಾದದ್ದು ಆಗದೆ ಆಗಬಾರದ್ದು ಆಗುತ್ತದೆ
ಎಪ್ರಿಲ್ 11, 2020
ಕೊರೊನಾ ಸೋಂಕು ಹರಡಲಾರಂಭಿಸಿದಾಗ ಹಲವರಿಗೆ ಅದು ತಗಲುವ ಸಾಧ್ಯತೆಗಳಿವೆ. ಯಾರೂ ಆ ಬಗ್ಗೆ ಆತಂಕಕ್ಕೊಳಗಾಗುವ ಅಗತ್ಯವೇ ಇಲ್ಲ. ಆರೋಗ್ಯವಂತರಲ್ಲಿ, ಮಕ್ಕಳಲ್ಲಿ ಮತ್ತು 60ಕ್ಕಿಂತ ಕೆಳಗಿನ ವಯಸ್ಸಿನವರಲ್ಲಿ (ಅಂದರೆ ಶೇ 85-90ರಷ್ಟು ಸೋಂಕಿತರಲ್ಲಿ) ಅದು ಅತಿ ಸೌಮ್ಯವಾದ ಲಕ್ಷಣಗಳೊಂದಿಗೆ ನಾಲ್ಕೈದು ದಿನಗಳಲ್ಲಿ ತಾನಾಗಿ ವಾಸಿಯಾಗುತ್ತದೆ. ಅವರೆಲ್ಲರೂ ಮಾಡಬೇಕಾದ ಅತ್ಯಗತ್ಯವಾದ ಕೆಲಸವೆಂದರೆ ರೋಗಲಕ್ಷಣಗಳು ಕಂಡು ಬಂದ ಘಳಿಗೆಯಿಂದ ತಮ್ಮ ಮನೆಗಳಲ್ಲೇ ಉಳಿಯುವುದು, ಅಲ್ಲಿಂದಲೇ ವೈದ್ಯರಿಗೋ, ಸಹಾಯವಾಣಿಗೋ ಕರೆ ಮಾಡಿ ತಿಳಿಸುವುದು; ಹೆಚ್ಚಿನವರಿಗೆ ಯಾವುದೇ ಚಿಕಿತ್ಸೆ ಅಥವಾ ಪರೀಕ್ಷೆಗಳ ಅಗತ್ಯವಿಲ್ಲದೆಯೇ ಸೋಂಕು ವಾಸಿಯಾಗುತ್ತದೆ. ಆದರೆ ಅಂಥವರು ವೈದ್ಯರನ್ನೋ, ಆಸ್ಪತ್ರೆಯನ್ನೋ, ಜ್ವರ ಚಿಕಿತ್ಸಾ ಕೇಂದ್ರವನ್ನೋ ಹುಡುಕಿ ಹೊರಟರೆ ಹೋದಲ್ಲೆಲ್ಲ ಜನರಿಗೂ, ವೈದ್ಯರಿಗೂ, ವೈದ್ಯಕೀಯ ಸಿಬಂದಿಗೂ ಸೋಂಕು ಹರಡಲು ಕಾರಣರಾಗುತ್ತಾರೆ, ಅದರಿಂದ ನೂರಾರು ಜನರಿಗಿರಬಹುದಾದ ಸೋಂಕು ಸಾವಿರಾರು ಜನರಿಗೆ ಒಮ್ಮೆಗೇ ಹರಡಲು ಕಾರಣವಾಗುತ್ತದೆ. ಆದ್ದರಿಂದ ಕೊರೊನಾ ಹರಡದಂತೆ ತಡೆಯಲು ಅತಿ ಸುಲಭವಾದ ಕ್ರಮವೆಂದರೆ ಸೋಂಕಿನ ಲಕ್ಷಣಗಳಿರುವವರು ಮನೆಯಲ್ಲೇ ಉಳಿಯಬೇಕು. ಯಾರಿಗೇ ಆದರೂ ಜ್ವರವು ಹೆಚ್ಚುತ್ತಲೇ ಇದ್ದರೆ, ಕೆಮ್ಮು ಹೆಚ್ಚುತ್ತಲೇ ಇದ್ದರೆ ಅಥವಾ ಉಸಿರಾಟಕ್ಕೆ ಕಷ್ಟವೆನಿಸತೊಡಗಿದರೆ ಮತ್ತೆ ವೈದ್ಯರಿಗೆ ಅಥವಾ ಸಹಾಯವಾಣಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸುವಂತೆ ಕೇಳಿಕೊಳ್ಳಬಹುದು. ಇಂಥ ಸಮಸ್ಯೆಗಳಾಗುವುದು 6-7 ದಿನಗಳ ಬಳಿಕವಷ್ಟೇ; ಅದಕ್ಕೂ ಮೊದಲೇ ಹಾಗೇನಾದರೂ ಆದರೂ ವೈದ್ಯರಿಗೆ ಕರೆ ಮಾಡಿ ನೆರವನ್ನು ಪಡೆಯಲು ಸಾಧ್ಯವಿದೆ. ಬಹಳಷ್ಟು ಜನರಿಗೆ ಕೊರೊನಾ ಸೋಂಕು ತಗಲಿದರೆ ವೈದ್ಯಕೀಯ ವ್ಯವಸ್ಥೆಯ ಮೇಲೆ ವಿಪರೀತವಾದ ಒತ್ತಡಗಳಿರುವುದರಿಂದ ಜನರೆಲ್ಲರ ಸಹಕಾರವೂ ಅತಿ ಮುಖ್ಯವಾಗುತ್ತದೆ. ಆದ್ದರಿಂದ ಯಾರೂ ಕೂಡ ಯಾವುದೇ ಭಯ, ಆತಂಕಗಳಿಗೆ ಒಳಗಾಗದೆ ಸಹಕರಿಸಿದರೆ ಕೊರೊನಾ ನಿಭಾಯಿಸುವುದು ಕಷ್ಟವಾಗದು. ಗಂಭೀರ ಸಮಸ್ಯೆಗಳು ಹಿರಿಯ ವಯಸ್ಕರಲ್ಲಿ, ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗ ಇತ್ಯಾದಿ ಉಳ್ಳವರಲ್ಲಿ ಹೆಚ್ಚಾಗಿ ಉಂಟಾಗುವುದರಿಂದ ಅಂಥವರೆಲ್ಲರೂ ಈಗಿಂದೀಗಲೇ ಸೋಂಕು ತಗಲದಂತೆ ಪ್ರತ್ಯೇಕವಾಗಿದ್ದು ಎಚ್ಚರಿಕೆ ವಹಿಸಿದರೆ ಬಹಳ ಒಳ್ಳೆಯದು.
April 12, 2020
The Central Govt has claimed that Corona cases would have reached 820000 by April 15 without the nationwide lockdown. ‘There were no further details available of how the projected figures were arrived at’ the report states and also that the ICMR was not involved in making such a prediction.
Now look at the other paper that was widely reported and circulated to buttress the claim that lockdown should be extended beyond 21 days, for 49 days or 67 days. This mathematical model from Cambridge had predicted the number of cases to be at 10000 by April 13 without any lockdown (even this model didn’t predict the cases to be 820000!). It’s 8400 cases on Apr 11th with lockdown! Actual numbers may be much higher; considering that there have been nearly 290 deaths, and the case fatality rate being 0.5-1%, the actual number of cases may be at least 100 to 200 times the number of deaths, that’s about 30-60000 cases. Either way, the most circulated model appears to have gone wrong in its prediction that without lockdown, the cases would be 10000 by April 13. It’s now 8400 on Apr 11 with the 21 day lockdown.
The same model had predicted that with the 21 day lockdown imposed on Mar 24, the cases would be restricted to 1000 or lesser. That’s also gone completely wrong. With the 21 day lockdown, and extra 10 days of shutting down of malls, theaters, schools etc., the cases have gone up from 550 to 8400 and deaths from 10 to 290.
Lessons are clear: The general lockdowns do not help much, because at level 1 and 2, the transmission occurs in the households and neighbourhoods, and therefore shutting down the community at large cannot help in cutting down the transmission. As Dr Soumya WHO has stated, it’s important to convince the infected ones to stay home and to take measures to prevent spreading it to their own family members and neighbours. Secondly, these mathematical models do not work when the ground realities are completely different. Thirdly, any predictions can be made up and presented before the media.
Rajesh Singh, R. Adhikari. Age-structured impact of social distancing on the COVID-19 epidemic in India. At https://arxiv.org/abs/2003.12055
ಎಪ್ರಿಲ್ 12, 2020
ಕೊರೊನಾ ಸೋಂಕಿನ ಹರಡುವಿಕೆ ತಡೆಯುವುದು ಹೇಗೆ?
ಕೊರೊನಾ ವೈರಸ್ ಹರಡುವಿಕೆಯ ಬಗ್ಗೆ ದಿನಕ್ಕೊಂದರಂತೆ ಅಧ್ಯಯನಗಳು ಪ್ರಕಟವಾಗುತ್ತಿವೆ; ಇವು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ರೀತಿಯಿಂದ ಇನ್ನಷ್ಟು ಗೊಂದಲಗಳೂ, ಭಯವೂ ಹುಟ್ಟಿಕೊಳ್ಳುತ್ತಿವೆ. ಇದರಿಂದ ಕೊರೊನಾ ಹರಡುವಿಕೆಯನ್ನು ತಡೆಯುವಲ್ಲಿ ಪ್ರಯೋಜನಕ್ಕಿಂತ ಹೆಚ್ಚು ಕಷ್ಟಗಳೇ ಆಗುವ ಸಾಧ್ಯತೆಗಳು ಗೋಚರಿಸುತ್ತಿವೆ.
ಕೊರೊನಾ ಸೋಂಕು ಹೇಗೆ ಹರಡುತ್ತದೆ ಎನ್ನುವ ಬಗ್ಗೆ ಎಲ್ಲಾ ಬಗೆಯ ಅಧ್ಯಯನಗಳಾಗಿವೆ. ರೋಗವುಳ್ಳವರು ಮತ್ತು ಅವರ ಸಂಪರ್ಕಕ್ಕೆ ಬಂದವರ ಮೂಗು ಹಾಗೂ ಗಂಟಲುಗಳಿಂದ ಸ್ರಾವಗಳನ್ನು ಸಂಗ್ರಹಿಸಿ ಅವುಗಳಲ್ಲಿ ಗಂಟೆ ಗಂಟೆಗೆ ವೈರಸ್ ಕಣಗಳು ಹೇಗೆ, ಎಷ್ಟು ವೃದ್ಧಿಯಾಗುತ್ತವೆ ಎಂಬುದನ್ನು ನೋಡಲಾಗಿದೆ. ಸೋಂಕಿನ ಲಕ್ಷಣಗಳ ತೀವ್ರತೆಯನ್ನೂ, ರೋಗಿಯಲ್ಲಿರುವ ವೈರಸ್ ಕಣಗಳ ಮಟ್ಟವನ್ನೂ ತಾಳೆ ಹಾಕಲಾಗಿದೆ. ಸೋಂಕುಳ್ಳವರು ಕೆಮ್ಮಿದಾಗ ಮೂಗು-ಗಂಟಲಿನ ದ್ರವಗಳು ಎಷ್ಟು ದೂರ ಚಿಮ್ಮಬಹುದು ಎಂಬುದನ್ನೂ ಪರೀಕ್ಷಿಸಿ ಲೆಕ್ಕ ಹಾಕಿಯಾಗಿದೆ. ಹಾಗೆ ಚಿಮ್ಮಿದ ವೈರಾಣುಗಳು ಗಾಳಿ, ತಾಮ್ರ, ಪ್ಲಾಸ್ಟಿಕ್, ಸ್ಟೀಲ್, ಕಾರ್ಡ್ ಬೋರ್ಡ್, ಗಾಜು ಮುಂತಾದವುಗಳಲ್ಲಿ ಎಷ್ಟು ಕಾಲ ಉಳಿಯುತ್ತವೆ ಎಂಬುದನ್ನೂ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. ಯಾವ ರೀತಿಯ ಹವಾ ನಿಯಂತ್ರಣ (ಏರ್ ಕಂಡೀಶನಿಂಗ್) ವ್ಯವಸ್ಥೆಯಲ್ಲಿ ವೈರಾಣುವಿನ ಗತಿ ಏನಾಗುತ್ತದೆ, ಸೋಂಕು ಹರಡುವ ಸಾಧ್ಯತೆ ಎಷ್ಟು ಎಂಬುದನ್ನೂ ನೋಡಿಯಾಗಿದೆ. ಇವನ್ನೆಲ್ಲ ತಾಳ್ಮೆಯಿಂದ ಓದಿ, ವಿವೇಚಿಸಿ, ಸೂಕ್ತ ಎಚ್ಚರಿಕೆಗಳನ್ನು ವಹಿಸಿಕೊಂಡರೆ ಕೊರೊನಾವನ್ನೂ ತಡೆಯಬಹುದು, ಅನಗತ್ಯವಾದ ಭಯವನ್ನೂ ತೊಡೆಯಬಹುದು.
ಕೊರೊನಾ ವೈರಸ್ ಎಲ್ಲೆಲ್ಲಿರುತ್ತದೆ?
ಕೊರೊನಾ ವೈರಸ್ ಸೋಂಕು ತಗಲಿದ ವ್ಯಕ್ತಿಯ ಮೂಗು-ಗಂಟಲಲ್ಲಿ ಕೊರೊನಾ ವೈರಾಣುಗಳು ಬೆಳೆಯತೊಡಗುತ್ತವೆ, 2-14 ದಿನಗಳಲ್ಲಿ (ಹೆಚ್ಚಿನವರಲ್ಲಿ 5-6 ದಿನಗಳಲ್ಲಿ) ರೋಗಲಕ್ಷಣಗಳನ್ನುಂಟುಮಾಡುತ್ತವೆ. ಸೋಂಕಿನ ಲಕ್ಷಣಗಳು ಆರಂಭಗೊಳ್ಳುವುದಕ್ಕೆ ಕೆಲವು ಗಂಟೆಗಳ ಮೊದಲೇ ಮೂಗು ಹಾಗೂ ಗಂಟಲಿನ ಸ್ರಾವಗಳಲ್ಲಿ ವೈರಾಣುಗಳು ತುಂಬಿಕೊಳ್ಳುತ್ತವೆ ಎಂದೀಗ ಗುರುತಿಸಲಾಗಿದೆ. ಅಂಥವರು ಕೆಮ್ಮಿದಾಗ ಅಥವಾ ಸೀನಿದಾಗ ವೈರಾಣುಗಳು ಹೊರಬರುತ್ತವೆ. ಅವು ರೋಗಿಯ ಅತಿ ಹತ್ತಿರ (3-4 ಅಡಿ) ಸುಳಿದವರಿಗೆ ನೇರವಾಗಿ ಸಿಂಪಡಿಸಲ್ಪಡಬಹುದು; ಅಥವಾ ರೋಗಿಯು ನೇರವಾಗಿ ಕೆಮ್ಮಿದಾಗ ಎದುರಿಗಿದ್ದ ವಸ್ತುಗಳ ಮೇಲೆ ಸಿಂಪಡಿಸಲ್ಪಡಬಹುದು, ಅಥವಾ ರೋಗಿಯು ಕೆಮ್ಮುವಾಗ ತನ್ನ ಮುಖಕ್ಕೆ ಅಡ್ಡವಿರಿಸಿದ ಅಥವಾ ಒರೆಸಿಕೊಂಡ ಕೈಯಿಂದಲೇ ಇತರ ವಸ್ತುಗಳನ್ನು ಮುಟ್ಟಿದರೆ ಅವಕ್ಕೆ ವರ್ಗಾವಣೆಯಾಗಬಹುದು ಮತ್ತು ಈ ವಸ್ತುಗಳನ್ನು ಮುಟ್ಟಿದವರು ಅದೇ ಕೈಯಿಂದ ಹಾಗೆಯೇ ತಮ್ಮ ಮೂಗು-ಮುಖಗಳನ್ನು ಒರೆಸಿಕೊಂಡರೆ ಸೋಂಕು ತಗಲಬಹುದು.
ಅಂದರೆ, ಕೊರೊನಾ ವೈರಾಣುಗಳು ಹರಡುವ ಸಾಧ್ಯತೆಗಳು ಹೀಗಿವೆ:
ರೋಗಲಕ್ಷಣಗಳಿದ್ದವರಿಂದ, ಅಥವಾ ಕೆಲವರಿಂದ ಸ್ಪಷ್ಟವಾದ ರೋಗಲಕ್ಷಣಗಳು ಆರಂಭಗೊಳ್ಳುವುದಕ್ಕೆ ಮೊದಲೇ, ಕೆಮ್ಮು ಅಥವಾ ಸೀನಿನ ನೇರ ಸಂಪರ್ಕದಿಂದ
2. ಇಂಥವರ ಮೂಗು-ಗಂಟಲುಗಳ ದ್ರವದಿಂದ ಕಲುಷಿತವಾದ ವಸ್ತುಗಳನ್ನು ಅದಾಗಿ ಕೆಲವೇ ಹೊತ್ತಿನಲ್ಲಿ ಮುಟ್ಟಿ ಅದೇ ಕೈಯಿಂದ ತಮ್ಮ ಮೂಗು-ಮುಖ ಒರೆಸಿಕೊಳ್ಳುವುದರಿಂದ.
ಕೆಮ್ಮಿದಾಗ ಅಥವಾ ಸೀನಿದಾಗ ಕೊರೊನಾ ವೈರಾಣುಗಳು ಗಾಳಿಯಲ್ಲಿ ಸೇರುವ ಸಾಧ್ಯತೆಗಳಿದ್ದು, ಆ ಗಾಳಿಯಲ್ಲೂ ಅವು ಒಂದಷ್ಟು ಹೊತ್ತು ಇರಬಲ್ಲವು ಎಂದು ಅಧ್ಯಯನವೊಂದರಲ್ಲಿ ಹೇಳಲಾಯಿತು. ಹಾಗಿದ್ದರೆ ಕೊರೊನಾ ಸೋಂಕು ಗಾಳಿಯ ಮೂಲಕವೂ ಹರಡಬಲ್ಲದೇ ಎಂಬ ಸಂಶಯಗಳಿಗೆ ಇದು ಕಾರಣವಾಯಿತು. ಉಸಿರಾಡುವ ಗಾಳಿಯ ಮೂಲಕ ಕೊರೊನಾ ಹರಡುವಂತಿದ್ದರೆ ಒಬ್ಬ ಸೋಂಕಿತನಿಂದ 15 ಜನರಿಗೆ ಹರಡಬೇಕಿತ್ತು, ಆದರೆ ಈ ಮೂರು ತಿಂಗಳಲ್ಲಿ ಅದು ಹರಡಿರುವ ಗತಿಯನ್ನು ನೋಡಿದಾಗ ಒಬ್ಬ ಸೋಂಕಿತನಿಂದ ಇಬ್ಬರು ಅಥವಾ ಮೂವರಿಗಷ್ಟೇ ಅದು ಹರಡಿರುವುದು ಕಂಡು ಬಂದಿದೆ, ಮಾತ್ರವಲ್ಲ, ಕೊರೊನಾ ಸೋಂಕಿತರಿದ್ದ ಮನೆಗಳಲ್ಲೂ, ಆಸ್ಪತ್ರೆಗಳಲ್ಲೂ ಅದು ಗಾಳಿಯ ಮೂಲಕ ಇತರರಿಗೆ ಹರಡಿರುವುದು ಕಾಣಿಸುತ್ತಿಲ್ಲ ಎನ್ನುವುದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಯ ವಿಜ್ಞಾನಿಗಳೂ ಸೇರಿದಂತೆ ಹಲವರು ಸ್ಪಷ್ಟ ಪಡಿಸಿದ್ದಾರೆ. ಆದ್ದರಿಂದ ಕೊರೊನಾ ಸೋಂಕು ಮೇಲೆ ಹೇಳಿರುವ ವಿಧಾನಗಳಿಂದಷ್ಟೇ ಹರಡುತ್ತದೆಯೇ ಹೊರತು ಮನೆಯ ಅಥವಾ ಕೇರಿಯ ಅಥವಾ ಊರಿನ ಗಾಳಿಯಲ್ಲಿ ತೇಲಾಡಿಕೊಂಡು ಎಲ್ಲರಿಗೂ ಹರಡುವಂತಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿದಿರಬೇಕು.
ಸೋಂಕಿತರು ಕೆಮ್ಮುವಾಗ ಮೂಗು-ಗಂಟಲಿನ ದ್ರವಗಳು ಹನಿಗಳಾಗಿ ಹೊರಗೆ ಸಿಂಪಡಿಸಲ್ಪಡುತ್ತವೆ. ದೊಡ್ಡ ಹನಿಗಳಲ್ಲಿ ಹೆಚ್ಚು ವೈರಾಣುಗಳಿರುತ್ತವೆ, ಅವುಗಳಿಂದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಹನಿಗಳು ಸಣ್ಣದಿದ್ದಷ್ಟೂ ಅವುಗಳಲ್ಲಿ ವೈರಾಣುಗಳ ಸಂಖ್ಯೆಯೂ ಕಡಿಮೆಯಿರುತ್ತದೆ, ಸೋಂಕು ಹರಡುವ ಸಾಧ್ಯತೆಗಳು ಕೂಡ ಕಡಿಮೆಯೇ ಆಗಿರುತ್ತವೆ. ದೊಡ್ಡ ಹನಿಗಳು ಹೆಚ್ಚು ಭಾರವಿರುತ್ತವೆ, ಅವು ಕೆಮ್ಮಿದ ವ್ಯಕ್ತಿಯ ಅತಿ ಹತ್ತಿರದಲ್ಲೇ ಕೆಳಕ್ಕೆ ಬೀಳುತ್ತವೆ; ಸಣ್ಣ ಹನಿಗಳಷ್ಟೇ ಒಂದೆರಡು ಅಡಿ ದೂರಕ್ಕೆ ಹೋಗಬಹುದು, ಆದರೆ ಅವುಗಳಲ್ಲಿ ವೈರಾಣುಗಳ ಸಂಖ್ಯೆಯೂ ಕಡಿಮೆಯೇ ಇರುತ್ತವೆ. ಕೆಮ್ಮುವಾಗ, ಸೀನುವಾಗ ಮೊಣಕೈಯಿಂದ ಮುಖವನ್ನು ಮುಚ್ಚಿಕೊಂಡರೆ ಇವೆಲ್ಲವನ್ನೂ ತಡೆಯಲು ಸಾಧ್ಯವಾಗುತ್ತದೆ.
ಯಾವುದೇ ರೋಗಲಕ್ಷಣಗಳಿಲ್ಲದವರು ಹಲವರಿರುತ್ತಾರೆ, ಅವರಿಂದ ಕೊರೊನಾ ಸೋಂಕು ಹರಡುವುದು ಬಹು ದೊಡ್ಡ ಅಪಾಯ ಎಂದೂ ಈಗೀಗ ಹೇಳಲಾಗುತ್ತಿದೆ. ಮೇಲೆ ಹೇಳಿದಂತೆ ಕೊರೊನಾ ಸೋಂಕಿತರಲ್ಲಿ ರೋಗಲಕ್ಷಣಗಳು ಆರಂಭವಾಗುವ ಮೊದಲೇ ವೈರಾಣುಗಳು ಗಂಟಲಲ್ಲಿ ಗುರುತಿಸಲ್ಪಸುತ್ತಿವೆ ಎಂದ ಮಾತ್ರಕ್ಕೆ, ಕೆಲವು ಪ್ರಕರಣಗಳಲ್ಲಿ ಪರೀಕ್ಷೆಯಲ್ಲಿ ವೈರಾಣುವಿದ್ದು ವ್ಯಕ್ತಿಯಲ್ಲಿ ಲಕ್ಷಣಗಳೇ ಇರಲಿಲ್ಲ ಎಂದ ಮಾತ್ರಕ್ಕೆ ರೋಗಲಕ್ಷಣಗಳಿಲ್ಲದವರಿಂದ ಹರಡುವುದು ಬಲು ದೊಡ್ಡ ಸಮಸ್ಯೆ ಎಂಬುದಾಗಿ ಬಿಂಬಿಸುವುದು ತಪ್ಪಾಗುತ್ತದೆ. ಸೋಂಕಿನ ತೀವ್ರತೆ ಕಡಿಮೆಯಿದ್ದಷ್ಟು ಅದು ಹರಡುವ ಸಾಧ್ಯತೆಯೂ ಕಡಿಮೆ ಇರುತ್ತದೆ, ತೀವ್ರತೆ ಹೆಚ್ಚಿದ್ದಷ್ಟು ಹರಡುವ ಅಪಾಯವೂ ಹೆಚ್ಚುತ್ತದೆ.
ಸೋಂಕು ತಗಲಿದಾಗ ವ್ಯಕ್ತಿಯ ರೋಗ ರಕ್ಷಣಾ ವ್ಯವಸ್ಥೆಯು ಗಂಟಲಲ್ಲಿರುವ ವೈರಾಣುಗಳ ಜೊತೆ ಸೆಣಸುತ್ತದೆ, ಅವನ್ನು ನಿಯಂತ್ರಿಸಲು ಯತ್ನಿಸುತ್ತದೆ. ಈ ಕಾದಾಟವು ಬೇಗನೇ ಯಶಸ್ವಿಯಾದವರಲ್ಲಿ ಜ್ವರ, ಗಂಟಲು ನೋವು ಉಂಟಾಗುವುದಕ್ಕೆ ಮುನ್ನವೇ ವೈರಾಣುಗಳು ನಾಶವಾಗಿ ರೋಗಲಕ್ಷಣಗಳಿಲ್ಲದೆಯೇ ಸೋಂಕು ಗುಣವಾಗುತ್ತದೆ. ಅಂಥವರ ಮೂಗು-ಗಂಟಲಿನ ದ್ರವದಲ್ಲಿ ವೈರಾಣುಗಳು ಕಡಿಮೆ ಪ್ರಮಾಣದಲ್ಲಷ್ಟೇ ಇರುತ್ತವೆ, ಆದರೆ ಸೋಂಕು ಪತ್ತೆಗಾಗಿ ನಡೆಸಲಾಗುತ್ತಿರುವ ವೈರಾಣು ಪರಿಕ್ಷೆಯಲ್ಲಿ ಇಷ್ಟೊಂದು ಕಡಿಮೆ ಪ್ರಮಾಣದ ವೈರಾಣುಗಳೂ ಕೂಡ ಪತ್ತೆಯಾಗಬಹುದಾದ್ದರಿಂದ ರೋಗಲಕ್ಷಣಗಳಿಲ್ಲದಿದ್ದರೂ ಸೋಂಕು ಪತ್ತೆಯಾಗಿಬಿಡುತ್ತದೆ. ಇದೇ ಕಾರಣಕ್ಕೆ ಚೀನಾದಲ್ಲಿ ಇದೀಗ ನಡೆಸಲಾಗಿರುವ ಅಧ್ಯಯನದಲ್ಲಿ ಐವರಲ್ಲಿ ನಾಲ್ವರು ಹೀಗೆ ಅತಿ ಸುಲಭದಲ್ಲಿ ವೈರಾಣುವನ್ನು ಮಣಿಸಿ ಯಾವುದೇ ರೋಗಲಕ್ಷಣಗಳಿಲ್ಲದೆಯೇ ಗುಣ ಹೊಂದುತ್ತಾರೆನ್ನುವುದು ಕಂಡುಬಂದಿದೆ. ಅಂದರೆ, ಕೊರೊನಾ ಸೋಂಕಿತರಾದವರಲ್ಲಿ ಬಹುತೇಕ ಮಂದಿ ಯಾವ ರೋಗಲಕ್ಷಣಗಳಿಲ್ಲದೆಯೇ ಗುಣಮುಖರಾಗುತ್ತಾರೆ, ರೋಗ ನಿರೋಧಕ ಶಕ್ತಿಯನ್ನೂ ಬೆಳೆಸಿಕೊಳ್ಳುತ್ತಾರೆ ಎಂದಾಯಿತು. ಆದರೆ ಅವರು ಅತಿ ಕಡಿಮೆ ಸಂಖ್ಯೆಯಲ್ಲಿ, ಕಡಿಮೆ ದಿನಗಳ ಕಾಲ ಸೋಂಕು ಹರಡುತ್ತಾರಾದರೂ ಕೂಡ ಅವರಿಂದ ಒಂದಿಷ್ಟು ಜನರಾದರೂ ಸೋಂಕಿತರಾಗುವ ಸಾಧ್ಯತೆಗಳು ಇರುತ್ತವೆ.
ಇನ್ನು ಕೆಲವರಲ್ಲಿ ರೋಗರಕ್ಷಣಾ ವ್ಯವಸ್ಥೆ ಮತ್ತು ವೈರಾಣುಗಳ ನಡುವಿನ ಕಾದಾಟವು ಮುಂದುವರಿದು ಜ್ವರ, ಗಂಟಲು ನೋವು, ಕೆಮ್ಮು ಉಂಟಾಗಿ, ನಾಲ್ಕೈದು ದಿನಗಳಲ್ಲಿ ಸೋಂಕು ನಿಯಂತ್ರಿಸಲ್ಪಟ್ಟು, ಕಾಯಿಲೆ ವಾಸಿಯಾಗುತ್ತದೆ. ಅದಾಗಿ ಒಂದು ವಾರದೊಳಗೆ ಹರಡುವುದೂ ನಿಲ್ಲುತ್ತದೆ.
ಕೆಲವೇ ಸೋಂಕಿತರಲ್ಲಿ, (60ಕ್ಕೆ ಮೇಲ್ಪಟ್ಟವರು, ರಕ್ತದ ಏರೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗ ಇತ್ಯಾದಿ ಸಮಸ್ಯೆಗಳಿದ್ದವರಲ್ಲಿ) ಈ ಕಾದಾಟವು ಇನ್ನೂ ಜೋರಾಗಿ ಶ್ವಾಸಕೋಶಗಳ ಮಟ್ಟಕ್ಕೂ ಹೋಗಿ ಜ್ವರ-ಕೆಮ್ಮು ಹೆಚ್ಚಾಗುವುದು, ಉಸಿರಾಟ ಕಷ್ಟವಾಗುವುದು ಇತ್ಯಾದಿ ಸಮಸ್ಯೆಗಳಾಗುತ್ತವೆ; ಅಂಥವರಲ್ಲಿ ವೈರಾಣುವಿನ ನಿಯಂತ್ರಣವು ಕಷ್ಟವಾಗಿ, ಅವರ ಮೂಗು-ಗಂಟಲ ದ್ರವದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈರಾಣುಗಳು ವಿಸರ್ಜನೆಯಾಗುತ್ತವೆ; ಅಂಥವರಿಂದ ಸೋಂಕು ಹರಡುವ ಸಾಧ್ಯತೆಗಳು ಅತ್ಯಧಿಕವಾಗಿರುತ್ತವೆ, ಮತ್ತು ಹೆಚ್ಚು ದಿನಗಳವರೆಗೂ ಮುಂದುವರಿಯುತ್ತವೆ.
ಅತಿ ಹೆಚ್ಚು ಹರಡುವ ಸಾಧ್ಯತೆಗಳಿರುವಲ್ಲಿ ಅತಿ ಹೆಚ್ಚು ಜಾಗ್ರತೆಯಿರಲಿ:
ಇವೆಲ್ಲವನ್ನೂ ಪರಿಗಣಿಸಿದರೆ, ಕೊರೊನಾ ಹರಡುವ ಸಾಧ್ಯತೆಗಳನ್ನು ಅತಿ ಹೆಚ್ಚಿನಿಂದ ಅತಿ ಕಡಿಮೆಯ ಮಾಪನದಲ್ಲಿ ಹೀಗೆ ಪಟ್ಟಿ ಮಾಡಬಹುದು:
ಅತಿ ಹೆಚ್ಚು ರೋಗಲಕ್ಷಣಗಳಿರುವವರಿಂದ, ಅಂದರೆ ಕೊರೊನಾ ಸೋಂಕಿನಿಂದ ಗಂಭೀರವಾದ ಕಾಯಿಲೆಯಾಗಿ, ಬಹಳಷ್ಟು ನರಳುತ್ತಿರುವವರಿಂದ ಅವರ ನೇರ ಸಂಪರ್ಕಕ್ಕೆ ಬಂದವರಿಗೆ ಅದು ಅತಿ ಹೆಚ್ಚು ಹರಡುತ್ತದೆ. ಅಂಥವರಲ್ಲಿ ಹೆಚ್ಚಿನವರು ಆಸ್ಪತ್ರೆಗಳಲ್ಲಿ ದಾಖಲಾಗಿರುತ್ತಾರೆ, ಆದ್ದರಿಂದ ಅಂಥವರಿಂದ ವೈದ್ಯರಿಗೂ, ವೈದ್ಯಕೀಯ ಸಿಬಂದಿಗೂ ರೋಗ ಹರಡುವ ಸಾಧ್ಯತೆಗಳು ಬಹಳವಾಗಿರುತ್ತವೆ. ಇದೇ ಕಾರಣಕ್ಕೆ ತೀವ್ರ ಸ್ವರೂಪದ ಕೊರೊನಾ ಸೋಂಕಿತರ ಆರೈಕೆಗಾಗಿ ವಿಶೇಷ ಆಸ್ಪತ್ರೆಗಳನ್ನೇ ಮಾಡಬೇಕು, ಅಲ್ಲಿರುವ ವೈದ್ಯರಿಗೂ, ಸಿಬಂದಿಗೂ ಸೋಂಕಿನಿಂದ ರಕ್ಷಿಸಿಕೊಳ್ಳಲು ಅಗತ್ಯವಾದ ವಿಶೇಷ ದಿರಿಸುಗಳನ್ನು ನೀಡಬೇಕು.
ಇಂಥ ಗಂಭೀರ ಸಮಸ್ಯೆಗಳು ಹೆಚ್ಚಾಗಿ 60ಕ್ಕೆ ಮೇಲ್ಪಟ್ಟ ಹಿರಿಯರಲ್ಲೂ, ಇತರ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲೂ ಕಂಡುಬರುವುದರಿಂದ ಅಂಥವರಿಗೆ ಕೊರೊನಾ ಬಾರದಂತೆ ತಡೆಯುವುದು ಅತಿ ಮುಖ್ಯ. ಹಾಗೆ ರಕ್ಷಿಸಲು ಸಾಧ್ಯವಾದರೆ ಹಿರಿಯರನ್ನೂ ಉಳಿಸಬಹುದು, ಆಸ್ಪತ್ರೆಗಳ ಮೇಲಿನ ಹೊರೆಯನ್ನೂ ಇಳಿಸಬಹುದು, ವೈದ್ಯರಿಗೂ, ಸಿಬಂದಿಗೂ ಸೋಂಕು ತಗಲುವುದನ್ನು ಕಡಿಮೆ ಮಾಡಬಹುದು, ಮನೆಯವರಿಗೂ, ಸಮುದಾಯಕ್ಕೂ ಸೋಂಕು ಹರಡುವುದನ್ನು ಕಡಿಮೆ ಮಾಡಬಹುದು.
ಸೋಂಕು ತಗಲಿದ್ದರೂ ಅಷ್ಟೇನೂ ಗಂಭೀರವಾದ ರೋಗಲಕ್ಷಣಗಳಿಲ್ಲದವರು ಕೆಮ್ಮಿದಾಗ ಅದರ ನೇರ ಸಂಪರ್ಕಕ್ಕೆ ಬಂದವರಿಗೆ ಸೋಂಕು ಹರಡುತ್ತದೆ. ಇದೇ ಕಾರಣಕ್ಕೆ ಕೊರೊನಾ ರೋಗಲಕ್ಷಣಗಳು (ವಾಸನೆ, ರುಚಿ ತಿಳಿಯದಾಗುವುದು, ಜ್ವರ, ಕೆಮ್ಮು, ಗಂಟಲು ನೋವು) ಯಾರಲ್ಲಾದರೂ ಆರಂಭವಾದರೆ ಅವರು ಮನೆಯಲ್ಲೇ ಉಳಿದು ಬೇರೆಯವರಿಗೆ ಸೋಂಕು ಹರಡದಂತೆ ಸಹಕರಿಸಬೇಕು. ಪರೀಕ್ಷೆಗಾಗಿ ಅಥವಾ ಚಿಕಿತ್ಸೆಗಾಗಿ ಅವರು ಹೊರಹೋಗಬಾರದು; ಮನೆಯಿಂದಲೇ ವೈದ್ಯರಿಗೆ ಅಥವಾ ಕೊರೊನಾ ಸಹಾಯವಾಣಿಗೆ ಕರೆ ಮಾಡಿ ಸೂಕ್ತ ಸಲಹೆಗಳನ್ನು ಪಡೆಯಬೇಕು. ಅವರು ತಮ್ಮ ಮನೆಯಲ್ಲಿಯೂ ಕೂಡ ಇತರರಿಂದ ಕನಿಷ್ಠ ಆರು ಅಡಿ ಅಂತರವನ್ನು ಕಾಯ್ದಿಟ್ಟುಕೊಂಡರೆ ಮನೆಯವರನ್ನೂ ಸೋಂಕಿನಿಂದ ರಕ್ಷಿಸಬಹುದು. ಐದಾರು ದಿನಗಳ ಬಳಿಕವೂ ಜ್ವರ-ಕೆಮ್ಮು ಕಡಿಮೆಯಾಗದಿದ್ದರೆ ಮತ್ತೆ ವೈದ್ಯರಿಗೆ ಕರೆ ಮಾಡಿ, ಅವರ ಸಲಹೆಯಂತೆ ಅಂಬ್ಯುಲೆನ್ ತರಿಸಿ ಕೋವಿಡ್ ಆಸ್ಪತ್ರೆಗೆ ಹೋಗಬೇಕು.
ಹೀಗೆ ಗಣನೀಯವಾದ ಕೆಮ್ಮು- ಸೀನುಗಳಿರುವವರು ಕೆಮ್ಮಿ/ಸೀನಿದಾಗ ಅವರಿಂದ ಸಿಂಪಡಣೆಯಾಗುವ ದ್ರವಗಳು ತಗಲಿದ ವಸ್ತುಗಳಲ್ಲಿ ವೈರಾಣುಗಳು ಅಂಟಿಕೊಳ್ಳುತ್ತವೆ, ಕೆಲವು ಗಂಟೆಗಳ ಕಾಲ ಉಳಿಯುತ್ತವೆ (ತಾಮ್ರ, ಕಾಗದ, ಬಟ್ಟೆಗಳಲ್ಲಿ ಅತಿ ಕಡಿಮೆ; ಪ್ಲಾಸ್ಟಿಕ್, ಸ್ಟೀಲ್, ಗಾಜುಗಳಲ್ಲಿ ಹೆಚ್ಚು). ಈ ವಸ್ತುಗಳನ್ನು ಮುಟ್ಟಿದವರು ನೇರವಾಗಿ ತಮ್ಮ ಮೂಗು-ಬಾಯಿ-ಕಣ್ಣು ಒರೆಸಿಕೊಂಡರೆ ಅವರಿಗೆ ಸೋಂಕು ತಗಲುವ ಸಾಧ್ಯತೆಗಳಿವೆ. ಅತಿ ಗಂಭೀರ ಸೋಂಕುಳ್ಳವರೇ ಹೆಚ್ಚು ವೈರಾಣುಗಳನ್ನು ಹೊರಹಾಕುವವರಾದ್ದರಿಂದ ಅಂಥವರಿರುವ ಮನೆಗಳಲ್ಲಿ ಮತ್ತು ಆಸ್ಪತ್ರೆಗಳಲ್ಲಿ ಈ ವಿಧಾನದಿಂದ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು.
ಇದನ್ನು ತಡೆಯಲು ಕೆಮ್ಮು-ಸೀನುಗಳಿರುವವರು ಕೆಮ್ಮುವಾಗ ತಮ್ಮ ಮೊಣಕೈಯಿಂದ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಬೇಕು. ಅದಕ್ಕಾಗಿ ಬಟ್ಟೆಯನ್ನು ಬಳಸುವುದಿದ್ದರೆ ಅದನ್ನು ಪ್ರತ್ಯೇಕವಾಗಿ ಒಂದೇ ಕಡೆ ಇಟ್ಟು, ಪ್ರತ್ಯೇಕವಾಗಿ ತಾವೇ ಸೋಪಿನಿಂದ ಶುಚಿಗೊಳಿಸಬೇಕು. ಕೊರೊನಾ ಲಕ್ಷಣಗಳಿರುವವರು ಬಾಗಿಲು, ಕಪಾಟು ತೆರೆಯುವಾಗ ಅಥವಾ ಇತರ ವಸ್ತುಗಳನ್ನು ಮುಟ್ಟುವಾಗ ತಾವು ಹೆಚ್ಚಾಗಿ ಬಳಸದೇ ಇರುವ ಕೈಯನ್ನು ಬಳಸಬೇಕು (ಬಲಗೈಯನ್ನು ಹೆಚ್ಚಾಗಿ ಬಳಸುವವರು ಎಡಗೈಯಿಂದ ಬಾಗಿಲು ತೆರೆಯಬೇಕು). ಅಂತೂ ಕೆಮ್ಮುವುದನ್ನು ಮುಚ್ಚಲು ಬಳಸಿದ ಕೈಯಿಂದಲೇ ಇತರ ವಸ್ತುಗಳನ್ನು ಮುಟ್ಟದಂತೆ ಎಚ್ಚರಿಕೆ ವಹಿಸಿದರಾಯಿತು. ಸೋಂಕಿತರು ಬಳಸುವ ಮೊಬೈಲ್ ಫೋನ್ ಗಳಿಗೆ ವೈರಾಣುಗಳು ಅಂಟಿಕೊಂಡು, ಆ ಗಾಜಿನಲ್ಲಿ ಒಂದಷ್ಟು ಕಾಲ ಉಳಿದುಕೊಳ್ಳುವ ಎಲ್ಲಾ ಸಾಧ್ಯತೆಗಳಿರುವುದರಿಂದ ಸೋಂಕಿತರು ಬಳಸಿದ ಮೊಬೈಲ್ ಫೋನನ್ನು ಇತರರು ಬಳಸದಿರುವುದೇ ಒಳ್ಳೆಯದು; ಅಂತಹಾ ಫೋನ್ ಗಳ ಪರದೆಗಳನ್ನು ಸ್ಪಿರಿಟ್ (ಆಲ್ಕೋಹಾಲ್) ಯುಕ್ತ ತೆಳು ಹಾಳೆಗಳಲ್ಲಿ ಒರೆಸಿ ಶುದ್ದೀಕರಿಸಬಹುದು.
ಸ್ವಲ್ಪ ಮಟ್ಟಿನ ಲಕ್ಷಣಗಳಿರುವ ಸೋಂಕಿತರು ಕೂಡ ಮನೆಯಲ್ಲೇ ಉಳಿದು ಮನೆಯವರಿಗಾಗಲೀ, ಇತರರಿಗಾಗಲೀ ಸೋಂಕು ಹರಡದಂತೆ ಜಾಗ್ರತೆ ವಹಿಸಬೇಕು. ಹಾಗೆಯೇ, ಸೋಂಕಿತರ ಸಂಪರ್ಕಕ್ಕೆ ಬಂದರೂ ಯಾವುದೇ ರೋಗ ಲಕ್ಷಣಗಳಿಲ್ಲದವರು ಕೂಡ ಆದಷ್ಟು ಮಟ್ಟಿಗೆ ಹೊರಹೋಗುವುದನ್ನು ಕಡಿಮೆ ಮಾಡಿ, ಇತರರಿಂದ ಅಂತರ ಕಾಯುವುದೊಳ್ಳೆಯದು. ಈ ಕ್ರಮಗಳನ್ನು ಪಾಲಿಸಿದರೆ ಕೊರೊನಾ ಹರಡದಂತೆ ತಡೆಯುವುದು ಕಷ್ಟವಾಗದು. ಆದರೆ ಅದು ಯಶಸ್ವಿಯಾಗಲು ಜನರ ಸಂಪೂರ್ಣ ಸಹಕಾರ ಬೇಕಾಗುತ್ತದೆ.
ಇವಲ್ಲದೆ ಇತರ ವಿಧಾನಗಳಿಂದ ಕೊರೊನಾ ಹರಡುವ ಸಾಧ್ಯತೆಗಳು ಅತ್ಯಲ್ಪ, ನಗಣ್ಯ. ಯಾವ ಸೋಂಕಿತರೂ ಇಲ್ಲದಲ್ಲಿ ಗಾಳಿಯಿಂದಲೇ ಕೊರೊನಾ ಹರಡಬಹುದೆನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ.
ಸೋಂಕಿಲ್ಲದವರು ಯಾವ ಎಚ್ಚರಿಕೆ ವಹಿಸಬೇಕು?
ಇವನ್ನು ಪರಿಗಣಿಸಿ, ಸೋಂಕು ತಗಲದ ವ್ಯಕ್ತಿಗಳು ಈ ಕೆಳಗಿನ ಎಚ್ಚರಿಕೆಗಳನ್ನು ವಹಿಸಿದರೆ ಆಯಿತು; ಎಲ್ಲೆಡೆ ಕೊರೊನಾ ವೈರಾಣುಗಳೇ ತುಂಬಿಕೊಂಡಿವೆ ಎಂಬಂತೆ ಭಯಭೀತರಾಗಿರುವ ಅಗತ್ಯವಿಲ್ಲ.
ಸೋಂಕಿತರ ಆರೈಕೆ ಮಾಡುವುದಿದ್ದರೆ ಆರು ಅಡಿ ದೂರವನ್ನು ಕಾಯವುದೊಳ್ಳೆಯದು; ಆದರೆ ಭಾರತದಲ್ಲಿ ಶೇ.80ರಷ್ಟು ಮನೆಗಳಲ್ಲಿ ಎರಡು ಅಥವಾ ಅದಕ್ಕಿಂತಲೂ ಕಡಿಮೆ ಕೋಣೆಗಳಿರುವುದರಿಂದ ಇದು ಕಷ್ಟವೇ ಆಗಬಹುದು. ಸೋಂಕಿತರ ಆರೈಕೆ ಮಾಡುವವರು ಮಾಸ್ಕ್ ಧರಿಸುವುದು ಒಳ್ಳೆಯದು; ಸೋಂಕಿತರು ಬಳಸಿದ ವಸ್ತುಗಳನ್ನು ಮುಟ್ಟಿದರೆ ಮತ್ತು ಮಾಸ್ಕ್ ಮುಟ್ಟಿದರೆ, ಮತ್ತು ಜಾಗರೂಕತೆಯ ಕ್ರಮವಾಗಿಯೂ, ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳಬೇಕು, ತಮ್ಮ ಮುಖವನ್ನು ಫಕ್ಕನೆ ಮುಟ್ಟಿಕೊಳ್ಳಬೇಕಾಗಿ ಬಂದರೆ ತೋಳು ಅಥವಾ ಮೊಣಕೈಯ ಮಡಿಕೆಯನ್ನು ಬಳಸಬಹುದು.
ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮು, ಸೀನು, ನೆಗಡಿಯಂತಹ ಲಕ್ಷಣಗಳಿರುವವರಿಂದ ಆರು ಅಡಿ ಅಂತರವನ್ನು ಕಾಯುವುದು ಒಳ್ಳೆಯದು. ಅಲ್ಲೂ ಕೂಡ ಮುಖವನ್ನು ಒರೆಸಿಕೊಳ್ಳುವ ಅಗತ್ಯವಿದ್ದರೆ ತೋಳು ಅಥವಾ ಮೊಣಕೈಯನ್ನು ಬಳಸಬಹುದು.
ಅಂತೂ ಸೋಂಕಿಲ್ಲದವರು ತಮ್ಮನ್ನು ರಕ್ಷಿಸಿಕೊಳ್ಳಲು ಮಾಡಬೇಕಾದ ತಂತ್ರಗಳೆಂದರೆ ಸೋಂಕಿನ ಲಕ್ಷಣಗಳುಳ್ಳವರಿಂದ ದೂರವುಳಿಯುವುದು ಮತ್ತು ತಮ್ಮ ಮುಖವನ್ನು ಒರೆಸಿಕೊಳ್ಳುವ ಮೊದಲು ಕೈಗಳನ್ನು ಸೋಪಿನಿಂದ ತೊಳೆದುಕೊಳ್ಳುವುದು, ಮತ್ತು ಹಾಗೆ ಉಜ್ಜಿಕೊಳ್ಳುವ ತುರ್ತಿದ್ದರೆ ತೋಳು ಅಥವಾ ಮೊಣಕೈಯನ್ನು ಬಳಸಿಕೊಳ್ಳುವುದು.
ಸೋಂಕಿಲ್ಲದವರು, ಸೋಂಕಿತರ ಆರೈಕೆ ಮಾಡದವರು ಮತ್ತು ವೈದ್ಯಕೀಯ ಸಿಬಂದಿಗಳಲ್ಲದವರು ಸದಾ ಕಾಲ, ಎಲ್ಲೆಂದರಲ್ಲಿ ಮಾಸ್ಕ್ ಧರಿಸಿಕೊಂಡಿರಬೇಕೇ ಎನ್ನುವ ಬಗ್ಗೆ ಒಮ್ಮತಾಭಿಪ್ರಾಯವಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಹೇಳಿದ್ದರೆ, ಅಮೆರಿಕದ ರೋಗ ನಿಯಂತ್ರಣ ಸಂಸ್ಥೆ ಸಿ.ಡಿ.ಸಿ. ಯು ಸ್ವಯಂಪ್ರೇರಿತವಾಗಿ ಬೇಕಿದ್ದರೆ ಬಳಸಬಹುದು ಎಂದಿದೆ. ಕೊಂಡಿಗಳು ಕೆಳಗಿವೆ.
ಆದ್ದರಿಂದ ಊರಲ್ಲೆಲ್ಲ ಕೊರೊನಾ ಇದೆ ಎಂದು ಭಯಪಟ್ಟುಕೊಂಡಿರಬೇಡಿ, ಆದರೆ ಎಚ್ಚರಿಕೆಯಿಂದಿರಿ; ಕೆಮ್ಮುವವರಿದ್ದರೆ ಅವರಿಂದ ದೂರವಿರಿ. ಜ್ವರ, ಸೀನುವಿಕೆ, ಕೆಮ್ಮುಳ್ಳವರು ಮನೆಯಲ್ಲೇ ಇರಿ, ಮುಖವನ್ನು ಮುಚ್ಚಿಕೊಳ್ಳಿರಿ, ಬೇರೆಯವರಿಗೆ ಸೋಂಕನ್ನು ಹರಡಬೇಡಿ.
ಅಧಿಕಾರದಲ್ಲಿರುವವರು, ನೀತಿ-ನಿರ್ಧಾರಗಳನ್ನು ಕೈಗೊಳ್ಳುವವರು ಸರಿಯಾದ ಮಾಹಿತಿ, ಸೂಕ್ತ ಪೂರ್ವ ಸಿದ್ಧತೆ, ವೈಜ್ಞಾನಿಕ ಮನೋವೃತ್ತಿಗಳನ್ನು ಹೊಂದಿಲ್ಲದಿದ್ದರೆ ಎಂತೆಂತಹ ಅನಾಹುತಗಳಾಗುತ್ತವೆ ಎನ್ನುವುದನ್ನು ನೋಡುತ್ತಲೇ ಬಂದಿದ್ದೇವೆ; ಕೊರೊನಾ ಸೋಂಕು ತಾಜಾ ಉದಾಹರಣೆ ಮಾತ್ರ.
ಬದುಕು ಕಟ್ಟಿಕೊಳ್ಳಲು, ಊಟ ಮಾಡುವಂತಾಗಲು, ಹಳ್ಳಿಯಲ್ಲಿ ಸಂಪಾದನೆಯಿಲ್ಲದೆ ಮಾಡಿದ ಸಾಲಗಳನ್ನು ತೀರಿಸುವುದಕ್ಕೆ ಒಂದಿಷ್ಟು ಗಳಿಸಲು ನಗರಗಳಿಗೆ ಹೋದ ಮಂದಿ ಈಗ ಒಮ್ಮಿಂದೊಮ್ಮೆಗೇ ಹೇರಲಾದ ಕೊರೊನಾ ದಿಗ್ಬಂಧನದ ಕಾರಣಕ್ಕೆ ಕೆಲಸ, ಊಟ ಎಲ್ಲವನ್ನೂ ಕಳೆದುಕೊಂಡು ಬೇರೆ ಗತಿಯೇನೆಂದು ಕಾಣದೆ ಮತ್ತೆ ತಮ್ಮೂರಿನ ಮನೆಗಳಿಗೆ ಮರಳಿದಾಗ, ತಮ್ಮದೇ ಮನೆಯವರಿಂದ ಬಹಿಷ್ಕೃತರಾಗಬೇಕಾದ ಸ್ಥಿತಿ ನಿಜಕ್ಕೂ ಅತ್ಯಂತ ನೋವಿನದ್ದು.
ಕೆಲವೇ ವಾರಗಳ ಹಿಂದಿನವರೆಗೂ ನಗರದಲ್ಲಿ ಸಂಪಾದಿಸಿ ಹಳ್ಳಿಯಲ್ಲಿರುವ ತಮ್ಮ ಮನೆಮಂದಿಗೆ ಹಣವನ್ನು ಕಳುಹಿಸುತ್ತಿದ್ದವರು ಈಗ ಈ ಕೊರೊನಾ ಭೀತಿಯಲ್ಲಿ ಅದೇ ಮನೆಮಂದಿಗೆ ಬೇಡವಾದರೇ?
ಅವರನ್ನು ಮನೆಗಳೊಳಕ್ಕೆ ಸೇರಿಸದಂತೆ ಅಧಿಕಾರಿಗಳೇ ಹೇಳಿದ್ದಾರೆಂಬುದು ಎನ್ ಡಿಟಿವಿ ವರದಿಯಲ್ಲಿದೆ. ನಗರಗಳಿಂದ ಮರಳಿದವರೆಲ್ಲರೂ ಕೊರೊನಾ ಪೀಡಿತರೇ? ಹಾಗಿದ್ದರೆ ಅವರನ್ನು ನಗರಗಳಲ್ಲೇ ಪರೀಕ್ಷಿಸಿ ಅಲ್ಲೇ ಪ್ರತ್ಯೇಕಿಸಿಡಬಾರದಿತ್ತೇ? ನೂರಾರು ಕಿಮೀ ನಡೆದು ಅಥವಾ ಸಿಕ್ಕ ಸಿಕ್ಕ ವಾಹನಗಳಲ್ಲಿ ಅಡಗಿಕೊಂಡು ತಮ್ಮೂರಿಗೆ ಮರಳುವಂತಹ ಸನ್ನಿವೇಶವನ್ನು ಸೃಷ್ಟಿಸಿದ್ದೇಕೆ?
ಕೋವಿಡ್ ಲಕ್ಷಣಗಳಿರುವವರು ಮನೆಯಿಂದ ಹೊರಬರಬೇಡಿ, ಆತಂಕ ಪಡಬೇಡಿ, ಆಪ್ತಮಿತ್ರ ಸಹಾಯವಾಣಿ 14410ಗೆ ಕರೆಮಾಡಿ!
ಶೇ 85-90ರಷ್ಟು ಸೋಂಕಿತರು ಐದಾರು ದಿನಗಳಲ್ಲಿ ಮನೆಯಲ್ಲೇ ಇದ್ದು, ಔಷಧಗಳೂ ಬೇಕಿಲ್ಲದೆ ಗುಣಮುಖರಾಗುತ್ತಾರೆ!
ಒಳ್ಳೆಯ ನಿರ್ಧಾರ!
ದಯವಿಟ್ಟು ಈಗಾಗಲೇ ಆರಂಭಿಸಿರುವ ಜ್ವರ ತಪಾಸಣಾ ಕ್ಲಿನಿಕ್ ಗಳನ್ನು ಮುಚ್ಚಿ. ಸೋಂಕಿನ ಲಕ್ಷಣಗಳಿರುವವರು ಆಪ್ತಮಿತ್ರಕ್ಕೆ ಕರೆ ಮಾಡಬೇಕು, ಗಂಭೀರ ಸಮಸ್ಯೆಯುಳ್ಳವರಿದ್ದರೆ ಸಂಚಾರಿ ಘಟಕದಿಂದ ಪರೀಕ್ಷೆ ಮಾಡಬೇಕು, ಅಗತ್ಯವುಳ್ಳವರನ್ನಷ್ಟೇ ವಿಶೇಷ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಒಯ್ಯಬೇಕು.
ಕೊರೊನಾ ಎದುರಿಸಲು ಇದೇ ಸರಿಯಾದ ಕ್ರಮ.
ಎಪ್ರಿಲ್ 26, 2020; ಪ್ರಜಾವಾಣಿ, ಮಂಗಳೂರು
ಎಪ್ರಿಲ್ 28, 2020
ಲಾಕ್ ಡೌನ್, ಲಾಕ್ ಡೌನ್ ಎಂಬ ಮಂತ್ರ ಎಲ್ಲರ ಬಾಯಲ್ಲಿದ್ದರೂ ಲಾಕ್ ಡೌನ್ ಅಂದರೆ ನಿಜಕ್ಕೂ ಏನು ಅಂತ ಕೇಳಿದರೆ ಯಾರಲ್ಲೂ ಉತ್ತರವೇ ಇಲ್ಲ. ಅದೇ, ಚೀನಾದಲ್ಲಿ ಮಾಡಿದ್ದರಲ್ಲ, ಅದೇ ಲಾಕ್ ಡೌನ್ ಎನ್ನುವವರಲ್ಲಿ ಚೀನಾದ್ದು ಏನದು ಲಾಕ್ ಡೌನ್ ಅಂತ ಕೇಳಿದರೆ ಉತ್ತರವಿಲ್ಲ. ಚೀನಾದಲ್ಲಿ ಲಾಕ್ ಡೌನ್ ಮಾಡಿದ್ದರಾ ಅಂತ ಕೇಳಿದರೆ ಅದಕ್ಕೂ ಉತ್ತರವಿಲ್ಲ. ಮೊನ್ನೆ ಪ್ರತಿಷ್ಠಿತ ವೈದ್ಯಕೀಯ ಜರ್ನಲ್ ಲಾಂಸೆಟ್ ನ ಸಂಪಾದಕ ಡಾ. ಹಾರ್ಟನ್ ಕೂಡ ಭಾರತ ಇನ್ನಷ್ಟು ವಾರಗಳಿಗೆ ಚೀನಾ ಮಾಡಿದಂತಹ ಲಾಕ್ ಡೌನ್ ಮಾಡಬೇಕು ಎಂಬ ಸಲಹೆ ಕೊಟ್ಟರಂತೆ!
ಚೀನಾ ಲಾಕ್ ಡೌನ್ ಮಾಡಲಿಲ್ಲ. ವುಹಾನ್ ಅಂದರೆ ಚೀನಾ ಅಲ್ಲ, ಚೀನಾ ಅಂದರೆ ವುಹಾನ್ ಅಲ್ಲ. ವುಹಾನ್ ಎನ್ನುವುದು ಚೀನಾ ದೇಶದ ಮಧ್ಯ ಭಾಗದಲ್ಲಿರುವ ಹ್ಯೂಬೆ ಪ್ರಾಂತ್ಯದ ಮುಖ್ಯ ನಗರ, ಅಷ್ಟೇ. ಭಾರತ ದೇಶದ ಕರ್ನಾಟಕ ರಾಜ್ಯದ ಬೆಂಗಳೂರು ನಗರ ಇದ್ದ ಹಾಗೆ, ಅಷ್ಟೇ. ಬೆಂಗಳೂರಿನ ಜನಸಂಖ್ಯೆ 1.2 ಕೋಟಿಯಾದರೆ, ವುಹಾನ್ ಜನಸಂಖ್ಯೆ 1.1 ಕೋಟಿ. ಚೀನಾದಲ್ಲಿ ಕೊರೊನಾ ಕಂಡುಬಂದು, ಮೊದಲು ಹರಡಿ, 3000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದದ್ದು ವುಹಾನ್ ನಗರದಲ್ಲಿ. ಅಲ್ಲಿ ಕೊರೊನಾ ವ್ಯಾಪಕವಾಗುವ ಲಕ್ಷಣಗಳು ಕಂಡೊಡನೆ ಆ ನಗರವನ್ನು ಮಾತ್ರ ಲಾಕ್ ಡೌನ್ ಮಾಡಲಾಯಿತೇ ಹೊರತು ಇಡೀ ಚೀನಾ ದೇಶವನ್ನು ಲಾಕ್ ಡೌನ್ ಮಾಡಲಿಲ್ಲ.
ಅಲ್ಲಿ ಲಾಕ್ ಡೌನ್ ಅಂದರೆ ಮಾಡಿದ್ದೇನು? ಇಲ್ಲಿ ಲಗತ್ತಿಸಿರುವ ಲೇಖನಗಳಲ್ಲಿ ವಿವರಗಳಿವೆ.
ಇಲ್ಲಿ ಮಾಡಲಾಗಿರುವ ಲಾಕ್ ಡೌನ್ ಗೂ, ಅಲ್ಲಿ ಮಾಡಲಾಗಿದ್ದಕ್ಕೂ ಏನಾದರೂ ಸಾಮ್ಯತೆಗಳು ಯಾರಿಗಾದರೂ ಗೋಚರಿಸಿದರೆ ದಯವಿಟ್ಟು ನನಗೂ ತಿಳಿಸಿ.
(ವುಹಾನ್ ನಗರದ ಗ್ರಿಡ್ ಗಳನ್ನು ನಮ್ಮಲ್ಲಿ ಇದೆಯೆನ್ನಲಾಗುವ ವಾರ್ಡ್ ಗಳಿಗೆ ಹೋಲಿಸಬಹುದೇನೋ – ಅಥವಾ ಈ ಗ್ರಿಡ್ ಗಳು ನಮ್ಮ ವಾರ್ಡ್ ಗಳಿಗಿಂತ ಇನ್ನೂ ಸಣ್ಣ ವಲಯಗಳಿರಬಹುದು)
Why? The answer is simple – they locked down in level 3 or 4, when there was community transmission, so it helped; India locked down (it’s actually a shut down, not a lock down) at level 1, when there was no community transmission!
ಮಕ್ಕಳಿಗೆ ಕೊರೊನಾ ಹೆಚ್ಚು ತಗಲುವುದಿಲ್ಲ, ಅವರಿಂದ ಇತರರಿಗೆ ಹೆಚ್ಚು ಹರಡುವುದೂ ಇಲ್ಲ; ಶಾಲೆಗಳನ್ನು ಮುಚ್ಚುವ ನಿರ್ಧಾರವು ಸಾಕ್ಷ್ಯಾಧಾರಿತವಾಗಿರಲಿಲ್ಲ; ಈಗ ಶಾಲೆಗಳನ್ನು ತೆರೆಯಲು ಸಕಾಲವಾಗಿದೆ – ಬ್ರಿಟಿಷ್ ಮೆಡಿಕಲ್ ಜರ್ನಲ್ ವರದಿ.
Since the first reports of SARS-CoV-2 infections in China, doctors, parents and policy-makers have been aware that COVID-19 is ‘not just another respiratory virus’ in children. There is a large discrepancy in case rate and prognosis between young children and older adults that has caught everyone by surprise, and for which the mechanisms remain unknown……
Evidence is therefore emerging that children could be significantly less likely to become infected than adults. On the other hand, children could have a more transient upper respiratory infection with minimal viral shedding, or the less likely scenario of showing minimal symptoms despite significant viral shedding. A further key question is the ability of infected children to spread SARS-CoV-2. A collection of international family clusters found that children were not likely to be the index case in households, only being responsible for around 10% of clusters.9 Data from Guangzhou have supported this, finding an even lower rate of children as index cases in households at 5%
ಕೊರೊನಾ ಜೊತೆ ಬದುಕಲು ಕಲಿಯಿರಿ. ಕೊರೊನಾ ಇರಬಹುದಾದ ಮನುಷ್ಯರನ್ನು ದೂರ ಇಡಿ, ಮನೆಯಿಂದ ಹೊರಹಾಕಿ, ಬೀದಿಗೆ ತಳ್ಳಿ, ಅವರಿದ್ದ ಆಸ್ಪತ್ರೆಗಳನ್ನೂ ಮುಚ್ಚಿ! 😛
ಮೇ 15, 2020
May 16, 2020
Swedish health authorities argue that keeping a distance, washing your hands, not touching your face, and staying at home if you experience any symptoms are still the best ways to halt the spread of the corona virus. There is a concern that wearing face masks would make people follow these guidelines less strictly
“Since there is efficient human to human transmission, success of containment operations cannot be guaranteed. Mathematical modeling studies suggest containment might be possible,” the health ministry said.
‘ಮನುಷ್ಯರಿಂದ ಮನುಷ್ಯರಿಗೆ ಸುಲಭವಾಗಿ ಹರಡುವುದರಿಂದಾಗಿ ಸೋಂಕಿನ ನಿಯಂತ್ರಣ ಸಾಧ್ಯವೆಂದು ಖಚಿತವಾಗಿ ಹೇಳಲಾಗದು. ಕೆಲವು ಗಣಿತಶಾಸ್ತ್ರೀಯ ಅಧ್ಯಯನಗಳು ಸೂಚಿಸಿರುವಂತೆ ನಿಯಂತ್ರಣವು ಸಾಧ್ಯವಾದರೂ ಆಗಬಹುದು’
ಹಾಗಂದರೆ ಎಂತ ಮಾರ್ರೆ? 54 ದಿನ ಎಂತ ಮಾಡಿದ್ದು ಮಾರ್ರೆ? ಯಾವ ಶಾಸ್ತ್ರದ ಪ್ರಕಾರ ಎಲ್ಲವನ್ನೂ ಬಂದ್ ಮಾಡಿದ್ದು?
New Normal isn’t and can’t be normal. This viral spread is temporary and we shall be back to our ‘forever normal’ in 3-4 months.
ಮೇ 18, 2020
ಈಗಿನ ‘ಹೊಸ ಜೀವನ‘ವೇ ಮುಂದೆಂದಿಗೂ ಸಹಜವಾಗಲಿದೆ ಎನ್ನುವುದು ಸರಿಯಲ್ಲ, ಆಗಬಾರದು. ಮೂರ್ನಾಲ್ಕು ತಿಂಗಳಲ್ಲಿ ಈ ವೈರಸ್ ಹೋದಾಗ ಹಿಂದಿನ ಸಹಜ ಜೀವನವೇ ಮರಳಬೇಕು.
May 18, 2020
New UK Guidelines to self isolate include loss of smell as an indicator of COVID, besides new fever and cough.
ಜ್ವರ ಮತ್ತು ಕೆಮ್ಮು ತೊಡಗಿದರೆ ಕೊರೊನಾ ಅಓಂಕಿನ ಸಾಧ್ಯತೆಯಿರಬಹುದೆಂದು ತಿಳಿದು ಮನೆಯಲ್ಲೇ ಉಳಿಯಬೇಕು ಎಂಬ ಸಲಹೆಯನ್ನು ಬ್ರಿಟಿಷ್ ಸರಕಾರವು ಮೊದಲೇ ನೀಡಿತ್ತು. ಇಂದು ಅವೆರಡು ಲಕ್ಷಣಗಳಲ್ಲದೆ, ವಾಸನೆ ಗ್ರಹಿಸಲು ಸಾಧ್ಯವಾಗದಿರುವುದನ್ನೂ ಸೇರಿಸಲಾಗಿದ್ದು, ಈ ಲಕ್ಷಣಗಳಿರುವವರು ತಾವಾಗಿ ಮನೆಗಳಲ್ಲೇ ಉಳಿದುಕೊಳ್ಳಬೇಕೆಂದು ಕೋರಲಾಗಿದೆ.
Online teaching — the new normal to emerge during the lockdown — seems to be losing steam with teachers refusing to conduct classes due to “bullying” by students’ parents.
Several teachers, who switched over to the new platform just days ago, are already overwhelmed by the digital experience. They say they are under tremendous pressure, with parents constantly complaining about the poor quality of teaching, spelling mistakes, improper pronunciation, harsh tone of voice, lack of warmth towards children etc. Some videos depicting teachers in poor light owing to their pronunciation have gone viral on social media.
Fly at your own risk – aatm nirbhar bano 😀 Dear minister, please explain why were these flights cancelled when the corona cases numbered 564 and why are you allowing them when the cases are more than a lakh, and most of them in major airport destinations?
ಮಧ್ಯದ ಸೀಟು ಖಾಲಿ ಬಿಟ್ಟರೆ ಟಿಕೇಟು ದರ ಹೆಚ್ಚುತ್ತದೆ, ಹಾಗಾಗಿ ಎಲ್ಲ ಸೀಟುಗಳಲ್ಲೂ ಪ್ರಯಾಣಿಕರನ್ನು ತುಂಬಬಹುದು – ಆತ್ಮ ನಿರ್ಭರ ವಿಮಾನಯಾನ😀 ಸಚಿವೋತ್ತಮರೆ, 564 ಪ್ರಕರಣಗಳಷ್ಟೇ ಇದ್ದಾಗ ಈ ವಿಮಾನಗಳನ್ನು ತಡೆದದ್ದೇಕೆ, ಈಗ ದೊಡ್ಡ ವಿಮಾನ ನಿಲ್ದಾಣಗಳಿರುವಲ್ಲೇ ಅತಿ ಹೆಚ್ಚು ಪ್ರಕರಣಗಳಿದ್ದು, ಒಟ್ಟು ಸಂಖ್ಯೆ ಲಕ್ಷವನ್ನೂ ಮೀರುತ್ತಿರುವಾಗ ಅದನ್ನು ಮತ್ತೆ ಹಾರಲು ಬಿಡುತ್ತಿರುವುದೇಕೆ?
ಕೊರೊನಾ ಸೋಂಕಿನಿಂದ ಗುಣ ಹೊಂದಿದವರಿಗೆ ಪುಷ್ಪಾರ್ಚನೆ ಯಾಕೆ? ಯಾವುದೇ ಚಿಕಿತ್ಸೆ ಇಲ್ಲದಿದ್ದರೂ 95% ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗುತ್ತಾರೆ!
ಮೇ 21, 2020
ಲಾಕ್ ಡೌನ್ ಅವಾಂತರದಿಂದ ಹೆಚ್ಚಿನವರು ಮನೋದೈಹಿಕ ಒತ್ತಡಗಳಲ್ಲಿದ್ದಾರೆ. ಆಡಳಿತ, ಬ್ಯಾಂಕ್, ಅಂಚೆ, ವೈದ್ಯಕೀಯ ಸಿಬಂದಿ, ವ್ಯಾಪಾರಿಗಳೊಂದಿಗೆ ತಾಳ್ಮೆಯಿರಲಿ.
ಮೇ 21, 2020
ಹತ್ತು ಸಾವಿರ ಜನರಿಗೆ ಕೊರೊನಾ ಸೋಂಕಿದರೆ 2ರಿಂದ 40 ಸಾವುಗಳಾಗಬಹುದು (ದೇಶವಾಸಿಗಳ ವಯಸ್ಸು, ಆಸ್ಪತ್ರೆ ಸೌಲಭ್ಯ ಇತ್ಯಾದಿಗಳನ್ನು ಅವಲಂಬಿಸಿ)
ಮೇ 22, 2020
ಈಗ ಪ್ರತಿ ವರ್ಷ ಒಂದು ಕೋಟಿ ಭಾರತೀಯರು ಸಾವನ್ನಪ್ಪುತ್ತಾರೆ, ಅಂದರೆ ಪ್ರತಿದಿನ ಸುಮಾರು 27500 ಸಾವುಗಳಾಗುತ್ತವೆ. ಕೊರೊನಾ ಸೋಂಕು ಹರಡುತ್ತಿರುವಾಗ ಇವರಲ್ಲೇ ಕೆಲವರು ಕೊರೊನಾ ಸೋಂಕನ್ನು ಹೊಂದಿ ಸಾವನ್ನಪ್ಪುತ್ತಾರೆ. ಹಿರಿವಯಸ್ಕರಲ್ಲಿ ಕೆಲವರು, ಮೊದಲೇ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಕೆಲವರು ಕೊರೊನಾದಿಂದಲೇ ಸಾಯುವ ಸಾಧ್ಯತೆಗಳಿವೆ. ಯಾವುದೇ ಸಮಸ್ಯೆಗಳಿಲ್ಲದವರು ಕೊರೊನಾದಿಂದ ಸಾಯುವ ಸಾಧ್ಯತೆಗಳು ಅತ್ಯಲ್ಪ; ಸ್ಟಾನ್ ಫೋರ್ಡ್ ವಿವಿಯ ಹಿರಿಯ ತಜ್ಞ ಜಾನ್ ಇಯೋನಿಡಿಸ್ ಹೇಳಿರುವಂತೆ, ರಸ್ತೆ ಅಪಘಾತದಲ್ಲಿ ಸಾಯುವ ಸಾಧ್ಯತೆಗಳಿಗಿಂತಲೂ ಕಡಿಮೆ.
ನಮ್ಮ ದೇಶದಲ್ಲಿ 60 ವರ್ಷಕ್ಕೆ ಮೇಲ್ಪಟ್ಟವರ ಸಂಖ್ಯೆ 10 ಕೋಟಿ (7%), 60ಕ್ಕಿಂತ ಕೆಳಗಿನವರಲ್ಲಿ ಹೃದ್ರೋಗ, ಸಕ್ಕರೆ ಕಾಯಿಲೆ ಇತ್ಯಾದಿ ಹೊಂದಿರುವವರು ಸುಮಾರು 10%. ಇವರಲ್ಲಿ 30% ಮಂದಿಗೆ ಸೋಂಕು ತಗಲಿದರೆ, ಹಾಗೆ ಸೋಂಕು ತಗಲಿದವರಲ್ಲಿ 10-15% ಗಂಭೀರ ಸಮಸ್ಯೆಗೀಡಾದರೆ, ಅವರಲ್ಲಿ 30% ಮಂದಿಗೆ ಕೃತಕ ಉಸಿರಾಟ ಅಗತ್ಯ ಬಂದರೆ, ಅಂಥವರಲ್ಲಿ 50-60% ಸಾವನ್ನಪ್ಪಬಹುದಾದರೆ, ಒಟ್ಟು ಸಾವುಗಳು ಎಷ್ಟಾಗಬಹುದು ಎಂದು ಅಂದಾಜು ಮಾಡಬಹುದು; ಅದು ಸುಮಾರು 10-15 ಲಕ್ಷದಷ್ಟಾಗಬಹುದು. ಅಂದರೆ, ವರ್ಷಕ್ಕೆ ಒಂದು ಕೋಟಿ ಸಾವುಗಳಾಗುವ ಭಾರತದಲ್ಲಿ ಈ ವರ್ಷ 10 ಲಕ್ಷದಷ್ಟು ಹೆಚ್ಚು, ಅಂದರೆ 10% ಹೆಚ್ಚು, ಸಾವುಗಳಾಗಬಹುದು. ಅವರಲ್ಲಿ ಶೇ.90-95ರಷ್ಟು ಮಂದಿ ಹಿರಿಯರು ಮತ್ತು ಅನ್ಯ ರೋಗಗಳಿಂದ ಬಳಲುತ್ತಿರುವವರಾಗಿರುತ್ತಾರೆ. ಅಂಥವರನ್ನು ಈಗಿಂದೀಗಲೇ ಪ್ರತ್ಯೇಕಿಸಿ ಮುಂದಿನ ಮೂರು ತಿಂಗಳ ಕಾಲ ಸುರಕ್ಷಿತವಾಗಿಟ್ಟರೆ ಈ ಸಾವುಗಳಲ್ಲೂ ಹೆಚ್ಚಿನವನ್ನು ತಡೆಯಲು ಸಾಧ್ಯವಿದೆ.
ಕೊರೊನಾ ಸೋಂಕಿನ ಚಿಕಿತ್ಸೆಯ ಬಗ್ಗೆ ರಾಜ್ಯ ಸರಕಾರವು ಹೊರಡಿಸಿರುವ ಸೂಚನೆಯನ್ನು ಕೂಡಲೇ ಹಿಂಪಡೆಯಬೇಕು
ಹೊಸ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡುವ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇದೇ ಮೇ 15, 2020ರಂದು ಪ್ರಕಟಿಸಿರುವ ಚಿಕಿತ್ಸಾ ಶಿಷ್ಠಾಚಾರದಲ್ಲಿ ಹೊಸ ಕೊರೊನಾ ಚಿಕಿತ್ಸೆಗೆ ಅಗತ್ಯವೇ ಇಲ್ಲದ ಪರೀಕ್ಷೆಗಳನ್ನೂ, ಚಿಕಿತ್ಸೆಗಳನ್ನೂ ಸೂಚಿಸಲಾಗಿದ್ದು, ಅದನ್ನು ಸರಕಾರವು ಈ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇವೆ.
ರಾಜ್ಯ ಸರಕಾರವು ಪ್ರಕಟಿಸಿರುವ ಈ ಶಿಷ್ಠಾಚಾರದಲ್ಲಿ ಕೊರೊನಾ ಸೋಂಕಿತರನ್ನು ಎ, ಬಿ, ಸಿ ವರ್ಗ ಎಂದು ವರ್ಗೀಕರಿಸಲಾಗಿದ್ದು, ಎಲ್ಲಾ ವರ್ಗಗಳ ಸೋಂಕಿತರನ್ನೂ ಆಸ್ಪತ್ರೆಗಳಿಗೆ ದಾಖಲಿಸಲು ಅವಕಾಶ ನೀಡಲಾಗಿದೆ.
ಈ ಮೂರು ವರ್ಗಗಳ ಸೋಂಕಿತರಿಗೂ ಆಸ್ಪತ್ರೆಯಲ್ಲಿ ದಾಖಲಾದ ದಿನವೇ ರಕ್ತಕಣಗಳ ಪರೀಕ್ಷೆ, ರಕ್ತದ ಗ್ಲೂಕೋಸ್, ಯಕೃತ್ತು ಹಾಗೂ ಮೂತ್ರಪಿಂಡಗಳ ಕ್ಷಮತೆಯ ಪರೀಕ್ಷೆಗಳು, ಇಸಿಜಿ, ಎದೆಯ ಕ್ಷಕಿರಣ ಪರೀಕ್ಷೆ, ಎದೆಯ ಸಿ ಟಿ ಸ್ಕಾನ್, ಜೊತೆಗೆ ಇನ್ನೂ ಕೆಲವು ವಿಶೇಷ ಪರೀಕ್ಷೆಗಳನ್ನು ನಡೆಸಬೇಕೆಂದು ಈ ಶಿಷ್ಟಾಚಾರದಲ್ಲಿ ಹೇಳಲಾಗಿದ್ದು, ಅವಕ್ಕೆ ಕನಿಷ್ಠ 25000 ರೂಪಾಯಿ ವೆಚ್ಚವಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಲಕ್ಷಗಟ್ಟಲೆ ಜನರಿಗೆ ಕೊರೊನಾ ತಗಲಿದಾಗ ಈ ಕಡ್ಡಾಯ ಶಿಷ್ಟಾಚಾರದನುಸಾರ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಬೇಕೇ ಮತ್ತು ತಲಾ 25 ಸಾವಿರದ ಪರೀಕ್ಷೆಗಳಿಗೆ ಒಳಪಡಿಸಬೇಕೇ?
ಈ ಶಿಷ್ಟಾಚಾರದಲ್ಲಿ ಸೂಚಿಸಿರುವ ಚಿಕಿತ್ಸೆಗಳು ಕೂಡ ಅಚ್ಚರಿ ಹುಟ್ಟಿಸುತ್ತವೆ. ರೋಗಲಕ್ಷಣಗಳಿಲ್ಲದವರಿಂದ ಹಿಡಿದು ಅತಿ ಗಂಭೀರ ಸ್ವರೂಪದ ಸೋಂಕುಳ್ಳ ಎಲ್ಲರಿಗೂ ಕ್ಲೋರೋಕ್ವಿನ್, ಅಝಿತ್ರೋಮೈಸಿನ್, ಒಸೆಲ್ಟಾಮಿವಿರ್, ಜಿಂಕ್ (ಸತು), ವಿಟಮಿನ್ ಸಿ ಮಾತ್ರೆಗಳನ್ನು 5-7 ದಿನಗಳವರೆಗೆ ನೀಡಬೇಕೆಂದೂ, ರಕ್ತ ಹೆಪ್ಪುಗಟ್ಟದಂತೆ ತಡೆಯುವ ಎನೋಕ್ಸಪಾರಿನ್ ಚುಚ್ಚುಮದ್ದನ್ನು ಬಹುತೇಕ ಎಲ್ಲರಿಗೂ 7 ದಿನ ನೀಡಬೇಕೆಂದೂ ಅದರಲ್ಲಿ ಸೂಚಿಸಲಾಗಿದ್ದು, ಇವಕ್ಕೆ ಪ್ರತೀ ರೋಗಿಗೂ ಕನಿಷ್ಠ 5000 ರೂಪಾಯಿ ಬೇಕಾಗುತ್ತದೆ. ಇಷ್ಟಲ್ಲದೆ, ಆಸ್ಪತ್ರೆಯ ಕೊಠಡಿ, ಆರೈಕೆ, ವೈದ್ಯರ ಶುಲ್ಕ ಇತ್ಯಾದಿ ವೆಚ್ಚಗಳು ಬೇರೆಯೇ ಆಗಿರುತ್ತವೆ. ತೀವ್ರ ರೂಪದ ಸೋಂಕುಳ್ಳವರಿಗೆ ಇನ್ನೂ ಬಳಕೆಯಲ್ಲೇ ಇಲ್ಲದ, ಇನ್ನೂ ದೃಢಗೊಂಡಿಲ್ಲದ ಚಿಕಿತ್ಸೆಗಳನ್ನೆಲ್ಲ ಸೂಚಿಸಲಾಗಿದ್ದು, ಅವುಗಳ ವೆಚ್ಚಗಳು ಬಹಳಷ್ಟಾಗುತ್ತವೆ, ಮಾತ್ರವಲ್ಲ, ಹಲವು ಪ್ರಶ್ನೆಗಳಿಗೂ ಕಾರಣವಾಗುತ್ತವೆ.
ಆದ್ದರಿಂದ ಯಾವುದೇ ಸಾಕ್ಷ್ಯಾಧಾರಗಳಿಲ್ಲದ, ಪ್ರಯೋಜನಕ್ಕಿಂತ ಹಾನಿಯನ್ನೇ ಉಂಟು ಮಾಡಬಹುದಾದ, ಅನಗತ್ಯವಾಗಿ ಸಾವಿರಗಟ್ಟಲೆ ವೆಚ್ಚಕ್ಕೆ ಕಾರಣವಾಗಬಹುದಾದ, ಖಾಸಗಿ ಔಷಧ ಕಂಪೆನಿಗಳಿಗೆ ತಮ್ಮ ಪ್ರಯೋಗಗಳನ್ನು ನಡೆಸಲು ಅವಕಾಶ ನೀಡಬಹುದಾದ, ಖಾಸಗಿ ಹಿತಾಸಕ್ತಿಗಳಿಗೆ ದುರ್ಬಳಕೆ ಮಾಡಲು ಉತ್ತೇಜಿಸಬಹುದಾದ ಈ ಶಿಷ್ಟಾಚಾರವನ್ನು ಈ ಕೂಡಲೇ ಹಿಂಪಡೆದು, ಸಾಕ್ಷ್ಯಾಧಾರಿತವಾದ, ಸರಳವಾದ, ಅನಗತ್ಯವಾದ ವೆಚ್ಚಗಳಿಗೆ ಕಾರಣವಾಗದ ಶಿಷ್ಟಾಚಾರವನ್ನು ಸಿದ್ಧಪಡಿಸಬೇಕಾಗಿದೆ.
The health and Family Welfare Dept., of Govt of Karnataka has issued a circular on May 15, 2020 regarding the protocol for management of COVID 19, on the basis of what is stated as the report of the expert committee of Rajiv Gandhi University of Health Sciences. This protocol enlists unnecessary and unconfirmed tests and treatments for COVID 19, and therefore, it must be withdrawn immediately.
The protocol has classified COVID 19 cases into three categories and has provided for hospitalisation of all three categories of patients, from asymptomatic to the most severely ill.
The protocol suggests several investigations to be done right on the day of admission, including blood counts, liver and renal function tests, chest X Ray, ECG, CT scan of the chest, and other special investigations, all of which, if done, will cost Rs. 25000 per patient. In the coming days when lakhs of patients are likely to be infected with SARS CoV2, is it necessary and feasible to hospitalise and test all these patients at Rs 25000/person?
The treatment options suggested in the protocol are also surprising. The protocol recommends choloroquine, azithromycin, oseltamivir, zinc and vitamin C for all patients, from asymptomatic to the severely ill, and also anti coagulant injections for many patients. All these would cost at least Rs. 5000 per patient. For severe cases of COVID 19, many unproven and experimental treatments have been suggested, which are very expensive and highly questionable.
Therefore, this protocol, that’s not evidence based, likely to do more harm than good, unnecessarily expensive, and allowing private companies to conduct trials on COVID 19 patients, and likely to be misused by vested interests, must be immediately withdrawn, and instead, a protocol that is evidence based, simple and avoiding unnecessary expenses, must be developed.
‘ಅದೃಷ್ಟವಶಾತ್ ಚೇತರಿಸಿಕೊಳ್ಳು’ವುದಲ್ಲ, ಅವರ ರೋಗರಕ್ಷಣಾ ವ್ಯವಸ್ಥೆಯೇ ವೈರಾಣುವನ್ನು ಮಣಿಸಿ ರೋಗವನ್ನು ಗುಣಪಡಿಸುತ್ತದೆ.
ಶೇ.80ರಷ್ಟು ಸೋಂಕುಗಳು 60ಕ್ಕಿಂತ ಕಿರಿಯರಲ್ಲಾಗುತ್ತವೆ, ಶೇ. 80ರಷ್ಟು ಸೋಂಕಿತರು ಯಾವುದೇ ಸಮಸ್ಯೆಗಳಾಗದೆ ತಾವಾಗಿ ಚೇತರಿಸಿಕೊಳ್ಳುತ್ತಾರೆ, 60ಕ್ಕೆ ಮೇಲ್ಪಟ್ಟವರು ಮತ್ತು ದೀರ್ಘಕಾಲೀನ ಕಾಯಿಲೆಗಳಿರುವವರು ಗಂಭೀರ ಸಮಸ್ಯೆಗಳಿಗೀಡಾಗುವ ಸಾಧ್ಯತೆ ಹೆಚ್ಚು, ಅವರನ್ನು ಪ್ರತ್ಯೇಕಿಸಿ ರಕ್ಷಿಸಿಡಬೇಕು ಎನ್ನುವುದನ್ನು ಮಾರ್ಚ್ ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಮ್ಮ ದೇಶದಲ್ಲಿ ಸುಮಾರು 200ರಷ್ಟು ಕೊರೊನಾ ಸಂಬಂಧಿತ ಸಾವುಗಳಾಗಿದ್ದಾಗಲೇ, ವಿದೇಶಗಳಲ್ಲಾಗಿದ್ದ ಸಾವುಗಳ ವರದಿಗಳೊಂದಿಗೆ ಅವನ್ನು ಹೋಲಿಸಿ, ಅಲ್ಲೆಲ್ಲ ಆಗಿದ್ದಂತೆಯೇ ಇಲ್ಲೂ ಆಗುತ್ತಿದೆ ಎಂಬ ವಿಶ್ಲೇಷಣೆಯನ್ನು ಕೂಡ ಬರೆದಿದ್ದೆ.
ಈ ಅಧ್ಯಯನವೂ ಕೂಡ ಅವೆಲ್ಲವನ್ನೂ ಮತ್ತೆ ದೃಢಪಡಿಸಿದೆ. ನಮ್ಮಲ್ಲಿ ಮಕ್ಕಳು ಮತ್ತು ಯುವಕರ ಸಂಖ್ಯೆ ಅತಿ ಹೆಚ್ಚು; 60ಕ್ಕಿಂತ ಕೆಳಗಿನವರು ಜನಸಂಖ್ಯೆಯ ಶೇ.93ರಷ್ಟು, ಅಂದರೆ 127 ಕೋಟಿ ಇದ್ದಾರೆ. ಕೊರೊನಾ ಎಲ್ಲರನ್ನೂ ಸೋಂಕುವುದರಿಂದಾಗಿ ಸಹಜವಾಗಿಯೇ ಸೋಂಕುಗಳು ಕಿರಿಯರಲ್ಲೇ ಹೆಚ್ಚಿರುತ್ತವೆ. ಆದರೆ ಹಿರಿಯರು ಸೋಂಕಿನಿಂದ ಸಮಸ್ಯೆಗೀಡಾಗಿ ಆಸ್ಪತ್ರೆಗಳಿಗೆ ದಾಖಲಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ, ಮತ್ತು ಅಂಥವರಲ್ಲಿ ಸೋಂಕಿನ ಪರೀಕ್ಷೆಗಳನ್ನು ಮಾಡುವ ಸಾಧ್ಯತೆಗಳೂ ಹೆಚ್ಚಿರುವುದರಿಂದ, ಅವರು ಜನಸಂಖ್ಯೆಯ ಶೇ.7ರಷ್ಟೇ ಇದ್ದರೂ, ಸೋಂಕಿತರ ಸಂಖ್ಯೆಯಲ್ಲಿ ಶೇ.18-20ರಷ್ಟಿರುತ್ತಾರೆ. ಚೀನಾದ ವರದಿಗಳೊಂದಿಗೆ ಹೋಲಿಸಿ ಇದನ್ನೂ ಅಂದೇ ಬರೆದಿದ್ದೇನೆ. ಇಂದಿನ ವರದಿಯಲ್ಲಿ 60ಕ್ಕಿಂತ ಮೇಲ್ಪಟ್ಟ ಸೋಂಕಿತರ ಪ್ರಮಾಣವು 18.1ರಷ್ಟಿರುವುದಕ್ಕೂ ಅದೇ ಕಾರಣವನ್ನು ನೀಡಬಹುದು.
ಕೊರೊನಾ ತಗಲುವುದನ್ನು ತಡೆಯಲು ಕಷ್ಟ, ಇಂದಲ್ಲ ನಾಳೆ ಅದು ಎಲ್ಲರಿಗೂ ತಗಲುವ ಸಾಧ್ಯತೆಗಳಿವೆ. ಆದರೆ ಈಗ ಎಲ್ಲರಿಗೂ ಒಟ್ಟಿಗೇ ತಗಲಿದರೆ, ಅದರಲ್ಲಿ ಶೇ. 20ರಷ್ಟು ಸೋಂಕು ಹಿರಿಯರಲ್ಲೂ, ಇತರ ಸಮಸ್ಯೆಗಳುಳ್ಳವರಲ್ಲೂ ಆದರೆ, ಅವರಲ್ಲಿ ಶೇ.20- 30ರಷ್ಟು ಗಂಭೀರ ಸಮಸ್ಯೆಗಳಿಗೀಡಾದರೆ, ಅವರಲ್ಲಿ 30%ಕ್ಕೆ ಕೃತಕ ಉಸಿರಾಟ ಬೇಕಾದರೆ ಅವನ್ನೆಲ್ಲ ನಿಭಾಯಿಸುವ ಸಾಮರ್ಥ್ಯ ನಮ್ಮಲ್ಲಿ (ಶ್ರೀಮಂತ ದೇಶಗಳಲ್ಲೂ) ಇಲ್ಲ ಎನ್ನುವ ಕಾರಣಕ್ಕೆ ಹಲವರು ಸಾವನ್ನಪ್ಪುತ್ತಾರೆ. ಆದ್ದರಿಂದ ಕಿರಿಯರನ್ನೂ, ಮಕ್ಕಳನ್ನೂ ಮನೆಯೊಳಗೆ ಹಿರಿಯರೊಂದಿಗೆ ಕೂಡಿಟ್ಟರೆ ಹಿರಿಯರನ್ನು ಸೋಂಕಿನಿಂದ ರಕ್ಷಿಸಲು ಸಾಧ್ಯವಿಲ್ಲ. ಎಲ್ಲರನ್ನೂ ವರ್ಷಗಟ್ಟಲೆ ಹಾಗೆ ಮನೆಯೊಳಗೇ ಬಂಧಿಸಿಡುವುದಕ್ಕೆ ಸಾಧ್ಯವೂ ಇಲ್ಲ. ಕಿರಿಯರು ತರಕಾರಿ, ದಿನಸಿ ತರಲು ಹೊರಹೋದರೂ ಸೋಂಕಿತರಾಗಬಹುದು, ಮನೆಯಲ್ಲಿ ಹಿರಿಯರು ಜೊತೆಗಿದ್ದರೆ ಅವರಿಗೂ ತಗಲಬಹುದು. ಇದೇ ಕಾರಣಕ್ಕೆ ಹಿರಿಯರನ್ನೂ, ಅದಾಗಲೇ ಕಾಯಿಲೆಗಳುಳ್ಳವರನ್ನೂ ಪ್ರತ್ಯೇಕಿಸಿ, ಸುರಕ್ಷಿತವಾಗಿರಿಸುವುದೊಂದೇ ಕೊರೊನಾದಿಂದಾಗುವ ಸಾವುಗಳನ್ನು ತಡೆಯಲು ಇರುವ ಉಪಾಯ.
ಮೇ 24, 2020
ಮೇ 24, 2020
ಹೇಳಿದ್ದನ್ನು ಒಂದೊಂದಾಗಿ, ಬೇಗ ಬೇಗನೆ ಮಾಡಿ🙏
ಕೊರೊನಾ ಸೋಂಕಿನ ಲಕ್ಷಣಗಳಿರುವವರು ಆರಂಭದಲ್ಲಿ ಮನೆಯಲ್ಲೇ ಉಳಿಯಬೇಕು, ಸಹಾಯವಾಣಿಗೆ ಕರೆ ಮಾಡಬೇಕು, ಸಮಸ್ಯೆಯಿದ್ದವರನ್ನು ಮನೆಯಲ್ಲೇ ಪರೀಕ್ಷಿಸಲು ಸಂಚಾರಿ ಘಟಕಗಳು ಬೇಕು, ಅವುಗಳಲ್ಲಿ ಪ್ಲಸ್ ಆಕ್ಸಿಮೀಟರ್ ಇರಬೇಕು.
ತೀವ್ರ ಸಮಸ್ಯೆಯಾದವರನ್ನಷ್ಟೇ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕು
ತೀವ್ರ ಸಮಸ್ಯೆಗಳಾಗುವವರ ಸಂಖ್ಯೆ ಹೆಚ್ಚದಂತೆ ತಡೆಯಲು ಆ ಸಾಧ್ಯತೆಗಳಿರುವವರನ್ನು ಈಗಿಂದೀಗಲೇ ಪ್ರತ್ಯೇಕಿಸಬೇಕು.
ಸಚಿವರೇ, ಎರಡು ತಿಂಗಳಿಂದ ಹೇಳುತ್ತಲೇ ಬಂದಿರುವ ಇವೆಲ್ಲವನ್ನೂ ಈ ಕೂಡಲೇ ಮಾಡಿ.
Shut down when cases were 11, open when cases are more than 2500. Vishwa Guru style!
ಇಡೀ ರಾಜ್ಯದಲ್ಲಿ ಕೇವಲ ಹನ್ನೊಂದು ಪ್ರಕರಣಗಳಿದ್ದಾಗ ಮುಚ್ಚಿಹಾಕಿದ ಮಹಾಮಳಿಗೆಗಳು, ಚಿತ್ರಮಂದಿರಗಳು, ಹೋಟೆಲುಗಳು ಮುಂತಾದವನ್ನು ಈಗ ಪ್ರಕರಣಗಳು 2500ನ್ನು ಮೀರುತ್ತಿರುವಾಗ ತೆರೆಯಲಾಗುತ್ತದೆಯಂತೆ! ಮಾರ್ಚ್ 13ರ ನಿರ್ಧಾರವು ಮೂರ್ಖತನದ್ದಾಗಿತ್ತು ಎಂದು ಈಗಲಾದರೂ ಒಪ್ಪಿಕೊಳ್ಳಲು ಸರಕಾರವು ಸಿದ್ಧವಿದೆಯೇ?
Ravi said that around 90% of those infected are asymptomatic and are unlikely to transmit the virus, which leaves less than 10% who need hospitalisation and even fewer would require ventilator support. He further said that more should be done to protect the elderly, people with co-morbidities and other vulnerable sections of the population.
—–//
Dr Ravi is (was?) a member of the Task Force set up by Karnataka Govt. Why then did they enforce the lockdown? Why didn’t they implement these measures in these two months?
ಕರ್ನಾಟಕ ಸರಕಾರದ ಕೊರೊನಾ ಕಾರ್ಯಪಡೆಯ ಸದಸ್ಯರಾಗಿರುವ (?ಆಗಿದ್ದ) ಡಾ| ರವಿ ಅವರು ಡಿಸೆಂಬರ್ ವೇಳೆಗೆ 50% ಭಾರತೀಯರಿಗೆ ಕೊರೊನಾ ಸೋಂಕು ತಗಲಲಿದೆ, ತಡೆಯಲು ಸಾಧ್ಯವಿಲ್ಲ, ಹಿರಿವಯಸ್ಕರನ್ನು ಮತ್ತು ತೀವ್ರ ಕಾಯಿಲೆಯಾಗಬಲ್ಲವರನ್ನು ಪ್ರತ್ಯೇಕಿಸಿಡಬೇಕು ಎಂದೆಲ್ಲ ಹೇಳಿದ್ದಾರೆ. ಮಾರ್ಚ್ 13ರಿಂದ ಮೇ 29ರವರೆಗೆ ಇವನ್ನೆಲ್ಲ ಹೇಳಬಹುದಿತ್ತಲ್ಲವೇ? ಇವನ್ನು ಮಾಡಬಹುದಿತ್ತಲ್ಲವೇ?
ಕೇಂದ್ರವು ಅಂತರ ರಾಜ್ಯ ಪ್ರಯಾಣವನ್ನು ಮುಕ್ತಗೊಳಿಸಿದೆ, ಎರಡೂವರೆ ತಿಂಗಳಿಂದ ಮನೆಮಂದಿಯಿಂದ ಬೇರ್ಪಟ್ಟಿರುವವರಿಗೆ ಮನೆಗೆ ಮರಳಲು ರಾಜ್ಯ ಸರ್ಕಾರ ಬಿಡಲೇಬೇಕು.
ಮೇ 31, 2020
ಜೂನ್ 1, 2020
ನಮ್ಮದು ಎಲ್ಲವೂ ಹೀಗೆಯೇ – ತಿರುಗು ಮುರುಗು!
ಆಸ್ಪತ್ರೆ ಭರ್ತಿಯಾದರೆ ಮನೆಯಲ್ಲೇ ಚಿಕಿತ್ಸೆ ಅಂತೆ!
ಇದು ತಿರುಗುಮುರುಗಾಗಬೇಕು – ಶೇ 90ಕ್ಕೂ ಹೆಚ್ಚು ಕೊರೊನಾ ಸೋಂಕಿತರಿಗೆ ರೋಗಲಕ್ಷಣಗಳೇ ಇರುವುದಿಲ್ಲ, ಇದ್ದರೂ ಅತಿ ಸೌಮ್ಯವಾಗಿರುತ್ತವೆ, ಅಂಥವರೆಲ್ಲರೂ ಮನೆಯಲ್ಲೇ ಉಳಿಯಬೇಕು, ಪರೀಕ್ಷೆಯಾಗಲೀ, ಚಿಕಿತ್ಸೆಯಾಗಲೀ ಅಗತ್ಯವಿಲ್ಲ. ಹಾಗೆ ಮನೆಯಲ್ಲಿದ್ದವರಿಗೆ ಸಮಸ್ಯೆಗಳೇನಾದರೂ ಆರಂಭವಾದರೆ ಅಂಥವರು ಮಾತ್ರ ಆಸ್ಪತ್ರೆಗೆ ದಾಖಲಾಗಬೇಕು. ಇದೇ ವರದಿಯ ಕೊನೆಯಲ್ಲೂ ಅದನ್ನೇ ಹೇಳಲಾಗಿದೆ, ಆದರೆ ಮಾಡುತ್ತಿರುವುದು ಮಾತ್ರ ಉಲ್ಟಾ!
ಕೊರೊನಾ ಹಬ್ಬುತ್ತಿರುವಾಗ ಪೊಲೀಸ್ ಸಿಬಂದಿಯೂ ಸೋಂಕಿತರಾಗುತ್ತಾರೆ, ಈಗಾಗಲೇ ಅಂತಹ ಹಲವು ವರದಿಗಳಾಗಿವೆ, ಕೆಲವು ಪೊಲೀಸ್ ಠಾಣೆಗಳನ್ನು ಮುಚ್ಚಿಯೂ ಆಗಿದೆ. ನ್ಯೂಯಾರ್ಕ್ ನಂತಹ ನಗರಗಳಲ್ಲಿ ಶೇ.30ರಷ್ಟು ಪೊಲೀಸ್ ಸಿಬಂದಿ ಕೊರೊನಾ ಸೋಂಕಿತರಾಗಿ ರಜೆಯ ಮೇಲಿರಬೇಕಾಯಿತು. ಮುಂದಿನ ದಿನಗಳಲ್ಲಿ ನಮ್ಮಲ್ಲೂ ಇದೇ ಸ್ಥಿತಿಯುಂಟಾಗಬಹುದು. ಹಾಗಾದಾಗ ಗೃಹರಕ್ಷಕ ದಳದವರು ನಮಗೆ ಬೇಕೇ ಬೇಕು. ಈಗ ಅವರನ್ನು ಸೇವೆಯಿಂದ ತೆಗೆದರೆ, ಕೆಲವಾರಗಳ ಬಳಿಕ ಮತ್ತೆ ಕರೆಯುತ್ತೀರಾ?
ಕೊರೊನಾ ಹರಡುವುದು ನಿರೀಕ್ಷಿತವೇ. ಅದಕ್ಕೆ ಯಾರು ಯಾರನ್ನೋ ದೂಷಿಸುವುದಿನ್ನು ಸಾಕು; ಅದರಿಂದ ದೂಷಿಸುವವರಿಗೇ ತೊಂದರೆ, ಅವರ ದೇಹಕ್ಕೂ, ಮನಸ್ಸಿಗೂ ಕೆಡುಕು, ಅದಲ್ಲದೆ ಬೇರೇನೂ ಪ್ರಯೋಜನವಾಗದು.
ಬೇರೆಯವರು ಎಲ್ಲೆಲ್ಲಿದ್ದಾರೋ, ತಿಂಗಳುಗಳಿಂದ ತಮ್ಮ ಮನೆಯವರಿಂದ, ಹೆತ್ತವರಿಂದ ಬೇರ್ಪಟ್ಟಿದ್ದಾರೋ, ಎಷ್ಟು ಕಷ್ಟದಲ್ಲಿದ್ದಾರೋ, ಅಲ್ಲಲ್ಲೇ, ಹಾಗೆಯೇ ಇರಲಿ, ತನ್ನೂರಿಗೆ ಮಾತ್ರ ಅವರು ಬರುವುದು ಬೇಡ, ತನಗೆ ಕೊರೊನಾ ತಗಲುವುದು ಬೇಡ ಎಂದು ಆಶಿಸುವುದು ತೀರಾ ಅಮಾನವೀಯ, ಮಾತ್ರವಲ್ಲ, ಅದರಿಂದ ಕೊರೊನಾ ತಗಲದಂತೆ ತಡೆಯುವುದಕ್ಕೂ ಸಾಧ್ಯವಿಲ್ಲ; ಏಕೆಂದರೆ ಕೊರೊನಾ ಈಗಾಗಲೇ ಎಲ್ಲ ಊರುಗಳ ಬಳಿಗೆ ಬಂದಾಗಿದೆ, ಹೊಸದಾಗಿ ಯಾರೂ ಮತ್ತೆ ಹೊತ್ತು ತರಬೇಕಾಗಿಲ್ಲ.
ಕೊರೊನಾ ಬಂದಿದೆ, ಹಲವರಿಗೆ ಸೋಂಕಲಿದೆ, ಅವರಲ್ಲಿ ಶೇ 99 ಜನರಲ್ಲಿ ಯಾವ ಸಮಸ್ಯೆಯನ್ನೂ ಮಾಡದೆ ನಾಲ್ಕೈದು ದಿನಗಳ ಕೆಮ್ಮು-ನೆಗಡಿಯಾಗಿ ಹಾಗೆಯೇ ಹೋಗಲಿದೆ. ತೊಂದರೆಯಾಗಬಲ್ಲ ಆ 1% ಮಂದಿಯನ್ನೂ ಈಗಲೇ ಸುರಕ್ಷಿತವಾಗಿಟ್ಟರೆ ಅವರನ್ನೂ ಕಾಪಾಡಲು ಸಾಧ್ಯವಿದೆ; ಅದನ್ನು ಎಲ್ಲರೂ ಮಾಡೋಣ. ಇಂತಹದೊಂದು ಸೋಂಕಿನ ಭಯದಲ್ಲಿ ಮನುಷ್ಯರನ್ನೇ ದೂರವಿಟ್ಟು, ಮನುಷ್ಯತ್ವವನ್ನೇ ಕೊಲ್ಲುವುದು ಬೇಡ.
ಇದು ನಮ್ಮ ರಾಜ್ಯದ್ದೇ ವರದಿ. ಶೇ 96 ಸೋಂಕಿತರಲ್ಲಿ ರೋಗಲಕ್ಷಣಗಳನ್ನೇ ಉಂಟುಮಾಡದಿರುವ ಸೋಂಕಿಗೆ ಯಾಕಿಷ್ಟು ದಿಗ್ಬಂಧನ ಎನ್ನುವ ಪ್ರಶ್ನೆಯನ್ನು ಇನ್ನಾದರೂ ಕೇಳಿಕೊಳ್ಳಿ. ಮಾರ್ಚ್ ಮೊದಲ ವಾರದಿಂದಲೇ ಅನ್ಯ ದೇಶಗಳ ವರದಿಗಳನ್ನಾಧರಿಸಿ ಹೇಳುತ್ತಲೇ ಬಂದಿರುವ ಸತ್ಯವು ಈಗ ನಮ್ಮೆದುರಲ್ಲೇ ಇದೆ.
ಇಲ್ಲೂ ಕೂಡ ಮಕ್ಕಳಲ್ಲಿ ಸೋಂಕು ಅತ್ಯಂತ ಕಡಿಮೆ (ಇಲ್ಲಿ 8% ಇದೆ, ಆದರೆ ಸಾರ್ವತ್ರಿಕವಾಗಿ ಪರೀಕ್ಷೆ ನಡೆಸಿದ್ದೇ ಆದರೆ ಇದು 1% ಕ್ಕಿಂತ ಕಡಿಮೆಯಾಗಬಹುದು), ಸಮಸ್ಯೆಯಂತೂ ಇಲ್ಲವೇ ಇಲ್ಲ; ಶಾಲೆಗಳನ್ನು ಎಂದಿನಂತೆ ನಡೆಸುವುದಕ್ಕೆ ಈ ಕೂಡಲೇ ಸಿದ್ಧತೆಗಳನ್ನು ಮಾಡಬೇಕು.
ಇಲ್ಲೂ ಕೂಡ ಹಿರಿವಯಸ್ಕರು, ಅನ್ಯ ಕಾಯಿಲೆಗಳುಳ್ಳವರಲ್ಲಷ್ಟೇ ಗಂಭೀರ ಸಮಸ್ಯೆಗಳಾಗಿ ಸಾವುಗಳಾಗಿರುವುದು; ಅಂಥವರನ್ನು ಸುರಕ್ಷಿತವಾಗಿಟ್ಟು, ಉಳಿದವರನ್ನು ದಿಗ್ಬಂಧನದಿಂದ ಬಿಡುಗಡೆ ಮಾಡಿ; ಕೆಲಸ ಮಾಡಲು, ಅತ್ತಿತ್ತ ಓಡಾಡಲು, ಮನೆಮಂದಿಯ ಜೊತೆಗಿರಲು ಬಿಡಿ.
ಪ್ರಜಾವಾಣಿ, ಜೂನ್ 4, 2020
ಕೊರೊನಾದಿಂದ ಯಾವುದೇ ಸಮಸ್ಯೆಗಳಿಲ್ಲದವರಿಗೆ ಚಿಕಿತ್ಸೆ ಏನಿಲ್ಲ, ಅಗತ್ಯವೂ ಇಲ್ಲ; ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರಾಗಿದ್ದರೂ ರೋಗಲಕ್ಷಣಗಳಿಲ್ಲದವರನ್ನು, ಅಥವಾ ಸೌಮ್ಯವಾದ ರೋಗಲಕ್ಷಣಗಳಿರುವವರನ್ನು ಆಸ್ಪತ್ರೆಗೆ ಸೇರಿಸಲಾಗುವುದಿಲ್ಲ; ಮೊದಲಿಂದಲೂ ಬರೆದಿರುವಂತೆ, ಅವರೆಲ್ಲರೂ ಮನೆಯಲ್ಲೇ ಉಳಿಯಬಹುದೆಂದು ಹೇಳಲಾಗುತ್ತದೆ, ಸಮಸ್ಯೆಗಳಾದವರಷ್ಟೇ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.
ಎರಡನೆಯದಾಗಿ, ಅನ್ಯ ದೇಶಗಳಲ್ಲಿ ಕಂಡುಬಂದಿರುವಂತೆ ನಮ್ಮ ರಾಜ್ಯದಲ್ಲೂ ಕೂಡ ಶೇ.99ರಷ್ಟು ಮೃತರು ಮೊದಲೇ ಅನ್ಯ ಕಾಯಿಲೆಗಳನ್ನು ಹೊಂದಿದ್ದವರಾಗಿದ್ದರು ಎನ್ನುವುದು ಸ್ಪಷ್ಟವಾಗುತ್ತಿದೆ. ಕೊರೊನಾದಿಂದಾಗುವ ಸಮಸ್ಯೆಗಳನ್ನು ತಡೆಯಬೇಕಾದರೆ ಅಂಥವರನ್ನು ಈಗಲೇ ಪ್ರತ್ಯೇಕಿಸಿ, ರಕ್ಷಿಸಿಡುವುದಷ್ಟೇ ಜಾಣತನ. ಶಾಲೆಗಳನ್ನು ಮುಚ್ಚಿ, ಎಲ್ಲರನ್ನೂ ದಿಗ್ಬಂಧಿಸಿ, ದೇಶವನ್ನೇ ನಾಶ ಮಾಡುವುದು ಜಾಣತನವಲ್ಲ.
ಜೂನ್ 8, 2020
It has taken 3 months for Karnataka Govt and its so called experts to ‘mull’ about the plan that I had first suggested on March 13th! Wonder how many months more would they need to implement the plan!
ಮೊದಲಿಗೆ ನಾನು ಮಾರ್ಚ್ 13ರಂದು ಸೂಚಿಸಿದ್ದ ಕ್ರಮದ ಬಗ್ಗೆ ‘ಚಿಂತಿಸಲು’ ಕರ್ನಾಟಕ ಸರಕಾರ ಮತ್ತು ಅದರ ತಥಾಕಥಿತ ‘ತಜ್ಞರಿಗೆ’ 3 ತಿಂಗಳು ಬೇಕಾದವು. ಇದನ್ನು ಕಾರ್ಯಗತಗೊಳಿಸಲು ಇನ್ನೆಷ್ಟು ತಿಂಗಳು ಬೇಕೋ?
15-30% people in containment zones have likely been infected and quietly recovered. Actual number of cases may be 100-200 times the reported cases.
—-//
This is on expected lines. If cases are 100-200 times the reported cases, the real numbers would be 2.5-5 crores and the infection fatality rate would be 0.01-0.02%, similar to, or even lower than, what has been predicted by John Ioannides and team.
ದಿಗ್ಬಂಧಿತ ಪ್ರದೇಶಗಳಲ್ಲಿ 15-30% ಜನರಿಗೆ ಕೊರೊನಾ ಸೋಂಕು ತಗಲಿ, ಯಾವ ಲಕ್ಷಣಗಳನ್ನೂ ಉಂಟು ಮಾಡದೆ ತಾನಾಗಿ ಗುಣವಾಗಿರಬಹುದು ಎಂದು ಐಸಿಎಂಆರ್ ನಡೆಸಿರುವ ಅಧ್ಯಯನದ ಆಧಾರದಲ್ಲಿ ಹೇಳಲಾಗಿದೆ. ಹಾಗಾಗಿ, ಒಟ್ಟು ಪ್ರಕರಣಗಳ ಸಂಖ್ಯೆಯು ಈಗ ವರದಿಯಾಗಿರುವ ಸಂಖ್ಯೆಗಿಂತ 100-200 ಪಟ್ಟು ಹೆಚ್ಚಿರಬಹುದು ಎಂದು ಐಸಿಎಂಆರ್ ಹೇಳಿದೆ.
—-//
ಇದು ನಿರೀಕ್ಷೆಯಂತೆಯೇ ಇದೆ. ಒಟ್ಟು ಪ್ರಕರಣಗಳು 100-200 ಪಟ್ಟು ಹೆಚ್ಚಿರಬಹುದು ಎಂದರೆ, 2.5-5 ಕೋಟಿಗಳಷ್ಟಾಗುತ್ತವೆ. ಹಾಗಿದ್ದರೆ, ಸಾವಿನ ಪ್ರಮಾಣವು 0.01-0.02% ಅಷ್ಟೇ ಇದೆ ಎಂದಾಯಿತು. ಇದು ಸ್ಟಾನ್ ಫೋರ್ಡ್ ವಿವಿಯ ಜಾನ್ ಇಯೋನಿಡಿಸ್ ಮತ್ತಿತರರು ಹೇಳಿದಂತೆಯೇ ಇದೆ, ಅಥವಾ ತುಸು ಕಡಿಮೆಯೇ ಇದೆ.
ಸತ್ಯ ಕಹಿಯಾಗಿರುತ್ತದೆ ಎನ್ನುವುದು ವಾಡಿಕೆ. ಆದರೆ ಕೊರೊನಾ ಸೋಂಕಿನ ವಿಚಾರದಲ್ಲಿ ಸತ್ಯವು ಅಷ್ಟೊಂದು ಕಹಿಯಾಗಿಲ್ಲ, ಸಿಹಿಯೇ ಆಗಿದೆ ಎನ್ನಬಹುದು. ಕೊರೊನಾ ಸೋಂಕಿತರಲ್ಲಿ ಶೇ 80ಕ್ಕೂ ಹೆಚ್ಚು ಮಂದಿಗೆ ರೋಗಲಕ್ಷಣಗಳೇ ಇರುವುದಿಲ್ಲ, ಮಕ್ಕಳಿಗೆ ಕೊರೊನಾದಿಂದ ಸಮಸ್ಯೆಯಾಗುವುದಿಲ್ಲ, ಶಾಲೆಗಳನ್ನು ಮುಚ್ಚುವ ಅಗತ್ಯವಿಲ್ಲ, ಕೇವಲ 1% ಮಂದಿಗೆ ಮಾತ್ರ ಸಮಸ್ಯೆಗಳಾಗುತ್ತವೆ, 0.04% ಮಂದಿ ಸಾವನ್ನಪ್ಪಬಹುದು, ಅವರಲ್ಲಿ 99%ದಷ್ಟು ಮೊದಲೇ ಇತರ ಕಾಯಿಲೆಗಳಿಂದ ಬಳಲುತ್ತಿರುವವರಾಗಿರುತ್ತಾರೆ, ಅಂಥವರನ್ನು ಸೋಂಕು ತಗಲದಂತೆ ಸುರಕ್ಷಿತವಾಗಿರಿಸಿದರೆ ಅವರನ್ನೂ ಕಾಪಾಡಲು ಸಾಧ್ಯವಿದೆ ಎಂಬ ಸತ್ಯಗಳೆಲ್ಲವೂ ಈಗ ಸುಸ್ಪಷ್ಟವಾಗಿವೆ.
ಆದರೆ ಈ ಸತ್ಯಗಳು ಹಲವರಿಗೆ ರುಚಿಸುತ್ತಿಲ್ಲ, ಇಷ್ಟವಾಗುತ್ತಿಲ್ಲ. ಅಂಥವರಿಗೆ ಸಿಹಿಯೇ ಕಹಿ ಎನಿಸುತ್ತಿದೆಯೋ ಏನೋ?
“The infection fatality rate is very low at 0.08%,’’ ICMR Director General Dr. Balram Bhargava said
—–//
ಇದು ಮೊದಲೇ ತಿಳಿದಿರಲಿಲ್ಲವೇ? ಸ್ಟಾನ್ ಫೋರ್ಡ್ ವಿವಿಯ ತಜ್ಞರು ಎರಡು ತಿಂಗಳ ಹಿಂದೆಯೇ ಮಾಡಿದ್ದ ಲೆಕ್ಕಾಚಾರಗಳಲ್ಲಿ ಕೊರೊನಾ ಸೋಂಕಿನಿಂದ ಸಾವಿನ ಪ್ರಮಾಣವು 0.04-0.5% ಇರಬಹುದು ಎಂದು ಅಂದಾಜಿಸಿದ್ದರು. ನಮ್ಮ ದೇಶದಲ್ಲಿ ನಡೆಸಲಾಗಿರುವ ಅಧ್ಯಯನಗಳಲ್ಲಿ ಅದೀಗ 0.08% ಇದೆ ಎಂದು ಐಸಿಎಂಆರ್ ಹೇಳಿದೆ. ಅಂದರೆ 10 ಸಾವಿರ ಕೊರೊನಾ ಸೋಂಕಿತರಲ್ಲಿ 8 ಸಾವುಗಳಾಗಿವೆ, 9992 ಸೋಂಕಿತರು ಗುಣಮುಖರಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ರೋಗಲಕ್ಷಣಗಳೇ ಇಲ್ಲದೆ, ಯಾವುದೇ ಚಿಕಿತ್ಸೆಯ ಅಗತ್ಯವೂ ಇಲ್ಲದೆ ತಾವಾಗಿ ಗುಣ ಹೊಂದಿರುತ್ತಾರೆ. ಶೇ. 1ರಷ್ಟು ಸೋಂಕಿತರಲ್ಲಿ (10 ಸಾವಿರಕ್ಕೆ 100 ಮಂದಿಗೆ) ಸಮಸ್ಯೆಗಳಾಗಿ ಆಸ್ಪತ್ರೆಗಳಿಗೆ ದಾಖಲಾಗಬೇಕಾಗಬಹುದು, ಆ ನೂರರಲ್ಲೂ 92 ಮಂದಿ ಆಮ್ಲಜನಕ, ಅಗತ್ಯವಿದ್ದರೆ ಕೃತಕ ಉಸಿರಾಟದ ನೆರವಿನಿಂದ ಚೇತರಿಸಿಕೊಳ್ಳುತ್ತಾರೆ.
ಇನ್ನಾದರೂ ಕೊರೊನಾ ಮಹಾಮಾರಿ, ಎಲ್ಲರನ್ನೂ ಕೊಲ್ಲುತ್ತದೆ, ಎಂಬೆಲ್ಲ ಸುಳ್ಳುಗಳನ್ನು ಕೊನೆಗೊಳಿಸಿ, ಜನರಿಗೆ ಸತ್ಯವನ್ನು ತಿಳಿಸಿ, ಧೈರ್ಯವಾಗಿ ತಮ್ಮ ತಮ್ಮ ಕೆಲಸಗಳನ್ನು ಮಾಡಲು ಹೇಳಬೇಕು, ಶಾಲೆಗಳನ್ನು ತೆರೆದು ಮಕ್ಕಳು ಎಂದಿನಂತೆ ಆನಂದದಿಂದ ಆಡಿ ಕಲಿಯಲು ಅವಕಾಶ ನೀಡಬೇಕು. ಎಚ್ಚರವಾಗಿದ್ದರೆ ಸಾಕು, ಭಯ, ಆತಂಕ ಬೇಡ. ಪದೇ ಪದೇ ಹೇಳುತ್ತಲೇ ಬಂದಂತೆ, ಹಿರಿವಯಸ್ಕರು, ಸಕ್ಕರೆ ಕಾಯಿಲೆ, ರಕ್ತದ ಏರೊತ್ತಡ ಇತ್ಯಾದಿ ಗಂಭೀರ ಸಮಸ್ಯೆಗಳಿದ್ದವರನ್ನು ಸುರಕ್ಷಿತವಾಗಿಟ್ಟರೆ ಈ 0.08% ಸಾವುಗಳಲ್ಲೂ ಹಲವನ್ನು ತಡೆಯಬಹುದು.
ಕೊರೋನಾ ಸೋಂಕಿತರನ್ನು ನಿಭಾಯಿಸುವ ಸಾಕ್ಷ್ಯಾಧಾರಿತ ಕಾರ್ಯವಿಧಾನವನ್ನು ಏಪ್ರಿಲ್ 22ರಂದು ನಾವು ರಾಜ್ಯ ಸರಕಾರಕ್ಕೆ ಕಳುಹಿಸಿದ್ದೆವು. ಅದನ್ನು ಹೋಲುವ ಕಾರ್ಯವಿಧಾನವೊಂದನ್ನು ರಾಜ್ಯ ಸರಕಾರವು ನಿನ್ನೆ, ಜೂನ್ 19ರಂದು, ಪ್ರಕಟಿಸಿದೆ.
ರೋಗಲಕ್ಷಣಗಳಿಲ್ಲದವರನ್ನು ಮತ್ತು ಸೌಮ್ಯವಾದ ರೋಗಲಕ್ಷಣಗಳುಳ್ಳವರನ್ನು ಮನೆಯಲ್ಲೇ ಉಳಿಯಲು ಹೇಳಬೇಕು, ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ ಎಂದು ಇಟಲಿ, ಬ್ರಿಟನ್, ಅಮೆರಿಕಗಳ ವೈದ್ಯರ ಅನುಭವಗಳ ಆಧಾರದಲ್ಲಿ ನಾವು ಸೂಚಿಸಿದ್ದೆವು. ಸರಕಾರವು ಪ್ರಕಟಿಸಿರುವ ಕಾರ್ಯವಿಧಾನದಲ್ಲಿ ಅಂಥವರನ್ನು ಕೂಡ ಕೋವಿಡ್ ಆರೈಕೆಯ ಕೇಂದ್ರಗಳಿಗೆ ದಾಖಲಿಸುವಂತೆ ಹೇಳಲಾಗಿದೆ. ಇದು ಅನಗತ್ಯ ಮಾತ್ರವಲ್ಲ, ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು.
ಮೊದಲನೆಯದಾಗಿ, ಮುಂದಿನ ದಿನಗಳಲ್ಲಿ ಸೋಂಕು ಇನ್ನಷ್ಟು ಹರಡಿದಾಗ ರೋಗಲಕ್ಷಣಗಳಿಲ್ಲದ ಸೋಂಕಿತರು ಎಂಬ ವರ್ಗವೇ ಕಾಣಸಿಗದು – ಈಗ, ಪರವೂರುಗಳಿಂದ ಮರಳಿ ಬಂದವರು, ಸೋಂಕಿತರ ಸಂಪರ್ಕಕ್ಕೆ ಬಂದವರು ಎಂದೆಲ್ಲ ಹಲವರಲ್ಲಿ ಕೊರೋನ ಪತ್ತೆಯ ಪರೀಕ್ಷೆಗಳನ್ನು ನಡೆಸಲಾಗುತ್ತಿರುವುದರಿಂದ, ರೋಗಲಕ್ಷಣಗಳಿಲ್ಲದಿದ್ದರೂ ಸೋಂಕು ಪತ್ತೆಯಾಗುತ್ತಿದೆ; ಈಗಾಗಲೇ ವರದಿಯಾಗಿರುವಂತೆ, ನಮ್ಮ ರಾಜ್ಯದಲ್ಲಿ ಹೀಗೆ ಸೋಂಕು ಪತ್ತೆಯಾದ 95% ಜನರಲ್ಲಿ ರೋಗಲಕ್ಷಣಗಳೇ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಹೀಗೆ ಪರೀಕ್ಷೆ ಮಾಡುವುದು ಇಲ್ಲದಾದಾಗ, ರೋಗಲಕ್ಷಣಗಳಿಲ್ಲದವರಲ್ಲಿ ಸೋಂಕು ಪತ್ತೆಯಾಗುವ ಸಾಧ್ಯತೆಗಳಿಲ್ಲ, ಆದ್ದರಿಂದ ರೋಗಲಕ್ಷಣಗಳಿಲ್ಲದ ಸೋಂಕಿತರು ಗುರುತಿಸಲ್ಪಡುವುದಿಲ್ಲ. ಆದ್ದರಿಂದ ಈ ವರ್ಗದಡಿಯಲ್ಲಿ ಯಾರನ್ನು ಈ ಕೇಂದ್ರಗಳಿಗೆ ಒಯ್ಯಲಾಗುತ್ತದೆ ಎನ್ನುವುದು ಸ್ಪಷ್ಟವಿಲ್ಲ. ಶೇ.70-95 ಸೋಂಕಿತರು ರೋಗಲಕ್ಷಣಗಳಿಲ್ಲದವರೇ ಆಗಿರುವುದರಿಂದ ಅಷ್ಟು ಜನರಿಗೆ ಯಾವುದೇ ಚಿಕಿತ್ಸೆಯಾಗಲೀ, ಪರೀಕ್ಷೆಯಾಗಲೀ, ಆಸ್ಪತ್ರೆ ಅಥವಾ ಆರೈಕೆ ಕೇಂದ್ರಗಳಾಗಲೀ ಅಗತ್ಯವೇ ಇಲ್ಲ.
ಎರಡನೆಯದಾಗಿ, ಸೌಮ್ಯವಾದ ರೋಗಲಕ್ಷಣಗಳಿರುವ, ಯಾವುದೇ ಇತರ ಗಂಭೀರ ಕಾಯಿಲೆಗಳಿಲ್ಲದಿರುವ ಸೋಂಕಿತರಿಗೂ ಯಾವುದೇ ಚಿಕಿತ್ಸೆಯಾಗಲೀ, ಪರೀಕ್ಷೆಯಾಗಲೀ, ಆಸ್ಪತ್ರೆ ಅಥವಾ ಆರೈಕೆ ಕೇಂದ್ರಗಳಾಗಲೀ ಅಗತ್ಯವಿಲ್ಲ. ರೋಗಲಕ್ಷಣಗಳುಂಟಾಗುವ ಸೋಂಕಿತರಲ್ಲೂ ಹೆಚ್ಚಿನವರು ಇದೇ ವರ್ಗಕ್ಕೆ ಸೇರಿರುತ್ತಾರೆ.
ಆದ್ದರಿಂದ, ಇಂಥವರನ್ನು ಆಸ್ಪತ್ರೆ/ಆರೈಕೆ ಕೇಂದ್ರಗಳಿಗೆ ದಾಖಲಿಸಬೇಕೆನ್ನುವ ಸೂಚನೆಯನ್ನು ಬದಲಿಸಿ, ಮನೆಯಲ್ಲೇ ಆರೈಕೆ ಮಾಡುವಂತೆ ಸೂಚಿಸಬೇಕು. ಇಲ್ಲವಾದರೆ ಅನಗತ್ಯವಾಗಿ ಅವರನ್ನೆಲ್ಲ ಮನೆಯಿಂದ ಹೊರಗಿರಿಸಿ ಮನೆಯವರಿಗೆ ಎಲ್ಲ ರೀತಿಯ ಸಮಸ್ಯೆಗಳು ಮತ್ತು ಖರ್ಚು ಆಗುವುದರ ಜೊತೆಗೆ, ಸರಕಾರದ ಮೇಲೂ, ಆರೋಗ್ಯ ಸೇವೆಗಳ ಮೇಲೂ ಒತ್ತಡಗಳುಂಟಾಗುತ್ತವೆ.
ಹೀಗೆ ಎಲ್ಲರನ್ನೂ ದಾಖಲಿಸುವುದರಿಂದ ಗಂಭೀರ ಸಮಸ್ಯೆಗಳಾದವರಿಗೆ ಆಸ್ಪತ್ರೆ ಸೌಲಭ್ಯಗಳು ದೊರೆಯದಂತಾಗುತ್ತವೆ. ಮುಂಬಯಿ, ದಿಲ್ಲಿಗಳಲ್ಲಿ ಈಗಾಗಲೇ ಅಂತಹ ಸ್ಥಿತಿಯುಂಟಾಗಿರುವುದನ್ನು, ಇಟಲಿ, ಅಮೆರಿಕದ ವೈದ್ಯರು ಈ ಬಗ್ಗೆ ಮೊದಲೇ ಎಚ್ಚರಿಕೆ ನೀಡಿರುವುದನ್ನು ನಮ್ಮ ರಾಜ್ಯದವರು ಗಮನಿಸಬೇಕಾಗಿದೆ.
ಜೂನ್ 21, 2020
ಕೊರೋನ ನಿಯಂತ್ರಣ ನಮ್ಮಿಂದಲೇ ಸಾಧ್ಯ : ವಾರ್ತಾಭಾರತಿ ವಿಡಿಯೋ
Favipiravir for the treatment of COVID-19. This drug, originally invented by a Japanese company, was meant to treat influenza. After the outbreak of COVID-19, doctors in China and Russia started using it to treat COVID-19 patients although there is no scientific consensus on the efficacy of the drug.
ಕೊರೋನಾ ಸೋಂಕನ್ನು ತಡೆಯುವುದಕ್ಕೆ, ಗುಣಪಡಿಸುವುದಕ್ಕೆ ಯಾವ ವೈರಾಣು ನಿರೋಧಕ ಔಷಧವೂ ಸದ್ಯಕ್ಕಿಲ್ಲ, ಅದರ ಅಗತ್ಯವೂ ಇಲ್ಲ.
ಶೇ 1ಕ್ಕಿಂತ ಕಡಿಮೆ ಸೋಂಕಿತರಲ್ಲಿ ಸೋಂಕು ಉಲ್ಬಣವಾಗಬಹುದು, ಅಂಥವರಲ್ಲಿ 2/3 ರಿಗೆ ಕೇವಲ ಆಮ್ಲಜನಕ ಕೊಟ್ಟರೆ ಸಾಕಾಗುತ್ತದೆ; ಉಳಿದವರಿಗೆ ತೀವ್ರ ನಿಗಾ ಘಟಕದಲ್ಲಿ ಉನ್ನತ ಮಟ್ಟದ ಚಿಕಿತ್ಸೆ, ಅಂದರೆ ಆಗಿರುವ ಸಮಸ್ಯೆಗಳನ್ನು ನಿಭಾಯಿಸುವ ಚಿಕಿತ್ಸೆ (ಉಸಿರಾಟಕ್ಕೆ ನೆರವು, ಅಗತ್ಯವಿದ್ದರೆ ಡಯಾಲಿಸಿಸ್, ರಕ್ತದೊತ್ತಡ ಇಳಿದಿದ್ದರೆ ಅದಕ್ಕೆ ಬೇಕಾದ ನೆರವು ಇತ್ಯಾದಿ) ಬೇಕಾಗಬಹುದು. ಅದನ್ನು ನೀಡುವ ಕ್ಷಮತೆ ನಮ್ಮ ಆಧುನಿಕ ವೈದ್ಯವಿಜ್ಞಾನಕ್ಕಿದೆ, ಈ ಮೊದಲಿನಿಂದಲೂ ಅದನ್ನು ಮಾಡುತ್ತಿದ್ದೇವೆ, ಈಗಲೂ ಮಾಡಲಿದ್ದೇವೆ.
ಆಯುರ್ವೇದ, ಹೋಮಿಯೋ ಇತ್ಯಾದಿಗಳೂ ಅಗತ್ಯವಿಲ್ಲ, ಪ್ರಯೋಜನವೂ ಇಲ್ಲ. ಇವುಗಳಿಲ್ಲದೆಯೇ 60 ಲಕ್ಷಕ್ಕೂ ಹೆಚ್ಚು ಸೋಂಕಿತರು, ನಮ್ಮ ದೇಶದಲ್ಲಿ 4 ಲಕ್ಷಕ್ಕೂ ಹೆಚ್ಚು ಸೋಂಕಿತರು, ಈಗಾಗಲೇ ಗುಣ ಹೊಂದಿದ್ದಾರೆ. ಸ್ವಪ್ರಚಾರದ ಸುಳ್ಳುಗಳು ಅಲ್ಲೇ ಬದಿಗಿರಲಿ.
ಕೊರೋನಾ ಸೋಂಕು ಹರಡುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನಿನ್ನೆಯಷ್ಟೇ ಬಿಡುಗಡೆ ಮಾಡಿರುವ ಸವಿವರವಾದ ಪ್ರಕಟಣೆ ಇಲ್ಲಿದೆ.
ಕೊರೋನಾ ಸೋಂಕು ಗಾಳಿಯಿಂದ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲೂ ಹೇಳಿಲ್ಲ. ಆಸ್ಪತ್ರೆಗಳಲ್ಲಿ ಚಿಕಿತ್ಸಾಕ್ರಿಯೆಗಳ ವೇಳೆ (ಗಂಟಲನ್ನು, ಶ್ವಾಸನಾಳಗಳನ್ನು ಪರೀಕ್ಷಿಸಲು ದರ್ಶಕಗಳನ್ನು ಬಳಸುವಾಗ) ಅದು ಗಾಳಿಗೆ ಚಿಮ್ಮುವ ಸಾಧ್ಯತೆಗಳಿವೆ; ಹಾಡುವ ತಂಡಕ್ಕೆ, ಭೋಜನಾಲಯದಲ್ಲಿ ಮತ್ತು ವ್ಯಾಯಾಮ ತರಗತಿಯಲ್ಲಿ ಅದು ಹರಡಿರುವ ಕೆಲವು ನಿರ್ದಿಷ್ಟ ಪ್ರಕರಣಗಳು ವರದಿಯಾಗಿವೆ ಎಂದಷ್ಟೇ ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನಗಳಾಗಬೇಕೆಂದು ಕೂಡ ಅದು ಸ್ಪಷ್ಟವಾಗಿ ಹೇಳಿದೆ.
ಆದ್ದರಿಂದ ‘ಗಾಳಿಯಿಂದ ಕೊರೋನಾ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿದೆ’ ಎನ್ನುವುದು ತೀರಾ ಅಸಂಬದ್ಧವಾದ ಹೇಳಿಕೆಯಾಗುತ್ತದೆ. ಇನ್ನಾದರೂ ಸ್ವಲ್ಪ ಮೂಲವನ್ನು ಹುಡುಕಿ ಸತ್ಯವನ್ನು ತಿಳಿಯುವ ಪ್ರಯತ್ನ ಮಾಡಿ. ಮೋಸ ಹೋದದ್ದು ಸಾಕು.
Main findings
Current evidence suggests that transmission of SARS-CoV-2 occurs primarily between people through direct, indirect, or close contact with infected people through infected secretions such as saliva and respiratory secretions, or through their respiratory droplets, which are expelled when an infected person coughs, sneezes, talks or sings.
Airborne transmission of the virus can occur in health care settings where specific medical procedures, called aerosol generating procedures, generate very small droplets called aerosols. Some outbreak reports related to indoor crowded spaces have suggested the possibility of aerosol transmission, combined with droplet transmission, for example, during choir practice, in restaurants or in fitness classes.
Respiratory droplets from infected individuals can also land on objects, creating fomites (contaminated surfaces). As environmental contamination has been documented by many reports, it is likely that people can also be infected by touching these surfaces and touching their eyes, nose or mouth before cleaning their hands.
Based on what we currently know, transmission of COVID-19 is primarily occurring from people when they have symptoms, and can also occur just before they develop symptoms, when they are in close proximity to others for prolonged periods of time. While someone who never develops symptoms can also pass the virus to others, it is still not clear to what extent this occurs and more research is needed in this area.
Urgent high-quality research is needed to elucidate the relative importance of different transmission routes; the role of airborne transmission in the absence of aerosol generating procedures; the dose of virus required for transmission to occur; the settings and risk factors for superspreading events; and the extent of asymptomatic and pre-symptomatic transmission.
Fever, cough, sore throat, runny nose, sudden loss of smell and taste and diarrhea are the symptoms of COVID 19. Anyone who develops these symptoms must stay at home. Call and inform the Help Line 14410.
There is no need at all to go here and there seeking tests and treatment. COVID 19 is a self limiting infection, meaning, it gets cured by one’s own immune system, in more than 99% cases. There is no need for any tablets, or Kashaya, or AYUSH or the so called immunity boosters. All over the world, of the 1.25 crore cases reported, more than 75 lakhs, and in India, of the 8.5 lakhs, more than 5.5 lakhs, have already recovered without any Kashaya or AYUSH, and most of the remaining will recover too.
The risk of COVID 19 worsening is higher in those aged 60 or above, and those who are suffering from severe diabetes, hypertension, coronary or cerebrovascular diseases (heart attack, stroke), chronic diseases of the lungs, kidneys and liver, and severe obesity. Such people must protect themselves from the infection and if they get the infection and start showing the symptoms, must keenly observe the status of their body and report to the hospitals at the earliest signs or symptoms of worsening.
More than 99% cases of COVID 19 recover within 3-4 days. Continuing or worsening symptoms may indicate development of severe COVID 19. Continuing or increasing fever, worsening cough, onset of difficulty in breathing, that is worse on walking or lying down, are indicators of severe COVID 19. Anyone with these symptoms must immediately report to a hospital.
COVID 19 affects the lungs and disturbs oxygenation of blood. If the infection worsens, the oxygen saturation in the blood starts dropping. By monitoring the oxygen saturation, one can identify worsening infection at an early stage. A simple device called pulse oximeter (cost Rs. 2000-4000), when clipped to a finger, shows, within a minute, the oxygen saturation and pulse rate. In a normal individual, the oxygen saturation (SpO2) is 97-100% and pulse rate (PR) is 60-100 per minute. SpO2 below 95% and the PR above 100 may indicate severe COVID 19. Patients of chronic lung disease may have a lower SpO2 even otherwise and in such patients, a drop in saturation by 4% or more after walking for 6 minutes may suggest worsening COVID 19. Such patients must immediately go to a hospital.
Summary:
In more than 99% cases, COVID 19 gets cured by the body itself, there is no need for any tests, or any medications. Therefore, anyone with symptoms of COVID 19 must stay at home, isolate from others to prevent its spread. Inform the Help Line 14410.
Those who have risks for severe COVID 19 must take precautions. If such patients develop symptoms, they must keenly watch for worsening illness, usually after 6-7 days of the onset. They can monitor the blood oxygen saturation with the help of pulse oximeter and if SpO2 drops below 95%, they must go to a hospital immediately.
ಕೊರೋನಾ: ನಾವೇನು ಮಾಡೋಣ?
ಜ್ವರ, ಕೆಮ್ಮು, ಗಂಟಲು ಕೆರೆತ/ನೋವು, ನೆಗಡಿ, ವಾಸನೆ-ರುಚಿ ತಿಳಿಯದಾಗುವುದು, ಭೇದಿ ಕೊರೋನಾ ಸೋಂಕಿನ ಲಕ್ಷಣಗಳು. ಇವು ತೊಡಗಿದರೆ ಮನೆಯಲ್ಲೇ ಉಳಿಯಿರಿ. ಸಹಾಯವಾಣಿ 14410ಗೆ ಕರೆ ಮಾಡಿ ತಿಳಿಸಿ.
ಕೊರೋನಾ ಪತ್ತೆಯ ಪರೀಕ್ಷೆ, ಚಿಕಿತ್ಸೆ ಎಂದು ಅಲ್ಲಿಲ್ಲಿ ಓಡಾಡಬೇಡಿ. 99% ಜನರಲ್ಲಿ ಕೊರೋನಾ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೆ ತಾನಾಗಿ ವಾಸಿಯಾಗುತ್ತದೆ. ಕಷಾಯ, ಆಯುಷ್ ಯಾವುದೂ ಅಗತ್ಯವಿಲ್ಲ. ಈಗಾಗಲೇ ವಿಶ್ವದಲ್ಲಿ 1 ಕೋಟಿ 25 ಲಕ್ಷದಲ್ಲಿ 75 ಲಕ್ಷಕ್ಕೂ ಹೆಚ್ಚು, ಭಾರತದಲ್ಲಿ ಎಂಟೂವರೆ ಲಕ್ಷದಲ್ಲಿ ಐದೂವರೆ ಲಕ್ಷದಷ್ಟು, ಇಂಥ ಕಷಾಯ ಗಿಷಾಯ ಆಯುಷ್ ಇಲ್ಲದೆ ಗುಣವಾಗಿದ್ದಾರೆ, ಉಳಿದವರೂ ಆಗಲಿದ್ದಾರೆ.
ಕೊರೋನಾದಿಂದ ಸಮಸ್ಯೆಗಳಾಗುವುದು 60ಕ್ಕೆ ಮೇಲ್ಪಟ್ಟವರಲ್ಲಿ, ಅಥವಾ ಮೊದಲೇ ಇತರ ಸಮಸ್ಯೆಗಳಿದ್ದವರಲ್ಲಿ – ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಹೃದಯ/ಮಿದುಳಿನ ರಕ್ತನಾಳಗಳ ಕಾಯಿಲೆ, ವಿಪರೀತ ಬೊಜ್ಜು, ಶ್ವಾಸಕೋಶಗಳು ಅಥವಾ ಮೂತ್ರಪಿಂಡಗಳು ಅಥವಾ ಯಕೃತ್ತಿನ ದೀರ್ಘಕಾಲದ ಕಾಯಿಲೆಗಳು ಇದ್ದವರಲ್ಲಿ. ಇಂಥವರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ತೊಡಗಿದರೆ ತಮ್ಮ ದೇಹದ ಸ್ಥಿತಿಗತಿಯನ್ನು ಎಚ್ಚರಿಕೆಯಿಂದ ಗಮನಿಸಬೇಕು. ರೋಗವು ಉಲ್ಬಣಿಸುವ ಸೂಚನೆಗಳಿದ್ದರೆ ತಡಮಾಡದೆ ಆಸ್ಪತ್ರೆಗೆ ಹೋಗಲೇಬೇಕು.
ಹೆಚ್ಚಿನವರಲ್ಲಿ ಕೊರೋನಾ ಸೋಂಕು 3-4 ದಿನಗಳಲ್ಲಿ ತಾನಾಗಿ ವಾಸಿಯಾಗುತ್ತದೆ. ಕೊರೋನಾ ರೋಗವು ಉಲ್ಬಣಿಸುವವರಲ್ಲಿ ಅದರ ಲಕ್ಷಣಗಳು ಮತ್ತೆಯೂ ಮುಂದುವರಿಯುತ್ತವೆ, ಸಾಧಾರಣವಾಗಿ 6-7ನೇ ದಿನಗಳಾದಾಗ ರೋಗವು ಉಲ್ಬಣಗೊಳ್ಳುವ ಲಕ್ಷಣಗಳು ಆರಂಭಗೊಂಡು, 10-11ನೇ ದಿನಕ್ಕೆ ತೀವ್ರ ಸ್ಥಿತಿಗೆ ತಲುಪುತ್ತದೆ. ಅಂಥವರಲ್ಲಿ ಜ್ವರವು ಮುಂದುವರಿಯುತ್ತದೆ, ಅಥವಾ ಇನ್ನಷ್ಟು ಏರುತ್ತದೆ, ಕೆಮ್ಮು ಹೆಚ್ಚುತ್ತದೆ, ಉಸಿರಾಟಕ್ಕೆ ಕಷ್ಟವೆನಿಸುತ್ತದೆ, ಮಲಗಿದಾಗ, ನಡೆದಾಡುವಾಗ ಉಸಿರಾಟದ ಕಷ್ಟವೂ ಹೆಚ್ಚುತ್ತದೆ. ಇಂಥ ಲಕ್ಷಣಗಳಿದ್ದವರು ಆ ಕೂಡಲೇ ಆಸ್ಪತ್ರೆಗೆ ಹೋಗಲೇಬೇಕು.
ಕೊರೋನಾ ರೋಗದಲ್ಲಿ ಶ್ವಾಸಕೋಶಗಳಿಗೆ ಸಮಸ್ಯೆಯಾಗುವುದರಿಂದ ಅಲ್ಲಿ ರಕ್ತಕ್ಕೆ ಆಮ್ಲಜನಕವು ಬೆರೆಯುವುದಕ್ಕೆ ಅಡ್ಡಿಯಾಗುತ್ತದೆ, ಇದರಿಂದಾಗಿ ರಕ್ತದಲ್ಲಿ ಆಮ್ಲಜನಕದ ಮಟ್ಟವು ಇಳಿಯತೊಡಗುತ್ತದೆ. ರಕ್ತದಲ್ಲಿ ಆಮ್ಲಜನಕದ ಮಟ್ಟವನ್ನು ನೋಡಿಕೊಂಡಿದ್ದರೆ ಕೊರೋನಾ ರೋಗವು ಉಲ್ಬಣಿಸುವುದನ್ನು ಬೇಗನೇ ಗುರುತಿಸಬಹುದು. ಪಲ್ಸ್ ಆಕ್ಸಿಮೀಟರ್ (2000-4000 ರೂ ಬೆಲೆ) ಎಂಬ ಸರಳವಾದ ಸಾಧನವನ್ನು ಬೆರಳಿಗೆ ಸಿಕ್ಕಿಸಿಕೊಂಡರೆ ನಿಮಿಷದೊಳಗೆ ರಕ್ತದ ಆಮ್ಲಜನಕದ ಮಟ್ಟವು (SpO2) ತಿಳಿಯುತ್ತದೆ. ಅದೇ ಉಪಕರಣವು ನಾಡಿಯ ಗತಿಯನ್ನೂ (PR) ತೋರಿಸುತ್ತದೆ. SpO2 ಸಾಮಾನ್ಯವಾಗಿ 97-100% ಇರುತ್ತದೆ, PR 60-100 ಇರುತ್ತದೆ. SpO2 95%ಕ್ಕಿಂತ ಕೆಳಗಿಳಿದರೆ, ಮತ್ತು PR 100 ನ್ನು ಮೀರಿದರೆ ಕೊರೋನಾ ರೋಗವು ಉಲ್ಬಣಿಸುವುದರ ಸೂಚನೆಯಾಗಿರಬಹುದು. ಮೊದಲೇ ಶ್ವಾಸಕೋಶಗಳ ಸಮಸ್ಯೆಯಿದ್ದವರಲ್ಲಿ SpO2 ಮೊದಲೇ ಕಡಿಮೆಯಿರಬಹುದು; ಅಂಥವರು 6 ನಿಮಿಷ ನಡೆದಾಡಿ ಮತ್ತೆ SpO2 ನೋಡಿದಾಗ ಅದು ಮೊದಲಿದ್ದುದಕ್ಕಿಂತ 4% ಇಳಿದರೆ ಕೊರೋನಾ ಉಲ್ಬಣಿಸುವುದರ ಸೂಚನೆಯೆಂದು ಪರಿಗಣಿಸಬೇಕು.
ಸಾರಾಂಶ ಇಷ್ಟು:
99%ಕ್ಕೂ ಹೆಚ್ಚು ಕೊರೋನಾ ಸೋಂಕಿತರಿಗೆ ಯಾವ ಪರೀಕ್ಷೆಯೂ ಬೇಡ, ಯಾವ ಚಿಕಿತ್ಸೆಯೂ ಬೇಡ, ಅದು ತಾನಾಗಿ ವಾಸಿಯಾಗುತ್ತದೆ. ಎಲ್ಲರೂ ಮನೆಯಲ್ಲೇ ಉಳಿದು, ಇತರರಿಗೆ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು, ಅಷ್ಟೇ. ಸಹಾಯವಾಣಿ 14410ಗೆ ಕರೆ ಮಾಡಿ ತಿಳಿಸಿದರೆ ಆಯಿತು.
ಕೊರೋನಾ ಸೋಂಕು ಉಲ್ಬಣಿಸುವ ಸಾಧ್ಯತೆಗಳಿರುವವರು ವಿಶೇಷ ಎಚ್ಚರಿಕೆ ವಹಿಸಬೇಕು. ಸೋಂಕಿನ ಲಕ್ಷಣಗಳು ಆರಂಭವಾದರೆ, ಅದು ಮುಂದುವರಿದು ಆರೇಳು ದಿನಗಳಾಗುವಾಗ, ಸೋಂಕು ಉಲ್ಬಣಿಸುವ ಲಕ್ಷಣಗಳನ್ನು ಗುರುತಿಸಬೇಕು, ಪಲ್ಸ್ ಆಕ್ಸಿಮೀಟರ್ ಬಳಸಿ ರಕ್ತದ ಆಮ್ಲಜನಕದ ಮಟ್ಟವನ್ನು ನೋಡುತ್ತಿರಬೇಕು, ಅದು 95%ಕ್ಕಿಂತ ಕೆಳಗಿಳಿದರೆ ಕೂಡಲೇ ಆಸ್ಪತ್ರೆಗೆ ಹೋಗಬೇಕು.
ವಿ.ಸೂ.:
ಸಕ್ಕರೆ ಕಾಯಿಲೆಯ ಹಾಗೆಯೇ ಸಕ್ಕರೆಯ ಅತಿಯಾದ ಸೇವನೆಯೂ ಕೂಡ ಕೊರೋನಾ ಬಿಗಡಾಯಿಸುವುದಕ್ಕೆ ಕಾರಣವಾಗಬಹುದು. ಆದ್ದರಿಂದ ಸಕ್ಕರೆ, ಸಿಹಿ ತಿನಿಸುಗಳು, ಸಿಹಿ ಪೇಯಗಳು, ಹಣ್ಣುಗಳು ಮತ್ತು ಹಣ್ಣಿನ ರಸಗಳು, ಮೈದಾ ಮತ್ತಿತರ ಸಂಸ್ಕರಿತ ತಿನಿಸುಗಳನ್ನು ಸಂಪೂರ್ಣವಾಗಿ ವರ್ಜಿಸುವುದು ಒಳ್ಳೆಯದು.
ಜುಲೈ 14, 2020
The most significant factor that determines blood glucose levels is the consumption of dietary carbohydrate, that is, refined carbs, starches and simple sugars. However, the official dietary recommendations of most Western countries advocate for a reduced (low) fat, high-carbohydrate diet, which can exacerbate hyperglycaemia. These dietary guidelines form the basis of menus in nursing homes and hospital wards where people with COVID-19 and pre-existing metabolic syndrome are undergoing recovery and respite.
——–//
I had posted here, on April 8th, a detailed analysis of incidence and mortality of COVID 19 in India and other countries. I had pointed out that the basic problem in severe vivid to be metabolic syndrome, and that this metabolic syndrome is driven by consumption of sugars, alcohol and smoking. E few days ago I had also shared a post from Dr. Balasaraswathy, explaining the links between Met S and COVID and also the early manifestations Met S on the skin. Two days ago, in my post titled ‘How do we face COVID’, I had stressed that sugars, fruits and proceed foods should be avoided. Now, British Medical Journal has published this editorial, and has drawn attention to the fact that many covid care facilities are providing high carb refined foods to covid cases.
ಭಾರತದಲ್ಲೂ, ಅನ್ಯ ದೇಶಗಳಲ್ಲೂ ಆಗಿದ್ದ ಕೊರೋನಾ ಪ್ರಕರಣಗಳನ್ನು ವಿಶ್ಲೇಷಿಸಿ ಏಪ್ರಿಲ್ 8ರಂದು ಇಲ್ಲಿ ಬರೆದಿದ್ದೆ. ಕೊರೋನಾ ಉಲ್ಬಣಿಸುವವರಲ್ಲಿ ಹೆಚ್ಚಿನವರು ಉಪಾಪಚಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆಂದೂ, ಈ ಸಮಸ್ಯೆಗಳ ಮೂಲ ಕಾರಣ ಸಕ್ಕರೆಯ ಅತಿ ಸೇವನೆ, ಮದ್ಯಪಾನ ಹಾಗೂ ಧೂಮಪಾನಗಳೆಂದೂ ಬರೆದಿದ್ದೆ. ಕೆಲವು ದಿನಗಳ ಹಿಂದೆ ಡಾ| ಬಾಲಸರಸ್ವತಿ ಅವರು ಈ ಉಪಾಪಚಯದ ಸಮಸ್ಯೆಗಳಿಗೂ ಕೊರೋನಾ ಉಲ್ಬಣಿಸುವುದಕ್ಕೂ ಇರುವ ಸಂಬಂಧಗಳ ಬಗ್ಗೆಯೂ, ಉಪಾಪಚಯದ ಸಮಸ್ಯೆಗಳುಳ್ಳವರ ಚರ್ಮದಲ್ಲಿ ಕಂಡುಬರುವ ಲಕ್ಷಣಗಳೇನು ಎನ್ನುವುದನ್ನೂ ಕೆಲವು ದಿನಗಳ ಹಿಂದೆ ಬರೆದಿದ್ದರು, ಅದನ್ನು ಇಲ್ಲಿ ಹಂಚಿಕೊಂಡಿದ್ದೆ. ಮೊನ್ನೆಯೂ ಕೊರೋನಾ ಎದುರಿಸುವ ಬಗೆ ಹೇಗೆ ಎಂದು ಬರೆಯುವಾಗಲೂ ಸಕ್ಕರೆ, ಹಣ್ಣುಗಳನ್ನು, ಸಂಸ್ಕರಿತ ಆಹಾರವನ್ನು ತ್ಯಜಿಸುವುದು ಒಳ್ಳೆಯದು ಎಂದು ಸೂಚಿಸಿದ್ದೆ. ಈಗ ಬ್ರಿಟಿಷ್ ಮೆಡಿಕಲ್ ಜರ್ನಲ್ ಈ ಬಗ್ಗೆ ಸ್ಪಷ್ಟವಾದ ಸಂಪಾದಕೀಯವನ್ನೇ ಬರೆದಿದೆ. ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬ್ರೆಡ್ಡು ಬಿಸ್ಕತ್ತು ಕೊಡುತ್ತಿರುವುದರ ಬಗ್ಗೆ ಗಮನ ಸೆಳೆದಿದೆ.
But as in the past 7-8 months no confirmed reinfection case has been reported from anywhere in the world, scientists believe either the T cells or antibodies which are longer-staying but not yet detectable by available assays are providing the protection for at least 7-8 months.
——//
ಲಸಿಕೆ ಬರುವ ಮೊದಲೇ ಹೆಚ್ಚಿನವರಿಗೆ ಸೋಂಕು ತಗಲಿ, ವಾಸಿಯಾಗಿ, ಸೋಂಕಿಗಿದಿರಾಗಿ ರಕ್ಷಣಾ ಸಾಮರ್ಥ್ಯ ಬೆಳೆಯಲಿದೆ. ಲಸಿಕೆ ಬಂದರೂ ಅದರ ಅಗತ್ಯವಿರಲಾರದು.
ಸುದ್ದಿಯನ್ನು ಹೇಗೂ ಬರೆಯಬಹುದು ನೋಡಿ! ಪ್ರಕರಣಗಳು ಪ್ರತಿ ನಿತ್ಯ 50000 ಆದಾಗ, ಅವರಲ್ಲಿ 99% ವಾಸಿಯಾಗುವಾಗ, ವಾಸಿಯಾಗುವವರ ಸಂಖ್ಯೆಯೂ ‘ದಾಖಲೆಯೇ’ ಆಗಬೇಕಲ್ಲ?
ಪತ್ತೆಯಾಗುವ ಪ್ರಕರಣಗಳ ಸಂಖ್ಯೆಯಲ್ಲಿ 24 ಗಂಟೆಗಳ ಹಿಂದೆ ವರದಿಯಾದ ಹೊಸ ಪ್ರಕರಣಗಳು ಸೇರಿರುತ್ತವೆ. ವಾಸಿಯಾದವರ ಸಂಖ್ಯೆಯು ಎರಡು ವಾರಗಳ ಹಿಂದೆ ಸೋಂಕು ಪತ್ತೆಯಾಗಿ, 10-14 ದಿನ ನಿಗಾವಣೆಯಲ್ಲಿದ್ದು ಅದರಿಂದ ಗುಣಮುಖರಾದವರದು. (ಹೀಗೆ ವಾಸಿಯಾದವರಲ್ಲಿ 99% ಸೋಂಕಿತರು ಯಾವ ಔಷಧಗಳೂ ಇಲ್ಲದೆ ಗುಣಮುಖರಾಗಿರುತ್ತಾರೆ, ಅದರ ಶ್ರೇಯಸ್ಸು ಅವರವರಿಗೇ ಸಲ್ಲಬೇಕು, ಅವರನ್ನು ಆಸ್ಪತ್ರೆಗಳಲ್ಲಿ ನೋಡಿಕೊಂಡ ಆಧುನಿಕ ವೈದ್ಯವಿಜ್ಞಾನದವರಿಗೆ ಸಲ್ಲಬೇಕು, ಬೇರಾರಿಗೂ ಅಲ್ಲ). ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಾಗ ವಾಸಿಯಾಗುವವರ ಸಂಖ್ಯೆಯೂ ಹೆಚ್ಚಲೇ ಬೇಕು.
ಆದ್ದರಿಂದ ‘ರಿಕವರಿ ರೇಟ್’ 65% ಅಂದರೆ, ಉಳಿದ 35% ಈ ಹೊಸ ಅಧಿಕೃತ ಪ್ರಕರಣಗಳು; ಎರಡು ವಾರಗಳಲ್ಲಿ ಇವರಲ್ಲಿ ಹೆಚ್ಚಿನವರು ಕೂಡಾ ‘ರಿಕವರಿ ಪಟ್ಟಿ’ಯೊಳಗೆ ಸೇರಲಿದ್ದಾರೆ. ಅಷ್ಟರಲ್ಲಿ ಇನ್ನಷ್ಟು ಹೊಸ ಪ್ರಕರಣಗಳು ಪ್ರತಿನಿತ್ಯವೂ ಒಟ್ಟು ಪ್ರಕರಣಗಳ ಪಟ್ಟಿಗೆ ಸೇರಿರುತ್ತವೆ, ಆದ್ದರಿಂದ ‘ರಿಕವರಿ ರೇಟ್’ ಒಟ್ಟು ಪ್ರಕರಣಗಳ ಸಂಖ್ಯೆಗಿಂತ 2 ವಾರ ಹಿಂದೆಯೇ ಇರುತ್ತದೆ, 30-35% ಕೆಳಗೇ ಇರುತ್ತದೆ.
ಅಧಿಕೃತವಾಗಿ ದೃಢಪಟ್ಟಿರುವ ಪ್ರಕರಣಗಳ ಆಧಾರದಲ್ಲಿ ಸಾವಿನ ಪ್ರಮಾಣವು 2% ಎನ್ನಲಾಗುತ್ತಿದೆ. ಪರೀಕ್ಷೆಗಳನ್ನೇ ಮಾಡಿಸಿಕೊಳ್ಳದವರು, ರೋಗಲಕ್ಷಣಗಳೇ ಇಲ್ಲದೆ ಸೋಂಕು ಬಂದದ್ದು-ಹೋದದ್ದು ತಿಳಿಯದವರು ಎಲ್ಲ ಸೇರಿಸಿದರೆ ಒಟ್ಟು ಪ್ರಕರಣಗಳ ಸಂಖ್ಯೆಯು ಅಧಿಕೃತ ಸಂಖ್ಯೆಗಿಂತ 100-200 ಪಟ್ಟು ಜಾಸ್ತಿ ಇರುತ್ತದೆ. ಹಾಗಾಗಿ ಸಾವಿನ ಪ್ರಮಾಣವು ಒಟ್ಟು ಪ್ರಕರಣಗಳ 0.04-0.08% ಇರಬಹುದು. ಅವರಲ್ಲೂ 99% ಮೊದಲೇ ಗಂಭೀರ ರೋಗಗಳಿದ್ದವರಾಗಿರುತ್ತಾರೆ.
ಕೊರೋನ ಎಲ್ಲ ದೇಶಗಳಂತೆ ಭಾರತಕ್ಕೂ ಬಂದಿದೆ, ಎಲ್ಲೆಡೆ ಹರಡಿದಂತೆ ಇಲ್ಲೂ ಹರಡಿದೆ, ಎಲ್ಲೆಡೆ 99% ಹೆಚ್ಚು ಸೋಂಕಿತರು ತಾವಾಗಿ ವಾಸಿಯಾದಂತೆ ಇಲ್ಲೂ ಆಗಿದ್ದಾರೆ, ಎಲ್ಲೆಡೆ 0.04%-0.08% ಸೋಂಕಿತರು ತೀವ್ರ ಸಮಸ್ಯೆಗಳಾಗಿ ಮೃತಪಟ್ಟಂತೆ ಇಲ್ಲೂ ಆಗುತ್ತಿದೆ, ಇಂಥ ಸಮಸ್ಯೆಗಳಾಗುವವರಲ್ಲಿ 99% ಹೆಚ್ಚು ಮಂದಿ ಮೊದಲೇ ಗಂಭೀರ ರೋಗಗಳಿದ್ದವರೆನ್ನುವುದು ಎಲ್ಲಾ ದೇಶಗಳಲ್ಲಿಯೂ ಕಂಡುಬಂದಿದ್ದಂತೆ ಇಲ್ಲಿಯೂ ಇದೆ.
ಸಕ್ಕರೆ ಸೇವನೆ, ಹಣ್ಣು ಮತ್ತು ರಸಗಳ ಸೇವನೆ (ಅವುಗಳಲ್ಲೂ ಸಕ್ಕರೆಯೇ ಇರುವುದು), ಸಂಸ್ಕರಿತ ಆಹಾರಗಳು ಕೊರೋನ ರೋಗವು ಉಲ್ಬಣಿಸುವ ಅಪಾಯವನ್ನು ಹೆಚ್ಚಿಸುತ್ತವೆ. ಅವುಗಳಿಂದಲೇ ತಯಾರಾಗುವ ಮದ್ಯಪೇಯಗಳೂ ಹಾಗೆಯೇ ಕೊರೋನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಬರೆದಿದ್ದೆ.
ಅನ್ಯ ರೋಗಗಳು ಯಾವುವೂ ಇಲ್ಲದ, ಆದರೆ ನಿತ್ಯವೂ ಮದ್ಯಪಾನ ಮಾಡುವ ಯುವಕರಲ್ಲಿ ಕೊರೋನ ಉಲ್ಬಣಿಸುವುದು ಕಂಡುಬರುತ್ತಿದೆ. ಆದ್ದರಿಂದ ಮದ್ಯಪಾನದಿಂದ ದೂರವಿರುವುದು ಒಳ್ಳೆಯದು.
ಮದ್ಯಪಾನದಿಂದ ಕೊರೋನ ಸೋಂಕಿನ ಮೇಲಾಗುವ ಪರಿಣಾಮಗಳ ಬಗ್ಗೆ ನೇರವಾದ ಅಧ್ಯಯನಗಳು ಇನ್ನಷ್ಟೇ ಆಗಬೇಕಿವೆ. ಈಗ ಲಭ್ಯವಿರುವ ಮಾಹಿತಿಯನ್ನು ಲಗತ್ತಿಸಿದ್ದೇನೆ.
ಸಾಂಕ್ರಾಮಿಕಗಳಲ್ಲಿ ಸಾವಿನ ಅಂದಾಜನ್ನು ಬಹಳಷ್ಟು ಹಿಗ್ಗಿಸಲಾಗುತ್ತಿದೆ, ಎಚ್1ಎನ್1ನಲ್ಲೂ ಹೀಗೆಯೇ ಆಗಿತ್ತು. ಹೊಸ ಕೊರೋನ ಅಂತೂ ಎಲ್ಲ ಆಯಾಮಗಳಿಂದಲೂ ಹೊಸ ಸೋಂಕು ಆಗಿರುವುದರಿಂದ ಅಂದಾಜುಗಳೆಲ್ಲವೂ ಯದ್ವಾ ತದ್ವಾ ಆಗಿವೆ.
ಎಷ್ಟು ಮಂದಿಯಲ್ಲಿ ಸೋಂಕು ಉಲ್ಬಣಿಸುತ್ತದೆ ಎನ್ನುವುದು ಸಮುದಾಯದ ರೋಗನಿರೋಧಕ ಶಕ್ತಿಯ ಮೇಲೆ ಅವಲಂಬಿಸಿದೆ. ಇದುವರೆಗೆ ನಮ್ಮ ದೇಶದ ಅನುಭವವನ್ನು ನೋಡಿದರೆ, ಮತ್ತು ಮೊನ್ನೆ ತಾನೇ ಪ್ರಕಟವಾಗಿರುವ ವರದಿಯಲ್ಲಿ ಹಳೆಯ ಸೌಮ್ಯ ರೂಪದ ಕೊರೋನ ಸೋಂಕುಗಳನ್ನು ಪಡೆದಿದ್ದವರು ಈ ಹೊಸ ಸೋಂಕನ್ನು ಎದುರಿಸಲು ಹೆಚ್ಚು ಸಮರ್ಥರಿದ್ದಾರು ಎಂದು ಹೇಳಿರುವುದನ್ನು ಪರಿಗಣಿಸಿದರೆ, ಸಾವಿನ ಪ್ರಮಾಣವು ಇನ್ನಷ್ಟು ಕಡಿಮೆಯೇ ಆಗಬಹುದು – ಚೀನಾದ ಮೊದಲ ವರದಿಗಳಲ್ಲಿ ಹೇಳಲಾಗಿದ್ದ 2.6%, ಮತ್ತೆ 1.4% ಆಗಿ, ಇತರ ದೇಶಗಳ ವರದಿಗಳನ್ನು ಪರಿಗಣಿಸಿದಾಗ 0.04-0.5% ಆಗಿ, ಈಗ ಈ ಹೊಸ ಮಾಹಿತಿಯನ್ನು ಗಮನಿಸಿದರೆ 0.04% ಅಥವಾ ಇನ್ನೂ ಕಡಿಮೆಯೇ ಇರಬಹುದು.
ಸಮಷ್ಟಿಯ ಸೋಂಕು ನಿರೋಧಕ ಶಕ್ತಿಯ ಬಗ್ಗೆ ಹೇಳುವಾಗ 60%, 70% ಮಂದಿಗೆ ಹೊಸ ಸೋಂಕು ಆಗಲೇಬೇಕು ಎಂಬುದಕ್ಕೆ ಆಧಾರಗಳೆಲ್ಲಿವೆ? ವಾರಗಳ ಹಿಂದೆ ಬ್ರಿಟನ್ ನ ವಿವಿಯ ಲೆಕ್ಕಾಚಾರದಂತೆ 43% ಇದ್ದರೆ ಸಾಕು ಎನ್ನಲಾಗಿತ್ತು. ಆದರೆ ಅದು ಕೂಡ ಸರಿಯೇ ಇರಬೇಕೆಂದಿಲ್ಲ. ಹಳೆಯ ಸೋಂಕಿನಿಂದಲೂ ಲಾಭವಿದೆ ಎಂದರೆ ಅದನ್ನೂ ಲೆಕ್ಕಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ.
ಮೂರನೆಯದಾಗಿ, ಈ ಪ್ರತಿಕಾಯಗಳ ಪರೀಕ್ಷೆಗಳೇ ಇನ್ನೂ ವಿಶ್ವಾಸಾರ್ಹವೆನ್ನುವ ಮಟ್ಟಕ್ಕೆ ಮುಟ್ಟಿಲ್ಲ. ಹಾಗಿರುವಾಗ ಅಂಥ ಪರೀಕ್ಷೆಗಳನ್ನು ಬಳಸಿ 11%, 20% ಸೋಂಕಿತರಾಗಿದ್ದಾರೆ ಎಂದರೆ ಅದೂ ಸಮಸ್ಯೆಯೇ. ಸೋಂಕಿತರ ಸಂಖ್ಯೆ ಅದಕ್ಕಿಂತ ಹೆಚ್ಚೂ ಇರಬಹುದು, ಕಡಿಮೆಯೂ ಇರಬಹುದು.
ಹಾಗಾಗಿ, ರೋಗ ಉಲ್ಬಣಿಸಬಲ್ಲವರನ್ನು ಸುರಕ್ಷಿತವಾಗಿರಿಸುವುದು, ಅವರಿಗೆ ಸೋಂಕು ತಗಲಿದರೆ ಹೆಚ್ಚಿನ ನಿಗಾ ವಹಿಸುವುದು, ಸಮಸ್ಯೆಯಾದರೆ ಕೂಡಲೇ ಆಸ್ಪತ್ರೆಗೆ ದಾಖಲಿಸುವುದು, ಮತ್ತು ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುವುದು ಅಷ್ಟೇ ನಾವು ಮಾಡಬಹುದಾದ ಕೆಲಸಗಳು. ಇನ್ನೆರಡು ಅಥವಾ ಮೂರು ತಿಂಗಳಲ್ಲಿ ಭಾರತದಲ್ಲಿ ಕೊರೋನ ಇನ್ನಷ್ಟು ಜನರಿಗೆ ಹರಡಿ, ಹಾಗೆಯೇ ಹೋಗಲಿದೆ. ಲಸಿಕೆ ಬಂದರೂ ಯಾರಿಗೂ ಅದರ ಅಗತ್ಯವಿರದು.
August 10, 2020
According to the report, India fares the worst on the Asia recovery scorecard, and would take the longest among the major Asian economies to converge to its pre-coronavirus growth level.
Shutdowns are an extreme measure. We know very well that they cause tremendous harm — for people’s lives, for their health, for their mental health, on their ability to get the best care for major problems like heart attacks, like cancer care. Shutdowns can take a major toll on employment, they can take a major toll on people who are disadvantaged, leaving them even more disadvantaged.
Into the debate about the full reopening schools across the UK comes some good news from Public Health England (PHE), confirming that children and adolescents are at minimal risk of Covid-19. Children under 16 accounted for just over 1% of all cases of coronavirus during the “first wave” of illness in England, and even among those with respiratory symptoms, only 4% tested positive for the virus, compared with between 19% and 35% in adults.
….evidence suggests the proliferation of the D614G mutation in some parts of the world has coincided with a drop in death rates, suggesting it is less lethal.
The SBI report estimates that GDP loss from Covid could be in the double digits and, apart from the toll it takes on livelihoods, the economic impact of the outbreak will be visible in an increase in the death rate in Indian states
The report estimates an increase in mortality if a state’s GDP falls by 10% or more. The average loss across all states in Gross State Domestic Product (GSDP) is 16%
0.5% to 3.5% is the increase in death rate (in this case, deaths per 1,000 people for 2018) that the various states may be looking at, including the additional mortality due to Covid-19 even as states respond with “unplanned exit from lockdown and fresh lockdowns across states”, the report said
Given the level of GSDP loss and the health infrastructure of the states, it is a grim picture indeed
38 lakh crore is the total GSDP loss due to Covid-19, it represents about a sixth of states’ cumulative GSDP
According to the CDC’s official website, the mandatory quarantine portion of the order has been lifted, with travelers being advised to follow the same protocols people should be following on a daily basis anyway.
ರೋಗ ಹರಡಿದ್ದೇ ಸಾಧನೆ, ಪರೀಕ್ಷೆ ನಡೆಸಿದ್ದೇ ಸಾಧನೆ, ಸೋಂಕಿತರು ತಾವಾಗಿ ಗುಣಮುಖರಾದದ್ದೇ ಸಾಧನೆ ಎಂದು ತನ್ನ ಬೆನ್ನನ್ನೇ ತಟ್ಟಿಕೊಳ್ಳುತ್ತಿದೆ ಕೇಂದ್ರ ಸರಕಾರ. ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿದ ಮಹಾನ್ ದೇಶ ಎಂದು ಸದ್ಯದಲ್ಲೇ ಬೆರಳೆತ್ತಿಕೊಂಡರೂ ಆಶ್ಚರ್ಯವೇನಿಲ್ಲ. ಇದನ್ನು ಹೇಳಿಕೊಳ್ಳುವುದಾಗಿದ್ದರೆ ಲಾಕ್ ಡೌನ್ ಮಾಡುವ ಅಗತ್ಯವೇನಿತ್ತು?
August 23, 2020
Hello GoI, all the measures suggested by you have completely failed in controlling COVID 19. You must apologise and stop issuing any more orders/suggestions. Hands off please. Let the people decide on their own.
As with previous COVID-19 related clinical trials, there are several red flags we need to address before interpreting the results. Of note: the sponsor of the trial is Gilead Sciences Inc., a major manufacturer of remdesivir. Additionally, the end-point is an unimpressive one: odds of a better clinical status is quite vague relative to other, more clinically meaningful measurements like mortality, hospital stay, duration of oxygen requirement, etc. None of the authors’ own exploratory end-points, such as time to recovery or time to improvement in clinical status (by 1, 2 or 3 points) were significantly different with remdesivir.
Politicians want the vaccines, scientists can’t deliver them, and will therefore take the blame very soon. Russia, US and of course, India. Dear Serum Institute, be prepared to take the blame in 73 days!
Experts say the relentless spread of the virus and infectiousness was inevitable and evident from several epidemiological projections from March. “India is politically and culturally one country but epidemiologically it’s many countries rolled into one,” said Dr. Jacob John, retired professor of virology at the Christian Medical College, Vellore. “This is a respiratory virus and it was always a mistake to think that a single strategy — a national lockdown for instance — would be effective for the whole country,” he said in a phone conversation.
ಮಾರ್ಚ್ ಮೊದಲಲ್ಲೇ ಈ ಬಗ್ಗೆ ಹೇಳಿದ್ದಕ್ಕೆ ಭಾಜಪದ ಮಹಾಜ್ಞಾನಿಗಳು ಗೇಲಿ ಮಾಡಿದ್ದರು. ಈಗ ಕಾಣೆಯಾಗಿದ್ದಾರೆ
August 28, 2020
ಮೊನ್ನೆ: ‘ಕೋವಿಡ್ ನಿಂದ ಅರ್ಥ ವ್ಯವಸ್ಥೆ ಮೇಲೆ ಯಾವುದೇ ಪ್ರಭಾವ ಇಲ್ಲ’
ಈಗ: ‘ಕೋವಿಡ್ ನಿಂದ ಅರ್ಥ ವ್ಯವಸ್ಥೆಯೇ ನಾಶ, ಅದು ದೈವೇಚ್ಛೆ’
Then: ‘No impact of COVID on economy’
Now: ‘No money due to COVID, an Act of God’
August 29, 2020
Crowded cities, lockdown fatigue and a lack of contact tracing have spread Covid-19 to every corner of this country of 1.3 billion people. This week, authorities said that one-sixth of a tiny tribe on a remote, coral-fringed island had come down with the virus.
The troubles keep piling up for India, feted not long ago as a would-be commercial superpower. Economic data show the country is in far worse shape than previously thought, while it has overtaken Mexico to become the world’s third-largest tally of coronavirus cases. It will take the South Asian giant years, at least, to dig out from this hole.
—//
We didn’t expect anything good at all, but foresaw the disaster
ಸೋಂಕಿತರು ಬರುತ್ತಿಲ್ಲ, ನಗರಪಾಲಿಕೆ ದಿವಾಳಿಯಾಗಿದೆ ಎಂಬ ಕಾರಣಗಳಿಗೆ ಬೆಂಗಳೂರಿನ ಕೋವಿಡ್ ಕೇರ್ ಸೆಂಟರ್ ಗಳನ್ನು ಮುಚ್ಚುತ್ತಿದ್ದಾರಂತೆ!
ಜುಲೈ 4ರಂದು, ಸರಿಯಾಗಿ 2 ತಿಂಗಳ ಹಿಂದೆ, ಇವನ್ನು ತೆರೆದು ಪ್ರಯೋಜನವಿಲ್ಲ, ಇವು ಹಲವು ಸಮಸ್ಯೆಗಳಿಗೆ, ಅನಗತ್ಯ ವೆಚ್ಚಕ್ಕೆ ಕಾರಣವಾಗಳಿವೆ ಎಂದು ಎಚ್ಚರಿಸಿದ್ದೆವು. ಕೇಳಲಿಲ್ಲ. ಈ ಅವಾಂತರಕ್ಕೆ ಕಾರಣರಾದವರು ನಷ್ಟವನ್ನು ಭರಿಸಲಿ. ನಮ್ಮ ಹಣವನ್ನು ಪೋಲು ಮಾಡಿದ್ದಕ್ಕೆ ಕ್ಷಮೆ ಕೇಳಲಿ.
Given the high economic costs and well-documented long-term health consequences beyond COVID-19, imposing lockdowns appears to have been a large policy error. At first, when little was known, officials acted in ways they thought prudent. But now evidence proves that lockdowns were an expensive treatment with serious side effects and no benefit to society.
The Convalescent Plasma (CP) therapy didn’t help in reducing death due to the coronavirus, the India Council of Medical Research (ICMR) revealed in a study.
AstraZeneca Plc has put a hold on the late-stage trial of its highly-anticipated COVID-19 vaccine candidate after a suspected serious adverse reaction in a study participant, health news website Stat News reported on Tuesday
ನಮ್ಮ ದೇಶಕ್ಕೆ ಈ ದುರವಸ್ಥೆ ಯಾಕೆ ಬಂದಿದೆ ಎನ್ನುವುದು ಈ ವರದಿಗಳನ್ನು ನೋಡಿದರೆ ಅರ್ಥವಾಗಬೇಕು.
ಪ್ಲಾಸ್ಮಾ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಿಲ್ಲ ಅಂತ ದೇಶದ ಅತ್ಯುನ್ನತ ವೈದ್ಯಕೀಯ ಸಂಸ್ಥೆಗಳಾದ ಎಐಐಎಂಎಸ್ ಮತ್ತು ಐಸಿಎಂಆರ್ ಹೇಳಿವೆ. ಆದರೆ ಅದೇ ಪ್ಲಾಸ್ಮಾ ಚಿಕಿತ್ಸೆಯ ಕೇಂದ್ರಗಳನ್ನು ಸ್ಥಾಪಿಸುವ ಚಿಂತನೆ ನಡೆದಿದೆ ಎಂದು ವೈದ್ಯರೂ ಆಗಿರುವ ಜಿಲ್ಲಾಧಿಕಾರಿ ಹೇಳುತ್ತಾರೆ. ಈ ಎರಡೂ ವರದಿಗಳು ಇಂದಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿವೆ.
ಅತ್ತ, ಶಾಲೆಗಳನ್ನು ತೆರೆಯುವುದಕ್ಕೆ ಏನೇನೋ ಶಿಷ್ಟಾಚಾರಗಳನ್ನು ಕೇಂದ್ರ ಸರಕಾರ ಹೇಳಿದೆಯಂತೆ, ಅವನ್ನು ಪಾಲಿಸಬೇಕಾದರೆ ಶುಲ್ಕ ಹೆಚ್ಚಿಸಬೇಕೆಂದು ಶಾಲೆಗಳ ಆಡಳಿತಗಳು ನಿರ್ಧರಿಸಿವೆಯಂತೆ. ಅದರ ನಡುವೆ ಶಾಲೆಗಳನ್ನು ತೆರೆಯಲೇ ಬಾರದು ಎಂದು ಮಹಾತಜ್ಞರೊಬ್ಬರು ಅಪ್ಪಣೆ ಮಾಡಿದ್ದಾರಂತೆ, ಲಸಿಕೆಗಳು ಕೊಡಲ್ಪಡುವವರೆಗೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂದು ಪೋಷಕರು ಹೇಳುತ್ತಿದ್ದಾರಂತೆ.
ಲಸಿಕೆಗಳು ಬರುವುದಿಲ್ಲ, ಬಂದರೂ ಎಲ್ಲಾ ಮಕ್ಕಳಿಗೆ ಅವನ್ನು ಕೊಡುವುದಕ್ಕೆ 10-20 ವರ್ಷಗಳಾಗುತ್ತವೆ. ಅಲ್ಲಿಯವರೆಗೆ ಶಾಲೆಗಳನ್ನು ತೆರೆಯಲಿಕ್ಕಿಲ್ಲ, ಮಕ್ಕಳನ್ನು ಮನೆಯಲ್ಲೇ ಇಟ್ಟುಕೊಳ್ಳುತ್ತೇವೆ ಎಂದು ಇವರೆಲ್ಲರೂ ಹೇಳುತ್ತಿದ್ದಾರೆಯೇ?
ವಿಜ್ಞಾನ ಎಷ್ಟೇ ಬೆಳೆದಿರಲಿ, ವೈಜ್ಞಾನಿಕ ಮನೋವೃತ್ತಿ, ಸಾಕ್ಷ್ಯಾಧಾರಿತ ನೀತಿ ನಿರೂಪಣೆ ಇಲ್ಲದ ಸರಕಾರ, ಮಾಧ್ಯಮಗಳು ಇದ್ದರೆ, ಮತ್ತು ಇವುಗಳ ಕಿವಿಯೂದವ ಅಂಥದ್ದೇ ಸ್ವಘೋಷಿತ ತಜ್ಞರಿದ್ದರೆ, ಅಂಥವರನ್ನು ನಂಬಿಕೊಂಡಿರುವ ಜನರೂ ಇದ್ದರೆ ಈ ದೇಶಕ್ಕೆ ಬೇರೆ ಗತಿಯೇನು?
ಮೇ ತಿಂಗಳಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆಯು ವರದಿಯಾದ ಪ್ರಕರಣಗಳಿಗಿಂತ 87-130 ಪಟ್ಟು ಹೆಚ್ಚು ಇದ್ದಿರಬಹುದು ಎಂದು ಐಸಿಎಂಆರ್ ಹೇಳಿದೆ. ಇದನ್ನು ಸರಾಸರಿ 100 ಪಟ್ಟು ಎಂದು ಪರಿಗಣಿಸಿ, ಈ ವರೆಗೆ ವರದಿಯಾಗಿರುವ ಪ್ರಕರಣಗಳಿಗೆ ಅನ್ವಯಿಸಿದರೆ, ಒಟ್ಟು ಪ್ರಕರಣಗಳ ಸಂಖ್ಯೆಯು 45 ಕೋಟಿಯಷ್ಟಾಗುತ್ತದೆ, ಅಂದರೆ ಜನಸಂಖ್ಯೆಯ ಸುಮಾರು 33% ಆಗುತ್ತದೆ. ಇನ್ನೆರಡು ತಿಂಗಳುಗಳಲ್ಲಿ ಇದು 60-70% ದಾಟಿದರೆ ಸೋಂಕಿನ ಹರಡುವಿಕೆಯು ಕಡಿಮೆಯಾಗಬಹುದು.
No definite evidence for efficacy of HCQ, Azithro, Ivermectin, Doxy, Oseltamivir, Favipiravir, Remdisivir, Tocilizumab in COVID19.
September 12, 2020
It’s confirmed that the mindless lockdown has been a complete, disastrous failure. By mid May, when Lockdown 2 was on, the cases were 64 lakhs! India was No 1 in the world long long ago! If this data can be extrapolated, the cases would be at 45 crores or more now(33%), and would reach 60-70% by Oct-Nov.
Hospitals nationwide face a medical oxygen crisis. Central government failed to assess demand and supply to plan for it. Peacocks got in Modi’s way.
September 12, 2020
ಮದ್ದು ಬರುವವರೆಗೆ ಎರಡು ಗಜ ದೂರ, ಮಾಸ್ಕ್ ಕಡ್ಡಾಯ ಅಂತೆ –
ಮದ್ದಂತೂ ಬರುವುದಿಲ್ಲ, ಇವರದು ಇನ್ನೇನೂ ಉಳಿದಿಲ್ಲ.
#ಕೊರೋನ_ಅನುಭವಿಸಿ
ಸೆಪ್ಟೆಂಬರ್ 12, 2020
ಮೇ ಮಧ್ಯದಲ್ಲೇ 64 ಲಕ್ಷ ಪ್ರಕರಣಗಳಾಗಿದ್ದರೆ, ದಿಗ್ಬಂಧನವು ಕೊರೋನ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಅಂದರೆ, ಮೇ ಮಧ್ಯದ ವೇಳೆಗಾಗಲೇ ಭಾರತವು ವಿಶ್ವದಲ್ಲೇ ಅತಿ ಹ್3ಚವಿಹು ಪ್ರಕರಣಗಳನ್ನು ಹೊಂದಿತ್ತು ಎಂದಾಗುತ್ತದೆ, ಈಗ ಇದೇ ಲೆಕ್ಕವನ್ನು ಅನ್ವಯಿಸಿದರೆ ಒಟ್ಟು ಪ್ರಕರಣಗಳ ಸಂಖ್ಯೆಯು 45 ಕೋಟಿಯಷ್ಟಾಗುತ್ತದೆ. ಇಂಥ ಅವಸರದ, ಅತಿ ಕಠಿಣವಾದ ದಿಗ್ಬಂಧನವನ್ನು ವಿಧಿಸಿದ್ದರಿಂದ ಕೊರೋನ ತಡೆಯುವಲ್ಲಿ ವಿಫಲವಾದದ್ದಷ್ಟೇ ಅಲ್ಲ, ದೇಶದ ಆರ್ಥಿಕತೆಯನ್ನೂ ನಾಶ ಮಾಡಿದಂತಾಯಿತು. ಈ ಮಹಾ ವೈಫಲ್ಯದ ಸಂಪೂರ್ಣ ಜವಾಬ್ದಾರಿಯನ್ನು ಆ ನಿರ್ಧಾರವನ್ನು ಕೈಗೊಂಡವರು ಮತ್ತು ಅದನ್ನು ಬೆಂಬಲಿಸಿ ಚಪ್ಪಾಳೆ, ಜಾಗಟೆ, ಶಂಖ ಬಾರಿಸಿದವರು ಹೊತ್ತುಕೊಳ್ಳಬೇಕು.
ಸೆಪ್ಟೆಂಬರ್ 14, 2020
ಕೊರೋನ ಚಿಕಿತ್ಸೆಗೆ ನಿರುಪಯುಕ್ತ, ಅಪಾಯಕಾರಿ ಔಷಧಗಳು ಬೇಡ: ವಾರ್ತಾಭಾರತಿ
Stop Using Ineffective and Potentially Harmful Drugs for COVID19
Dr. B Srinivas Kakkilaya, MD, Dr. P Balasaraswathy, DNB, Mangaluru
COVID19 is widely spreading in India, and there’s obvious confusion and lack of clarity regarding its management. Hydroxy chloroquine, azithromycin, oseltamivir, favipiravir, ivermectin, doxycycline, quinolones, other antibiotics, ipratropium nebulization, vitamin C, zinc, low molecular weight
heparins, steroids, remdesivir, tocilizumab, plasma therapy and pantoprazole, with or without prokinetic agents such as domperidone, etc., are being used in COVID19 cases, from the very first day of illness, in various combinations or in succession. In addition, turmeric milk, kashaya or
kwatha, homeopathy etc., are also being administered, supposedly for prevention and also for treatment. Many of these are being given in adherence to the guidelines issued by the government agencies or by some institutions or at the discretions of treating doctors. With several deaths being reported in otherwise healthy and young cases, it is necessary to look at available evidence for the efficacy and life-threatening adverse effects of these drugs, particularly due to interactions when used in combinations in the treatment of COVID19.
According to available information, there is no evidence for the efficacy of any medicine in the treatment of COVID19. It is also clear that drugs such as hydroxy chloroquine (HCQ) and azithromycin (AZM) can do more harm than good. HCQ is well known to cause ventricular arrhythmias and when used with AZM, the risk of arrhythmias, leading even to sudden death, may increase. Many of the drugs used in the treatment of psychiatric illnesses, diabetes mellitus, asthma, heart diseases etc., and antimicrobials such as quinolones, are known to worsen the risks of cardiac arrhythmias, hypoglycemia, etc., when used with HCQ and/or azithromycin. Domperidone and ondansetron, and loperamide, commonly used for treating nausea or vomiting and diarrhoea respectively, are also known to increase the risks of cardiac arrhythmias when used with HCQ and/or AZM. Therefore, use of HCQ and AZM for treating COVID19 must be immediately stopped, and these drugs must never be co-administered, nor used with other drugs mentioned above.
Favipiravir interferes with metabolism of paracetamol, leading to its accumulation. Therefore, favipiravir should not be used or if used, the dose of paracetamol should be restricted to 3g/day.
As there is no evidence to show definite benefits, and in view of several reports of adverse effects, drugs such as oseltamivir, favipiravir, ivermectin, doxycycline, quinolones vitamin C, zinc, turmeric milk, kashaya or kwatha, homeopathy etc., must not be used in the treatment of COVID19.
In summary, more than 99% of patients of COVID19 have a mild disease and recover on their own without the need for any specific treatment. Cases with moderately severe disease will be helped with supplemental oxygen. Cases of severe COVID19 require admission in ICUs, and should be treated with oxygen, and steroids under medical supervision; remdisivir can be used in such cases with discretion.
Giudicessi JR, Noseworthy PA, Friedman PA, Ackerman MJ. Urgent guidance for navigating and circumventing the QTc-prolonging and torsadogenic potential of possible pharmacotherapies for coronavirus disease 19 (COVID-19) Mayo Clin Proc. 2020;95:1213–1221.
Giudicessi JR, Roden, DM, Wilde AAM, Ackerman MJ. Genetic susceptibility for COVID-19–associated sudden cardiac death in African Americans. Heart Rhythm. 2020 Sep;17(9):1487–1492. At https://www.ncbi.nlm.nih.gov/pmc/articles/PMC7198426/
September 15, 2020
ಚಕ್ರ ಬೇಗನೇ ತಿರುಗಿದೆ!
ಕೊರೋನ ಕಾಲದಲ್ಲಿ ಕೋಳಿ ಮಾಂಸ ಸೇವಿಸಬಹುದು ಅಂತ ಮಾರ್ಚ್ 9ರಂದು ಹೇಳಿದ್ದಕ್ಕೆ ಕೆಲವು ಮಾಂಸಾಹಾರಿಗಳೇ ವ್ಯಂಗ್ಯವಾಡಿದ್ದರು.
ಈ ಕೊರೋನ ಎಲ್ಲ ಸತ್ಯಗಳನ್ನೂ ಬೇಗ ಬೇಗನೆ ಎತ್ತಿ ತೋರಿಸಿದೆ, ಕೋಳಿಯಿಂದಲೇ ಕೊರೋನ ಎಂಬ ಸುಳ್ಳು ಮಗುಚಿ ಬಿದ್ದು, ಕೋಳಿ ಮಾಂಸದಿಂದ ಕೊರೋನ ವಿರುದ್ಧ ರಕ್ಷಣೆ ಎಂದಾಗಿದೆ! ಹಾಗಾಗಿ ಕೋಳಿ ಮಾಂಸದ ದರವೂ ಮೇಲಕ್ಕೇರುತ್ತಿದೆಯಂತೆ! ಆಗ ವ್ಯಂಗ್ಯವಾಡಿದ್ದವರನ್ನು ಈಗ ಹುಡುಕಬೇಕಾಗಿದೆ
ದೇಶವನ್ನು ನಡೆಸುವವರಿಗೆ ದೇಶದ ಬಗ್ಗೆ ಗೊತ್ತಿರಬೇಕು ಎಂದಿದ್ದೆ. ಈ ದೇಶದ ಬಗ್ಗೆ, ಇಲ್ಲಿನ ಕಾರ್ಮಿಕರ ಬಗ್ಗೆ, ವೈದ್ಯರ ಬಗ್ಗೆ, ದಾದಿಯರ ಬಗ್ಗೆ, ಕೊರೋನ ಬಗ್ಗೆ, ಅದರಿಂದಾಗಿರುವ ಸಾವು-ನೋವುಗಳ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ಸರಕಾರ ಒಪ್ಪಿಕೊಂಡಿದೆ. ದೇಶಪ್ರೇಮ ಅಂದರೆ ಎಂಥದು?
September 16, 2020
September 16, 2020
IMA had clapped for the claps! Arrey IMA, people of India, assets of India, wealth, culture, harmony, plurality and everything else about our great country have all been abandoned and destroyed. You didn’t cry for any of those.
ಕೊರೋನ ಮತ್ತೆ ಹರಡುತ್ತಿರುವ ದೇಶಗಳಲ್ಲಿ ಸಾವುಗಳು ನಗಣ್ಯವಾಗಿವೆ. ಯುವಜನರೆ ಹೆಚ್ಚು ಸೋಂಕಿತರಾಗುತ್ತಿರುವುದೇ ಅದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಅಂದರೆ, ಕೊರೋನ ಸೋಂಕಿನಿಂದ ತೀವ್ರ ಸಮಸ್ಯೆಗಳಾಗುವ ಅಪಾಯವುಳ್ಳವರನ್ನು ಸುರಕ್ಷಿತವಾಗಿರಿಸಿ, ಸೋಂಕುಂಟಾಗದಂತೆ ತಡೆದರೆ ಜೀವರಕ್ಷಣೆ ಸಾಧ್ಯವಿದೆ. ಇದನ್ನು ಬಹು ಮೊದಲೇ ಮಾಡಬಹುದಿತ್ತು.
Excessive intake of cereals, any intake of refined carbohydrates, fruits, sugars and alcohol promotes insulin excess (hyperinsulinemia) which in turn drives hyperinflammation, aggravating COVID19. Start by avoiding the prime movers of hyperinsulinemia
Evidence on mask effectiveness for respiratory infection prevention is stronger in health care than community settings. N95 respirators might reduce SARS-CoV-1 risk versus surgical masks in health care settings, but applicability to SARS-CoV-2 is uncertain.
Hydroxychloroquine alone was not associated with reduced mortality in hospitalized COVID-19 patients but the combination of hydroxychloroquine and azithromycin significantly increased mortality.
A Chennai-based medical technology company which received a Rs 373-crore order to build 10,000 ventilators from the PM-CARES fund has never made ventilators before.
The home administrators first stopped all contact with the outside world to the extent possible; decongested the old-age homes by sending some residents to stay with relatives; and stopped the infection from spreading by ensuring that care workers were given temporary accommodation in the homes themselves. Proper sanitisation of all the items from the outside including vegetables was being done on an everyday basis. They also sanitised the premises frequently.
Vitamin D can help in warding off severe COVID. There’s no evidence at all about Vit C, Zinc etc.
September 29, 2020
ಶಿಕ್ಷಣ ಸಚಿವರೇ, 6 ತಿಂಗಳು ಶಾಲೆ ಮುಚ್ಚಿದ್ದರಿಂದ ಕೊರೋನ ಕಡಿಮೆ ಆಯಿತೇ? ದೇಶದಲ್ಲಿ 61 ಲಕ್ಷ (60 ಕೋಟಿ) ಪ್ರಕರಣಗಳಾದರೂ ಮಕ್ಕಳಿಗೆ ಸಮಸ್ಯೆ ಆಯಿತೇ?
September 29, 2020
ಕೊರೋನ ಕಾಲದಲ್ಲಿ ಹೃದಯವನ್ನು ಕಾಪಾಡಿ
ಕೊರೋನ ಸೋಂಕಿನ ನೆಪದಲ್ಲಿ ಆಗಿರುವ ಸಮಸ್ಯೆಗಳಿಗೆ ಲೆಕ್ಕವಿಲ್ಲ. ಕೊರೋನ ಸೋಂಕಿಗೆ ಹೊರತಾದ ಇತರ ಸಮಸ್ಯೆಗಳನ್ನು ಹೊಂದಿರುವವರಿಗೆ, ಅದರಲ್ಲೂ, ಹೃದ್ರೋಗ, ಪಾರ್ಶ್ವವಾಯು, ಕ್ಯಾನ್ಸರ್ ಆದವರಿಗೆ, ತುರ್ತು ಸಮಸ್ಯೆಗಳಾದವರಿಗೆ ಹಾಗೂ ಗರ್ಭಿಣಿಯರಿಗೆ, ಕ್ಲಪ್ತ ಸಮಯದಲ್ಲಿ ಸೂಕ್ತ ಆರೋಗ್ಯ ಸೇವೆಗಳನ್ನು ಪಡೆಯುವುದಕ್ಕೆ ಬಹಳಷ್ಟು ಕಷ್ಟಗಳಾಗಿವೆ. ಕೊರೋನ ಸೋಂಕನ್ನು ನಿಯಂತ್ರಿಸುವ ಹೆಸರಲ್ಲಿ ಅತಿ ಕಠಿಣ ದಿಗ್ಬಂಧನ ವಿಧಿಸಿದ್ದರಿಂದ ಜನರು ಆಸ್ಪತ್ರೆಗೆ ಹೋಗುವುದಕ್ಕೆ ಅಡ್ಡಿಗಳಾದವು. ಎಲ್ಲಾ ಆಸ್ಪತ್ರೆಗಳಲ್ಲೂ ಕೊರೋನ ಪೀಡಿತರಿಗೆ ಹೊರರೋಗಿ, ಒಳರೋಗಿ ಚಿಕಿತ್ಸೆ ನೀಡುವಂತೆ ಕಡ್ಡಾಯ ನಿಯಮಗಳನ್ನು ಮಾಡಿದ್ದರಿಂದ, ಅನ್ಯ ರೋಗಿಗಳ ಚಿಕಿತ್ಸೆಗೆ ಸಮಸ್ಯೆಗಳಾದವು. ಕೊರೋನ ಬಗ್ಗೆ ವಿಪರೀತವಾದ ಭೀತಿಯನ್ನು ಹುಟ್ಟಿಸಿದ್ದರಿಂದ ಅನ್ಯ ಸಮಸ್ಯೆಗಳುಳ್ಳವರು ವೈದ್ಯರ ಬಳಿಗೆ, ಆಸ್ಪತ್ರೆಗಳಿಗೆ ಹೋಗುವುದಕ್ಕೆ ಅಂಜುವಂತೆ ಆಯಿತು. ಅನ್ಯ ರೋಗಗಳಿಗಾಗಿ ಆಸ್ಪತ್ರೆಗಳಿಗೆ ಬಂದವರೆಲ್ಲರಿಗೆ, ಹೆರಿಗೆಗಾಗಿ ಬಂದ ಎಲ್ಲಾ ಗರ್ಭಿಣಿಯರಿಗೆ ಕೊರೋನ ಲಕ್ಷಣಗಳಿಲ್ಲದಿದ್ದರೂ ಕಡ್ಡಾಯವಾಗಿ ಕೊರೋನ ಪರೀಕ್ಷೆ ಮಾಡಿ, ಆ ಬಳಿಕವೇ ಚಿಕಿತ್ಸೆ ನೀಡುವುದೆಂಬ ವ್ಯವಸ್ಥೆ ಮಾಡಿದ್ದು ಇನ್ನಷ್ಟು ಆತಂಕ, ಹೆದರಿಕೆ, ಗೊಂದಲಗಳಿಗೆ ಕಾರಣವಾಯಿತು.
ಕೊರೋನ ಒಂದೇ ಮಹಾವ್ಯಾಧಿ ಎಂಬಂತೆ ಎಲ್ಲವನ್ನೂ ಮುಚ್ಚಿ ಹಾಕಿದ ನಂತರದ ಈ ಆರು ತಿಂಗಳಲ್ಲಿ ಅನೇಕರು ತಮ್ಮ ಬಂಧುಮಿತ್ರರನ್ನು ಹೃದಯಾಘಾತದ ಕಾರಣಕ್ಕೆ ಕಳೆದುಕೊಂಡಿದ್ದಾರೆ. ಈ ಕೊರೋನ ಕಾಲದಲ್ಲಿ ಹೃದ್ರೋಗದ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ 35% ಇಳಿಕೆಯಾಗಿದೆ, ಆದರೆ ಹೃದ್ರೋಗಗಳಿಂದ ಸಾವುಂಟಾಗುವ ಪ್ರಮಾಣದಲ್ಲಿ 4% ಏರಿಕೆಯಾಗಿದೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರೂ, ಹಿರಿಯ ಹೃದ್ರೋಗ ತಜ್ಞರೂ ಆಗಿರುವ ಡಾ|| ಸಿ.ಎನ್. ಮಂಜುನಾಥ್ ಹೇಳಿರುವುದು, ಇನ್ನೊಂದೆಡೆ, ಹಲವರು ತಮ್ಮ ಮನೆಗಳಲ್ಲೇ ಹೃದಯಾಘಾತದಿಂದ ಮೃತರಾದರು ಎಂಬ ವರದಿಗಳಾಗುತ್ತಿರುವುದು, ಹೃದ್ರೋಗದ ಲಕ್ಷಣಗಳಿರುವವರು ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿದ್ದಾರೆ, ಅಥವಾ ಹೋಗಲು ಸಾಧ್ಯವಾಗುತ್ತಿಲ್ಲ, ಅಥವಾ ತೀರಾ ತಡವಾಗಿ ಹೋಗುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತವೆ.
ಇದಲ್ಲದೆ, ಕೊರೋನ ಸೋಂಕು ಕೂಡ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ, ರಕ್ತವು ಹೆಪ್ಪುಗಟ್ಟುವುದನ್ನು ಪ್ರಚೋದಿಸುತ್ತದೆ. ಆದ್ದರಿಂದ ಅದಾಗಲೇ ರಕ್ತನಾಳಗಳಲ್ಲಿ ಸಮಸ್ಯೆಯಿದ್ದವರಿಗೆ ಕೊರೋನ ಸೋಂಕು ತಗಲಿದರೆ ಹೃದಯಾಘಾತವಾಗುವುದಕ್ಕೆ, ಹೃದಯದ ಸ್ನಾಯುಗಳಿಗೆ ಸಮಸ್ಯೆಯಾಗುವುದಕ್ಕೆ ಕಾರಣವಾಗಬಹುದು.
ಒಟ್ಟಿನಲ್ಲಿ, ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಗಳಿರುವವರಿಗೆ ಈ ಕೊರೋನ ಸೋಂಕು ಕಷ್ಟಕರವಾಗಿ ಪರಿಣಮಿಸಿದೆ. ಆದ್ದರಿಂದ ಅವರೆಲ್ಲರೂ ವಿಶೇಷ ಎಚ್ಚರಿಕೆಗಳನ್ನು ವಹಿಸಬೇಕು, ರಕ್ತನಾಳಗಳ ಸಮಸ್ಯೆಯಿಂದ ಹೃದಯದ ಸ್ನಾಯುಗಳಿಗೆ ರಕ್ತ ಪೂರೈಕೆಯಲ್ಲಿ ಕೊರತೆಯಾಗುತ್ತಿರುವ ಯಾವುದೇ ಲಕ್ಷಣಗಳು ಗೋಚರಿಸಿದರೆ ತಕ್ಷಣವೇ ಅದಕ್ಕೆ ತಕ್ಕ ಪರೀಕ್ಷೆಗಳನ್ನು ಮತ್ತು ಚಿಕಿತ್ಸೆಯನ್ನು ಪಡೆಯಬೇಕು.
ವ್ಯಕ್ತಿಯು ಯಾವುದೇ ಕೆಲಸವನ್ನು ಮಾಡುವಾಗ ಹೃದಯದ ಸ್ನಾಯುಗಳಿಗೆ ಇನ್ನಷ್ಟು ರಕ್ತವು ಹರಿಯಬೇಕಾಗುತ್ತದೆ. ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಯಾಗಿ, ಅವುಗಳಲ್ಲಿ ರಕ್ತಸಂಚಾರಕ್ಕೆ ಅಡ್ಡಿಯಾಗುತ್ತಿದ್ದರೆ ಹೆಚ್ಚುವರಿಯಾಗಿ ರಕ್ತವನ್ನು ಹರಿಯುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ, ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಯಿದ್ದವರು ಯಾವುದೇ ಕೆಲಸವನ್ನು ಹೆಚ್ಚು ಮಾಡತೊಡಗಿದಾಗ ಕಷ್ಟವೆನಿಸತೊಡಗುತ್ತದೆ. ಈ ಕಷ್ಟವು ಹಲವು ಬಗೆಯಲ್ಲಿ ವ್ಯಕ್ತವಾಗಬಹುದು. ಹೃದಯದ ಸಮಸ್ಯೆಯುಳ್ಳವರಿಗೆ ಎದೆ ನೋವುಂಟಾಗುತ್ತದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆಯಾದರೂ ಅದು ಸಂಪೂರ್ಣ ಸತ್ಯವಲ್ಲ; ಹೃದ್ರೋಗವುಳ್ಳವರಿಗೆ ಎದೆ ನೋವು ಇಲ್ಲದಿರಬಹುದು, ಅದರ ಬದಲಿಗೆ ಇತರ ಲಕ್ಷಣಗಳಿರಬಹುದು, ಎದೆ ನೋವು ಹೃದ್ರೋಗವಲ್ಲದೆ ಇತರ ಹಲವು ಕಾರಣಗಳಿಂದಲೂ ಉಂಟಾಗಬಹುದು. ಹಾಗಾಗಿ, ಹೃದ್ರೋಗವು ಹೆಚ್ಚು ಸಾಮಾನ್ಯವಾಗುತ್ತಿರುವಾಗ, ಯುವಜನರಲ್ಲೂ ಕಾಣಿಸಿಕೊಳ್ಳುತ್ತಿರುವಾಗ, ಹೃದ್ರೋಗದ ಲಕ್ಷಣಗಳ ಬಗ್ಗೆ ಎಲ್ಲರಲ್ಲೂ ಸ್ಪಷ್ಟವಾದ ಅರಿವಿರುವುದು ಒಳ್ಳೆಯದು.
ಹೃದಯದ ರಕ್ತನಾಳಗಳ ಕಾಯಿಲೆಯಿದ್ದರೆ, ಹೃದ್ರೋಗದ ಸಮಸ್ಯೆಯಿದ್ದರೆ, ವ್ಯಕ್ತಿಯು ಶ್ರಮ ವಿನಿಯೋಗಿಸಿದಾಗ ಹೃದಯಕ್ಕೆ ಅದನ್ನು ನಿಭಾಯಿಸುವುದಕ್ಕೆ ಕಷ್ಟವಾಗುತ್ತದೆ, ಅದು ಬೇರೆ ಬೇರೆ ರೀತಿಗಳಲ್ಲಿ ಪ್ರಕಟಗೊಳ್ಳಬಹುದು. ವ್ಯಕ್ತಿಯು ನಿತ್ಯದಂತೆ ನಡೆದಾಡುವಾಗ, ಮೆಟ್ಟಲುಗಳನ್ನೇರುವಾಗ, ಕೆಲಸಗಳನ್ನು ಮಾಡುವಾಗ ಅಥವಾ ತುಂಬು ಊಟವನ್ನು ಮಾಡಿದಾಗ ದೇಹದ ಆಯಾ ಭಾಗಗಳಿಗೆ ಹೆಚ್ಚಿನ ರಕ್ತ ಪೂರೈಕೆಯ ಅಗತ್ಯವುಂಟಾಗುವುದರಿಂದ ಇಂಥ ಸಂದರ್ಭಗಳಲ್ಲಿ ಹೃದ್ರೋಗವನ್ನು ಸೂಚಿಸುವ ಲಕ್ಷಣಗಳು ಅನುಭವಕ್ಕೆ ಬರುತ್ತವೆ. ಹೃದಯದ ಸ್ನಾಯುಗಳಲ್ಲಿ ನೋವನ್ನು ಗ್ರಹಿಸುವ ನರಗಳಿಲ್ಲದಿರುವುದರಿಂದ ನಮ್ಮ ಕೈಕಾಲುಗಳಿಗೆ ಗಾಯವಾದಾಗ ಉಂಟಾಗುವಂಥ ನೋವು ಹೃದಯದ ಸಮಸ್ಯೆಗಳಲ್ಲಿ ಉಂಟಾಗುವುದಿಲ್ಲ. ಬದಲಿಗೆ ಹೃದಯದ ಸುತ್ತುಮುತ್ತಲಿನ ಅಂಗಗಳಲ್ಲಿ ಬಗೆಬಗೆಯ ವೇದನೆಗಳು, ಅಥವಾ ‘ಕಷ್ಟಗಳು’, ಕಂಡುಬರಬಹುದು. ನಡೆದಾಡುವಾಗ ಅಥವಾ ದುಡಿಯುವಾಗ ಅಥವಾ ತುಂಬು ಊಟ ಮಾಡಿದಾಗ ಕುತ್ತಿಗೆ ಅಥವಾ ಗಂಟಲು ಅಥವಾ ಎದೆ ಬಿಗಿದಂತಾಗುವುದು ಅಥವಾ ಭಾರವೆನಿಸುವುದು, ಎದೆ ಅಥವಾ ಗಂಟಲು ಅಥವಾ ಹೊಟ್ಟೆಯ ಮೇಲ್ಭಾಗದಲ್ಲಿ ಉಬ್ಬಿ ಬಂದಂತಾಗುವುದು (‘ಗ್ಯಾಸ್’ ತುಂಬಿದಂತಾಗುವುದು), ಎದೆ ಹಿಂಡಿದಂತಾಗುವುದು ಅಥವಾ ನೋವಾಗುವುದು (ಎದೆಯ ಎಡ, ಬಲ, ಮಧ್ಯ, ಎಲ್ಲೇ ಆಗಿರಬಹುದು), ಭುಜ, ತೋಳು, ದವಡೆ, ಕತ್ತಿನ ಬದಿಗಳು, ಬೆನ್ನಿನ ಮೇಲ್ಭಾಗಗಳಲ್ಲಿ ಸೆಳೆದಂತಾಗುವುದು ಅಥವಾ ನೋಯುವುದು, ಆಯಾಸವಾಗುವುದು, ಉಸಿರಾಡಲು ಕಷ್ಟವೆನಿಸುವುದು, ಎದೆ ಬಡಿತ ಹೆಚ್ಚುವುದು, ತಲೆ ಸುತ್ತುವುದು, ಇತ್ಯಾದಿಗಳೆಲ್ಲವೂ ಹೃದ್ರೋಗದ ಲಕ್ಷಣಗಳಾಗಿರಬಹುದು. ಆದ್ದರಿಂದ ಯಾರಲ್ಲೇ ಆಗಲಿ, ಯಾವುದೇ ಶ್ರಮವುಳ್ಳ ಕೆಲಸಗಳಲ್ಲಿ ತೊಡಗಿದಾಗ ಹೊಕ್ಕಳಿಂದ ಮೇಲಕ್ಕೆ ಯಾವುದೇ ಅನುಭವಗಳಾದರೆ, ಮತ್ತು ಪ್ರತೀ ಬಾರಿ ಅದೇ ಕೆಲಸವನ್ನು ಮಾಡುವಾಗ ಆ ತೊಂದರೆಯು ಮರುಕಳಿಸುತ್ತಿದ್ದರೆ, ಅದನ್ನು ಹೃದ್ರೋಗದ ಸೂಚನೆಯೆಂದು ಪರಿಗಣಿಸುವುದೇ ಒಳ್ಳೆಯದು.
ಯಾವುದೇ ಶ್ರಮದ ಕೆಲಸವನ್ನು ಮಾಡುವಾಗ ಇಂತಹ ಲಕ್ಷಣಗಳುಳ್ಳವರು ಕೂಡಲೇ ತಜ್ಞ ವೈದ್ಯರನ್ನು ಕಾಣಲೇ ಬೇಕು ಮತ್ತು ಹೃದ್ರೋಗಕ್ಕೆ ಪರೀಕ್ಷೆಗಳನ್ನು ನಡೆಸುವಂತೆ ಒತ್ತಾಯಿಸಬೇಕು. ಕೆಲವೊಮ್ಮೆ ವೈದ್ಯರು ಕೂಡ ಈ ಲಕ್ಷಣಗಳನ್ನು ಲಘುವಾಗಿ ಪರಿಗಣಿಸಿ, ‘ಗ್ಯಾಸಿಗೋ’, ನೋವಿಗೋ ಮಾತ್ರೆಗಳನ್ನು ಕೊಟ್ಟು ಕಳುಹಿಸಬಹುದು, ಅದರಿಂದ ಹೃದ್ರೋಗದ ಪರೀಕ್ಷೆಗಳು ನಡೆಯದೆ ಸಮಸ್ಯೆಗಳಾಗಬಹುದು. ಇಂಥ ಲಕ್ಷಣಗಳಿದ್ದವರು ಈ ಕೊರೋನ ಕಾಲದಲ್ಲಿ ಪರೀಕ್ಷೆಗೆ ಹೋಗಲು ಹಿಂಜರಿದಿರುವುದು, ವೈದ್ಯರು ಲಭ್ಯವಾಗದಿರುವುದು, ಹಾಗೊಮ್ಮೆ ದೊರೆತರೂ ಕೊರೋನ ಕಳೆಯಲಿ ಎಂದು ಮುಂದಕ್ಕೆ ಹಾಕಿರುವುದು, ಹೃದಯದ ಪರೀಕ್ಷೆಗೆ ಮುನ್ನ ಕೊರೋನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದಾಗ ಒಪ್ಪದೆ ವಿಮುಖರಾಗಿರುವುದು ಎಲ್ಲವೂ ಘಟಿಸಿವೆ, ಅದರಿಂದ ಕೆಲವರಿಗೆ ಅಪಾಯಗಳಾಗಿರುವ ಸಾಧ್ಯತೆಗಳು ಇದ್ದೇ ಇವೆ. ಆದ್ದರಿಂದ ಯಾರಿಗೇ ಆಗಲಿ, ಮೇಲೆ ಹೇಳಿದ ಲಕ್ಷಣಗಳಿದ್ದರೆ ಕೂಡಲೇ ಇಸಿಜಿ, ಅಥವಾ ಇನ್ನೂ ಒಳ್ಳೆಯದಾಗಿ, ಹೃದಯತಜ್ಞರನ್ನು ಕಂಡು ಟ್ರೆಡ್ ಮಿಲ್ ಪರೀಕ್ಷೆ ಇತ್ಯಾದಿ ಮಾಡಿಸಿಕೊಳ್ಳಬೇಕು, ಅದರಲ್ಲೇನಾದರೂ ಹೃದ್ರೋಗದ ಸೂಚನೆಗಳು ಕಂಡುಬಂದು ಇನ್ನಷ್ಟು ಉನ್ನತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕೆಂದು ವೈದ್ಯರು ಹೇಳಿದರೆ ಹಿಂಜರಿಯದೆ ಮಾಡಿಸಿಕೊಳ್ಳಬೇಕು.
ಹೃದಯದ ರಕ್ತನಾಳಗಳ ಕಾಯಿಲೆಗೆ ನಮ್ಮ ಆಧುನಿಕ ಆಹಾರವೇ ಅತಿ ಮುಖ್ಯ ಕಾರಣವಾಗಿದೆ. ಅದರ ಜೊತೆಗೆ, ವ್ಯಾಯಾಮವಿಲ್ಲದ ಜೀವನ, ಧೂಮಪಾನ, ಮದ್ಯಪಾನಗಳು ಕೂಡ ಕಾರಣಗಳಾಗಿವೆ. ಸಕ್ಕರೆ, ಎಲ್ಲಾ ಸಿಹಿ ತಿನಿಸುಗಳು, ಹಣ್ಣು ಮತ್ತು ಹಣ್ಣಿನ ರಸಗಳು (ಹಣ್ಣು – ತರಕಾರಿ ಸೇವಿಸಿದರೆ ಒಳ್ಳೆಯದು ಎಂದೇ ಹೆಚ್ಚಿನ ವೈದ್ಯರು ಹೇಳುತ್ತಿರುತ್ತಾರೆ, ಆದರೆ ಹಣ್ಣು ಮತ್ತು ತರಕಾರಿ ಒಂದೇ ಅಲ್ಲ, ಬೇರೆ ಬೇರೆಯೇ ಆಗಿವೆ ಎಂಬುದನ್ನು ಗಮನಿಸಿ, ಹಣ್ಣು ಅಂದರೆ ಸಕ್ಕರೆ, ಅಷ್ಟೇ), ಸಂಸ್ಕರಿತ ತಿನಿಸುಗಳು (ಮೈದಾ, ಬ್ರೆಡ್ಡು, ಬಿಸ್ಕತ್ತು ಇತ್ಯಾದಿ), ರಿಫೈನ್ಡ್ ಎಣ್ಣೆ, ಕರಿದ ತಿನಿಸುಗಳು ಮತ್ತು ವಿಪರೀತ ಪ್ರಮಾಣದಲ್ಲಿ ಧಾನ್ಯಗಳ ಸೇವನೆ ಹೃದ್ರೋಗವೂ ಸೇರಿದಂತೆ ಎಲ್ಲಾ ಆಧುನಿಕ ರೋಗಗಳಿಗೆ ಮುಖ್ಯ ಕಾರಣಗಳಾಗಿವೆ. ಇವೆಲ್ಲವನ್ನು ತ್ಯಜಿಸಿ, ನಿಯತವಾಗಿ ವ್ಯಾಯಾಮ ಮಾಡಿದರೆ ಈ ರೋಗಗಳನ್ನು ದೂರವಿಡಬಹುದು.
September 30, 2020
ಕನಿಷ್ಠ 9 ಕೋಟಿ ಭಾರತೀಯರಿಗೆ ಈಗಾಗಲೇ ಕೊರೋನ ಸೋಂಕು ತಗಲಿದೆ: ಐಸಿಎಂಆರ್
ಕೊರೋನ ನಿಯಂತ್ರಣ ಮಾತ್ರವೇ ಅಲ್ಲ, ಈ ದೇಶದಲ್ಲಿ ಯಾವುದೆಲ್ಲ ಸರಿಯಿಲ್ಲ ಎನ್ನುವುದಕ್ಕೆ ಇದೊಂದೇ ವರದಿ ಸಾಕು.
ಕೊರೋನ ನೆಪದಲ್ಲಿ 3 ತಿಂಗಳು ಅನಗತ್ಯವಾಗಿ ದಿಗ್ಬಂಧನ ವಿಧಿಸಿ ಎಲ್ಲಾ ಕಚೇರಿಗಳನ್ನು ಮುಚ್ಚಿ ಹಾಕಿದ್ದರಿಂದ ಎಲ್ಲರೂ ಈಗ ಒಮ್ಮೆಗೇ ಬರುವಂತಾಗಿದೆ. ಆಗ ಎಲ್ಲವನ್ನೂ ಮುಚ್ಚುವ ಬದಲು ತದ್ವಿರುದ್ಧವಾದುದನ್ನು ಮಾಡಬೇಕಿತ್ತು – ಅಂಗಡಿ, ಕಚೇರಿಗಳನ್ನು ಹೆಚ್ಚು ಹೊತ್ತು ತೆರೆದಿಟ್ಟು, ಜನರು ಪ್ರತ್ಯೇಕವಾಗಿ, ಸಾವಧಾನದಿಂದ ಬರುವಂತೆ ಮಾಡಿ, ಅಂತರವನ್ನು ಕಾಯ್ದಿಟ್ಟು ಸೋಂಕು ಹರಡದಂತೆ ತಡೆಯಬಹುದಿತ್ತು (ಅಷ್ಟಕ್ಕೂ ಆಗ ಕಚೇರಿಗಳಲ್ಲಿ, ಸಮುದಾಯ ಮಟ್ಟದಲ್ಲಿ, ಸೋಂಕು ಹರಡುವ ಸಾಧ್ಯತೆಗಳೇ ನಗಣ್ಯವಾಗಿದ್ದವು)
ಈಗ ಬರುತ್ತಿರುವವರಿಗೆ ವಿಶೇಷ ವ್ಯವಸ್ಥೆ ಮಾಡಿ, ಕಚೇರಿ ಅವಧಿಯನ್ನು ಹೆಚ್ಚಿಸಿ, ಭೇಟಿಯನ್ನು ನಿಗದಿ ಪಡಿಸಿಕೊಂಡೇ ಬರುವಂತೆ ಮಾಡಿ, ಅದನ್ನು ಸರಿಯಾಗಿ ಪಾಲಿಸಬಹುದಿತ್ತು.
ಡಿಜಿಟಲ್ ಇಂಡಿಯಾ, ಎಲ್ಲವೂ ಡಿಜಿಟಲ್, ಇಸ್ವ ಗುರು ಎಂದೆಲ್ಲ ಬಡಾಯಿ ಬಿಡುವ ಕಾಲದಲ್ಲಿ ಸರ್ವರ್ ಕೆಲಸ ಮಾಡುತ್ತಿಲ್ಲವಂತೆ!
ಹಿರಿಯ ವಯಸ್ಕರನ್ನು ಮನೆಯಲ್ಲೇ ಉಳಿಯುವಂತೆ ಹೇಳಿರುವ ಸರಕಾರ ಇಲ್ಲಿ ಕಾಯಿಸಿ, ಎಲ್ಲರನ್ನೂ ಅವರ ಮೈಮೇಲೆ ಬೀಳಿಸಿ, ಸಮುದಾಯದೊಳಗೆ ಕೊರೋನ ಹರಡುತ್ತಿರುವ ಈ ಸಮಯದಲ್ಲಿ ಅದನ್ನು ‘ತಡೆಯಲು’ ವಿಶೇಷ ಪ್ರಯತ್ನ ಮಾಡುತ್ತಿದೆ!
“ರೋಗ ಆಗಲೇ ಸಮುದಾಯದೊಳಗೆ ಪ್ರವೇಶಿಸಿದೆ. ಈಗ Lockdownನಿಂದ ಅದನ್ನು ನಿಯಂತ್ರಿಸಲು ಸಾಧ್ಯವಿಲ್ಲ. Lockdown ಮಾಡಿದರೆ ಇಡೀ ಆರ್ಥಿಕತೆಯೇ ಹಾದಿತಪ್ಪಿ ಬಡತನ, ನಿರುದ್ಯೋಗ, ಹಸಿವು ತಾಂಡವಾಡಲಾರಂಭಿಸುತ್ತವೆ. ಅದರೆ ರೋಗ ಮಾತ್ರ ನಿಯಂತ್ರಣಕ್ಕೆ ಬರುವುದಿಲ್ಲ. ಆರೋಗ್ಯವಂತ ಮಂದಿಯ ಪಾಲಿಗೆ ಕೋವಿಡ್-19 ಇತರ ವೈರಲ್ ಜ್ವರಗಳಂತೆ ಒಂದು ಸಾಮಾನ್ಯ ರೋಗವಾಗಿದ್ದರಿಂದ ಆರೋಗ್ಯವಂತ ಜನರಿಗೆ ಇದರಿಂದ ಎನೂ ತೊಂದರೆ ಇಲ್ಲ. ಅವರನ್ನು ಮುಕ್ತವಾಗಿ ಓಡಾಡಲು ಬಿಡಿ. ಅವರಿಗೆ ಕೋವಿಡ್-19 ಬಂದರೂ ಅವರ ದೇಹ ಈ ರೋಗಕ್ಕೆ ಕಾರಣವಾದ ನೋವೆಲ್ ಕೋರೋನಾವೈರಸ್ ಅನ್ನು ಕೊಲ್ಲುವ ಪ್ರತಿಕಾಯಗಳನ್ನು ಬೇಗ ಬೆಳೆಸಿಕೊಳ್ಳುತ್ತದೆ. ಈ ಪ್ರತಿಕಾಯಗಳು ವೈರಸ್ಸನ್ನು ಕೊಂದು ದೇಹವನ್ನು ಕೋವಿಡ್-19ನಿಂದ ಮುಕ್ತಗೊಳಿಸುತ್ತವೆ. ಹೀಗೆ ಸಮಾಜದಲ್ಲಿನ ಎಲ್ಲಾ ಅಥವಾ ಬಹುತೇಕ ಆರೋಗ್ಯವಂತ ಜನರಿಗೆ ರೋಗ ಬಂದು ಹೋಗುವುದರಿಂದ ಸಮುದಾಯಕ್ಕೇ ರೋಗನಿರೋಧಕ ಶಕ್ತಿ ಬರುತ್ತದೆ. ಅಷ್ಟೊತ್ತಿಗೆ ವ್ಯಾಕ್ಸಿನ್ ಕೂಡ ಬಂದರೂ ಬರಬಹುದು. ಅಲ್ಲಿಯ ತನಕ ನಾವು ಎರಡು ಮುಖ್ಯ ಕೆಲಸ ಮಾಡಬೇಕಿದೆ. ಒಂದು, ಈ ರೋಗಕ್ಕೆ ಸುಲಭವಾಗಿ ತುತ್ತಾಗಬಲ್ಲ ಕಡಿಮೆ ರೋಗನಿರೋಧಕ ಶಕ್ತಿಯಿರುವ ಜನರನ್ನು (ವೃದ್ಧರು, ರೋಗಿಗಳು, ಇತ್ಯಾದಿ) ಪ್ರತ್ಯೇಕವಾಗಿರಿಸಿ ರಕ್ಷಿಸಿಕೊಳ್ಳಬೇಕು. ಅಂದರೆ reverse quarantine ಮಾಡಬೇಕು! ಎರಡು, ಈ ರೋಗಕ್ಕೆ ತುತ್ತಾಗುವ ಜನರಲ್ಲಿ ಒಂದು ಸಣ್ಣ ಪ್ರಮಾಣದ ರೋಗಿಗಳಿಗನ್ನು ಆಸ್ಪತ್ರೆಗೆ ದಾಖಲು ಮಾಡಬೇಕಾಗುವುದರಿಂದ, ಅವರಲ್ಲಿ ಸ್ವಲ್ಪ ಮಂದಿಗೆ ಐಸಿಯು, ವೆಂಟಿಲೇಟರ್ ಸಪೋರ್ಟ್ ಬೇಕಾಗುವುದರಿಂದ ಪ್ರತ್ಯೇಕ ಕೋವಿಡ್-19 ಆಸ್ಪತ್ರೆಗಳನ್ನು ಸಜ್ಜುಗೊಳಿಸಬೇಕು.”
ಈ ಮೇಲಿನ ಸಲಹೆಗಳನ್ನು ನಮ್ಮಕರ್ನಾಟಕದ ಜನಪರ ವೈದ್ಯರೊಬ್ಬರು ಕೋವಿಡ್ ಬಂದೆರಗಿದ ಆರಂಭದಲ್ಲೇ ನೀಡಿದ್ದರು. (ಇವು ಅವರದ್ದೇ ಯಥಾವತ್ ಮಾತುಗಳಲ್ಲ. ಅವರು ಬೇರೆ ಬೇರೆ ಸಂದರ್ಭಗಳಲ್ಲಿ ಕೊಟ್ಟ ಸಲಹೆಗಳನ್ನು ನಾನು ಅರ್ಥಮಾಡಿಕೊಂಡಂತೆ ಸಾರಾಂಶಿಕರಿಸಿ ಇಲ್ಲಿ ನನ್ನ ಮಾತುಗಳಲ್ಲಿ ಕೊಟ್ಟಿದ್ದೇನೆ) ಆಗ ಅವರನ್ನು ಗೇಲಿ ಮಾಡಿದವರೇ ಹೆಚ್ಚು. ಈಗ ಅವರ ಒಂದೊಂದು ಮಾತೂ ನಿಜವಾಗಿದೆ. ನಮ್ಮ ವೈದ್ಯಕೀಯ ಶಿಕ್ಷಣ ಸಚಿವರಿಗೂ ಜ್ಞಾನೋದಯವಾಗಿದೆ.
ಅಂದಹಾಗೆ, ಈ ರೀತಿ ವಿಶ್ವದಾದ್ಯಂತದ ಅನುಭವಗಳ ಆಧಾರದಲ್ಲಿ ಇಂತಹ ಉತ್ತಮವಾದ ಸಲಹೆಗಳನ್ನು ನೀಡಿ ಗೇಲಿಗೊಳಗಾದ ಆ ವೈದ್ಯರು ಯಾರು ಎಂದು ಹೇಳಬಲ್ಲಿರಾ?
CDC guidelines and also NHS UK COVID19 treatment guidelines, both evidence based, do not recommend any medicines during the first week/uncomplicated course. To the best of my knowledge, from the reports in the media, PM Johnson did follow NHS guidelines, and he stayed home for the first 10 days and only when his fever continued, he was shifted to a hospital, not sure whether he was given remdisivir or steroids, he recovered soon and returned home. President Trump’s treatment details have been published in news reports and it appears that he has been given medicines such as synthetic antibodies, remdisivir, dexamethasone, famotidine, melatonin, zinc and vitamin D, that are not listed/suggested under the CDC guidelines. He has been sent home on the 5th or 6th day of his infection. The complications of COVID19 generally occur in the second week, and I’m indeed concerned how and why did the President leave the hospital on 5th or 6th day. Is there any guarantee that these medicines would work immediately, so as to discharge him so confidently? If so, why are they not listed under the CDC guidelines?
ಅಮೆರಿಕದ ಅಧ್ಯಕ್ಷರಿಗೆ ಚಿಕಿತ್ಸೆ ನೀಡುವಾಗ ಅಮೆರಿಕದ ಸಿ.ಡಿ.ಸಿ. ಸೂಚಿಸಿರುವ ಚಿಕಿತ್ಸಾಕ್ರಮವನ್ನು ಪಾಲಿಸಲಾಗಿಲ್ಲ. ಯುಕೆ ಪ್ರಧಾನಿ ಜಾನ್ಸನ್ ಅವರಿಗೆ ಕೋವಿಡ್ ಬಾಧಿಸಿದ್ದಾಗ, ಅಲ್ಲಿನ ರಾಷ್ಟ್ರೀಯ ಆರೋಗ್ಯ ಸೇವೆಗಳು ಸೂಚಿಸಿದ್ದ ಚಿಕಿತ್ಸಾಕ್ರಮವನ್ನು ಅವರೂ ಪಾಲಿಸಿದ್ದರು, ಅದರಂತೆ 10 ದಿನ ಮನೆಯಲ್ಲೇ ಉಳಿದಿದ್ದು, ಜ್ವರವು ಮುಂದುವರಿದಾಗ ಆಸ್ಪತ್ರೆಗೆ ದಾಖಲಾಗಿ, ಆಮ್ಲಜನಕ ಪಡೆದು, ಕೆಲವೇ ದಿನಗಳಲ್ಲಿ ಮನೆಗೆ ಮರಳಿದ್ದರು, ಅವರಿಗೆ ರೆಂಡಿಸಿವಿರ್ ಅಥವಾ ಸ್ಟೀರಾಯ್ಡ್ ಕೊಟ್ಟಿರುವ ಬಗ್ಗೆ ಮಾಹಿತಿ ಇಲ್ಲ. ಅಧ್ಯಕ್ಷ ಟ್ರಂಪ್ ಸೋಂಕಿನ ಐದನೇ ದಿನವೇ ಮನೆಗೆ ಮರಳಿದ್ದಾರೆ, ಆ ಆರಂಭಿಕ ಹಂತದಲ್ಲಿ ನೀಡುವುದಕ್ಕೆ ಸಿಡಿಸಿ ಸೂಚಿಸಿಲ್ಲದ ಕೃತಕ ಪ್ರತಿಕಾಯಗಳು, ರೆಂಡಿಸಿವಿರ್, ಸ್ಟೀರಾಯ್ಡ್, ವಿಟಮಿನ್ ಡಿ, ಫಾಮೋಟಿಡಿನ್, ಮೆಲಟೋನಿನ್, ಸತು ಎಲ್ಲವನ್ನೂ ಅವರಿಗೆ ನೀಡಲಾಗಿದೆ. ಕೋವಿಡ್ ನಲ್ಲಿ ಸಮಸ್ಯೆಗಳಾಗುವುದು ಎರಡನೇ ವಾರದಲ್ಲಿ. ಅಲ್ಲಿಯವರೆಗೆ ಕಾಯದೆಯೇ ತರಾತುರಿಯಿಂದ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇಕೆ? ಈ ಔಷಧಗಳು ಅಷ್ಟು ಬೇಗ ಕಾಯಿಲೆಯನ್ನು ಗುಣಪಡಿಸುತ್ತವೆ ಎಂಬ ಧೈರ್ಯವೇ? ಹಾಗಿದ್ದರೆ ಎಲ್ಲರಿಗೂ ಅವನ್ನೇ ನೀಡುವಂತೆ ಸಿ.ಡಿ.ಸಿ. ಯಾಕೆ ಹೇಳುತ್ತಿಲ್ಲ?
October 7, 2020
ಮೂರ್ಖತನವೇ, ಬೇರೇನಲ್ಲ.
Foolishness, for sure.
Bracketing India with Brazil and the United States for its “utter failure” to deal with Covid-19, Stiglitz described ”India as a poster child of what not to do”, saying the lockdown failed to have any impact and the migrant labour crisis precipitated the contagion.
“It (India) picked up one idea that is important. Lockdown. Did not think about what it means in a poor country. How are people going to live, large number of people moving across the country. One could not have imagined anything worse for spreading the disease,” said the professor of Columbia University in the US.
ಸೋಂಕಿನ ಲಕ್ಷಣಗಳಿರುವವರು ಮನೆಯಲ್ಲೇ ಉಳಿಯಬೇಕು, ಅವರನ್ನು ಪರೀಕ್ಷಿಸಲು ಸಂಚಾರಿ ಘಟಕಗಳನ್ನು ರೂಪಿಸಬೇಕು, ಅದಾಗದಿದ್ದರೆ ಅವರವರೇ ಪಲ್ಸ್ ಆಕ್ಸಿಮೀಟರ್ ಬಳಸಿ ತಮ್ಮ ರಕ್ತದ ಆಮ್ಲಜನಕದ ಮಟ್ಟವನ್ನು ನೋಡುತ್ತಿರಬೇಕು, ಅದು 95% ಕ್ಕಿಂತ ಕಡಿಮೆಯಾದೊಡನೆ ಆಸ್ಪತ್ರೆಗೆ ದಾಖಲಾಗಬೇಕು, ಅಂಥವರಿಗೆ ಮೊದಲು ಸ್ಥಳೀಯ/ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕ ನೀಡುವ ವ್ಯವಸ್ಥೆಯಿರಬೇಕು, ತೀವ್ರ ಸಮಸ್ಯೆಯುಳ್ಳವರಷ್ಟೇ ಉನ್ನತ ಆಸ್ಪತ್ರೆಗಳಿಗೆ ಹೋಗಬೇಕು ಎನ್ನುವ ಕಾರ್ಯತಂತ್ರವನ್ನು ಮಾರ್ಚ್- ಏಪ್ರಿಲ್ ತಿಂಗಳಲ್ಲೇ ಬರೆದಿದ್ದೆ. ಹಿರಿಯ ವಯಸ್ಕರು ಮತ್ತು ಅನ್ಯ ರೋಗಗಳುಳ್ಳವರನ್ನು ಸುರಕ್ಷಿತವಾಗಿರಿಸುವುದಕ್ಕೆ ಸವಿವರವಾದ ಕಾರ್ಯಯೋಜನೆಯನ್ನು ಮಾರ್ಚ್ 22ರಂದು ರಾಜ್ಯ ಸರಕಾರಕ್ಕೆ ಕಳುಹಿಸಿದ್ದೆ.
ಆಕ್ಟೊಬರ್ 6-7ರಂದು ರಾಜ್ಯ ಸರಕಾರದ ‘ತಜ್ಞರಿಗೆ’ ಜ್ಞಾನೋದಯವಾಗಿದೆಯಂತೆ. ಸೋಂಕಿತರನ್ನು ಆಗಾಗ ಪರೀಕ್ಷಿಸುವ ವ್ಯವಸ್ಥೆಯಾಗಬೇಕು ಇತ್ಯಾದಿಯಾಗಿ ದಿ ಹಿಂದೂ ವರದಿಯಲ್ಲಿ ಹೇಳಿದೆ. ಇನ್ನೊಂದು ವರದಿಯನ್ನು ಇಲ್ಲೇ ಲಗತ್ತಿಸಿದ್ದೇನೆ.
ಶಾಲೆ-ಕಾಲೇಜುಗಳನ್ನು ಹೀಗೆಯೇ ಮುಚ್ಚಿಟ್ಟರೆ ಕಲಿಕೆ ಇಲ್ಲವಾಗಿ, ಈಗಿನ ವಿದ್ಯಾರ್ಥಿಗಳು ಮುಂದೆ ಯಾರಿಗೂ ಬೇಡವಾಗಿ, ದೇಶಕ್ಕೆ 45,00,000 ಕೋಟಿ ನಷ್ಟವಾಗಲಿದೆ ಎಂದಿದೆ ವಿಶ್ವ ಬ್ಯಾಂಕ್.
ಹಾಗೆಯೇ ಆಗಬೇಕು, ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು ಎಲ್ಲವೂ ನಾಶವಾಗಿ ಮಕ್ಕಳು ಕೂಲಿಯಾಳುಗಳಾಗಬೇಕು ಎಂದು ಬಯಸುವವರು ಆಳುತ್ತಿರುವಾಗ, ಅವರಿಗೆ ಕೊರೋನ ವರವಾಗಿ ದೊರೆತಿರುವಾಗ, ಅವರ ಆಣತಿಯಂತೆ ಮಾಧ್ಯಮಗಳು ಭಯ ಹುಟ್ಟಿಸುತ್ತಿರುವಾಗ, ವಿರೋಧ ಪಕ್ಷದ ನಾಯಕರು ಆ ಭಯಕ್ಕೆ ತಾಳ ಹಾಕುತ್ತಿರುವಾಗ, ‘ಮಕ್ಕಳು ಕಲಿತು ಏನು ಸಾಧಿಸುವುದಿದೆ’ ಎಂದು ಒಳ್ಳೆಯ ಶಿಕ್ಷಕರೆಂದು ಪರಿಗಣಿಸಲ್ಪಟ್ಟವರಲ್ಲೇ ಕೆಲವರು ಹೇಳುತ್ತಿರುವಾಗ ವಿಶ್ವ ಬ್ಯಾಂಕ್ ಮುಂತಾದವರ ಆತಂಕಗಳಿಗೆ ಏನು ಬೆಲೆ?
But millions of less privileged children, including many first-generation pupils, have had their education severely disrupted. Neither their families nor their often rudimentary schools are equipped for remote learning.
New Delhi: The multi-country Solidarity trial anchored by the World Health Organization (WHO) has concluded that none of the four repurposed drugs that it examined — remdesivir, hydroxychloroquine (HCQ), lopinavir and interferon — have any benefits on the patients of Covid-19.
ರೆಂಡಿಸಿವಿರ್, ಕ್ಲೋರೋಕ್ವಿನ್, ಲೋಪಿನಾವೀರ್/ರೀಟೋನಾವೀರ್ ಯಾವುವೂ ಕೊರೋನ ಚಿಕಿತ್ಸೆಯಲ್ಲಿ ಉಪಯುಕ್ತವಲ್ಲ ಎಂದು ವಿಶ್ವ ಆರಿಗ್ಯಾ ಸಂಸ್ಥೆಯು ಆಯೋಜಿಸಿದ್ದ ಸೋಲಿಡಾರಿಟಿ ಅಧ್ಯಯನಗಳಲ್ಲಿ ಕಂಡುಬಂದಿದೆ. ಈ ಔಷಧಗಳಿಂದ ಪ್ರಯೋಜನಗಳಿವೆ ಎನ್ನುವುದಕ್ಕೆ ಆಧಾರಗಳಿಲ್ಲ ಎಂದು ನಮ್ಮ ‘ಕೊರೋನ-ಹೆದರದಿರೋಣ’ ಕೃತಿಯಲ್ಲಿ ಬರೆದಿದ್ದೆವು. ಅದೀಗ ದೃಢಗೊಂಡಿದೆ.
One of the world’s biggest trials of COVID-19 therapies released its long-awaited interim results yesterday—and they’re a letdown. None of the four treatments in the Solidarity trial, which enrolled more than 11,000 patients in 400 hospitals around the globe, increased survival—not even the much-touted antiviral drug remdesivir. Scientists at the World Health Organization (WHO) released the data as a preprint on medRxiv last night ahead of its planned publication in the New England Journal of Medicine
ಮೇ 16ರ ಬಳಿಕ ಒಂದೇ ಒಂದು ಹೊಸ ಕೊರೋನ ಪ್ರಕರಣಗಳು ಇರಲಾರವು ಎಂದಿದ್ದ ಸಮಿತಿ ಈಗ ಮತ್ತೊಂದು ಲೆಕ್ಕಾಚಾರ ಮಾಡಿ ಫೆಬ್ರವರಿ ವೇಳೆಗೆ 50% ಜನರು ಸೋಂಕಿತರಾಗಿ ಕೊರೋನ ಇಳಿಮುಖವಾಗಲಿದೆ ಎಂದಿದ್ದಾರೆ. ಇದನ್ನು ದೇಶದ ಅತ್ಯುನ್ನತ ಗಣಿತ ವಿಜ್ಞಾನ ಸಂಸ್ಥೆಯಾದ, ವಿಶ್ವ ಪ್ರಸಿದ್ಧವಾದ, ಚೆನ್ನೈಯ ಗಣಿತ ವಿಜ್ಞಾನ ಸಂಸ್ಥೆಯ ತಜ್ಞರು ಪ್ರಶ್ನಿಸಿದ್ದಾರೆ. ಆದರೆ ಪ್ರಧಾನಿ ಕಚೇರಿಯೇ ಈ ವರದಿಯ ಹಿಂದಿರುವುದರಿಂದ ಅದನ್ನು ಟೀಕಿಸಿರುವ ತಮ್ಮ ಹೆಸರನ್ನು ಬಹಿರಂಗಪಡಿಸಬಾರದು ಎಂದು ಈ ತಜ್ಞರು ಕೇಳಿಕೊಂಡಿದ್ದಾರಂತೆ!
ದೇಶಕ್ಕೆ ಬಂದಿರುವ ದುರ್ಗತಿ ಹೇಗಿದೆ ನೋಡಿ. ಸುಳ್ಳುಗಾರರ ನೇತೃತ್ವದಲ್ಲಿ ಸುಳ್ಳುಗಾರರನ್ನೇ ತುಂಬಿಸಿಕೊಂಡು, ಸುಳ್ಳುಗಳನ್ನೇ ಬೊಬ್ಬಿರಿದು ಹರಡಿ, ಅವನ್ನೆಲ್ಲ ಪ್ರಶ್ನಿಸುವವರನ್ನು ಬೆದರಿಸಿ, ಹಂಗಿಸಿ, ಕಿತ್ತು ಹಾಕಿ ದಂಡಿಸಿ, ಸುಳ್ಳುಗಳನ್ನು ಇನ್ನಷ್ಟು ಮೆರೆಸುವ ಈ ವ್ಯವಸ್ಥೆಯಿಂದ ದೇಶಕ್ಕೆ ಅದೇನು ಒಳಿತಾದೀತು?
October 20, 2020
Here’s one estimate that India would need 35-70000 cores for vaccination. But we won’t need the vaccine.
By the time vaccine becomes available, 50-60% Indians would have got infected, according to the govt experts!
PMO appointed committee has claimed that by Feb 2021, 50% would be infected (Chennai Math Inst scientists have questioned this and requested anonymity, because it’s questioning the PMO, that’s another matter). If 50-60% get infected, herd immunity would have happened without a single shot of this vaccine, which is expected later than that.
The govt must take a stand – either the experts appointed by it are wrong and vaccines need to be given, or experts are right and no vaccine is needed. Let’s wait for the response of the spin masters.
ಕೊರೋನ ಲಸಿಕೆ ನೀಡುವುದಿದ್ದರೆ ಸರಕಾರವು 35-75000 ಕೋಟಿ, ಅಂದರೆ ಆರೋಗ್ಯ ಇಲಾಖೆಯ ವಾರ್ಷಿಕ ಅನುದಾನಕ್ಕಿಂತ ಹೆಚ್ಚು, ಹಣವನ್ನು ಒದಗಿಸಬೇಕಾಗುತ್ತದೆ ಎಂಬ ಅಂದಾಜು ಇದು.
ಆದರೆ ಈ ಲಸಿಕೆ ಯಾವಾಗ, ಯಾರಿಗೆ? ಇದೇ ಸರಕಾರದ ತಜ್ಞರ ಸಮಿತಿಯನುಸಾರ, ಫೆಬ್ರವರಿ ವೇಳೆಗೆ 50% ಜನರಿಗೆ ಕೊರೋನ ಸೋಂಕು ತಗಲಲಿದೆ. ಶೇ 50-60 ಸೋಂಕಿತರಾದರೆ ಅವರೆಲ್ಲರಲ್ಲಿ ರೋಗ ನಿರೋಧಕ ಶಕ್ತಿಯು ಬೆಳೆದು, ಸೋಂಕಿನ ಹರಡುವಿಕೆ ತಗ್ಗಲಿದೆ. ಈ ಲಸಿಕೆ ಫೆಬ್ರವರಿಯ ನಂತರವೇ ಲಭ್ಯವಾಗಬಹುದು. ಸೋಂಕು ತಗಲಿದವರಿಗಂತೂ ಲಸಿಕೆ ಬೇಕಾಗದು.
ಈ ಬಗ್ಗೆ ಸರಕಾರದ ನಿಲುವೇನೆಂದು ತಿಳಿಯದು. ಒಂದೋ ತನ್ನದೇ ತಜ್ಞರ ಅಭಿಮತವು ಸರಿಯಿಲ್ಲ, ಲಸಿಕೆಯ ಅಗತ್ಯ ಇರಲಿದೆ ಎಂದು ಸಿದ್ಧತೆ ಮಾಡಬೇಕು, ಅಥವಾ, ತಜ್ಞರು ಹೇಳಿದ್ದು ಸರಿಯಿದೆ, ಲಸಿಕೆಯ ಅಗತ್ಯವಿರಲಾರದು ಎಂದು ಗಟ್ಟಿಯಾಗಿ ಹೇಳಬೇಕು. ಸುಳ್ಳನ್ನೇ ಸತ್ಯವೆಂದು ತಿರುಚುವುದರಲ್ಲಿ ನಿಸ್ಸೀಮರಾಗಿರುವವರು ಏನು ಮಾಡುತ್ತಾರೋ ನೋಡೋಣ.
October 20, 2020
October 20, 2020
Most stringent and completely disastrous lockdown is termed as flexible lockdown! Highest mortality in all of South Asia is termed as lowest!
ಲಸಿಕೆ ಬಂದರೆ, ಅನುಮತಿ ಸಿಕ್ಕರೆ, ಆದರೆ, ಹೋದರೆ, ಬಂದರೆ… ಬಿಹಾರದ ಜನತೆಗೆ ಉಚಿತ ಲಸಿಕೆ ಅಂತೆ! ಅರ್ಥಾತ್, ಕೊರೋನ ಹೆಸರಲ್ಲೂ ಪಂಗನಾಮ!
October 23, 2020
ಶಾಲೆಗಳನ್ನು ತೆರೆಯಬಾರದು ಎಂದು ಕರ್ನಾಟಕದ ಶಿಶು ತಜ್ಞರು ಬರೆದಿದ್ದಾರಂತೆ. ಲಸಿಕೆ ಬರುವವರೆಗೆ ಶಾಲೆಗಳನ್ನು ತೆರೆಯಬಾರದು ಎಂದಿದ್ದಾರಂತೆ.
ಶಾಲೆಗಳನ್ನು ತೆರೆಯುವುದು ಅಗತ್ಯ ಎಂದು ಅಮೆರಿಕದ ಮಕ್ಕಳ ತಜ್ಞರ ಸಂಘಟನೆ, ಫ್ರಾನ್ಸ್ ನ ಮಕ್ಕಳ ತಜ್ಞರ ಸಂಘಟನೆಗಳು ಈ ಮೊದಲೇ ಹೊರಡಿಸಿರುವ ಪ್ರಕಟಣೆಗಳು ಇಲ್ಲಿವೆ. ಅಲ್ಲೆಲ್ಲ ಶಾಲೆಗಳು ಆರಂಭವಾಗಿವೆ, ಯಾವ ಸಮಸ್ಯೆಗಳೂ ಆಗದೆ ಮುಂದುವರಿಯುತ್ತಿವೆ.
ನಮ್ಮವರು ಇವನ್ನೆಲ್ಲ ನೋಡುವುದಿಲ್ಲವೋ, ಅಥವಾ ನೋಡಿದರೂ ಅರ್ಥವಾಗುವುದಿಲ್ಲವೋ, ಅಥವಾ ಅವರೇ ಹೆದರಿಕೊಂಡಿದ್ದಾರೋ ತಿಳಿಯದು. ಶಾಲೆಗಳನ್ನು ಕೂಡಲೇ ತೆರೆಯದಿದ್ದರೆ ಮಕ್ಕಳಿಗಷ್ಟೇ ಅಲ್ಲ, ಇಡೀ ದೇಶಕ್ಕೇ ಅಪಾರ ನಷ್ಟವಾಗಲಿದೆ ಎನ್ನುವುದಂತೂ ಖಂಡಿತ.
ಇಂಥ ನಮ್ಮ ವೈದ್ಯರು, ಅವರಿದ್ದ ತಜ್ಞರ ಸಮಿತಿಗಳು, ಅವರ ಸಂಘಟನೆಗಳು, ಅವರ ಜೊತೆಗೆ ಆಯುಷ್ ಎನ್ನುವವರು, ಎಲ್ಲರೂ ಕೊರೋನ ಬಗ್ಗೆ ಇದುವರೆಗೆ ನೀಡಿದ್ದ ಸಲಹೆಗಳೆಲ್ಲವೂ ತಪ್ಪಾಗಿದ್ದವು, ಹಾನಿಕಾರಕವಾಗಿದ್ದವು ಎನ್ನುವುದು ಈಗ ಸ್ಪಷ್ಟವಾಗಿರುವಾಗ ಇವರ ಸಲಹೆಗಳನ್ನು ಸರಕಾರವು ಪರಿಗಣಿಸಬೇಕೇ?
…the AAP strongly advocates that all policy considerations for the coming school year should start with a goal of having students physically present in school.
“If the projections hold, the level of GDP would have fallen approximately 6 per cent below its pre-COVID level by the end of 2020-21 and it may take years to regain this lost output,” Batra said at the Monetary Policy Committee (MPC) meeting earlier this month, whose minutes were released on Friday.
Health officials reviewing Gilead Science Inc’s remdesivir against COVID-19 should consider all evidence, including a trial in which the medicine failed, before giving it the green light, the top WHO scientist said on Friday.
US regulators appeared not to have done so when approving the drug this week, Soumya Swaminathan told a news conference.
—-//
Recently, the US hospitals restricted its use for severe cases.
SOLIDARITY trial found it to be ineffective.
Now, WHO ‘warns’ govts against rushing into decisions allowing its use.
Since coronavirus disease 2019 ushered in lockdowns and limited movement, London-based Marie Stopes International reported that roughly 2 million fewer women have received reproductive care services through its programs in 37 countries. The result could be 1.5 million additional unsafe abortions, 900 000 unintended pregnancies, and 3100 additional deaths, according to the nonprofit organization that provides contraception and safe abortion.
Acute hunger is expected to affect 270 million people worldwide by this year’s end—an 82% increase since the coronavirus disease 2019 pandemic began, according to the United Nations World Food Programme (WFP).
Lockdowns don’t work. It remains a mystery as to why the world entered one
Surjit S Bhalla writes: Lockdowns were an unnatural experiment and, around the world, they have not worked in achieving their major health objective of less infections or slower pace of infections.
ಮಾರ್ಚ್ ನಿಂದ ಇಂದಿನವರೆಗೆ ಎಲ್ಲಾ ನಿರ್ಧಾರಗಳೂ, ನಿರ್ದೇಶನಗಳೂ ಕೇಂದ್ರ ಸರಕಾರದ ಒಂದು ಕಚೇರಿಯಿಂದಲೇ ಬರುತ್ತಿವೆ, ಅವನ್ನು ಮೀರಲು ಯಾರಿಗೂ ಸಾಧ್ಯವಿಲ್ಲದಂಥ ಸ್ಥಿತಿಯಿದೆ. ಮೂಲದಲ್ಲೇ ಅವೈಜ್ಞಾನಿಕವಾಗಿದ್ದ ಕ್ರಮಗಳನ್ನು ದೇಶದಾದ್ಯಂತ ಹೇರಿದ್ದರಿಂದಾಗಿಯೇ ಕೊರೋನ ಗತಿ ಹೀಗಾಗಿದೆ. ತನ್ನ ವೈಫಲ್ಯವನ್ನು ಒಪ್ಪಿಕೊಳ್ಳುವ ಬದಲು ರಾಜ್ಯಗಳ ಮೇಲೆ ದೂರು ಹಾಕಿ ಜಾರಿಕೊಳ್ಳುವ ಯೋಜನೆ ಇದು. ಇದೇ ಕೇಂದ್ರ ಸರಕಾರವು ಕರ್ನಾಟಕ ಮಾದರಿಯನ್ನು ಈ ಹಿಂದೆ ಹೊಗಳಿತ್ತು, ಈಗ ದೂರುವುದೇಕೆ? ಕೇಂದ್ರದ ತಪ್ಪು ನಿರ್ಧಾರಗಳನ್ನು ಪ್ರಶ್ನಿಸುವ ಧೈರ್ಯ ಯಾವ ರಾಜ್ಯ ಸರಕಾರಕ್ಕೂ, ರಾಜಕೀಯ ಪಕ್ಷಕ್ಕೂ (ರಾಹುಲ್ ಗಾಂಧಿ ಒಬ್ಬರನ್ನು ಬಿಟ್ಟು) ಇಲ್ಲವಾಗಿರುವುದೇ ದೊಡ್ಡ ದುರಂತ.
October 31, 2020
ಕೊರೋನ ಸೋಂಕು ಏನೆನ್ನುವುದು ಸರಿಯಾಗಿ ಅರ್ಥವಾಗಿಲ್ಲವೇ? – ವಾರ್ತಾಭಾರತಿ
Palmar Erythema as the Sole Manifestation of COVID-19
Balasaraswathy Panambur, Srinivasa B. Kakkilaya
Variety of skin lesions have been reported in 0.2-20.4% of cases of COVID-19. In some cases of COVID-19, skin lesions have been reported as the initial or the only manifestation. We are reporting a case of bilateral palmar erythema as the sole manifestation of COVID-19 in a 37-year-old female who had a family history of COVID-19 like illness and was later found positive for anti-SARS-CoV-2 antibodies.
A premature hard lockdown imposed across the country to curb the Covid-19 pandemic was responsible for India’s economic plunge, according to former finance secretary Subhash Chandra Garg.
That’s the very plan – make them hungry, emaciated and school less. Corona is just an opportunity to implement the plan.
November 4, 2020
ನಾನು ಕಳೆದ ವಾರ ವಾರ್ತಾಭಾರತಿಯಲ್ಲಿ ಬರೆದಿದ್ದ ಅಂದಾಜು 100% ಸರಿ ಎನ್ನುವುದನ್ನು ಇಂದು ರಾಜ್ಯದ ಆರೋಗ್ಯ ಸಚಿವರ ಹೇಳಿಕೆಯು ದೃಢಪಡಿಸುತ್ತದೆ.
ವಾರ್ತಾಭಾರತಿಯಲ್ಲಿ ಬರೆದಿದ್ದ ಅಂದಾಜು ಹೀಗಿತ್ತು:
…ಕರ್ನಾಟಕದಲ್ಲಿ ಈಗಾಗಲೇ ಎಂಟು ಲಕ್ಷದಷ್ಟು ಜನರಲ್ಲಿ ಅಧಿಕೃತವಾಗಿ ಕೊರೋನ ಸೋಂಕು ದೃಢಗೊಂಡಿದೆ, ಪರೀಕ್ಷೆಗಳಿಗೆ ಒಳಪಡದವರನ್ನು ಪರಿಗಣಿಸಿದರೆ, ಸೋಂಕಿತರ ಸಂಖ್ಯೆಯು ಇದರ 10-30 ಪಟ್ಟು ಹೆಚ್ಚಿರಬಹುದು.
…ನಮ್ಮ ದೇಶದಲ್ಲಿ ಆಗಿರಬಹುದಾದ ಒಟ್ಟು ಪ್ರಕರಣಗಳನ್ನು ಪರಿಗಣಿಸಿದರೆ, ಸಾವಿನ ಪ್ರಮಾಣವು ಅದೇ ಪ್ರಮಾಣದಲ್ಲಿದೆ (0.05%) ಎನ್ನಬಹುದು. ನಮ್ಮ ರಾಜ್ಯದಲ್ಲಿ ಕೂಡ ದೃಢಪಟ್ಟ ಕೊರೋನ ಸೋಂಕಿತರಲ್ಲಿ ಮೃತರಾದವರ ಪ್ರಮಾಣವು 1.7% ಆಗಿದೆ, ಪರೀಕ್ಷೆಗೊಳಪಡದಿರುವ ಒಟ್ಟು ಸೋಂಕಿತರ ಅಂದಾಜನ್ನು ಪರಿಗಣಿಸಿದರೆ ಮೃತರ ಪ್ರಮಾಣವು 0.07% (10 ಸಾವಿರಕ್ಕೆ 7) ಇರಬಹುದು. ಅಂದರೆ ಭಾರತದಲ್ಲೂ, ಕರ್ನಾಟಕದಲ್ಲೂ ಕೊರೋನ ಸೋಂಕಿನ ಸಮಸ್ಯೆಗಳು ಒಟ್ಟಾರೆಯಾಗಿ ನಿರೀಕ್ಷಿತ ಮಟ್ಟದಲ್ಲೇ ಇವೆ ಎಂದಾಯಿತು.
ಸಚಿವರ ಹೇಳಿಕೆಯಿಂದ ಆಯ್ದ ಅಂಶಗಳು ಇಲ್ಲಿವೆ:
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು (ಸಕ್ರಿಯ ಪ್ರಕರಣಗಳು ಮತ್ತು ಪ್ರತಿಕಾಯಗಳನ್ನು ಹೊಂದಿರುವ ಹಳೆಯ ಪ್ರಕರಣಗಳು) 27.3%
The overall adjusted prevalence of COVID-19 – 27.3% (combined IgG and active infection.)
ರಾಜ್ಯದಲ್ಲಿ ಪ್ರತೀ ಆರ್ ಟಿ ಪಿಸಿಆರ್ ದೃಢೀಕೃತ ಪ್ರಕರಣಕ್ಕೆ ಗುರುತಿಸಲ್ಪಡದ ಪ್ರಕರಣಗಳ ಪ್ರಮಾಣ 1:40. ಅಂದರೆ, ನಿಜವಾದ ಪ್ರಕರಣಗಳ ಸಂಖ್ಯೆಯು ವರದಿಯಾಗಿರುವ ಪ್ರಕರಣಗಳಿಗಿಂತ 40 ಪಟ್ಟು ಹೆಚ್ಚು.
At the state level, it was estimated that there were 40 undetected infected individuals for every RT-PCR confirmed case, i.e., case-to-undetected-infections ratio (CIR) of 1:40.
ಅಂದರೆ, ರಾಜ್ಯದ 7.07 ಕೋಟಿ ಜನರಲ್ಲಿ 1.93 ಕೋಟಿ (27.3%) ಜನರು ಸೆಪ್ಟೆಂಬರ್ 16ರ ವೇಳೆಗೆ ಸೋಂಕಿತರಾಗಿದ್ದಾರೆ.
Out of 7.07 crore estimated population in Karnataka, the study estimates that 1.93 crore (27.3%) of the people are either currently infected or already had the infection in the past, as of 16 September 2020.
ರಾಜ್ಯದಲ್ಲಿ ಸೋಂಕಿನಿಂದ ಮೃತರಾದವರ ಪ್ರಮಾಣವು 0.05% ಇದೆ, ಒಟ್ಟಾರೆಯಾಗಿ 0.07% ಇರಬಹುದು.
The infection fatality rate due to COVID-19 in the state of Karnataka is 0.05%. The present IFR is likely an underestimate. The overall IFR based on the first round of sentinel serosurvey findings is 0.07%.
November 4, 2020
ಕರ್ನಾಟಕದಲ್ಲಿ ~2 ಕೋಟಿ ಕೋವಿಡ್ ಪ್ರಕರಣಗಳು, ಅವರಲ್ಲಿ 11200ರಷ್ಟು ಮೃತರಾಗಿದ್ದಾರೆ, ಅಂದರೆ 0.056% (ಹತ್ತು ಸಾವಿರಕ್ಕೆ 6): ಆರೋಗ್ಯ ಇಲಾಖೆ
November 4, 2020
ತನ್ನ ಗುರುಗಳು ತನ್ನನ್ನು ಶಾಲೆಗೆ ಎಳೆದು ತಂದು ಕಲಿಸಿದ್ದರಿಂದಾಗಿಯೇ ತಾನು ಮುಖ್ಯಮಂತ್ರಿಯಾದೆ ಎಂದು ಪದೇ ಪದೇ ಹೇಳುತ್ತಲೇ ಇರುವ ಮಾನ್ಯ ಸಿದ್ಧರಾಮಯ್ಯನವರು ಕೊರೋನದಿಂದ ಸಂಪೂರ್ಣವಾಗಿ ಮುಕ್ತವಾಗುವವರೆಗೆ ಶಾಲೆಗಳನ್ನು ತೆರೆಯಬಾರದು ಎಂದಿರುವುದು ಖೇದನೀಯ.
ಇಂದು ರಾಜ್ಯ ಸರಕಾರವೇ ಹೇಳಿರುವಂತೆ ರಾಜ್ಯದ 30-40% ಜನರು ಈಗಾಗಲೇ ಕೊರೋನ ಸೋಂಕಿತರಾಗಿ ಗುಣಮುಖರಾಗಿದ್ದಾರೆ, ಇನ್ನೆರಡು ತಿಂಗಳೊಳಗೆ ಅದರ ಹರಡುವಿಕೆಯು ತೀರಾ ವಿರಳವಾಗಲಿದೆ. ಶಾಲೆಗಳನ್ನು ಈ ಕೂಡಲೇ ತೆರೆಯುವುದಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಕೊರೋನದಿಂದ ‘ಸಂಪೂರ್ಣವಾಗಿ ಮುಕ್ತವಾಗಲು’ ಸಾಧ್ಯವೇ ಇಲ್ಲ; ಆ ವೈರಸ್ ಎಂದಿಗೂ ಇಲ್ಲಿ ಇದ್ದೇ ಇರುತ್ತದೆ, ಒಬ್ಬಿಬ್ಬರನ್ನು ಸೋಂಕುತ್ತಲೇ ಇರುತ್ತದೆ. ಹಾಗೆಂದು ಶಾಲೆಗಳನ್ನು ಶಾಶ್ವತವಾಗಿ ಮುಚ್ಚಿಡಬೇಕೇ?
November 5, 2020
Yesterday (November 4) around four lakh students attended schools. There were 262 positive cases. It is not even 0.1 per cent. It is not correct to say that they were affected due to their attendance to schools. We ensure that each school room has only 15 or 16 students,”the official told news agency Press Trust of India, adding “It is not alarming.”
ಮೊಬೈಲ್, ಟಿವಿ ಇತ್ಯಾದಿಗಳಲ್ಲಿ ಆನ್ ಲೈನ್ ಪಾಠದಿಂದ ಮಕ್ಕಳ ಮನೋದೈಹಿಕ ಬೆಳವಣಿಗೆಯ ಮೇಲೆ ಗಂಭೀರ ದುಷ್ಪರಿಣಾಮಗಳಾಗುವ ಬಗ್ಗೆ ಹಲವಾರು ವರದಿಗಳಿವೆ.
ಮಕ್ಕಳಿಗೆ ಕೊರೋನ ಸಮಸ್ಯೆಯನ್ನುಂಟು ಮಾಡದು, ಅವೈಜ್ಞಾನಿಕವಾಗಿ ಜನರನ್ನು ಬೆದರಿಸಿ, ಶಾಲೆ-ಕಾಲೇಜುಗಳನ್ನು ಮುಚ್ಚಿ ಹಾಕಿ, ಆನ್ ಲೈನ್ ಪಾಠ ಮಾಡುತ್ತಿರುವುದರಿಂದ ಎಲ್ಲ ರೀತಿಯ ಸಮಸ್ಯೆಗಳೂ ಆಗುತ್ತಿವೆ, ಮುಂದೆ ಗಂಭೀರ ಪರಿಣಾಮಗಳಾಗಲಿವೆ. ಸರ್ಕಾರವೂ, ಪೋಷಕರೂ, ವೈದ್ಯರೂ, ಶಿಕ್ಷಕರೂ ಇವನ್ನು ಅರಿತರೆ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು.
Screens lead to decreased attention span and lead to impulsiveness in children. Each hour of television viewed led to a 10 per cent increase in the risk for attention problems when the child enters school. This is because a child’s brain is being preconditioned to expect rapid, changing stimulation.
November 6, 2020
Scientists have found the strongest evidence yet that people who recover from Covid may mount a much faster and more effective defence against the infection if they encounter the virus again.
Researchers at Rockefeller University in New York found that the immune system not only remembered the virus but improved the quality of protective antibodies after an infection had passed, equipping the body to unleash a swift and potent attack if the virus invaded a second time.
“India has entered a technical recession in the first half of 2020-21 for the first time in its history,” the authors wrote. The government is due to publish official statistics on November 27.
The clear, unambiguous, and compelling lesson from the hydroxychloroquine story for the medical community and the public is that science and politics do not mix. Science, by definition, requires diligence and an honest assessment of findings; politics not so much. The number of articles in the peer-reviewed literature over the last several months that have consistently and convincingly demonstrated the lack of efficacy of a highly hyped “cure” for COVID-19 represent the consequence of the irresponsible infusion of politics into the world of scientific evidence and discourse. For other potential therapies or interventions for COVID-19 (or any other diseases), this should not happen again.
ಶಾಲೆಗಳನ್ನು ಮುಚ್ಚಲೇಬೇಕು ಎಂದು ಹಠ ಹಿಡಿದು ಮಕ್ಕಳನ್ನು ಇನ್ನಷ್ಟು ಶಿಕ್ಷಿಸಬಯಸುವವರ ಗಮನಕ್ಕೆ
As the surge of coronavirus infections in the United States becomes undeniable, many leaders throughout the country are reacting by calling for closures. Bizarrely, they almost always seem to focus on schools first. That’s exactly the opposite of what they should be doing.
Don’t get me wrong. With cases climbing to levels we haven’t seen before, we need to restrict our physical interactions. But we should do so rationally and in an evidence-based manner. We should figure out what poses the greatest danger and act accordingly, instead of automatically asking schoolchildren to bear the brunt of the pain.
ಶಾಲೆಗಳನ್ನು ಮತ್ತೆ ತೆರೆಯುವ ಬಗ್ಗೆ ರಾಜ್ಯ ಸರಕಾರವು ಇನ್ನೂ ನಿರ್ಧರಿಸಿಲ್ಲ. ಶಾಲೆ-ಕಾಲೇಜುಗಳನ್ನು ಮುಚ್ಚಿ ಈಗಾಗಲೇ 8 ತಿಂಗಳುಗಳಾಗಿದ್ದು, ಅವನ್ನು ಮೊದಲಿನಂತೆಯೇ ಪುನರಾರಂಭಿಸುವ ಯಾವುದೇ ಲಕ್ಷಣಗಳೂ ಗೋಚರಿಸುತ್ತಿಲ್ಲ. ಕಾಲೇಜುಗಳು ಈಗ ತೆರೆದಿದ್ದರೂ ಕೊರೋನ ಪರೀಕ್ಷೆ, ಹಲವು ಶರತ್ತುಗಳು, ಹೆತ್ತವರ ಆತಂಕ ಇತ್ಯಾದಿಗಳಿಂದಾಗಿ ವಿದ್ಯಾರ್ಥಿಗಳು ಕಾಲೇಜುಗಳಿಗೆ ಬರುತ್ತಿಲ್ಲ.
ಕೊರೋನ ಪೀಡಿತರ ಬಗ್ಗೆ ಸವಿವರವಾದ ಮಾಹಿತಿಯನ್ನು ಸಂಗ್ರಹಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಶಾಲೆ-ಕಾಲೇಜುಗಳನ್ನು ಮೊದಲಿನಂತೆಯೇ ತೆರೆಯುವುದಕ್ಕೆ, ಜನರಲ್ಲಿ ಧೈರ್ಯ ತುಂಬುವುದಕ್ಕೆ, ಸರಕಾರದ ಬಳಿಯಿರುವ ಈ ಮಾಹಿತಿಯೇ ಸಾಕಾಗುತ್ತದೆ. ಆದ್ದರಿಂದ ಈ ಕೆಳಗಿನ ಪ್ರಶ್ನೆಗಳನ್ನು ರಾಜ್ಯ ಸರಕಾರದ ಮುಂದಿಡುತ್ತಿದ್ದೇನೆ:
1. ಸೆಪ್ಟೆಂಬರ್ 16ರ ವೇಳೆಗೆ ರಾಜ್ಯದಲ್ಲಿ 1.93 ಕೋಟಿ ಜನರಿಗೆ ಕೊರೋನ ಸೋಂಕು ತಗಲಿದೆ ಎಂದು ಸರಕಾರವೇ ಹೇಳಿದೆ. ಅದೇ ಅಂದಾಜಿನಂತೆ ನವೆಂಬರ್ 16ರ ವೇಳೆಗೆ ರಾಜ್ಯದಲ್ಲಿ ಒಟ್ಟು ಕೊರೋನ ಪ್ರಕರಣಗಳು ಎಷ್ಟಾಗಿರಬಹುದು?
2. ಅಷ್ಟೊಂದು ಪ್ರಕರಣಗಳಲ್ಲಿ 0-10 ವರ್ಷ ಮತ್ತು 10-20 ವರ್ಷ ವಯೋಮಾನದವರ ಅಂದಾಜು ಸಂಖ್ಯೆ ಎಷ್ಟು?
3. ಅಷ್ಟೊಂದು ಕೊರೋನ ಪ್ರಕರಣಗಳಲ್ಲಿ ಆಸ್ಪತ್ರೆಗಳಲ್ಲಿ ದಾಖಲಾದವರ ಸಂಖ್ಯೆ ಎಷ್ಟು?
4. ಆಸ್ಪತ್ರೆಗೆ ದಾಖಲಾದ ಪ್ರಕರಣಗಳಲ್ಲಿ 0-10 ವರ್ಷ ಮತ್ತು 10-20 ವರ್ಷ ವಯೋಮಾನದವರ ಸಂಖ್ಯೆ ಎಷ್ಟು?
5. ಆಸ್ಪತ್ರೆಗೆ ದಾಖಲಾದವರಲ್ಲಿ ಐಸಿಯುಗಳಲ್ಲಿ ದಾಖಲಾದವರ ಸಂಖ್ಯೆ ಎಷ್ಟು? ಐಸಿಯುಗಳಲ್ಲಿ ದಾಖಲಾದವರಲ್ಲಿ 0-10 ವರ್ಷ ಮತ್ತು 10-20 ವರ್ಷ ವಯೋಮಾನದವರ ಸಂಖ್ಯೆ ಎಷ್ಟು?
6. ರಾಜ್ಯದಲ್ಲಿ ಕೊರೋನದಿಂದ ಮೃತ ಪಟ್ಟಿರುವ 11500ರಷ್ಟು ಸೋಂಕಿತರಲ್ಲಿ 0-10 ವರ್ಷ ಮತ್ತು 10-20 ವರ್ಷ ವಯೋಮಾನದವರ ಸಂಖ್ಯೆ ಎಷ್ಟು?
7. ಹಾಗೆ ಮೃತರಾದವರಲ್ಲಿ ಗಂಭೀರವಾದ ಅನ್ಯ ರೋಗಗಳಿದ್ದವರ ಸಂಖ್ಯೆ ಎಷ್ಟು?
8. ಕೊರೋನದಿಂದ ಕವಾಸಾಕಿ ಕಾಯಿಲೆಯಂತಹ ಲಕ್ಷಣಗಳನ್ನು ಹೊಂದಿದ್ದರೆನ್ನಲಾದ ಮಕ್ಕಳ ಸಂಖ್ಯೆ ಎಷ್ಟು?
ಈ ಪ್ರಶ್ನೆಗಳಿಗೆ ಈ ಕೂಡಲೇ ಪ್ರಾಮಾಣಿಕವಾದ ಉತ್ತರಗಳನ್ನು ಒದಗಿಸುವ ಮೂಲಕ ರಾಜ್ಯ ಸರಕಾರವು ಕರ್ನಾಟಕದ ಮಕ್ಕಳ ಭವಿಷ್ಯದ ಬಗ್ಗೆ ತನಗಿರುವ ಕಾಳಜಿಯನ್ನು ತೋರಿಸಲಿ.
November 19, 2020
It’s likely that headwinds already hampering growth prior to 2020 — such as stressed corporate balance sheets, elevated non-performing assets of banks, the fallout in non-bank financial companies, and labor market weakness — will worsen,” she said. “The resulting long-term scars, probably among the worst globally, would push India’s trend growth substantially lower from pre-Covid levels
ಕೊರೋನ ಹರಡಲಾರಂಭಿಸಿದಂದಿನಿಂದಲೂ ಕೊರೋನ ವೈರಸ್ ಅನ್ನು ಮಣಿಸುವ ಔಷಧಗಳು ಇಲ್ಲ, ಅವುಗಳ ಅಗತ್ಯವೂ ಇಲ್ಲ, ಕ್ಲೋರೋಕ್ವಿನ್, ಅಜಿತ್ರೋಮೈಸಿನ್, ರೆಂಡಿಸಿವಿರ್ ಯಾವುದರ ಬಳಕೆಗೂ ಸಾಕಷ್ಟು ಆಧಾರಗಳಿಲ್ಲ ಎಂದು ಹೇಳುತ್ತಲೇ ಇದ್ದೆವು. ಕ್ಲೋರೋಕ್ವಿನ್, ಅಜಿತ್ರೋಮೈಸಿನ್ ನಿರುಪಯುಕ್ತವಷ್ಟೇ ಅಲ್ಲ, ಅಪಾಯಕಾರಿಯೂ ಆಗಬಹುದು ಎನ್ನುವುದು ಈಗಾಗಲೇ ದೃಢಪಟ್ಟಿದೆ. ಇಂದು ವಿಶ್ವ ಆರೋಗ್ಯ ಸಂಸ್ಥೆಯು ರೆಂಡಿಸಿವಿರ್ ಬಳಸುವುದನ್ನು ನಿಲ್ಲಿಸಬೇಕೆಂದು ಹೇಳಿದೆ. ನಾವು ಇದುವರೆಗೆ ಹೇಳುತ್ತಿದ್ದುದೆಲ್ಲವೂ ಸರಿಯಾಗಿಯೇ ಇದ್ದವು ಎನ್ನುವುದು ಈಗ ದೃಢಪಟ್ಟಂತಾಯಿತು.
Scientists who initially warned about contaminated surfaces now say that the virus spreads primarily through inhaled droplets, and that there is little to no evidence that deep cleaning mitigates the threat indoors.
——
ಯಾವುದೇ ವಸ್ತುವಿನ ಮೂಲಕ ಕೊರೋನ ಹರಡುವುದಿಲ್ಲ, ಹೆಚ್ಚಾಗಿ ಒಳಾಂಗಣಗಳಲ್ಲಿ (=ಮನೆಗಳ ಒಳಗೆ) ಒಬ್ಬರ ಮುಖದಿಂದ ಒಬ್ಬರಿಗೆ ಹರಡುತ್ತದೆ ಎಂದು ಅಮೆರಿಕದ ಸಿಡಿಸಿ ಹೇಳಿ 6 ತಿಂಗಳಾದವು. ಈಗಲೂ ಶಾಲೆ-ಕಾಲೇಜುಗಳಲ್ಲಿ ಎಲ್ಲವನ್ನೂ ಸಿಂಪಡಿಸಿ, ತಿಕ್ಕಿ ತೀಡಬೇಕೆಂದು ಸರಕಾರ ಹೇಳಿರುವುದು ಏಕೆ?
ಕೋವಿಡ್ 19 ಹಿನ್ನೆಲೆಯಲ್ಲಿ ಡಿಸೆಂಬರ್ ಅಂತ್ಯದವರೆಗೆ ಶಾಲೆ, ಪದವಿಪೂರ್ವ ಕಾಲೇಜುಗಳನ್ನು ಆರಂಭಿಸುವುದಿಲ್ಲ ಎಂದು ರಾಜ್ಯ ಸರಕಾರ ಇಂದು ಹೇಳಿದೆ. ಕೊರೋನ ಹರಡದಿರಲು ಅದೇ ಸೂಕ್ತ ಕ್ರಮ ಎಂದು ಭಾವಿಸುವ ಜನರು ಶಾಲೆ ತೆರೆಯದೇ ಇರುವುದರಿಂದ ಎದುರಾಗುವ ಸಮಸ್ಯೆಗಳು , ವಿದ್ಯಾರ್ಥಿಗಳ ಭವಿಷ್ಯದ ಮೇಲಾಗುವ ಹಲವು ಗಂಭೀರ ಪರಿಣಾಮಗಳ ಬಗ್ಗೆ ಆಲೋಚಿಸುತ್ತಿಲ್ಲ ಎಂದು ಶಿಕ್ಷಣ ತಜ್ಞರು ಹೇಳುತ್ತಿದ್ದಾರೆ.
ಈಗಾಗಲೇ ಮಕ್ಕಳು ಶಾಲೆಗಳತ್ತ ತೆರಳದೆ ತಿಂಗಳುಗಳು ಕಳೆದಿವೆ. ಮಕ್ಕಳು ನಿಧಾನವಾಗಿ ಕಲಿಕೆಯನ್ನೇ ಮರೆಯುತ್ತಿದ್ದಾರೆ. ಆನ್ ಲೈನ್ ಶಿಕ್ಷಣ ಇದ್ದರೂ ಕೂಡ ಎಲ್ಲಾ ಮಕ್ಕಳಿಗೆ ಅದು ಸಿಗುತ್ತಿಲ್ಲ ಮತ್ತು ಶಾಲೆಗೆ ಹೋಗಿ ಕಲಿಯುವ ಶಿಕ್ಷಣದಷ್ಟು ಪರಿಣಾಮಕಾರಿಯಾಗಿಲ್ಲ. ಕಲಿತ ವಿದ್ಯೆಯನ್ನೇ ಮಕ್ಕಳು ಮರೆತುಬಿಡುವಂತಹ ಸ್ಥಿತಿ ಎದುರಾಗಿದೆ ಹಾಗು ಪೋಷಕರು ಆತಂಕದಲ್ಲಿದ್ದಾರೆ ಎಂದು ಹೇಳುತ್ತಿರುವ ಶಿಕ್ಷಣ ತಜ್ಞರು, ಮಾರುಕಟ್ಟೆಗಳು, ಮಾಲ್ ಗಳು, ಅಂಗಡಿಗಳು, ಹೊಟೇಲ್ ಗಳಂತಹ ಜನಸಂದಣಿ ಇರುವ ಪ್ರದೇಶಗಳೇ ತೆರೆದಿರುವಾಗ ದೇಶದ, ಮಕ್ಕಳ ಭವಿಷ್ಯಕ್ಕೆ ಅವಶ್ಯಕವಾಗಿರುವ ಶಿಕ್ಷಣ ಸಂಸ್ಥೆಗಳನ್ನು ತೆರೆಯುತ್ತಿಲ್ಲ ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಖಂಡಿತ ಶಾಲೆ ತೆರೆಯಬಹುದು ಎಂದು ಹೇಳುತ್ತಿದ್ದಾರೆ.
ಬಹುಷ ಪೋಷಕರಾದ, ವಿದ್ಯಾರ್ಥಿಗಳಾದ ನಿಮಗೂ ಇಂತಹ ಆತಂಕ, ಪ್ರಶ್ನೆಗಳಿರಬಹುದು. ಶಾಲೆ ತೆರೆಯದೆ ಇರುವುದರಿಂದ ನೀವು ಎದುರಿಸುತ್ತಿರುವ ಸಮಸ್ಯೆಗಳು , ಅನುಭವಿಸುತ್ತಿರುವ ಆತಂಕಗಳು ಏನು ? ಎಂದು ನಮ್ಮೊಂದಿಗೆ ಹಂಚಿಕೊಳ್ಳಿ. ನಾವು ಅದನ್ನು ಆಳುವವರಿಗೆ ತಲುಪಿಸುತ್ತೇವೆ. ಶಾಲೆ ತೆರೆಯಬೇಕಾದ ಅನಿವಾರ್ಯತೆ ಬಗ್ಗೆ 2 ನಿಮಿಷಗಳ ವಿಡಿಯೋ ಮಾಡಿ ನಮಗೆ ಕಳುಹಿಸಿ. ಪೋಷಕರ, ವಿದ್ಯಾರ್ಥಿಗಳ ‘ಶಾಲೆ ತೆರೆಯಬೇಕು’ ಎನ್ನುವ ಕೂಗನ್ನು ಸರಕಾರಕ್ಕೆ ತಲುಪಿಸುವ ಜವಾಬ್ದಾರಿ ನಮ್ಮದು.
► ನಿಮ್ಮ ವಿಡಿಯೋ 2 ನಿಮಿಷಗಳು ಮೀರದಿರಲಿ
► ಪೋಷಕರು, ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಡಿಯೋ ಮಾಡಿ ಕಳುಹಿಸಬಹುದು
► ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುವಾಗ ಆದಷ್ಟು ಆಡಿಯೋ, ವಿಡಿಯೋ ಗುಣಮಟ್ಟ ಸ್ಪಷ್ಟವಾಗಿರುವಂತೆ ನೋಡಿಕೊಳ್ಳಿ.
►ನಿಮ್ಮ ವಿಡಿಯೋಗಳನ್ನು ನವೆಂಬರ್ 26ರ ಸಂಜೆ 6 ಗಂಟೆಯ ಒಳಗಾಗಿ ವಾಟ್ಸಾಪ್ ನಂಬರ್ 70225 66554ಗೆ ಕಳುಹಿಸಿ
November 23, 2020
ಶಾಲೆ-ಕಾಲೇಜುಗಳನ್ನು ತೆರಯಲೇಬೇಕು ಎಂದು ಮೇ 15ರಿಂದ ಹೇಳುತ್ತಲೇ ಬಂದಿದ್ದೇನೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಧೈರ್ಯ ತುಂಬಿ, ಶಾಲೆ ತೆರೆಯುವಂತೆ ಸರಕಾರವನ್ನು ಒತ್ತಾಯಿಸುವಂತೆ ಕೇಳುತ್ತಲೇ ಬಂದಿದ್ದೇನೆ. ಇಂದಿನವರೆಗೂ ಆ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಶಾಲೆಗಳನ್ನು ತೆರೆಯುವ ಬಗ್ಗೆ ‘ಅಂತಿಮ’ ನಿರ್ಧಾರ ಕೈಗೊಳ್ಳಲು ಇಂದು ಮಾನ್ಯ ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರಂತೆ. ಈಗಿರುವ ಸ್ಥಿತಿಯನ್ನು ನೋಡಿದರೆ ಶಾಲೆಗಳನ್ನು ತೆರೆಯುವ ಸಾಧ್ಯತೆಗಳು ತೀರಾ ಅತ್ಯಲ್ಪ ಎಂದೇ ಅನಿಸುತ್ತಿದೆ.
ಇದೇ ಡಿಸೆಂಬರ್ ನಲ್ಲಿ ಅಂತಿಮ ಪರೀಕ್ಷೆ ಬರೆಯಲಿರುವ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಅಕ್ಟೊಬರ್ ನಲ್ಲಿ ಸಿಕ್ಕಿದ್ದರು. ಕಾಲೇಜು-ಆಸ್ಪತ್ರೆಯ ಬಗ್ಗೆ ಕೇಳಿದಾಗ ಅವು 7 ತಿಂಗಳಿಂದ ಮುಚ್ಚಿರುವ ಬಗ್ಗೆ, ಮುಂಬರಲಿರುವ ಪರೀಕ್ಷೆಗಳ ಬಗ್ಗೆ, ಬೇಸರವನ್ನೂ ಆತಂಕವನ್ನೂ ವ್ಯಕ್ತಪಡಿಸಿದ್ದರು. ಎಷ್ಟು ಸಾಧ್ಯವೋ ಅಷ್ಟು ವಿದ್ಯಾರ್ಥಿಗಳು ಸೇರಿ ಡೀನ್ ಅವರಿಗೆ ಮನವಿ ಸಲ್ಲಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿದೆ, ನನ್ನಿಂದಾಗುವ ಸಹಾಯ ಮಾಡುತ್ತೇನೆ ಎಂದೂ ಹೇಳಿದೆ. ಮರುದಿನವೇ ಅವರ ಸಹಪಾಠಿಗಳ ಒಂದು ವಾಟ್ಸಪ್ ಗುಂಪು ಆರಂಭವಾಯಿತು, ನಿರೀಕ್ಷೆಗೂ ಮೀರಿ ಸುಮಾರು 80 ವಿದ್ಯಾರ್ಥಿಗಳು ಅದರಲ್ಲಿ ಸೇರಿಕೊಂಡರು. ಡೀನ್ ಅವರಿಗೆ ನೀಡಬೇಕಾದ ಮನವಿಯನ್ನು ನಾನೇ ಬರೆದು ಕೊಟ್ಟೆ. ಕೆಲವೇ ಹೊತ್ತಿನಲ್ಲಿ ಹಲವರು ಹೊರಹೋದರು. ಮತ್ತೆರಡು ದಿನ ಪ್ರಯತ್ನಿಸಿದೆವು, ಬಹುತೇಕ ಎಲ್ಲರೂ ಹೋದರು! ಡಿಸೆಂಬರ್ ವರೆಗೆ 9 ತಿಂಗಳು ಕಾಲೇಜು-ಆಸ್ಪತ್ರೆಗಳಿಗೆ ಹೋಗದೆಯೇ ಇವರೆಲ್ಲರೂ ಅಂತಿಮ ಪರೀಕ್ಷೆಗೆ ಹೋಗಬಹುದು, ಎಲ್ಲರೂ ವೈದ್ಯರಾಗಿ ಬರಬಹುದು, ಆ ವಿದ್ಯಾರ್ಥಿಗಳಿಗೂ ಅದೇ ಬೇಕಾಗಿದೆಯೋ ಏನೋ?
ಅಂತೂ ಶಾಲೆ-ಕಾಲೇಜು ಯಾರಿಗೂ ಬೇಡವಾಗಿದೆ, ಸುಲಭದಲ್ಲಿ ಡಿಗ್ರಿ ಪತ್ರ ಕೈಗೆ ಸಿಕ್ಕರೆ ಸಾಕಾಗಿದೆ. ಕೊರೋನ ಅದಕ್ಕೆ ಅವಕಾಶವೊದಗಿಸಿದೆ. ವಿದ್ಯಾರ್ಥಿ ಯುವಜನ ಸಂಘಟನೆಗಳೂ ಕೂಡ ಶಾಲೆ-ಕಾಲೇಜು ತೆರೆಯಬಾರದೆಂದೇ ಹೋರಾಟ ನಡೆಸುತ್ತಿವೆ. ಶಾಲೆ-ಕಾಲೇಜುಗಳನ್ನು ಮುಚ್ಚಿಸಿದ್ದು ತಮ್ಮ ಮಹತ್ಸಾಧನೆ ಎಂದು ಮಾಧ್ಯಮಗಳೂ ಕಿರುಚುತ್ತಿವೆ. ಭವ್ಯ ಭಾರತ, ವಿಶ್ವ ಗುರು ಭಾರತ ಅಂದರೆ ಇದುವೇ ಇರಬೇಕು.
November 23, 2020
November 23, 2020
ಕೊರೋನ ಸೋಂಕಿನ ಬಗ್ಗೆ ಹಬ್ಬಿಸಲಾಗಿರುವ ಭಯವನ್ನು ನಿವಾರಿಸುವ ಜವಾಬ್ದಾರಿ ಸಿಎಂ ಮತ್ತು ಮಾಜಿ ಸಿಎಂ ಅವರದು. ದಯವಿಟ್ಟು ಅದನ್ನು ಮಾಡಿ ಶಾಲೆಗಳನ್ನು ತೆರೆಯಿರಿ.
November 24, 2020
ಕೇವಲ 54 ದಿನಗಳ ಕಾಲ ಪಾಠಗಳನ್ನು ಮುಚ್ಚಿದ್ದರಿಂದ ಮಕ್ಕಳ ಕಲಿಕೆಯು ಕುಂಠಿತಗೊಂಡು ಅವರ ಒಟ್ಟಾರೆ ಜೀವಿತಾವಧಿಯು ಗಣನೀಯವಾಗಿ ಇಳಿಯುತ್ತದೆಂದೂ, ಕೊರೋನ ನಿಭಾಯಿಸುವಲ್ಲಿ ಆಗುವ ಪ್ರಯೋಜನಕ್ಕಿಂತ ನಷ್ಟವೇ ಬಹಳ ಹೆಚ್ಚೆಂದೂ ಈ ಅಧ್ಯಯನದಲ್ಲಿ ಹೇಳಲಾಗಿದೆ
Many countries (with the so called second wave) are closing restaurants, bars, and gyms, and begging residents to steer clear of social gatherings in bids to contain spread and keep schools open. ….
“I think schools should close last,” says Michael Wagner, a microbial ecologist at the University of Vienna
——
We do everything the other way… We have opened every space except the schools
This position is based on the unanimous advice of the Australian Health Protection Principal Committee, made up of federal and state medical and health officers, which has said the virus poses a “minimal” health risk to people younger than 19 and closing schools would, in fact, harm the overall pandemic response.
ಶಾಲೆ ತೆರೆಯಲು ಒತ್ತಾಯಿಸುತ್ತಿರುವವರು ಅದೇ ಖಾಸಗಿ ಲಾಬಿಯ ಏಜೆಂಟರು ಅಂತ ಅವರಲ್ಲೇ ಕೆಲವರು!
ಹಾಗಂದರೆ ಏನರ್ಥ?
ಶಾಲೆ ತೆರೆಯಲು ಒತ್ತಾಯಿಸುತ್ತಲೇ ಬಂದಿರುವವರಲ್ಲಿ ಯಾರಾದರೂ ವಿದ್ಯಾಗಮ ಮುಚ್ಚಿದ್ದನ್ನು ಸಮರ್ಥಿಸಿದ್ದಾರೆಯೇ? ನನಗೆ ತಿಳಿದಿರುವಂತೆ ಇಲ್ಲ; ಶಾಲೆಗಳು, ಪಾಠಗಳು ನಡೆಯಲೇ ಬೇಕು ಎನ್ನುತ್ತಿರುವವರೆಲ್ಲರೂ ವಿದ್ಯಾಗಮ ಮುಚ್ಚಿದ್ದನ್ನು ವಿರೋಧಿಸಿದ್ದಾರೆ, ಆ ವಿಚಾರದಲ್ಲಿ ಯಾವ ಗೊಂದಲವೂ ಇಲ್ಲ.
ಶಾಲೆ ತೆರೆಯಬೇಕು ಎನ್ನುವವರು ಖಾಸಗಿ ಲಾಬಿಯ ಏಜೆಂಟರು ಎನ್ನುವುದಾದರೆ ವಿದ್ಯಾಗಮದ ವಿಚಾರದಲ್ಲಿ ಖಾಸಗಿ ಲಾಬಿಗೆ ವಿರುದ್ಧವಾಗಿ ವರ್ತಿಸಿದವರನ್ನು ಶಾಲೆ ತೆರೆಯುವ ವಿಚಾರದಲ್ಲಿ ಅದೇ ಖಾಸಗಿ ಲಾಬಿ ಏಜೆಂಟರನ್ನಾಗಿ ನಿಯೋಜಿಸಿದೆ ಎಂದರ್ಥವೇ?
ಶಾಲೆ ತೆರೆಯಬೇಕು ಎನ್ನುವವರು ಖಾಸಗಿ ಶಾಲೆಗಳನ್ನಷ್ಟೇ ತೆರೆಯಬೇಕು ಎನ್ನುತ್ತಿದ್ದಾರೆಯೇ? ಅದೂ ಇಲ್ಲ. ಎಲ್ಲಾ ಶಾಲೆಗಳನ್ನು ಕೂಡಲೇ ತೆರೆಯಬೇಕು ಎಂದೇ ಹೇಳುತ್ತಿದ್ದಾರೆ.
ಮಹನೀಯರೇ, ವಿಷಯ ಅರ್ಥವಾಗದಿದ್ದರೆ ಓದಿಕೊಳ್ಳಿ, ಇಲ್ಲವಾದರೆ ಕೇಳಿ ತಿಳಿದುಕೊಳ್ಳಿ. ಶಾಲೆ ಮುಚ್ಚಿಸುವ ಹಠಕ್ಕೆ ಬಿದ್ದು, ಅದಕ್ಕಾಗಿ ಏನೇನೋ ಅಸಂಬದ್ಧ ವಾದ ಹೂಡಿ, ಮಕ್ಕಳ ಭವಿಷ್ಯವನ್ನು, ದೇಶದ ಭವಿಷ್ಯವನ್ನು ಮಣ್ಣು ಮಾಡಬೇಡಿ.
November 28, 2020
ಎಡಪಂಥೀಯರು, ಪ್ರಗತಿಪರರು, ವೈಜ್ಞಾನಿಕ ಮನೋವೃತ್ತಿಯವರು, ಸಮಾನ ಶಿಕ್ಷಣದ ಬೆಂಬಲಿಗರು ಅಥವಾ ಅದಕ್ಕಾಗಿ ಹೋರಾಡುವವರು ಎಂದೆಲ್ಲ ಹೇಳಿಕೊಳ್ಳುವವರಲ್ಲಿ ಹೆಚ್ಚಿನವರು ಶಾಲೆಗಳನ್ನು ತೆರೆಯುವುದಕ್ಕೆ ವಿರೋಧವಾಗಿದ್ದಾರೆ ಅಥವಾ ಸುಮ್ಮನಿದ್ದು ಶಾಲೆ ಮುಚ್ಚಿರುವುದನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ.
ಅಂಥವರಲ್ಲಿ ನೇರವಾದ, ಅತಿ ಸರಳವಾದ ಪ್ರಶ್ನೆಗಳು:
ಮಾರ್ಚ್ ನಿಂದ ಎಲ್ಲಾ ಶಾಲೆ ಕಾಲೇಜುಗಳನ್ನು ಮುಚ್ಚಿ ಸಾಧಿಸಿದ್ದೇನು? ಅದರಿಂದ ವಿದ್ಯಾರ್ಥಿಗಳಿಗೆ, ಸಮಾಜಕ್ಕೆ, ಈ ದೇಶಕ್ಕೆ ಆಗಿರುವ ಲಾಭಗಳೇನು? ಈ ಕೂಡಲೇ ಶಾಲೆ ತೆರೆಯುವುದರಿಂದ ಆಗುವ ಹಾನಿಗಳೇನು?
ಇವುಗಳಿಗೆ ದಯವಿಟ್ಟು ಸಾಧಾರವಾಗಿ ಉತ್ತರಿಸಿ. ಉತ್ತರ ಗೊತ್ತಿಲ್ಲ ಅಂತಾದರೆ ಗೊತ್ತಿಲ್ಲ ಅಂತಾದರೂ ಹೇಳಿ.
November 28, 2020
ಕೊರೋನ ಗೆಲ್ಲಲು ವ್ಯಾಯಾಮ ಬೇಕು, ಮನೆಯೊಳಗೇ ಹೆದರಿ ಕುಳಿತುಕೊಳ್ಳುವುದಲ್ಲ, ಎಂದಿದೆ ವಿಶ್ವ ಆರೋಗ್ಯ ಸಂಸ್ಥೆ
ಶಾಲೆಗಳನ್ನು ಕೂಡಲೇ ತೆರೆಯುವ ಬಗ್ಗೆ ನಾನು ಹಲವು ಶಿಕ್ಷಕರಲ್ಲಿ, ಮಕ್ಕಳಲ್ಲಿ, ಹೆತ್ತವರಲ್ಲಿ ಮಾತಾಡುತ್ತಲೇ ಬಂದಿದ್ದೇನೆ. ಹೆಚ್ಚಿನವರಿಗೆ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಒಲವಿದೆ, ಆದರೆ ಅದನ್ನು ಬಹಿರಂಗವಾಗಿ ಹೇಳುವ ಧೈರ್ಯ ಇಲ್ಲ. ನಾವಾದರೂ ಅವರಿಗೆ ಧ್ವನಿಯಾಗಬೇಕು.
ಡಿಸೆಂಬರ್ ಮೊದಲ ವಾರದಲ್ಲಿ ಶಾಲೆಗಳನ್ನು ಆರಂಭಿಸಿ, ಮೇ 2ನೇ ವಾರದವರೆಗೆ ಬಿಡುವಿಲ್ಲದೆ ಶಾಲೆಗಳನ್ನು ನಡೆಸಬಹುದು. ಹಲವು ಶಿಕ್ಷಕರು ನನಗೆ ಹೇಳಿರುವಂತೆ, ಇಡೀ ವರ್ಷದ ಪಠ್ಯಗಳನ್ನು ಕಲಿಸಲು ಈ 6 ತಿಂಗಳು ಧಾರಾಳವಾಗಿ ಸಾಕಾಗುತ್ತವೆ. ಮೇ 2ನೇ ವಾರದಲ್ಲಿ ಪರೀಕ್ಷೆ ನಡೆಸಿ, ಜೂನ್ ಮೊದಲಲ್ಲೇ ಮುಂದಿನ ಶೈಕ್ಷಣಿಕ ವರ್ಷವನ್ನು ಎಂದಿನಂತೆಯೇ ಆರಂಭಿಸಲು ಸಾಧ್ಯವಿದೆ.
ಕೊರೋನ ಸೋಂಕಿನಿಂದ ಮಕ್ಕಳಿಗೆ ಸಮಸ್ಯೆಯಾಗದು. ಈ ಬಗ್ಗೆ ಎಲ್ಲಾ ಮಾಹಿತಿಯೂ ಸರಕಾರದ ಬಳಿ ಇದೆ. ಅದನ್ನು ಬಹಿರಂಗಪಡಿಸಬೇಕೆಂದು ನಾನು ಕೇಳಿದ್ದೆ, ಆದರೆ ಅದು ಹೊರಬರುತ್ತಿಲ್ಲ. ಎಲ್ಲರೂ ಒಟ್ಟಾಗಿ ಕೇಳೋಣ.
ಲಸಿಕೆ ಬರುವುದಿಲ್ಲ, ಬಂದರೂ ಮಕ್ಕಳಿಗೆ ಸಿಗಲಾರದು. ಅಲ್ಲಿಯವರೆಗೆ ಶಾಲೆಗಳನ್ನು ತೆರೆಯಬಾರದು ಎನ್ನುವುದು ಯಾವ ಕಾರಣಕ್ಕೂ ಸರಿಯಲ್ಲ.
ರಾಜ್ಯದ ಎಲ್ಲಾ ಶಾಲೆಗಳನ್ನು ಈ ಕೂಡಲೇ ತೆರೆಯಬೇಕು, ಅಷ್ಟೇ. ತೆರೆಯಬಾರದು ಎನ್ನುವವರು ಅದಕ್ಕೆ ಸ್ಪಷ್ಟವಾದ ಕಾರಣಗಳನ್ನು ತಿಳಿಸಲಿ, ಇಲ್ಲವಾದರೆ ಇದುವರೆಗೆ ಸುಮ್ಮನಿದ್ದು ಮಕ್ಕಳ ದೈಹಿಕ, ಮಾನಸಿಕ, ಶೈಕ್ಷಣಿಕ ಹಾನಿಗೆ ಕಾರಣರಾದುದಕ್ಕೆ ಕ್ಷಮೆ ಕೇಳಲಿ.
November 28, 2020
ಸಂಗಾತಿಗಳೇ, ಸಂಕ್ಷಿಪ್ತವಾಗಿ ಬರೆಯುತ್ತಿದ್ದೇನೆ, ವಿವರಗಳನ್ನು ಚರ್ಚಿಸೋಣ
ಶಾಲೆಗಳು ತೆರೆಯಲೇ ಬೇಕು, ಶೂನ್ಯ ವರ್ಷ, ಈ ವರ್ಷ ಆಯಿತು ಇತ್ಯಾದಿ ವಾದಗಳು ತೀರಾ ಹಾನಿಕರವಾಗುತ್ತವೆ, ಅವನ್ನು ಬಿಟ್ಟುಬಿಡೋಣ.
1. ಶಾಲೆಗಳನ್ನು ಕೂಡಲೇ ತೆರೆಯುವಂತೆ ಒತ್ತಾಯಿಸುವುದು
ಅದಕ್ಕಾಗಿ ಎಲ್ಲರೂ ಬೇರೆ ಬೇರೆ ಮಾಧ್ಯಮಗಳನ್ನು ಬಳಸಿ ಹೇಳಿಕೆಗಳನ್ನು ನೀಡುವುದು, ವಿಡಿಯೋ ಆದರೆ ಒಳ್ಳೆಯದು. ಸಾಧ್ಯವಿರುವಷ್ಟು ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಹೆತ್ತವರ ವಿಡಿಯೋಗಳನ್ನು ಸಂಗ್ರಹಿಸಿ ಪ್ರಕಟಿಸುವುದು, ವಾರ್ತಾಭಾರತಿ ಈಗಾಗಲೇ ಒದಗಿಸಿರುವ ಕೊಂಡಿಯನ್ನು ಬಳಸಬಹುದು, ಅಥವಾ ಬೇರೆ ವೇದಿಕೆಗಳನ್ನೂ ಸೃಷ್ಟಿಸಬಹುದು. ಶಾಲೆಗಳೆದುರು ಹಕ್ಕೊತ್ತಾಯ ಇತ್ಯಾದಿ ನಡೆಸಬಹುದು.
2. ಶಾಲೆಗಳನ್ನು ಡಿಸೆಂಬರ್ ಮೊದಲ ವಾರದಲ್ಲೇ ಆರಂಭಿಸುವಂತೆ ಮಾಡಬೇಕು. ಅಲ್ಲಿಂದ ಮೇ ಎರಡನೇ ವಾರದವರೆಗೆ ತರಗತಿಗಳನ್ನು ಎಂದಿನಂತೆ ನಡೆಸಬಹುದು. ನಾನು ಕೆಲವರು ಶಿಕ್ಷಕರಲ್ಲಿ ಚರ್ಚಿಸಿದಂತೆ, ಇದುವರೆಗೆ ಜೂನ್ ನಲ್ಲಿ ಆರಂಭವಾಗುವ ಶಾಲೆಗಳಲ್ಲಿ ಡಿಸೆಂಬರ್ ವೇಳೆಗೆ ವರ್ಷದ ಪಾಠಗಳೆಲ್ಲ ಸುಮಾರಾಗಿ ಮುಗಿದು, ಜನವರಿ ಫೆಬ್ರವರಿಗಳಲ್ಲಿ ಶಾಲಾ ದಿನಾಚರಣೆ, ಆಟೋಟ ಸ್ಪರ್ಧೆಗಳು ನಡೆದು ಮಾರ್ಚ್ ನಲ್ಲಿ ಪರೀಕ್ಷೆಗಳಾಗುತ್ತಿದ್ದವು; ಅಂದರೆ ಸುಮಾರು 6 ತಿಂಗಳಲ್ಲಿ ಎಲ್ಲಾ ಪಾಠಗಳನ್ನು ಮುಗಿಸಲಾಗುತ್ತಿತ್ತು. ಆದ್ದರಿಂದ ಈಗ ಡಿಸೆಂಬರ್ ನಲ್ಲಿ ಶಾಲೆ ತೆರೆದರೆ ಮೇ ವೇಳೆಗೆ ಇಡೀ ವರ್ಷದ ಪಾಠಗಳನ್ನು ಮುಗಿಸಲು ಸಾಧ್ಯವಾಗಲಿದೆ. ಮೇ 2ನೇ ವಾರದಲ್ಲಿ ಪರೀಕ್ಷೆಗಳನ್ನು ನಡೆಸಿ, ಜೂನ್ ವೇಳೆಗೆ ಮುಂದಿನ ಶೈಕ್ಷಣಿಕ ವರ್ಷವನ್ನು ಎಂದಿನಂತೆಯೇ ಆರಂಭಿಸಲು ಸಾಧ್ಯವಾಗುತ್ತದೆ.
3. ಮಕ್ಕಳು ಶಾಲೆಗಳಿಗೆ ಹೋಗದಿರಲು ಕಾರಣವಾಗಿರುವ ಭಯವನ್ನು ಹೋಗಲಾಡಿಸಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ. ಹೆತ್ತವರಲ್ಲಿ, ಮಕ್ಕಳಲ್ಲಿ, ಶಿಕ್ಷಕರಲ್ಲಿ, ವೈದ್ಯರಲ್ಲಿ, ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮದ ಮಂದಿಯಲ್ಲಿ ಕೊರೋನ ಬಗ್ಗೆ ತುಂಬಿರುವ ತಪ್ಪು ಮಾಹಿತಿಯನ್ನು ಹೋಗಲಾಡಿಸಿ ವೈಜ್ಞಾನಿಕ ಮಾಹಿತಿಯನ್ನು ತುಂಬುವ ಕೆಲಸವು ತುರ್ತಾಗಿ, ವ್ಯಾಪಕವಾಗಿ ನಡೆಯಬೇಕಾಗಿದೆ.
4. ಶಾಲೆಗಳನ್ನು ತೆರೆಯುವುದಕ್ಕೆ SOP ಅನ್ನು ನಾವೇ ಸಿದ್ಧಪಡಿಸಬೇಕಾಗುತ್ತದೆ. ಈಗಿರುವ SOP ಯಲ್ಲಿ ಹೇಳಲಾಗಿರುವ RT PCR ಪರೀಕ್ಷೆ, ಶುಚೀಕರಣ ಇತ್ಯಾದಿಗಳ ಅಗತ್ಯವೇ ಇಲ್ಲ, ಅವನ್ನೆಲ್ಲ ತೆಗೆದು ಸರಳವಾದ, ವೈಜ್ಞಾನಿಕವಾದ SOP ತಯಾರಿಸಿ ಸರಕಾರವು ಅದನ್ನು ಒಪ್ಪುವಂತೆ ಮಾಡುವುದು.
November 29, 2020
ಜಾತಿ ಮತ ಭಾಷೆಗಳ ನೆಪದಲ್ಲಿ ಜಗಳಾಡಿಸಿದ್ದಾಯಿತು, ಈಗ ಶಾಲೆ ಮುಚ್ಚಿ ಹೆತ್ತವರು-ಮಕ್ಕಳೊಳಗೆ ಜಗಳಾಡಿಸಲಾಗುತ್ತಿದೆ
ಶಾಲೆ ತೆರೆಯಬೇಕೆನ್ನುವುದು ಖಾಸಗಿ ಹುನ್ನಾರವೆಂದಾದರೆ ಶಾಲೆ ಮುಚ್ಚಿಡುವುದು ಮಹಾನ್ ಕ್ರಾಂತಿಯೇ?
November 29, 2020
ಕೊರೊನಗೆ ಲಸಿಕೆ ಬೇಗ ಬರುವುದಿಲ್ಲ, ಆದರೆ ತಡ ಮಾಡದೆ ಶಾಲೆ ತೆರೆಯಬೇಕು ! : ಡಾ. ಶ್ರೀನಿವಾಸ ಕಕ್ಕಿಲ್ಲಾಯ
►ವಾರ್ತಾ ಭಾರತಿ AWARENESS INTERVIEW
►ಕೊರೋನ ಭೀತಿಯ ನಡುವೆಯೇ ಶಾಲೆಗಳನ್ನು ಕೂಡಲೇ ತೆರೆಯಬೇಕು ಎಂದು ನೀವು ಹೇಳುವುದು ವಿಚಿತ್ರ ಬೇಡಿಕೆಯಲ್ಲವೇ ?
New York City Will Reopen Elementary Schools and Phase Out Hybrid Learning https://nyti.ms/37gdrEE
Second wave.. third wave.., schools shall remain open. Lessons have been learnt by others, when will we learn?
New York’s schools had extremely low test positivity rates during the roughly eight weeks they were open this fall, and there was wide agreement from everyone from the president of the teachers’ union to the mayor’s top public health officials that schools were safer than they had anticipated.
ಓದಲೇ ಬೇಕಾದ ಲೇಖನ – ಕೊರೋನ ಲಸಿಕೆ ಬೇಕೇ, ಈ ಸರಕಾರ ಹೇಳುತ್ತಿರುವುದು, ಮಾಡುತ್ತಿರುವುದು ಏನು – ಹಿರಿಯ ವೈರಾಣು ತಜ್ಞ ಡಾ. ಜೇಕಬ್ ಜಾನ್ ಬರೆದಿದ್ದಾರೆ.
ಇವೇ ಪ್ರಶ್ನೆಗಳನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಲ್ಲಿ ಹೋದ ವಾರ ಕೇಳಿದ್ದೆ, ಇವಕ್ಕೆ ಉತ್ತರವಿಲ್ಲದಿದ್ದರೆ ನಮ್ಮ ಸಿಬಂದಿಯ ವೈಯಕ್ತಿಕ ವಿವರಗಳನ್ನು ಒದಗಿಸುವುದಿಲ್ಲ ಎಂದೂ ಹೇಳಿದ್ದೆ. ಈ ಸರಕಾರದ ಬಳಿ ಯಾವುದಕ್ಕೂ ಉತ್ತರವಿಲ್ಲ, ಹೇಳಿದಂತೆ ಕೇಳಿ, ಅಷ್ಟೇ ಎಂಬುದು ಅದರ ಧೋರಣೆ. ನಮ್ಮವರು ತೆಪ್ಪಗೆ ಕೇಳುತ್ತಾರೆ ಎಂಬುದು ಸರಕಾರಕ್ಕೆ ಬಹಳ ಚೆನ್ನಾಗಿ ಗೊತ್ತಿದೆ. ನಮ್ಮವರು ಹಾಗೆಯೇ ಇದ್ದಾರಲ್ಲ?
“ಶಾಲೆಗಳನ್ನು ತೆರೆಯದೆ ನಾವು ಮಕ್ಕಳನ್ನು ಕೊರೋನದ ಕಡೆಗೆ ತಳ್ಳುತ್ತಿದ್ದೇವೆ” | ವಾರ್ತಾ ಭಾರತಿ AWARENESS INTERVIEW
December 1, 2020
Neeley: all of us have to be present and contributing in important ways. You are now leading at a time when everyone knows that the way to eradicate this deadly virus that’s upon us, COVID-19, is through vaccines. And there’s so many approaches, Pfizer’s doing this and Moderna is doing that. There are over a hundred, I think, companies working on this.
Frazier: 160 different programs.
Neeley: 160. What does it take to find a reliable vaccine? What can you tell … Could you just help me understand what does it take?
Frazier: Well, first of all, it takes a lot of time. I think the record for the fastest vaccine ever brought to market was Merck in the mumps vaccine. It took about four years. Our most recent vaccine for Ebola took five and a half years. And why does it take so long? First of all, it requires a rigorous scientific assessment. And here we didn’t even understand the virus itself or how the virus affects the immune system. We’re starting there. We’re starting with a spike protein as the antigen. What we’re hoping to be able to do with these different approaches is to create a vaccine that we can study quickly that can be both safe and effective and can be durable. Those are three different issues. No one knows for sure whether or not any of these vaccine programs will produce a vaccine like that. What worries me the most is that the public is so hungry, so desperate to go back to normalcy, that they are pushing us to move things faster and faster. But ultimately, if you’re going to use a vaccine in billions of people, you better know what that vaccine does.
I had heard that there was evidence for immunological abnormality suggesting an immunological reaction, often clubbed as “auto-immune”. That is the clue to associate it with the earlier injection, if it happened to be the vaccine candidate and not the placebo. Only the DSMB is authorised to break code and determine if placebo or vaccine candidate was given. In this case, one investigation was coronavirus antibody, negative before injection, positive 11 or 12 days later. So, the investigator and ethics committee concluded it was vaccine and not placebo. Either way, it was for the sponsor, the DSMB, and the regulatory agency to dialogue and decide if trial ought to be halted until further notice.
ಅಮೆರಿಕದ ಹಿರಿಯ ವೈದ್ಯ ವಿಜ್ಞಾನಿ ಡಾ. ಆಂಥನಿ ಫವುಚಿ ಬಾರು ಮುಚ್ಚಿ ಶಾಲೆಗಳನ್ನು ತೆರೆಯಿರಿ ಎಂದಿದ್ದಾರೆ. ಇನ್ನೇನು ಬೇಕು?
ಇಲ್ಲಿನ ತಥಾಕಥಿತ ತಜ್ಞರ ಸಮಿತಿ, ಅದನ್ನು ರಚಿಸಿರುವ, ಅದರ ಮಾತನ್ನು ಪಾಲಿಸುತ್ತಿರುವ ಸರಕಾರ, ಶಾಲೆ ಮುಚ್ಚಿಸಿದ್ದೇ ಸಾಧನೆ ಎಂದು ಕಿರುಚಾಡುತ್ತಿರುವ ಮಾಧ್ಯಮಗಳು, ಹೆದರಿ ಕುಳಿತಿರುವ ಭಯಂಕರ ಹೋರಾಟಗಾರರು, ಬುದ್ಧಿಜೀವಿಗಳು, ಎಡ-ಬಲ-ನಡು ಪಂಥೀಯರು ಇನ್ನಾದರೂ ಸ್ವಲ್ಪ ಮಕ್ಕಳ ಬಗ್ಗೆ, ಈ ದೇಶದ ಭವಿಷ್ಯದ ಬಗ್ಗೆ ಆಲೋಚಿಸಲು ಆರಂಭಿಸಿ, ಕೂಡಲೇ ಶಾಲೆಗಳನ್ನು ತೆರೆಯಲೇ ಬೇಕೆಂಬ ನಮ್ಮ ನಿವೇದನೆಗೆ ದನಿಗೂಡಿಸುತ್ತಾರೋ ಎಂದು ಕಾದು ನೋಡೋಣ.
One of the best and simple SOPs for schools, from Australia
Additional Personal Protective Equipment (PPE), for example medical face masks, is not required to provide regular care for children or young people who are well, unless such precautions are usually adopted in the routine care of an individual child or young person. Good hygiene practices and environmental cleaning are more important for reducing risk.
Schools should not conduct wide-scale temperature checking of students as there is limited evidence to demonstrate the value of such checks.
“ನಮ್ಮ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾದರೆ ಸರಕಾರವೇ ಹೊಣೆ”
“ಶಾಲೆ ಇಲ್ಲದೆ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ”
► ವಿದ್ಯಾರ್ಥಿ ನಂದೀಶ್, ತಂದೆ ಈರಣ್ಣ ಅವರ ಮನದಾಳದ ಮಾತುಗಳು
ವಿದ್ಯಾರ್ಥಿ-ಪೋಷಕರ ಜೊತೆ ವಿಶಿಷ್ಟ ಸಂದರ್ಶನ
ಆಳುವವರೇ ಕೇಳಿ ವಿದ್ಯಾರ್ಥಿಗಳ ಕೂಗು
*ವಾರ್ತಾ ಭಾರತಿ ಯೂಟ್ಯೂಬ್ ಚಾನಲ್
December 5, 2020
ಡಿಸೆಂಬರ್ 15ರೊಳಗೆ ಎಲ್ಲಾ ಶಾಲೆಗಳನ್ನು ತೆರೆಯಲೇ ಬೇಕು.
ಡಿಸೆಂಬರ್ 15ರೊಳಗೆ ಬಾಲವಾಡಿಯಿಂದ 12ರವರೆಗಿನ ಎಲ್ಲಾ ತರಗತಿಗಳನ್ನು ಎಲ್ಲಾ ಶಾಲೆಗಳಲ್ಲಿ ತೆರೆಯಲೇ ಬೇಕು. ಇನ್ನು ಕಾಯುವುದಾಗದು.
ಶಾಲೆ ಮುಚ್ಚಿರುವುದೇ ತಪ್ಪು. ಇನ್ನು ತೆರೆಯದಿದ್ದರೆ ಅದು ಘನ ಘೋರ ಅಪರಾಧವಾಗುತ್ತದೆ, 3-20 ವರ್ಷದ ಎಲ್ಲರ ಮೇಲೂ ಶಾಶ್ವತವಾದ ಹಾನಿಯುಂಟು ಮಾಡಲಿದೆ. ಇವರಿಗೆ ಕೊರೋನ ಏನೂ ಮಾಡುವುದಿಲ್ಲ, ಮಾಡಿರುವುದಕ್ಕೆ ಯಾರ ಬಳಿಯಾದರೂ ಸಾಕ್ಷ್ಯಾಧಾರಗಳಿದ್ದರೆ ಇಲ್ಲೇ ತೋರಿಸಿ. ಶಾಲೆ ಮುಚ್ಚಿರುವ ಈ ಮಹಾ ತಪ್ಪು ಹಾನಿ ಮಾಡಿದೆ, ಅದು ಶಾಶ್ವತವಾಗಿರಲಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ, ಸಿ.ಡಿ.ಸಿ., ಯುನಿಸೆಫ್ ಮತ್ತಿತರ ಅನೇಕ ಸಂಸ್ಥೆಗಳು ಈಗಾಗಲೇ ಬರೆದಿವೆ. ದಿನಕ್ಕೆ 2 ಗಂಟೆಗೂ ಹೆಚ್ಚು ಕಾಲ ಫೋನ್, ಟಿವಿ ಪರದೆ ನೋಡುತ್ತಿದ್ದರೆ 3-5 ವರ್ಷದ ಮಕ್ಕಳ ಭಾಷೆ, ಬರವಣಿಗೆ, ಗ್ರಹಿಕೆಗಳು ಕುಗ್ಗುತ್ತವೆ ಎಂದೂ, 5-7 ಗಂಟೆ ಬಳಸಿದರೆ ಮಿದುಳಿನ ಬೆಳವಣಿಗೆಯೇ ಕುಂಠಿತಗೊಂದು ಮಿದುಳು ತೆಳ್ಳಗಾಗಿ ಶಾಶ್ವತ ಹಾನಿಯಾಗುತ್ತದೆಂದೂ ಅಧ್ಯಯನಗಳು ತೋರಿಸಿವೆ. ಕೊರೋನ ನೆಪದಲ್ಲಿ ಶಾಲೆಗಳನ್ನು ಮುಚ್ಚಿದ್ದರಿಂದ ಮಕ್ಕಳ ಕಲಿಕೆಯು ನಿಂತದ್ದಷ್ಟೇ ಅಲ್ಲ, ಮಕ್ಕಳ ಸಾಗಾಣಿಕೆ, ದುಡಿತ, ಲೈಂಗಿಕ ದೌರ್ಜನ್ಯ, ಇತರ ದೌರ್ಜನ್ಯಗಳು, ಬಾಲ್ಯ ವಿವಾಹ, ಕುಪೋಷಣೆ ಎಲ್ಲವೂ ಬಹಳಷ್ಟು ಹೆಚ್ಚುತ್ತಿವೆ ಎಂಬ ವರದಿಗಳು ಎಲ್ಲೆಡೆಯಿಂದಲೂ ಪ್ರತಿನಿತ್ಯವೂ ಬರುತ್ತಿವೆ.
ಕರ್ನಾಟಕ ಸರಕಾರವೇ ಹೇಳಿರುವಂತೆ ರಾಜ್ಯದಲ್ಲಿ ಕೊರೋನ ಸಾವಿನ ಪ್ರಮಾಣ 0.07% ಅಂದರೆ ಹತ್ತು ಸಾವಿರಕ್ಕೆ ಒಬ್ಬರು. ಸೋಂಕಿತರಲ್ಲಿ 99% ಹೆಚ್ಚಿನವರು ಯಾವುದೇ ಚಿಕಿತ್ಸೆಯಿಲ್ಲದೆ ಮನೆಯಲ್ಲೇ ಇದ್ದು ಗುಣಮುಖರಾಗುತ್ತಾರೆ, ಸಾವಿರಕ್ಕೆ 4 ಮಂದಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಬೇಕಾಗುತ್ತದೆ, ಅವರಲ್ಲಿ 70% ಆಧುನಿಕ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಾರೆ.
ಮಕ್ಕಳಲ್ಲಿ ರೋಗಲಕ್ಷಣಗಳಿರುವುದೇ ಅಪರೂಪ, ಸಮಸ್ಯೆಗಳಾಗುವುದು ಇನ್ನೂ ಅಪರೂಪ, ಸಾವುಂಟಾಗುವ ಸಾಧ್ಯತೆಗಳು ತೀರಾ ಕಡಿಮೆ. ಅಂದರೆ 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಕೊರೋನದಿಂದ ಅತಿ ಹೆಚ್ಚು ಸುರಕ್ಷಿತರು, ಅವರನ್ನು ಮನೆಯೊಳಗೆ ಕೂಡಿ ಹಾಕುವುದಕ್ಕೆ ಯಾವ ಕಾರಣವೂ ಇಲ್ಲ.
ರಾಜ್ಯದಲ್ಲಿ ಮೃತ ಪಟ್ಟವರಲ್ಲಿ ಮಕ್ಕಳ (0-20 ವಯಸ್ಸು) ಪ್ರಮಾಣ 0.7%. ಮೃತರಲ್ಲಿ 10 ವರ್ಷಕ್ಕಿಂತ ಕೆಳಗಿನವರು 0.2%, 10-20ರವರು 0.5%. ಇವರೂ ಕೂಡ ಮೊದಲೇ ಅತಿ ಗಂಭೀರ ಸಮಸ್ಯೆಗಳನ್ನು ಹೊಂದಿದ್ದವರಾಗಿದ್ದರು. ಅಂದರೆ ಸಾಮಾನ್ಯ ಮಕ್ಕಳಿಗೆ ಕೊರೋನದಿಂದ ಅಪಾಯ ನಗಣ್ಯ, ಶಾಲೆ ಮುಚ್ಚುವ ಅಗತ್ಯವಂತೂ ಇಲ್ಲವೇ ಇಲ್ಲ.
ಕೊರೋನ ನಿಭಾಯಿಸುವುದರ ಮೂಲ ಉದ್ದೇಶದ ಬಗ್ಗೆಯೇ ವಿಷಯ ಸ್ಪಷ್ಟತೆ ಇಲ್ಲದಿರುವುದು ಈ ಎಲ್ಲ ಅವಾಂತರಗಳಿಗೆ ಕಾರಣ. ಕೊರೋನ ಸೋಂಕು ಉಂಟಾಗುವುದನ್ನು ತಡೆಯಲು ಸಾಧ್ಯವೇ ಇಲ್ಲ ಎಂದ ಮೇಲೆ ಅಂಥ ಉದ್ದೇಶದಿಂದ ಶಾಲೆ ಮುಚ್ಚುವುದು ಅಪರಾಧ. ಕೊರೋನ ನಿಭಾಯಿಸುವ ಉದ್ದೇಶ ತೀವ್ರ ಸಮಸ್ಯೆಗಳನ್ನು ಮತ್ತು ಸಾವುಗಳನ್ನು ತಡೆಯುವುದು, ಅದಕ್ಕೆ ಶಾಲೆ ಮುಚ್ಚಿ ಯಾವ ಪ್ರಯೋಜನವೂ ಇಲ್ಲ.
ಲಸಿಕೆಗಳು ಬರುವುದಕ್ಕೆ ಇನ್ನೂ ಕೆಲವು ತಿಂಗಳು ಬೇಕು, ಬಂದರೂ ಅವು ಮಕ್ಕಳಿಗೆ ದೊರೆಯವು, ಇಲ್ಲಾಗಲೀ, ಇತರ ದೇಶಗಳಲ್ಲಾಗಲೀ ಮಕ್ಕಳಿಗೆ ಲಸಿಕೆ ನೀಡುವ ಪ್ರಸ್ತಾವವೇ ಇಲ್ಲ. ಮಕ್ಕಳಿಗೆ ಕೊರೋನ ಬಾಧಿಸುವುದಿಲ್ಲ ಎಂದ ಮೇಲೆ ಅವುಗಳ ಅಗತ್ಯವೂ ಇಲ್ಲ.
ಆದ್ದರಿಂದ ಕೊರೋನಕ್ಕಾಗಿ ಶಾಲೆಗಳನ್ನು ಮುಚ್ಚಲು ಕಾರಣಗಳು ಸೊನ್ನೆ (ಯಾರಲ್ಲಾದರೂ ಸಾಕ್ಷ್ಯಾಧಾರಿತ ಕಾರಣಗಳಿದ್ದರೆ ಇಲ್ಲೇ ಕೊಡಿ). ಶಾಲೆಗಳಿಲ್ಲದಿರುವುದರಿಂದ ಮಕ್ಕಳ ಮೇಲಾಗಿರುವ ಹಾನಿಯು ಬಹಳಷ್ಟು, ಮತ್ತು ಶಾಶ್ವತ. ಒಟ್ಟಿನಲ್ಲಿ ಕೊರೋನ ಮಕ್ಕಳಿಗೆ ಯಾವ ಅಪಾಯವನ್ನೂ ಉಂಟು ಮಾಡುವುದಿಲ್ಲ, ಶಾಲೆಯಿಲ್ಲದಿರುವುದು ಬಹಳಷ್ಟು ಹಾನಿ ಮಾಡುತ್ತದೆ.
ಡಿಸೆಂಬರ್ 15ರೊಳಗೆ ಶಾಲೆ ತೆರೆಯಲೇ ಬೇಕು.
December 5, 2020
ಲಸಿಕೆಯ ಪರೀಕ್ಷೆಗಳಿಗಿಂತ ಕೊರೋನ ಸೋಂಕೇ ಹೆಚ್ಚು ವೇಗವಾಗಿ ಹರಡುತ್ತಿದೆ! ಲಸಿಕೆ ಬರುವ ವೇಳೆಗೆ ಹೆಚ್ಚಿನವರಿಗೆ ಸೋಂಕು ತಗಲಿರುತ್ತದೆ. ಲಸಿಕೆ ಯಾರಿಗೆ?
The virus is spreading much faster than the pace of the vaccine trials. Most people would have been infected even before the vaccine becomes available. Who will need the vaccine then?
ವಿಷಯ: ಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕಾಗಿ ಡಿಸೆಂಬರ್ 15ರೊಳಗೆ ಕರ್ನಾಟಕದ ಎಲ್ಲಾ ಶಾಲೆಗಳನ್ನು ತೆರೆಯಲೇ ಬೇಕು – ಶಿಕ್ಷಣ ಸಚಿವರಿಗೊಂದು ಬಹಿರಂಗ ಮನವಿ
ಕೊರೋನ ಸೋಂಕನ್ನು ನಿಯಂತ್ರಿಸುವ ನೆಪದಲ್ಲಿ ಶಾಲೆ-ಕಾಲೇಜುಗಳನ್ನು ಮಾರ್ಚ್ ತಿಂಗಳಿನಿಂದಲೇ ಮುಚ್ಚಿದ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸೆಪ್ಟೆಂಬರ್ ಬಳಿಕ ರಾಜ್ಯದಲ್ಲಿ ಕೊರೋನ ಸೋಂಕಿನ ಹರಡುವಿಕೆಯು ಗಣನೀಯವಾಗಿ ಇಳಿದಿದೆಯೆಂದು ಎಲ್ಲಾ ಅಂಕಿಅಂಶಗಳು ತೋರಿಸುತ್ತಿದ್ದು, ಸರಕಾರವೂ ಕೂಡ ಅದನ್ನೇ ಹೇಳುತ್ತಿದೆ. ಹಾಗಿದ್ದರೂ, ರಾಜ್ಯದಲ್ಲಿ ಮುಚ್ಚಿರುವ ಶಾಲೆಗಳೂ ಇನ್ನೂ ತೆರೆದಿಲ್ಲ. ಕೊರೋನ ಹರಡುವಿಕೆಯು ಆರಂಭವಾಗುವ ಮೊದಲೇ ತರಾತುರಿಯಿಂದ ದಿಗ್ಬಂಧನ ವಿಧಿಸಿ, ಆ ಬಳಿಕ ಕೊರೋನ ಹರಡುವುದು ಹೆಚ್ಚಿದರೂ ಆ ದಿಗ್ಬಂಧನಗಳನ್ನು ಸಡಿಲಿಸತೊಡಗಿ, ಕಳೆದ 3-4 ತಿಂಗಳಲ್ಲಿ ಸಾರ್ವಜನಿಕ ಚಟುವಟಿಕೆಗಳಿಗೆಲ್ಲ ಅನುವು ಮಾಡಲಾಗಿದೆ; ಪ್ರಯಾಣ, ಹೋಟೆಲು-ಬಾರುಗಳು, ಮಾರುಕಟ್ಟೆಗಳು, ದೊಡ್ಡ ದೊಡ್ಡ ಮಾಲ್‌ಗಳು, ಸಭೆ-ಸಮಾರಂಭಗಳು, ಸಾರ್ವಜನಿಕ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮಗಳು, ಚುನಾವಣಾ ಪ್ರಚಾರ ಮುಂತಾದ ಎಲ್ಲಾ ಚಟುವಟಿಕೆಗಳಿಗೆ ಮುಕ್ತ ಅವಕಾಶವನ್ನು ನೀಡಲಾಗಿದೆ; ಅಲ್ಲೆಲ್ಲ ಜನಸಂದಣಿಯನ್ನು ನಿಯಂತ್ರಿಸುವುದಕ್ಕೆ, ದೈಹಿಕ ಅಂತರ, ಮಾಸ್ಕ್ ಧರಿಸುವಿಕೆ ಇತ್ಯಾದಿಗಳನ್ನು ಖಾತರಿಗೊಳಿಸುವುದಕ್ಕೆ ಯಾವುದೇ ಕ್ರಮಗಳನ್ನು ಖಾತರಿಪಡಿಸದಿರುವುದು ಕಂಡುಬರುತ್ತಿದೆ. ಹಾಗೆಯೇ, ಕೊರೋನ ಹರಡುವುದಕ್ಕೆ ಮುಖ್ಯ ಕಾರಣರಾಗಿರುವ ಮತ್ತು ಕೊರೋನ ಸೋಂಕಿನಿಂದ ಸಮಸ್ಯೆಗೀಡಾಗುವ ಅಪಾಯವು ಅತಿ ಹೆಚ್ಚುಳ್ಳ ವಯಸ್ಕರಿಗೆ ಮುಕ್ತವಾಗಿ ಎಲ್ಲೆಡೆಯೂ ತಿರುಗಾಡಲು ಅವಕಾಶ ನೀಡಲಾಗಿದೆ ಮತ್ತು ಅವರು ಮಕ್ಕಳನ್ನು ತಮ್ಮ ಜೊತೆ ಎಲ್ಲೆಡೆ ಕರೆದೊಯ್ಯುವುದಕ್ಕೂ ಅವಕಾಶ ನೀಡಲಾಗಿದೆ. ಆ ನಡುವೆ, ಕೊರೋನ ಸೋಂಕು ವ್ಯಾಪಕವಾಗಿಯೂ, ಕ್ಷಿಪ್ರವಾಗಿಯೂ ಹರಡುತ್ತಿದ್ದ ಮೇ-ಜುಲೈ ಅವಧಿಯಲ್ಲೇ, ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳನ್ನೂ, ಸಿಇಟಿ, ನೀಟ್ ಇತ್ಯಾದಿ ಪರೀಕ್ಷೆಗಳನ್ನೂ ಯಶಸ್ವಿಯಾಗಿ ನಡೆಸಲಾಗಿದ್ದು, ಅದರಿಂದ ವಿದ್ಯಾರ್ಥಿಗಳಿಗಾಗಲೀ, ಶಿಕ್ಷಕರಿಗಾಗಲೀ ಯಾವುದೇ ಸಮಸ್ಯೆಗಳಾಗಲೇ ಇಲ್ಲ ಎನ್ನುವ ಸತ್ಯವೂ ನಮ್ಮ ಮುಂದಿದೆ.
ಸಂಕಷ್ಟದ ಸಂದರ್ಭದಲ್ಲಿ ಮಕ್ಕಳ ಕಲಿಕೆಯನ್ನು ನಿರಂತರವಾಗಿರಿಸಲು, ಅದರಲ್ಲೂ ವಿಶೇಷವಾಗಿ, ತಂತ್ರಜ್ಞಾನದ ಲಭ್ಯತೆಯಿಲ್ಲದ ಗ್ರಾಮೀಣ ಭಾಗದ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ತಜ್ಞರ ಸಮಿತಿಯ ಶಿಫಾರಸ್ಸನ್ನು ಆಧರಿಸಿ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ವಿದ್ಯಾಗಮ ಕಾರ್ಯಕ್ರಮವನ್ನು ಆರಂಭಿಸಿ ಮಕ್ಕಳ ಕಲಿಕೆಗೆ ಒತ್ತು ನೀಡಲಾಗಿತ್ತು; ಈ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ರಾಜ್ಯ–ರಾಷ್ಟ್ರದಲ್ಲಿ ಮನೆ ಮಾತಾಗಿತ್ತು. ಈ ಕಾರ್ಯಕ್ರಮದಲ್ಲಿ ಮಕ್ಕಳು, ಪಾಲಕರು, ಶಿಕ್ಷಕರು, ಸಮುದಾಯ ಮತ್ತು ಹಲವು ಸಂಘಟನೆಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದವು. ಆದರೆ ಮಾಧ್ಯಮಗಳು, ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳು, ಸೃಷ್ಟಿಸಿದ ತಪ್ಪು ತಿಳುವಳಿಕೆ, ಅವೈಜ್ಞಾನಿಕ ವಿಶ್ಲೇಷಣೆ, ಭಾವಾನಾತ್ಮಕ ಗದ್ದಲದ ನಡುವೆ, ಏಕಪಕ್ಷೀಯವಾಗಿ, ಏಕಾಏಕಿಯಾಗಿ ತೀರ್ಮಾನಿಸಿ ಅದನ್ನು ನಿಲ್ಲಿಸಲಾಯಿತು. ಮುಖ್ಯಮಂತ್ರಿಯವರೂ ಸಹ ಗ್ರಾಮೀಣ ಮಕ್ಕಳ ಕಲಿಕೆಯ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ದುಡುಕಿನ ನಿರ್ಧಾರ ಕೈಗೊಂಡಿದ್ದು ವಿಷಾದನೀಯ. ಕೊರೋನದಿಂದ ಸಮಸ್ಯೆಯಾಗಬಲ್ಲ ಎಲ್ಲ ವಹಿವಾಟು-ಕಾರ್ಯಕ್ರಮಗಳಿಗೆ ಅವಕಾಶ ನೀಡಿ, ಕೇವಲ ಶಾಲೆಗಳನ್ನಷ್ಟೇ ಮುಚ್ಚಿ, ಕಲಿಕೆಗೆ ಪೂರಕವಾಗಿದ್ದ ವಿದ್ಯಾಗಮದಂತಹ ವಿನೂತನ ಕಾರ್ಯಕ್ರಮವನ್ನು ನಿಲ್ಲಿಸಿರುವುದು ಬಡಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಅಭಿವೃದ್ಧಿಗೆ ಮಾರಕವಾಗಿದೆ. ಅತ್ಯಂತ ಕೆಳಸ್ತರದ ಅವಕಾಶವಂಚಿತ ಸಮುದಾಯದ ಮಕ್ಕಳಿಗಿದ್ದ ಕಾರ್ಯಕ್ರಮಗಳನ್ನಷ್ಟೇ ನಿಲ್ಲಿಸಿ, ಸರ್ಕಾರಿ ಶಾಲೆಗಳನ್ನು ಮುಚ್ಚಿ, ಬಹುಸಂಖ್ಯಾತ ಬಡ ಮಕ್ಕಳಿಗೆ ಬಳಸಲಿಕ್ಕಾಗದ, ಅರ್ಥವೂ ಆಗದ, ಅನೇಕ ವೈಯುಕ್ತಿಕ ಸಮಸ್ಯೆಗಳಿಗೆ ಕಾರಣವಾಗುವ ಆನ್ ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿರುವುದರ ಹಿಂದೆ ಬಹು ದೊಡ್ಡ ಹುನ್ನಾರ ಮತ್ತು ಲಾಬಿಯಿದೆಯೆಂದು ನಮಗೆಲ್ಲರಿಗೂ ಅನಿಸುತ್ತಿದೆ.
ಶಾಲೆಗಳನ್ನು ತೆರೆಯದಿರುವುದರಿಂದ ಆಗಿರುವ ದುಷ್ಪರಿಣಾಮಗಳನ್ನೂ, ಶಾಲೆಗಳನ್ನು ಈ ಕೂಡಲೇ ತೆರೆಯಬೇಕಾದ ಕಾರಣಗಳನ್ನೂ ಈ ಕೆಳಗಿನ ವಸ್ತುನಿಷ್ಠ ಮಾಹಿತಿಯೊಂದಿಗೆ ತಮ್ಮ ಅವಗಾಹನೆಗಾಗಿ ತರುತ್ತಿದ್ದೇವೆ:
1. ಶಾಲೆಗಳನ್ನು ಧೀರ್ಘಕಾಲ ಮುಚ್ಚಿರುವುದೇ ತಪ್ಪು ಹಾಗೂ ಅವನ್ನು ಕೂಡಲೇ ತೆರೆಯದಿದ್ದರೆ ಅದು ಘನ ಘೋರ ಅಪರಾಧವಾಗುತ್ತದೆ, 3-20 ವರ್ಷದ ಎಲ್ಲರ ಮೇಲೂ ಶಾಶ್ವತವಾದ ಹಾನಿಯುಂಟು ಮಾಡಲಿದೆ ಎಂದು ವಿಶ್ವದ ಎಲ್ಲಾ ಉನ್ನತ ಸಂಸ್ಥೆಗಳೂ, ಮಾನವ ಹಕ್ಕುಗಳ ಸಂಘಟನೆಗಳೂ, ತಜ್ಞರೂ ಏಕಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಎಲ್ಲಾ ದೇಶಗಳಲ್ಲಿ ಶಾಲೆಗಳು ಕೆಲವೇ ದಿನಗಳ ಮುಚ್ಚುವಿಕೆಯ ಬಳಿಕ ಈಗಾಗಲೇ ಮತ್ತೆ ತೆರೆದಿವೆ, ಮುಂದೆ ಕೊರೋನ ಎಷ್ಟು ಹರಡಿದರೂ ಶಾಲೆಗಳನ್ನು ಮುಚ್ಚುವುದೇ ಇಲ್ಲವೆಂದು ಅನೇಕ ಆಡಳಿತಗಳು ಈಗಾಗಲೇ ಹೇಳಿವೆ. ಅಮೆರಿಕವೂ ಸೇರಿದಂತೆ ಹೆಚ್ಚಿನ ದೇಶಗಳಲ್ಲಿ ಆನ್ ಲೈನ್ ಶಿಕ್ಷಣವನ್ನು ರದ್ದು ಪಡಿಸಿ ಶಾಲೆಗಳಲ್ಲೇ, ನೇರ ಶಿಕ್ಷಣವಷ್ಟೇ, ಇರುವಂತೆ ಈ ಹಿಂದಿನ ವ್ಯವಸ್ಥೆಯನ್ನೇ ಮತ್ತೆ ಜಾರಿಗೊಳಿಸಲಾಗುತ್ತಿದೆ.
2. ಶಾಲಾ ಮಕ್ಕಳಿಗೆ ಕೊರೋನ ಸೋಂಕು ಯಾವುದೇ ಸಮಸ್ಯೆಯುಂಟು ಮಾಡುವುದಿಲ್ಲ, ಮಾಡಿರುವುದಕ್ಕೆ ಸಾಕ್ಷ್ಯಾಧಾರಗಳೂ ಲಭ್ಯವಿಲ್ಲ. ಆದರೆ ಶಾಲೆ ಮುಚ್ಚಿರುವ ಈ ಮಹಾ ತಪ್ಪಿನಿಂದಾಗಿ ಪ್ರತೀ ಮಗುವಿಗೂ ಬಹಳಷ್ಟು ಹಾನಿಯಾಗಿದ್ದು, ಅದು ಶಾಶ್ವತವೂ ಆಗಿರಲಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ, ಸಿ.ಡಿ.ಸಿ., ಯುನಿಸೆಫ್ ಮತ್ತಿತರ ಅನೇಕ ಸಂಸ್ಥೆಗಳು ಈಗಾಗಲೇ ಬರೆದಿವೆ. ದಿನಕ್ಕೆ 2 ಗಂಟೆಗೂ ಹೆಚ್ಚು ಕಾಲ ಫೋನ್, ಟಿವಿ ಪರದೆ ನೋಡುತ್ತಿದ್ದರೆ 3-5 ವರ್ಷದ ಮಕ್ಕಳ ಭಾಷೆ, ಬರವಣಿಗೆ, ಗ್ರಹಿಕೆಗಳು ಕುಗ್ಗುತ್ತವೆ ಎಂದೂ, 5-7 ಗಂಟೆ ಅವನ್ನು ಬಳಸಿದರೆ ಮಿದುಳಿನ ಬೆಳವಣಿಗೆಯೇ ಕುಂಠಿತಗೊಂದು ಮಿದುಳು ತೆಳ್ಳಗಾಗಿ ಶಾಶ್ವತ ಹಾನಿಯಾಗುತ್ತದೆಂದೂ ಅಧ್ಯಯನಗಳು ತೋರಿಸಿವೆ. ಕೊರೋನ ನೆಪದಲ್ಲಿ ಶಾಲೆಗಳನ್ನು ಮುಚ್ಚಿದ್ದರಿಂದ ಮಕ್ಕಳ ಕಲಿಕೆಯು ನಿಂತದ್ದಷ್ಟೇ ಅಲ್ಲ, ಮಕ್ಕಳ ಸಾಗಾಣಿಕೆ, ಬಾಲ ಕಾರ್ಮಿಕ ಪದ್ಧತಿ, ಜೀತದ ದುಡಿತ, ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಕುಪೋಷಣೆ, ಹೆತ್ತವರೊಡನೆ ಸಂಘರ್ಷ, ಎಲ್ಲಾ ಬಗೆಯ ಇತರ ದೌರ್ಜನ್ಯಗಳು ನಿರಂತರವಾಗಿ ಹೆಚ್ಚುತ್ತಿವೆ ಎಂಬ ವರದಿಗಳು ರಾಜ್ಯದ ಎಲ್ಲೆಡೆಯಿಂದಲೂ ಪ್ರತಿನಿತ್ಯವೂ ಬರುತ್ತಿವೆ. ಮಕ್ಕಳು ಇದುವರೆಗೆ ಕಲಿತಿರುವುದನ್ನೂ, ಕಲಿಕೆಯ ಕ್ರಮಗಳನ್ನೂ ಮರೆತು, ಕಲಿಕೆಯಲ್ಲಿ ಆಸಕ್ತಿಯನ್ನೇ ಕಳೆದುಕೊಂಡು, ತಮ್ಮ ಹೆಸರು, ವಿಳಾಸಗಳನ್ನು ಹೇಳುವಲ್ಲಿಯೂ ತಡಬಡಾಯಿಸುತ್ತಿರುವಂಥ ದುಃಖಕರವಾದ ಸ್ಥಿತಿಯು ಎಲ್ಲೆಡೆ ಕಂಡುಬರುತ್ತಿದೆ. ಮಕ್ಕಳು ಹಸು-ಕುರಿ ಮೇಯಿಸಲು ಹೋದಾಗ ಮತ್ತು ತಂದೆ-ತಾಯಿ ಇಬ್ಬರೂ ಕೂಲಿ ಕೆಲಸದಲ್ಲಿದ್ದಾಗ ಮನೆಯಲ್ಲಿರುವ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ-ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿರುವ ಬಗ್ಗೆಯೂ, ಕೆಲವು ಮಕ್ಕಳು ಸಾವನ್ನಪ್ಪಿರುವ ಬಗ್ಗೆಯೂ ಮಾಧ್ಯಮಗಳು ವರದಿ ಮಾಡಿವೆ.
3. ಕರ್ನಾಟಕ ಸರಕಾರವೇ ಹೇಳಿರುವಂತೆ ರಾಜ್ಯದಲ್ಲಿ ಕೊರೋನ ಪ್ರಕರಣಗಳು ಅಧಿಕೃತ ಸಂಖ್ಯೆಗಿಂತ 30 ಪಟ್ಟು ಹೆಚ್ಚಿರಬಹುದು, ಅಂದರೆ 90 ಲಕ್ಷದಷ್ಟು ಪ್ರಕರಣಗಳು ಅಧಿಕೃತವಾಗಿ ವರದಿಯಾಗಿರುವಲ್ಲಿ, ನಿಜವಾದ ಸಂಖ್ಯೆಯು ಸುಮಾರು 3-4 ಕೋಟಿಗಳಷ್ಟಾಗಿರಬಹುದು. ಈ 9 ತಿಂಗಳು ಶಾಲೆಗಳನ್ನು ಮುಚ್ಚಿದ್ದರಿಂದ ಕೊರೋನ ಸೋಂಕಿನ ಹರಡುವಿಕೆಯನ್ನು ತಡೆಯುವಲ್ಲಿ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಇದರಿಂದ ಸುಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ 20 ವರ್ಷಕ್ಕಿಂತ ಕೆಳಗಿನವರ ಪ್ರಮಾಣವು 37% ಇದ್ದರೆ, ಸೋಂಕಿತರಲ್ಲಿ ಕೇವಲ 11% ಮಾತ್ರವೇ ಆ ವಯೋವರ್ಗದವರಾಗಿದ್ದಾರೆ; ಅಂದರೆ ವಯಸ್ಕರಿಗೆ ಹೋಲಿಸಿದರೆ ವಿದ್ಯಾರ್ಥಿಗಳಲ್ಲಿ ಕೊರೋನ ಸೋಂಕು ಕಡಿಮೆ ಪ್ರಮಾಣದಲ್ಲಿ ಉಂಟಾಗುತ್ತದೆ ಎನ್ನುವುದು ಸ್ಪಷ್ಟವಾಗಿದೆ. ಕೊರೋನ ಪೀಡಿತರಲ್ಲಿ 99% ಕ್ಕೂ ಹೆಚ್ಚಿನವರು ಯಾವುದೇ ಚಿಕಿತ್ಸೆಯ ಅಗತ್ಯವೂ ಇಲ್ಲದೆ ವಾಸಿಯಾದರೆ, ಸಾವಿರಕ್ಕೆ 4 ಮಂದಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಬೇಕಾಗುತ್ತದೆ, ಅವರಲೂ 70% ಆಧುನಿಕ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಾರೆ. ಹೀಗೆ ಸಮಸ್ಯೆಗಳಾಗುವವರಲ್ಲಿ ಬಹುತೇಕ ಎಲ್ಲರೂ 30 ವರ್ಷಕ್ಕೆ, ಅದರಲ್ಲೂ 60 ವರ್ಷಕ್ಕೆ, ಮೇಲ್ಪಟ್ಟವರೇ ಆಗಿರುತ್ತಾರೆ ಮತ್ತು ಮೊದಲೇ ಇತರ ಗಂಭೀರ ರೋಗಗಳನ್ನು ಹೊಂದಿದ್ದವರೇ ಆಗಿರುತ್ತಾರೆ. ರಾಜ್ಯದಲ್ಲಿ ಕೊರೋನ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವವರಲ್ಲಿ 20 ವರ್ಷಕ್ಕಿಂತ ಕೆಳಗಿನವರ ಸಂಖ್ಯೆಯು ತೀರಾ ಅತ್ಯಲ್ಪವಾಗಿದೆ.
4. ರಾಜ್ಯದಲ್ಲಿ ಕೊರೋನ ಸಾವಿನ ಪ್ರಮಾಣವು 0.07%, ಅಂದರೆ ಹತ್ತು ಸಾವಿರಕ್ಕೆ ಏಳರಷ್ಟು, ಇದೆ ಮತ್ತು ಮೃತರಲ್ಲಿ 99.3%ರಷ್ಟು 20 ವರ್ಷಕ್ಕಿಂತ ಮೇಲ್ಪಟ್ಟವರೇ ಆಗಿದ್ದಾರೆ. ರಾಜ್ಯದಲ್ಲಿ ಮೃತ ಪಟ್ಟವರಲ್ಲಿ ಮಕ್ಕಳ (0-20 ವಯಸ್ಸು) ಪ್ರಮಾಣ 0.7%; 10 ವರ್ಷಕ್ಕಿಂತ ಕೆಳಗಿನವರು 0.2%, 10-20ರವರು 0.5%. ಇವರೂ ಕೂಡ ಮೊದಲೇ ಅತಿ ಗಂಭೀರ ಸಮಸ್ಯೆಗಳನ್ನು ಹೊಂದಿದ್ದವರಾಗಿದ್ದರು. ಅಂದರೆ ಸಾಮಾನ್ಯ ಮಕ್ಕಳಿಗೆ ಕೊರೋನದಿಂದ ಅಪಾಯವು ತೀರಾ ನಗಣ್ಯವಾಗಿದೆ.
5. ಕೊರೋನ ಸೋಂಕಿತರಲ್ಲಿ 99%ಕ್ಕೂ ಹೆಚ್ಚಿನವರು ಯಾವುದೇ ಚಿಕಿತ್ಸೆಯಿಲ್ಲದೆ ಮನೆಯಲ್ಲೇ ಇದ್ದು ಗುಣಮುಖರಾಗುತ್ತಾರೆ, 20 ವರ್ಷಕ್ಕೆ ಕೆಳಗಿನ ಮಕ್ಕಳಲ್ಲಂತೂ ಕೊರೋನ ಸೋಂಕು ಯಾವ ರೋಗಲಕ್ಷಣಗಳಿಲ್ಲದೆಯೇ ಒಂದೆರಡು ದಿನಗಳಲ್ಲೇ ತಾನಾಗಿ ವಾಸಿಯಾಗುವ ಸಾಧ್ಯತೆಯೇ ಅತಿ ಹೆಚ್ಚು. ಇದೇ ಕಾರಣಕ್ಕೆ ಮಕ್ಕಳಿಂದ ಮಕ್ಕಳಿಗೆ ಅಥವಾ ಮಕ್ಕಳಿಂದ ಹಿರಿಯರಿಗೆ ಕೊರೋನ ಹರಡುವ ಸಾಧ್ಯತೆಗಳು ಕೂಡ ಅತಿ ಕಡಿಮೆ ಎಂದು ಹಲವಾರು ವರದಿಗಳಲ್ಲಿ ಹೇಳಲಾಗಿದೆ. ಹಿರಿಯ ವಯಸ್ಸಿನ ಸೋಂಕಿತರಿಗೆ ಹೋಲಿಸಿದರೆ ಮಕ್ಕಳಿಂದ ಸೋಂಕು ಹರಡೂವ ಸಾಧ್ಯತೆಗಳು ನಾಲ್ಕು ಪಟ್ಟೂ ಕಡಿಮೆ ಎನ್ನುವುದು ಹಲವು ಅಧ್ಯಯನಗಳಲ್ಲಿ ದೃಢಪಟ್ಟಿದೆ. ಶಾಲೆಗಳನ್ನು ತೆರೆಯುವುದರಿಂದ ಮಕ್ಕಳಿಗಾಗಲೀ, ಶಿಕ್ಷಕರಿಗಾಗಲೀ, ಮಕ್ಕಳ ಮನೆಯಲ್ಲಿರುವ ಹಿರಿಯರಿಗಾಗಲೀ ಕೊರೋನ ಸೋಂಕು ಹರಡುವ ಅಪಾಯವು ಹೆಚ್ಚುವುದಿಲ್ಲವೆಂದೂ, ಶಾಲೆಗಳನ್ನು ಮುಚ್ಚುವುದರಿಂದ ಕೊರೋನ ಹರಡುವುದನ್ನು ತಡೆಯುವುದಕ್ಕೆ ಅಥವಾ ಕೊರೋನದಿಂದಾಗುವ ಜೀವಹಾನಿಯನ್ನು ತಡೆಯುವುದಕ್ಕೆ ಯಾವುದೇ ಪ್ರಯೋಜನವಿಲ್ಲವೆಂದೂ ಬಹುತೇಕ ವೈಜ್ಞಾನಿಕ ವರದಿಗಳಲ್ಲಿ ಹೇಳಲಾಗಿದೆ.
6. ಕೊರೋನ ಸೋಂಕಿಗಿದಿರಾದ ಲಸಿಕೆಗಳು ಬರುವವರೆಗೆ ಶಾಲೆಗಳನ್ನು ತೆರೆಯಬಾರದು ಎಂಬ ವಾದವನ್ನು ಮಾಧ್ಯಮಗಳು ಈಗಾಗಲೇ ಹರಡಿವೆ. ಇದು ಕಾರ್ಯಸಾಧ್ಯವಲ್ಲದ, ತೀರಾ ಅಸಂಬದ್ಧವಾದ ವಾದವಾಗಿದೆ. ಕೊರೋನ ಲಸಿಕೆಗಳು ಬರುವುದಕ್ಕೆ ಇನ್ನೂ ಕೆಲವು ತಿಂಗಳುಗಳು ಬೇಕು, ಬಂದರೂ ಅವು ಮಕ್ಕಳಿಗೆ ದೊರೆಯವು; ಇಲ್ಲಾಗಲೀ, ಇತರ ದೇಶಗಳಲ್ಲಾಗಲೀ ಮಕ್ಕಳಿಗೆ ಲಸಿಕೆ ನೀಡುವ ಪ್ರಸ್ತಾವವೇ ಇಲ್ಲ. ಮಕ್ಕಳಿಗೆ ಕೊರೋನ ಬಾಧಿಸುವುದಿಲ್ಲ ಎಂದ ಮೇಲೆ ಅವರಿಗೆ ಅವುಗಳ ಅಗತ್ಯವೂ ಇಲ್ಲ. ಆದ್ದರಿಂದ ಶಾಲೆಗಳನ್ನು ಆರಂಭಿಸುವುದಕ್ಕೆ ಲಸಿಕೆಗಳನ್ನು ಕಾಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
7. ವಿಶ್ವ ಆರೋಗ್ಯ ಸಂಸ್ಥೆಯು, ಕೊರೋನ ಹರಡುವಿಕೆಯಿಂದ ಪ್ರಕರಣಗಳ ಪ್ರಮಾಣವು (ಕೇಸ್ ಪಾಸಿಟಿವಿಟಿ) 5%ಕ್ಕಿಂತ ಕಡಿಮೆಯಾದಾಗ ಶಾಲೆಗಳನ್ನು ತೆರೆಯಬಹುದೆಂದು ಈ ಹಿಂದೆಯೇ ಹೇಳಿದೆ. ನಮ್ಮ ರಾಜ್ಯ ಸರಕಾರದ ಅಂಕಿ-ಅಂಶಗಳನುಸಾರ ಇಲ್ಲೀಗ ಆ ಪ್ರಮಾಣವು 1.33% ಅಷ್ಟೇ ಇದ್ದು, ಶಾಲೆಗಳನ್ನು ಕೂಡಲೇ ತೆರೆಯುವುದಕ್ಕೆ ಸಕಾರಣವಾಗಿದೆ.
8. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೋವಿಡ್-೧೯ ರ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ವಿಸ್ತೃತ ಸಲಹೆಗಳನ್ನೊಳಗೊಂಡ ಮಾರ್ಗಸೂಚಿ (Advisory) ಹೊರಡಿಸಿದ್ದು, ಕೋವಿಡ್ ಕಾರಣದಿಂದ ಹಲವು ಮಕ್ಕಳು ತಮ್ಮ ಮೂಲಭೂತ ಹಕ್ಕುಗಳನ್ನು ಕಳೆದುಕೊಳ್ಳುವಂತಾಗಿದೆಯೆಂದೂ, ಈಗಾಗಲೇ ಮಕ್ಕಳಿಗಿದ್ದ ಸಂಕಷ್ಟಗಳ ಜೊತೆಗೆ ಲಭ್ಯವಿದ್ದ ಆಹಾರ, ಪೋಷಣೆ, ಆರೋಗ್ಯ, ಶಿಕ್ಷಣ, ರಕ್ಷಣೆ ಮತ್ತು ನ್ಯಾಯದಾನ ವ್ಯವಸ್ಥೆಗಳನ್ನು ಕಸಿಯುವ ಮೂಲಕ ಹೊಸ ಬಗೆಯ ಸಂಕಷ್ಟಗಳನ್ನು ಸೃಷ್ಟಿಸಿ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ ಎಂದೂ ಹೇಳಿದೆ; ಅದರಲ್ಲೂ ವಿಶೇಷವಾಗಿ ವಲಸೆ ಕಾರ್ಮಿಕರ, ದಿನಗೂಲಿ ನೌಕರರ, ಬೀದಿಬದಿ ಕೆಲಸ ನಿರ್ವಹಿಸಿ ಅಲ್ಲೇ ವಾಸಿಸುವ ಜನರ ಮಕ್ಕಳು, ಬಾಲ ಕಾರ್ಮಿಕರು, ವಿಶೇಷ ಅಗತ್ಯವುಳ್ಳ, ಆರೈಕೆ ಸಂಸ್ಥೆಗಳಲ್ಲಿನ ಇತ್ಯಾದಿ ಮಕ್ಕಳು ತೀವ್ರತರನಾದ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದೂ ಅದು ಅಭಿಪ್ರಾಯ ಪಟ್ಟಿದೆ. ಜೊತೆಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆ ಹಾಗೂ ಸಮಗ್ರ ಬಾಲ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಮಕ್ಕಳಿಗೆ ದೊರೆಯುತ್ತಿದ್ದ ಬಿಸಿಯೂಟ ಮತ್ತು ಪೂರಕ ಪೌಷ್ಠಿಕಾಂಶ ಸೇವಗಳು ಸ್ಥಗಿತಗೊಂಡು ವ್ಯವಸ್ಥೆಯಲ್ಲಿ ವ್ಯತ್ಯಯವಾದ ಕಾರಣ ಮಕ್ಕಳ ಆಹಾರ ಭದ್ರತೆ ಕುರಿತಾದ ಆತಂಕಗಳು ಮತ್ತಷ್ಟು ಹೆಚ್ಚಿವೆ ಎಂದು ಆಯೋಗವು ಉಲ್ಲೇಖಿಸಿದೆ.
9. ಕೇವಲ ಶೇಕಡ 15 ರಷ್ಟು ಗ್ರಾಮೀಣ ಕುಟುಂಬಗಳಿಗೆ ಮಾತ್ರ ಇಂಟರ್ನೆಟ್ ವ್ಯವಸ್ಥೆ ಲಭ್ಯವಿದೆ. ಆನ್ ಲೈನ್ ಮೂಲಕ ಶಿಕ್ಷಣ ಪಡೆಯಲು ಸಾಧ್ಯವಾಗದಿರುವುದರಿಂದ ಅನೇಕ ವಿದ್ಯಾರ್ಥಿಗಳು ಅಸಹಾಯಕತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ಅನೇಕ ಪ್ರಕರಣಗಳು ಕೂಡಾ ವರದಿಯಾಗಿವೆ. ಸರ್ಕಾರಿ ಶಾಲೆಯಲ್ಲಿ ಕಲಿಸುತ್ತಿರುವ ಶೇಕಡ 75 ರಷ್ಟು ಪಾಲಕರು ತಮ್ಮ ಮಕ್ಕಳಿಗೆ ತಂತ್ರಜ್ಞಾನದ ಮೂಲಕ ಶಿಕ್ಷಣ ಒದಗಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಜೊತೆಗೆ, ಆನ್ ಲೈನ್ ಶಿಕ್ಷಣ ಪ್ರಾರಂಭವಾದ ಮೇಲೆ ಗೌಪ್ಯತೆ, ಸೈಬರ್ ಪೀಡನೆ ಮತ್ತು ನಿಂದನೆಯ ಹೊಸ ಸಮಸ್ಯೆಗಳು ಹೆಚ್ಚಾಗಿವೆ. ಈ ವೇದಿಕೆಗಳಲ್ಲಿ ಅನುಚಿತ ಕಲಿಕಾ ವಿಷಯಗಳು ತಲೆಯೆತ್ತುತ್ತಿರುವ ಅನೇಕ ಉದಾಹರಣೆಗಳಿವೆ. ಇದಲ್ಲದೆ ಅನಧಿಕೃತ ಜನರು ಆನ್‌ಲೈನ್ ತರಗತಿಗಳಿಗೆ ಒಳನುಸುಳುವ ಮೂಲಕ ಹೆಣ್ಣು ಮಕ್ಕಳ ಚಿತ್ರಗಳನ್ನು ತೆಗೆದುಕೊಳ್ಳುವ ನಿದರ್ಶನಗಳು ಗೌಪ್ಯತೆಯ ಕಾಳಜಿಗಳನ್ನು ಎತ್ತಿ ತೋರಿಸುತ್ತವೆ ಎಂದು ಆಯೋಗವು ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸುವ ಮೂಲಕ ಆತಂಕ ವ್ಯಕ್ತಪಡಿಸಿದೆ.
10. ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯವು ಕೂಡ ಈಗೆರಡು ದಿನಗಳ ಹಿಂದೆ ಮಕ್ಕಳ ಶಿಕ್ಷಣದ ಹಕ್ಕಿನ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ, ಶಾಲೆಗಳು ಮುಚ್ಚಿ ಮಕ್ಕಳು ಶಿಕ್ಷಣದಿಂದ ವಿಮುಖರಾಗಿರುವುದರಿಂದ ಬಾಲ್ಯದ ದುಡಿಮೆ ಹಾಗೂ ಬಾಲ್ಯ ವಿವಾಹಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಇನ್ನು ಹತ್ತು ದಿನಗಳೊಳಗಾಗಿ ವಿದ್ಯಾಗಮದಂತಹ ಕಾರ್ಯಕ್ರಮಗಳನ್ನು ಪುನರಾರಂಭಿಸುವ ಬಗ್ಗೆ ಯೋಚಿಸಬೇಕೆಂದು ಸರಕಾರಕ್ಕೆ ಸೂಚಿಸಿದೆ.
11. ರಾಜ್ಯದ ಶಾಲಾಭಿವೃದ್ಧಿ ಸಮಿತಿಗಳು ಮತ್ತು ಅವುಗಳ ಸಮನ್ವಯ ಸಮಿತಿಯು ಶಾಲೆಗಳನ್ನು ತೆರೆಯುವುದಕ್ಕೆ ಈಗಾಗಲೇ ಆಗ್ರಹಿಸಿದ್ದು, ಈಗ ಮತ್ತೊಮ್ಮೆ ಈ ಮನವಿಯ ಮೂಲಕ ಅದನ್ನೇ ಒತ್ತಾಯಿಸುತ್ತಿವೆ.
12. ಒಟ್ಟಿನಲ್ಲಿ ಮಕ್ಕಳಲ್ಲಿ ಕೊರೋನ ಸೊಂಕುಂಟಾಗುವುದೇ ವಿರಳ, ಆದರೂ ರೋಗಲಕ್ಷಣಗಳಿರುವುದೇ ಅಪರೂಪ, ಸಮಸ್ಯೆಗಳಾಗುವುದು ಇನ್ನೂ ಅಪರೂಪ, ಸಾವುಂಟಾಗುವ ಸಾಧ್ಯತೆಗಳು ತೀರಾ ಕಡಿಮೆ. ಅಂದರೆ 20 ವರ್ಷಕ್ಕಿಂತ ಕೆಳಗಿನ ಮಕ್ಕಳು ಕೊರೋನದಿಂದ ಅತಿ ಹೆಚ್ಚು ಸುರಕ್ಷಿತರು, ಅವರಿಂದ ಇತರರಿಗೆ ಹರಡುವ ಸಾಧ್ಯತೆಗಳೂ ಕಡಿಮೆ, ಆದ್ದರಿಂದ ಅವರನ್ನು ಮನೆಯೊಳಗೆ ಕೂಡಿ ಹಾಕುವುದಕ್ಕೆ ಯಾವ ಕಾರಣವೂ ಇಲ್ಲ, ಶಾಲೆ ಮುಚ್ಚುವ ಅಗತ್ಯವಂತೂ ಇಲ್ಲವೇ ಇಲ್ಲ. ಈ ಮಕ್ಕಳಿಗೆ ಶಾಲೆಯೇ ಅತ್ಯಂತ ಸುರಕ್ಷಿತವಾದ ಸ್ಥಳವಾಗಿದ್ದು, ಶಿಕ್ಷಣದ ಜೊತೆಗೆ ಸಾಮಾಜಿಕ ಸಂವಹನ, ಆಟೋಟ, ಪೌಷ್ಟಿಕ ಆಹಾರ, ಭ್ರಾತೃತ್ವ ಎಲ್ಲವನ್ನೂ ಒದಗಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಂತೂ ಶಾಲೆಗಳು ಮಕ್ಕಳಿಗೆ ಸುರಕ್ಷತೆಯ ತಾಣ ಮತ್ತು ರಕ್ಷಣೆ, ಪೋಷಣೆ, ಆರೈಕೆ ಮತ್ತು ಕಲಿಕೆಯ ಸಂತಸದ ಕೇಂದ್ರಗಳಾಗಿವೆ. ಅತ್ತ, ಕೊರೋನ ಹರಡುವಿಕೆಯನ್ನು ತಡೆಯುವುದು ಮಕ್ಕಳ ಜವಾಬ್ದಾರಿಯಲ್ಲ, ಅದಕ್ಕಾಗಿ ಶಾಲೆಗಳನ್ನು ಮುಚ್ಚುವುದು ಪರಿಹಾರವೂ ಅಲ್ಲ ಎನ್ನುವುದು ಖಚಿತವಾಗಿದೆ.
13. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಇರುವುದರಿಂದ, ಸುರಕ್ಷತೆ ಮತ್ತು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟಸಾಧ್ಯವೇನಲ್ಲ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆಯನ್ನು ಈ ಕೆಳಗಿನ ಕೋಷ್ಠಕದಲ್ಲಿ ನೀಡಲಾಗಿದೆ.
ಕೋಷ್ಠಕ-೧: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿರುವ ಕಿರಿಯ, ಹಿರಿಯ ಹಾಗು ಎಲಿಮೆಂಟರಿ ಶಾಲೆಗಳ ಸಂಖ್ಯೆ
ಮಕ್ಕಳ ಸಂಖ್ಯೆ
ಕಿರಿಯ ಪ್ರಾಥಮಿಕ
ಹಿರಿಯ ಪ್ರಾಥಮಿಕ
ಎಲಿಮೆಂಟರಿ
1 to 10
3924
292
4216
11 to 25
9092
1249
10341
26 to 50
5295
3777
9072
51 to 100
2001
6198
8199
101+
482
10969
11451
Total
20794
22485
43279
ಈ ಮೇಲಿನ ಎಲ್ಲಾ ಸತ್ಯಾಂಶಗಳನ್ನು ಆಧರಿಸಿ ನಾವೆಲ್ಲರೂ ಒಟ್ಟಾಗಿ ರಾಜ್ಯದ ಮಕ್ಕಳ ಪರವಾಗಿ ಮತ್ತು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಮತ್ತು ಭಾರತದ ಸಂವಿಧಾನದಲ್ಲಿನ ಮೂಲ ತತ್ವಗಳನ್ನು ಆಧರಿಸಿ ಶಾಲೆಗಳ ಪುನಾರಾರಂಭದ ವಿಷಯದಲ್ಲಿ ಮಕ್ಕಳ ಹಿತಾಸಕ್ತಿಯೇ ಅಂತಿಮವೆಂದು ಪರಿಗಣಿಸಿ ಈ ಕೆಳಗಿನ ಹಕ್ಕೊತ್ತಾಯಗಳನ್ನು ಸರಕಾರದ ಮುಂದಿಡುತ್ತಿದ್ದೇವೆ:
• ಬಾಲವಾಡಿಯಿಂದ 12ನೇ ತರಗತಿಯವರೆಗೆ ಎಲ್ಲಾ ಶಾಲೆಗಳನ್ನು ಡಿಸೆಂಬರ್ 15ರೊಳಗಾಗಿ ಪೂರ್ಣ ಪ್ರಮಾಣದಲ್ಲಿ ಆರಂಭಿಸಬೇಕು.
• ಡಿಸೆಂಬರ್ 15ಕ್ಕೆ ಆರಂಭಿಸಿದರೆ ಜೂನ್ ಮಧ್ಯದವರೆಗೆ ಈ 2020-2021 ಶೈಕ್ಷಣಿಕ ವರ್ಷವೆಂದು ಶಾಲೆಗಳನ್ನು ನಡೆಸಿ 180 ದಿನಗಳ ಕಾಲಾವಕಾಶದಲ್ಲಿ ಎಲ್ಲಾ ಪಾಠಗಳನ್ನು ಬೋಧಿಸುವುದಕ್ಕೆ ಸಾಧ್ಯವಿದೆ, ಅದರಲ್ಲಿ ಯಾವುದಾದರೂ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದಿದ್ದರೆ ಸ್ಥಳೀಯ ಮಟ್ಟದಲ್ಲೇ ಮಾಡಿಕೊಳ್ಳುವುದಕ್ಕೂ ಸಾಧ್ಯವಿದೆ. ಆದ್ದರಿಂದ ಈ ಶೈಕ್ಷಣಿಕ ವರ್ಷವನ್ನು ಡಿಸೆಂಬರ್ 15, 2020ರಿಂದ ಜೂನ್ 15, 2021 ಎಂದು ಪರಿಗಣಿಸಬೇಕೆಂದೂ, ಆ ಬಳಿಕ ಪರೀಕ್ಷೆಗಳನ್ನು ನಡೆಸಿ, ಜುಲೈ 2021ರಿಂದ ಮುಂದಿನ ಶೈಕ್ಷಣಿಕ ವರ್ಷವನ್ನು ಆರಂಭಿಸಬೇಕೆಂದೂ ಆಗ್ರಹಿಸುತ್ತೇವೆ.
• ಆನ್ ಲೈನ್ ಶಿಕ್ಷಣದಿಂದ ಹೆಚ್ಚಿನ ಮಕ್ಕಳಿಗೆ ಪ್ರಯೋಜನವಾಗುತ್ತಿಲ್ಲದಿರುವುದರಿಂದಲೂ, ಅದು ಹಲಬಗೆಯ ಸಮಸ್ಯೆಗಳಿಗೆ ಕಾರಣವಾಗುತ್ತಿರುವುದರಿಂದಲೂ ಡಿಸೆಂಬರ್ 15ರಿಂದ ಶಾಲೆಗಳನ್ನು ಆರಂಭಿಸಿದೊಡನೆ ಎಲ್ಲಾ ಸ್ತರಗಳಲ್ಲಿ ಆನ್ ಲೈನ್ ಶಿಕ್ಷಣವನ್ನು ರದ್ದು ಪಡಿಸಬೇಕು. ಯಾವುದೇ ಸಮಸ್ಯೆಗಳ ಕಾರಣಕ್ಕೆ ಯಾರೇ ವಿದ್ಯಾರ್ಥಿಗಳಿಗೆ ಶಾಲೆಗೆ ಬರುವುದು ಅಸಾಧ್ಯವಾದರೆ ಅಂಥ ಮಕ್ಕಳಿಗೆ ಇತರ ವ್ಯವಸ್ಥೆಗಳನ್ನು ಕಲ್ಪಿಸಬಹುದು.
• ರಾಜ್ಯದ ಕೊರೋನ ಕಾರ್ಯಪಡೆಯು ಕಾಲೇಜುಗಳ ಪುನರಾರಂಭಕ್ಕೆಂದು ಸಿದ್ಧಪಡಿಸಿರುವ ಮಾರ್ಗಸೂಚಿಯು ಅವೈಜ್ಞಾನಿಕವಾಗಿದ್ದು, ಎಲ್ಲರೂ ಕೊರೋನ ವೈರಸ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕೆಂಬ ತೀರಾ ಅಸಮಂಜಸವಾದ, ಬೇರೆಲ್ಲೂ ಮಾಡಿರದ ಸಲಹೆಗಳನ್ನು ನೀಡಿದೆ. ಅಂಥ ಕಾರ್ಯಪಡೆಯ ಸಲಹೆಗಳೇ ಶಾಲೆಗಳನ್ನು ಪುನರಾರಂಭಿಸದಿರುವುದಕ್ಕೂ ಕಾರಣವೆಂದು ನಮ್ಮ ಅರಿವಿಗೆ ಬಂದಿರುತ್ತದೆ. ಆದ್ದರಿಂದ ಶಾಲೆಗಳನ್ನು ಡಿಸೆಂಬರ್ 15ರಿಂದ ಪುನರಾರಂಭಿಸುವ ವಿಚಾರದಲ್ಲಿ ಈ ಕಾರ್ಯಪಡೆಯ ಸಹಮತವಿಲ್ಲದಿದ್ದರೆ ಅದನ್ನು ಕಡೆಗಣಿಸಬೇಕೆಂದೂ, ಎಲ್ಲಾ ಮಕ್ಕಳಿಗೆ ಕೊರೋನ ಪರೀಕ್ಷೆ ಮಾಡಿಸಬೇಕೆಂದು ಈ ಕಾರ್ಯಪಡೆಯೇನಾದರೂ ಸಲಹೆಯಿತ್ತರೆ ಅದನ್ನು ಕೂಡ ಕಡೆಗಣಿಸಬೇಕೆಂದೂ ಆಗ್ರಹಿಸುತ್ತೇವೆ.
• ಕೊರೋನ ಕಾಲದಲ್ಲಿ ಶಾಲೆಗಳನ್ನು ನಡೆಸುವುದಕ್ಕೆ ಪಾಲಿಸಬೇಕಾದ ಕ್ರಮಗಳ ಬಗ್ಗೆ ಯುನಿಸೆಫ್, ಸಿ.ಡಿ.ಸಿ., ಮತ್ತು ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಮುಂತಾದ ದೇಶಗಳ ಆರೋಗ್ಯ ಇಲಾಖೆಗಳು ಬಹು ಸರಳವಾದ, ವೈಜ್ಞಾನಿಕವಾದ ಮಾರ್ಗದರ್ಶಿಗಳನ್ನು ಬಹು ಹಿಂದೆಯೇ ಪ್ರಕಟಿಸಿವೆ, ಮಾತ್ರವಲ್ಲ, ಆ ದೇಶಗಳಲ್ಲೆಲ್ಲ ಶಾಲೆಗಳನ್ನು ಬಹು ಯಶಸ್ವಿಯಾಗಿ, ಸುರಕ್ಷಿತವಾಗಿ ನಡೆಸಲಾಗುತ್ತಿದೆ. ನಮ್ಮ ರಾಜ್ಯದಲ್ಲೂ ಅವೇ ಮಾರ್ಗಸೂಚಿಗಳನ್ನಾಧರಿಸಿ ನಿಯಮಗಳನ್ನು ರೂಪಿಸಬಹುದಾಗಿದೆ.
• ಮಾಧ್ಯಮಗಳು, ಅದರಲ್ಲೂ ಟಿವಿ ವಾಹಿನಿಗಳು, ಕೊರೋನ ಸೋಂಕಿನ ಬಗ್ಗೆ ಆರಂಭದಿಂದಲೂ ತೀರಾ ಅತಿರೇಕದ, ಅವೈಜ್ಞಾನಿಕವಾದ, ಆಧಾರರಹಿತವಾದ ಮಾಹಿತಿಯನ್ನು ಅಬ್ಬರದೊಂದಿಗೆ ಬಿತ್ತರಿಸುತ್ತಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ, ಮಾತ್ರವಲ್ಲ, ಸರಕಾರವು ಶಾಲೆಗಳನ್ನು ತೆರೆಯುವುದಕ್ಕೆ ಅಡ್ಡಿಯಾಗುತ್ತಿದೆ. ಶಾಲೆಗಳನ್ನು ಮುಚ್ಚಿರುವುದು ಮಕ್ಕಳಿಗೆ ಸಿಹಿ ಸುದ್ದಿ ಎಂಬ ಹೇಳಿಕೆಗಳು ತೀರಾ ಅಸಂಬದ್ಧವೂ, ಅಪಾಯಕಾರಿಯೂ ಆಗಿವೆ. ಆದ್ದರಿಂದ ಡಿಸೆಂಬರ್ 15ಕ್ಕೆ ಪೂರ್ವಭಾವಿಯಾಗಿ ಮುಂದಿನ ಒಂದು ವಾರ ಈ ಎಲ್ಲಾ ವಾಹಿನಿಗಳು ಮತ್ತು ವಾರ್ತಾ ಪತ್ರಿಕೆಗಳು ರಾಜ್ಯದಲ್ಲಿ ಕೊರೋನ ಸೋಂಕಿನ ವಾಸ್ತವ ಸ್ಥಿತಿಯನ್ನು ಜನರಿಗೆ ತಿಳಿಸಿ, ಶಾಲೆಗಳ ತೆರೆಯುವಿಕೆಯು ನಿರಪಾಯಕರವೆಂಬ ಸತ್ಯವನ್ನು ಎಲ್ಲರಿಗೂ ಮನದಟ್ಟು ಮಾಡುವಂತೆ ಹೇಳಬೇಕಾಗಿದೆ. ಅದಕ್ಕೆ ಅಗತ್ಯವಾದ ಎಲ್ಲಾ ಅಂಕಿಅಂಶಗಳನ್ನು ಸರಕಾರವು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತೇವೆ. ಜೊತೆಗೆ, ಸರಕಾರವು ಕೂಡಾ ಮಕ್ಕಳಲ್ಲೂ, ಪೋಷಕರಲ್ಲೂ ಧೈರ್ಯ ತುಂಬುವಂತಹ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದೂ, ಅದಕ್ಕಾಗಿ ವಿಶೇಷ ಅಭಿಯಾನವನ್ನೇ ಸಂಘಟಿಸಬೇಕೆಂದೂ ವಿನಂತಿಸುತ್ತೇವೆ.
• ಈ 9 ತಿಂಗಳ ಕಾಲ ಶಾಲೆಗಳನ್ನು ಮುಚ್ಚಿಟ್ಟದ್ದರಿಂದಾಗಿ ಮಕ್ಕಳ ಮೇಲೆ ಅಪಾರವಾದ ಪರಿಣಾಮಗಳಾಗಿದ್ದು, ಅವರ ದೈಹಿಕ, ಮಾನಸಿಕ, ಶೈಕ್ಷಣಿಕ ಹಾಗೂ ಪೌಷ್ಟಿಕ ಸ್ಥಿತಿಗತಿಗಳು ಕುಂಠಿತವಾಗಿವೆ. ಅವೆಲ್ಲವುಗಳಿಗೆ ಸೂಕ್ತ ನೆರವಿನ ಅಗತ್ಯವಿದ್ದು, ಅದಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನೂ, ತಜ್ಞರ ಸೇವೆಗಳನ್ನೂ ಏರ್ಪಡಿಸಬೇಕೆಂದು ಆಗ್ರಹಿಸುತ್ತೇವೆ. ಅದಕ್ಕಾಗಿ ಶಾಲೆಗಳಿಗೆ ವಿಶೇಷ ಅನುದಾನದ ಅಗತ್ಯವಿದ್ದರೆ ಅದನ್ನು ಒದಾಗಿಸಬೇಕೆಂದೂ ಕೇಳಿಕೊಳ್ಳುತ್ತೇವೆ.
• ಮಕ್ಕಳಿಗೆ ಈ 9 ತಿಂಗಳಲ್ಲಿ ಬಿಸಿಯೂಟವೂ ಸೇರಿದಂತೆ ಪೌಷ್ಟಿಕ ಆಹಾರದ ಲಭ್ಯತೆಯಲ್ಲಿ ಕೊರತೆಯಿದ್ದುದರಿಂದ ಮುಂದಿನ 6 ತಿಂಗಳಲ್ಲಿ ಅದನ್ನು ಸರಿದೂಗಿಸುವುದಕ್ಕಾಗಿ ಮೊಟ್ಟೆ, ಬೀಜಗಳು ಇತ್ಯಾದಿ ಪೌಷ್ಠಿಕ ಆಹಾರವಸ್ತುಗಳನ್ನು ವಿಶೇಷವಾಗಿ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸುತ್ತೇವೆ.
• ಖಾಸಗಿ ಶಾಲೆಗಳಲ್ಲಿ ಶುಲ್ಕವನ್ನು ಭರಿಸುವ ಬಗ್ಗೆ ಸಮಸ್ಯೆಗಳಿದ್ದರೆ ಅಲ್ಲಿನ ವಿದ್ಯಾರ್ಥಿಗಳ ಶಿಕ್ಷಣಕ್ಕೂ, ಶಿಕ್ಷಕರು ಮತ್ತು ಇತರ ಸಿಬ್ಬಂದಿಯ ಸಂಬಳಗಳಿಗೂ ಯಾವುದೇ ಅಡ್ಡಿಗಳಾಗದಂತೆ ಅವನ್ನು ಬಗೆಹರಿಸುವ ಜವಾಬ್ದಾರಿಯನ್ನು ಸರಕಾರವು ನಿರ್ವಹಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಯಾವುದೇ ವಿದ್ಯಾರ್ಥಿಯ ಕಲಿಕೆಗೆ ಅಡಚಣೆಯಾಗದಂತೆ ಖಾತರಿಪಡಿಸಬೇಕಾಗಿದೆ, ಮತ್ತು ಆ ಕಾರಣಕ್ಕಾಗಿ ಶಾಲೆಗಳಿಗೆ ಅಗತ್ಯವಾದ ಸಕಲ ನೆರವನ್ನೂ ಸರಕಾರವು ನೀಡಬೇಕೆಂದು ಆಗ್ರಹಿಸುತ್ತೇವೆ.
• ಕೊರೋನ ಸೋಂಕಿನಿಂದ ತೊಂದರೆಗೀಡಾಗುವ ಅಪಾಯವು ಹೆಚ್ಚಿರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ಎಲ್ಲಾ ನೆರವನ್ನು ಒದಗಿಸುವುದಕ್ಕೆ ಸರಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.
• ಈ ಎಲ್ಲಾ ಕೆಲಸಗಳಲ್ಲಿ ಸರಕಾರಕ್ಕೆ ಅಗತ್ಯವಾದ ನೆರವನ್ನು ಒದಗಿಸಲು ನಾವು ಸಿದ್ಧರಿದ್ದೇವೆ. ಶಾಲೆಗಳನ್ನು ತೆರೆಯುವುದಕ್ಕೆ ಅಗತ್ಯವಾದ ವೈಜ್ಞಾನಿಕ ಮಾಹಿತಿಯನ್ನು ಒದಗಿಸುವುದು, ಪೋಷಕರಲ್ಲೂ, ಶಿಕ್ಷಕರಲ್ಲೂ, ವಿದ್ಯಾರ್ಥಿಗಳಲ್ಲೂ ಧೈರ್ಯ ತುಂಬಿ ಶಾಲೆಗಳಿಗೆ ಮರಳುವಂತೆ ಉತ್ತೇಜಿಸುವುದು, ಶಾಲೆಗಳಲ್ಲಿ ಅಗತ್ಯವಾದ ಶುಚಿತ್ವವನ್ನು ಏರ್ಪಡಿಸುವುದು, ಕೊರೋನ ಸೋಂಕಿನ ಬಗ್ಗೆ ವಸ್ತುನಿಷ್ಠವಾದ ಮಾಹಿತಿಯನ್ನು ಪ್ರಚುರಪಡಿಸುವುದು ಇತ್ಯಾದಿ ಕೆಲಸಗಳಲ್ಲಿ ಕೈ ಜೋಡಿಸಲು ನಾವೆಲ್ಲರೂ ಬದ್ಧರಾಗಿದ್ದೇವೆ.
ಕೊನೆಯಲ್ಲಿ, ಸರ್ಕಾರ ನಮ್ಮ ಈ ಅಹವಾಲನ್ನು ಪರಿಗಣಿಸಿ ಇದೇ ಡಿಸೆಂಬರ್ 15, 2020ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಬಾಲವಾಡಿಯಿಂದ 12ನೇ ತರಗತಿಯವರೆಗಿನ ಎಲ್ಲಾ ಶಿಕ್ಷಣವನ್ನು ಪುನರಾರಂಭಿಸಬೇಕೆಂದು ಮತ್ತೊಮ್ಮೆ ಕಳಕಳಿಯಿಂದ ಕೇಳಿಕೊಳ್ಳುತ್ತೇವೆ. ರಾಜ್ಯದಲ್ಲಿ ಎಲ್ಲವನ್ನು ತೆರೆಯಲಾಗಿದ್ದರೂ ಶಾಲೆಗಳನ್ನು ತೆರೆಯುವುದಕ್ಕೆ ಸರಕಾರವು ಇನ್ನೂ ನಿರ್ಧರಿಸದೇ ಇರುವುದರಿಂದ, ಮತ್ತು ಒಂದಲ್ಲೊಂದು ಕುಂಟು ನೆಪಗಳನ್ನು ನೀಡಿ ಮಕ್ಕಳನ್ನೂ, ಹೆತ್ತವರನ್ನೂ ಅನಿಶ್ಚಿತತೆಗೂ, ಆತಂಕಕ್ಕೂ ದೂಡಿರುವುದರಿಂದ, ಮತ್ತು ಶಾಲೆಗಳನ್ನು ಸರಿಸುಮಾರು 9 ತಿಂಗಳ ಕಾಲ ಮುಚ್ಚಿರುವುದು ಮಕ್ಕಳ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ, ಶೈಕ್ಷಣಿಕ, ಪೌಷ್ಠಿಕ ಬೆಳವಣಿಗೆಗಳ ಮೇಲೆ ಅತಿ ತೀವ್ರವಾದ, ಗಂಭೀರವಾದ, ಶಾಶ್ವತವಾದ ದುಷ್ಪರಿಣಾಮಗಳನ್ನುಂಟು ಮಾಡಿ, ಅವರ ಮೇಲಿನ ದೌರ್ಜನ್ಯಗಳನ್ನು ಬಹಳಷ್ಟು ಹೆಚ್ಚಿಸಿ, ಮಕ್ಕಳ ಸಕಲ ಹಕ್ಕುಗಳನ್ನು ಉಲ್ಲಂಘಿಸಿದಂತಾಗಿರುವುದರಿಂದ ನಾವೆಲ್ಲರೂ ಒಗ್ಗೂಡಿ ಇದೇ ಡಿಸೆಂಬರ್ 15ರಿಂದ ಎಲ್ಲಾ ಶಾಲೆಗಳಲ್ಲಿ ಬಾಲವಾಡಿಯಿಂದ 12ರವರೆಗಿನ ಎಲ್ಲಾ ತರಗತಿಗಳನ್ನು ಆರಂಭಿಸುವಂತೆ ಈ ಮೂಲಕ ಒತ್ತಾಯಿಸುತ್ತಿದ್ದೇವೆ. ಶಾಲೆಗಳನ್ನು ಪ್ರಾರಂಭಿಸಲು ಸರಕಾರವು ವಿಫಲವಾದರೆ ಡಿಸೆಂಬರ್ 16ರಂದು “ನಮ್ಮೂರ ಸರ್ಕಾರಿ ಶಾಲೆಗಳನ್ನು” ನಾವಾಗಿ ತೆರೆದು ಎಲ್ಲಾ ಮಕ್ಕಳಿಗೆ ಪಾಠಗಳನ್ನೂ, ಬಿಸಿಯೂಟವನ್ನೂ ಆರಂಭಿಸಲಿದ್ದೇವೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ.
ಮಕ್ಕಳ ನಡೆ -ಶಾಲೆಯ ಕಡೆ ಅಭಿಯಾನದ ಸಮಿತಿಯ ಪರವಾಗಿ
ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿ-ಯುವಜನ ಸಂಘಟನೆಗಳು
1. ಶ್ರೀ ಮೊಹಿದ್ದೀನ್ ಕುಟ್ಟಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ.
2. ಶ್ರೀ ವಿ ಎಂ ನಾರಾಯಣ ಸ್ವಾಮಿ ಎನ್‌ಎಸ್ ಮತ್ತು ಶ್ರೀ ಚಂದ್ರಶೇಖರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
3. ಶ್ರೀ ಬಸವರಾಜ ಗುರಿಕಾರ, ಉಪಾಧ್ಯಕ್ಷರು, ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್
4. ಜ್ಯೋತಿ ಕೆ, ರಾಜ್ಯ ಅಧ್ಯಕ್ಷರು, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್ಎಫ್),
5. ವಾಸುದೇವ ರೆಡ್ಡಿ ಕೆ, ರಾಜ್ಯ ಕಾರ್ಯದರ್ಶಿ, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ)
6. ಸರೋವರ್ ಬೆಂಕೀಕೆರೆ, ರಾಜ್ಯ ಸಂಚಾಲಕರು, ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್)
7. ಡಾ.ಶ್ರೀನಿವಾಸ್, ರಾಜ್ಯ ಸಂಚಾಲಕರು, ಭಾರತೀಯ ವಿದ್ಯಾರ್ಥಿ ಸಂಘಟನೆ (ಬಿವಿಎಸ್)
8. ತೋಳಿ ಭರಮಣ್ಣ, ರಾಜ್ಯ ಸಂಚಾಲಕರು, ವಿದ್ಯಾರ್ಥಿ ಬಂಧುತ್ವ ವೇದಿಕೆ
9. ತಿಪ್ಪೇಸ್ವಾಮಿ ಕೆಟಿ, ರಾಜ್ಯ ಸಂಚಾಲಕರು, ಕರ್ನಾಟಕ ಯುವ ಸಮನ್ವಯ
ಅಭಿಯಾನವನ್ನು ವೈಯುಕ್ತಿಕ ನೆಲೆಯಲ್ಲಿ ಬೆಂಬಲಿಸುತ್ತಿರುವ ತಜ್ಞರು
10. ಡಾ. ನಿರಂಜನಾರಾಧ್ಯ ವಿಪಿ, ಅಭಿವೃದ್ಧಿ ಶಿಕ್ಷಣ ತಜ್ಞರು
11. ಡಾ॥ ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯಕೀಯ ತಜ್ಞರು, ಲೇಖಕರು
12. ಡಾ. ಸಿದ್ದನಗೌಡ ಪಾಟೀಲ, ಸಂಪಾದಕರು, ಹೊಸತು ಮಾಸ ಪತ್ರಿಕೆ, ಪ್ರಗತಿಪರ ಚಿಂತಕರು.
13. ಡಾ. ವಡ್ಡಗೆರೆ ನಾಗರಾಜಯ್ಯ, ಕವಿ, ಸಾಂಸ್ಕೃತಿಕ ಚಿಂತಕರು, ಸಾಮಾಜಿಕ ಕಾರ್ಯಕರ್ತರು
14. ಶ್ರೀಪಾದ ಭಟ್, ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಹೋರಾಟಗಾರರು, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ
15. ಬಿಆರ್ ಭಾಸ್ಕರ್ ಪ್ರಸಾದ್, ಪ್ರಧಾನ ಸಂಪಾದಕ ನ್ಯೂಸ್ 14, ರಾಜ್ಯಾಧ್ಯಕ್ಷ, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ.
16. ಡಾ. ಬಿಆರ್ ಮಂಜುನಾಥ್, ರಾಜ್ಯ ಅಧ್ಯಕ್ಷರು, ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ.
17. ಡಾ.ಕೆಎಸ್ ಜನಾರ್ಧನ, ರಾಜ್ಯ ಮಂಡಳಿ ಅಧ್ಯಕ್ಷರು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಉನ್ನತ ಪದವೀಧರರ ಒಕ್ಕೂಟ
18. ಪ್ರೊ. ನರೇಂದ್ರ ನಾಯಕ್, ಅಧ್ಯಕ್ಷರು, ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ
19. ಡಾ॥ ಹೆಚ್ ಜಿ ಜಯಲಕ್ಷ್ಮಿ, ವೈದ್ಯರು, ಲೇಖಕರು, ಮಹಿಳಾ ಪರ ಹೋರಾಟಗಾರರು.
20. ಡಾ॥ ಪಿವಿ ಭಂಡಾರಿ, ಮನೋರೋಗ ತಜ್ಞರು
21. ಡಾ॥ ವಾಣಿ ಕೋರಿ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು
22. ಡಾ॥ ಬಾಲಸರಸ್ವತಿ, ಚರ್ಮ ತಜ್ಞರು
23. ಡಾ॥ ಭಾನು ಪ್ರಕಾಶ್ ಎಎಸ್, ನರಶಸ್ತ್ರಚಿಕಿತ್ಸೆ ವೈದ್ಯರು, ಸತ್ಯ ಆರೋಗ್ಯ.
24. ರಾಜಾರಾಂ ತಲ್ಲೂರು, ಪತ್ರಕರ್ತರು, ಲೇಖಕರು
25. ಜಿ ರವಿ, ವಿಕಲಚೇತನ ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು
26. ಪಾರ್ಥಸಾರಥಿ ಕೆಎಸ್, ನಿವೃತ್ತ ಬಿಎಸ್ಎನ್‌ಎಲ್ ಅಧಿಕಾರಿ ಹಾಗೂ ಲೇಖಕರು.
Countries fighting the coronavirus should not impose nationwide or large-scale school closures, which is the wrong response and compounds the societal cost of the disease, with 320 million children locked out of school at the start of December, the UN children’s agency UNICEF said on Tuesday.
ಯಾರೇನು ಹೇಳಿದರೂ ನಮ್ಮ ಕೆಲವು ಕ್ರಾಂತಿಕಾರಿಗಳು ಒಪ್ಪಲಾರರು
ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ನಲ್ಲಿ ೧೨.೧೨.೨೦೨೦೨೦ರಂದು ಮಧ್ಯಾಹ್ನ 2.30–3.30 ರವರೆಗೆ ಶಾಲೆಗಳನ್ನು ಕೂಡಲೇ ಪುನರಾರಂಭಿಸುವಂತೆ ಮೌನ ಪ್ರತಿಭಟನೆ. ಇದು ರಾಜ್ಯದ ರಾಜಧಾನಿಯಲ್ಲಿ ಶಾಲೆ ಪ್ರಾರಂಭಿಸುವಂತೆ ನಡೆಯುತ್ತಿರುವ ಮೊದಲ ಮೌನ ಪ್ರತಿಭಟನೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಪರವಾಗಿ ಪ್ರತಿಭಟನೆ.
ಹೂವಿನ ಹಡಗಲಿ
December 13, 2020
December 14, 2020
ಇಂದಿನ ವರದಿಗಳನ್ನು ಗಮನಿಸಿದಾಗ ಸರಕಾರವು ಶಾಲೆಗಳನ್ನು ತೆರೆಯುವ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳುವ ಧೈರ್ಯವನ್ನು ಮಾಡುವುದಿಲ್ಲ ಎನ್ನುವುದು ಖಚಿತವಾಗುತ್ತದೆ. ವಿದ್ಯಾಗಮದ ಬಗ್ಗೆ ಹೈಕೋರ್ಟ್ ಅನ್ನು ಕಾಯುವುದು, 10-12ಕ್ಕೆ ಮಾಸಾಂತ್ಯದ ವರೆಗೆ ಕಾಯುವುದು ಎಂದರೆ ಬಾಲವಾಡಿಯಿಂದ 9ರವರೆಗೆ ಮಕ್ಕಳ ಭವಿಷ್ಯವನ್ನು ಮಣ್ಣು ಪಾಲು ಮಾಡುವುದೇ ಇವರ ನಿರ್ಧಾರ ಅನಿಸುತ್ತಿದೆ. ಆದ್ದರಿಂದ 16ಕ್ಕೆ ಶಾಲೆಗಳೊಳಕ್ಕೆ ಹೊಕ್ಕದಿದ್ದರೆ ಮಕ್ಕಳಿಗೆ ನಾವು ಪರಮ ಅನ್ಯಾಯ ಮಾಡಿದಂತೆಯೇ ಸರಿ. ಸರ್ಕಾರಕ್ಕೆ ಧೈರ್ಯವೂ ಇಲ್ಲ, ಸ್ವಂತ ಬುದ್ಧಿಯೂ ಇಲ್ಲ. ನಾವಾದರೂ ಬುದ್ಧಿ ಹೇಳಿ ಧೈರ್ಯ ತುಂಬಲೇಬೇಕು
December 14, 2020
Only thali bhajao sound, and some phool barsao, no salary, no appointments.
10 12 ತರಗತಿಗಳನ್ನು ಪರೀಕ್ಷೆಗಾಗಿ ಮಾತ್ರ ತೆರೆದರೆ ಸಾಲದು, ಬಾಲವಾಡಿಯಿಂದ ಎಲ್ಲ ಮಟ್ಟದಲ್ಲೂ ಆರಂಭವಾಗಬೇಕು
ವಿದ್ಯಾಗಮ ಸಾಕಾಗದು, ಪೂರ್ಣವಾಗಿ ತೆರೆಯಲೇಬೇಕು
ಬೇಸಗೆ ರಜೆ ಜೂನ್ 15ರಿಂದ 30ರವರೆಗೆ, ಈ ಶೈಕ್ಷಣಿಕ ವರ್ಷ ಮುಗಿಸಿದ ಮೇಲೆ.
December 16, 2020
ಚಪ್ಪಾಳೆ ತಟ್ಟಿ ಪುಷ್ಪಾರ್ಚನೆ ಮಾಡಿದ್ದು ಸಂಬಳ ಕೊಡದೆ ಮೋಸ ಮಾಡುವ ಉದ್ದೇಶದಿಂದಲೇ ಎನ್ನುವುದು ಸ್ಪಷ್ಟವಾಯಿತು. ಕೊರೋನಾ ಕೆಲಸ ಮುಗಿಯಿತು, ಇನ್ನು ಇವರೆಲ್ಲರೂ ದೇಶದ್ರೋಹಿಗಳು
December 17, 2020
ಡಿ 15ಕ್ಕೆ ತೆರೆಯಲಿಲ್ಲ, ಹಾಗಾಗಿ 16ಕ್ಕೆ ನಮ್ಮೂರ ಶಾಲೆ ನಾವೇ ತೆರೆದೆವು!
ಶಾಲೆ ತೆರೆಯುವ ಮನಸ್ಸಾಗಲೀ, ಧೈರ್ಯವಾಗಲೀ ಈ ಸರಕಾರಕ್ಕಿಲ್ಲ. ನಮ್ಮ ಮಕ್ಕಳ, ನಮ್ಮ ದೇಶದ ಭವಿಷ್ಯಕ್ಕಾಗಿ ನಮ್ಮ ಶಾಲೆ ನಾವೇ ತೆರೆಯೋಣ, ಬನ್ನಿ.
December 17, 2020
ಇದು ಮೊದಲ ಹೆಜ್ಜೆ. ಎಲ್ಲರೂ ಜೊತೆಗೂಡಿ ಧೈರ್ಯದಿಂದ ಇನ್ನಷ್ಟು ಶಾಲೆಗಳನ್ನು ತೆರೆಯೋಣ.
December 17, 2020
Our analysis finds a exponential relationship between age and IFR for COVID-19. The estimated age-specific IFR is very low for children and younger adults (e.g., 0.002% at age 10 and 0.01% at age 25) but increases progressively to 0.4% at age 55, 1.4% at age 65, 4.6% at age 75, and 15% at age 85
ವಿದ್ಯಾಗಮ ಏಕೆ? ಶಾಲಾ ಕೊಠಡಿಗಳಲ್ಲೇ ವಿದ್ಯಾಗಮ ನಡೆಸುವುದಾದರೆ ಪೂರ್ಣ ಪ್ರಮಾಣದಲ್ಲಿ ತರಗತಿಗಳನ್ನೇ ನಡೆಸಬಹುದು
ಅರ್ಧ ದಿನ ಏಕೆ? ಈ ಹಿಂದಿನಂತೆಯೇ ಇಡೀ ದಿನ ನಡೆಸಬೇಕು
1-5 ಮಕ್ಕಳಿಗೂ, ಬಾಲವಾಡಿಗಳಿಗೂ ವಿನಾಯಿತಿ ಏಕೆ? ಅವರಿಗೆ ಕೊರೋನಾ ಅಪಾಯ ಅತ್ಯಲ್ಪ, ನೇರ ಕಲಿಕೆಯ ಅಗತ್ಯ ಅತಿ ಹೆಚ್ಚು. ಎಲ್ಲಾ ತರಗತಿಗಳನ್ನೂ ಕೂಡಲೇ ಆರಂಭಿಸಲೇಬೇಕು.
ಬಿಸಿಯೂಟ ಏಕಿಲ್ಲ? ಎಲ್ಕಾ ಮಕ್ಕಳಿಗೂ ಬಿಸಿಯೂಟ ಕೊಡಲೇ ಬೇಕು, ಇಡೀ ದಿನ ಶಾಲೆ ನಡೆಸಲೇ ಬೇಕು
ವಿದ್ಯಾರ್ಥಿ ನಿಲಯಗಳ ಮಕ್ಕಳಿಗೆ ಪರೀಕ್ಷೆಯ ಅಗತ್ಯವೇ ಇಲ್ಲ. ಅದನ್ನು ತಕ್ಷಣ ರದ್ದು ಮಾಡಿ.
December 19, 2020
Delhi and Kerala had missed about 25 infections for every case. However, other states like Uttar Pradesh and Bihar would have missed about 300 infections for every COVID-19 confirmed case, according to a study conducted by DST committee.
60% of Indians infected already, says the govt committee.
ಕೇಂದ್ರ ಸರ್ಕಾರದಡಿ ಇರುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಉನ್ನತ ಸಮಿತಿಯ ಅಂದಾಜಿನಂತೆ ದೇಶದಲ್ಲಿ ಪತ್ತೆಯಾಗಿ ವರದಿಯಾಗಿರುವ ಪ್ರತೀ ಒಂದು ಕೊರೋನ ಪ್ರಕರಣಕ್ಕೆ ಸರಾಸರಿಯಾಗಿ 90 ರಷ್ಟು ಹೆಚ್ಚು ಪ್ರಕರಣಗಳು ಪತ್ತೆಯಾಗದೇ ಘಟಿಸಿದ್ದವು; ಅಂದರೆ, ಅಧಿಕೃತ ಪ್ರಕರಣಗಳು ಈಗ 1 ಕೋಟಿ ಇರುವಾಗ ಒಟ್ಟು ಪ್ರಕರಣಗಳ ಸಂಖ್ಯೆಯು 90 ಕೋಟಿಯಷ್ಟಾಗಿದೆ ಎಂದಾಯಿತು; 60% ಭಾರತೀಯರು ಈಗಾಗಲೇ ಸೋಂಕಿತರಾಗಿದ್ದಾರೆ, ಫೆಬ್ರವರಿ ವೇಳೆಗೆ ಭಾರತದಲ್ಲಿ ಕೊರೋನ ಅತಿ ಕಡಿಮೆಯಾಗಲಿದೆ ಎಂದು ಸಮಿತಿಯು ಹೇಳಿದೆ.
ನಮ್ಮ ‘ಕೊರೋನ ಹೆದರದಿರೋಣ’ ಕೃತಿಯಲ್ಲಿ ಇದನ್ನೇ ಹೇಳಿದ್ದೆವು.
ಬಾಲವಾಡಿಯಿಂದ 12ರವರೆಗೆ ಎಲ್ಲಾ ತರಗತಿಗಳು ಕೂಡಲೇ ಆರಂಭವಾಗಲಿ. ಕೇವಲ ಪರೀಕ್ಷೆಗಾಗಿ 10, 12 ಆರಂಭಿಸಿದರೆ ಸಾಲದು
ಶಾಲಾ ಮಕ್ಕಳಿಗೆ ಕೊರೋನ ಪರೀಕ್ಷೆ ಕಡ್ಡಾಯ ಮಾಡಿದರೆ ಅದು ದುಷ್ಟತನ, ಎಲ್ಲರೊಂದಾಗಿ ವಿರೋಧಿಸಲೇಬೇಕು.
December 19, 2020
Many experts have criticized Mr. Modi’s government for overlooking the plight of migrant laborers, who suddenly had no work, no income and no support network in the cities. The government’s Covid-19 task force lacked migrant specialists and was hardly representative of India. Of its 21 members, only two were women and the rest were largely upper-caste men. Many of the migrant laborers came from lower castes and economically underprivileged backgrounds.
A mutant strain of the novel coronavirus – first identified in the UK in September and which is rapidly replacing other variations of the virus – may already be present in several countries, Dr Soumya Swaminathan, Chief Scientist at the World Health Organisation, told NDTV Monday night.
ಇಲ್ಲೂ ಇವೆ, ಹರಡಿವೆ, ಹೋಗಿವೆ. ಈ ಬಗ್ಗೆ ಯಾವ ಆತಂಕವೂ ಬೇಡ. ಈಗಾಗಲೇ ಸೋಂಕಿತರಾಗಿ ಗುಣಮುಖರಾದವರು ನಿಶ್ಚಿಂತೆಯಿಂದಿರಿ (ಅಂಥವರು 60% ಇದ್ದಾರೆ). ಇದುವರೆಗೆ ಸೋಂಕಿತರಾಗದವರಿಗೆ ಎಂದಾದರೂ ಸೋಂಕು ತಗಲಬಹುದು, ತಗಲಿದರೂ 95% ಜನರಲ್ಲಿ ರೋಗಲಕ್ಷಣಗಳೇ ಇಲ್ಲದೆ, ಇನ್ನುಳಿದವರಲ್ಲೂ ಯಾವುದೇ ಸಮಸ್ಯೆಗಳಾಗದೆ ಹೋಗಿಬಿಡುತ್ತದೆ. ಹಲವು ಸಲ ಹೇಳಿರುವಂತೆ ಸೋಂಕು ಉಲ್ಬಣಗೊಳ್ಳುವ ಅಪಾಯವುಳ್ಳವರು ರೋಗಲಕ್ಷಣಗಳು ತೊಡಗಿದರೆ ತಮ್ಮ ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಎರಡು ವಾರದವರೆಗೆ ನೋಡುತ್ತಿರಬೇಕು, 95%ಕ್ಕಿಂತ ಕೆಳಗಿಳಿದರೆ ಆಸ್ಪತ್ರೆಗೆ ದಾಖಲಾಗಬೇಕು. ಅಷ್ಟೇ.
ಇವು ಇದೇ ಕೊರೋನ ವೈರಸ್ ನ ಬಗೆಗಳ ಬಗ್ಗೆ ಜುಲೈ ಆಗಸ್ಟ್ ವರದಿಗಳು. ಯುಕೆ ವರದಿ ಈಗಿನದು, ಅದು ಅಲ್ಲಿ ಕಂಡು 3 ತಿಂಗಳಾದವು. ಇಂಥವು ಬರುತ್ತಲೇ ಇದ್ದವು, ಇನ್ನೂ ಬರಲಿವೆ, ಹಾಗೆಯೇ ಹೋಗಲಿವೆ. ಆರಾಮವಾಗಿರಿ.
SARS CoV2 variants – neither new, nor alarming: CSIR Scientists
86 of the 120 genetic variants associated with immune escapes were found in a total of26,917 genomes from 63 countries.
19 of the 86 genetic variants were found in genomes from India.
Further data and analysis would be
needed to investigate the potential impact of such variants on the efficacy of different vaccines..
ವಿಜ್ಞಾನ ಮತ್ತು ಕೈಗಾರಿಕೆಗಳ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ನಡೆಸಿರುವ ಅಧ್ಯಯನದನುಸಾರ, ಹೊಸ ಕೊರೋನ ವೈರಾಣುವಿನಲ್ಲಿ ವಿವಿಧ ದೇಶಗಳಲ್ಲಿ ಇದುವರೆಗೆ 120 ಬಗೆಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 86 ಬಗೆಗಳು ರೋಗರಕ್ಷಣೆ ನೀಡುವ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬಹುದು, ಮತ್ತು ಈ 86 ಬಗೆಗಳಲ್ಲಿ 19 ಬಗೆಗಳು ಭಾರತದಲ್ಲಿ ಈಗಾಗಲೇ ಕಂಡುಬಂದಿವೆ. ಈಗಾಗಲೇ ಸಿದ್ಧಗೊಳ್ಳುತ್ತಿರುವ ಲಸಿಕೆಗಳ ದಕ್ಷತೆಗೆ ಇವು ಸವಾಲೊಡ್ಡಬಹುದೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಇದುವರೆಗೆ ಲಭ್ಯವಾಗಿರುವ ಮಾಹಿತಿಯಂತೆ ಈ ರೂಪಾಂತರಗಳ ಬಗ್ಗೆ ಭಯಗೊಳ್ಳುವ ಅಗತ್ಯವಿಲ್ಲ.
ಎಸ್. ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ.
ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ ಮತ್ತು ರಾಷ್ಟ್ರೀಯ ಕಾನೂನು ಶಾಲೆ ಪ್ರಾಧ್ಯಾಪಕ
December 30, 2020
Officials at the World Health Organization warned that the COVID-19 pandemic that has ravaged every corner of the world “is not necessarily the big one” — and that the novel coronavirus may never truly go away.
What’s more, chief scientist Dr. Soumya Swaminathan said the WHO hasn’t yet determined whether the approved vaccines being administered in Canada, the U.S. and Europe are effective at preventing transmission, the Guardian reported.
——//
Slowly but surely, WHO is preparing to apologise, just the way it did in 2010 after the H1N1 fear mongering.
ಹೊಸ ಕೊರೋನ ಅಂಥ ದೊಡ್ಡದೇನಲ್ಲ, ಅದು ಸಂಪೂರ್ಣವಾಗಿ ಮರೆಯಾಗುವ ಸಾಧ್ಯತೆಯೂ ಇಲ್ಲ, ಲಸಿಕೆಗಳಿಂದ ಸೋಂಕು ತಗಲದಂತೆ ತಡೆಯಬಹುದೆಂದು ಹೇಳಲಾಗದು, ಆದ್ದರಿಂದ ಅದು ಕೊರೋನ ಹರಡುವಿಕೆಯನ್ನೂ ತಡೆಯಲಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆಯಂತೆ.
2009ರ ಫ್ಲೂ ಸೋಂಕಿನ ವೇಳೆ ಭೀತಿ ಹುಟ್ಟಿಸಿದ್ದಕ್ಕೆ ವರ್ಷದ ಬಳಿಕ WHO ಕ್ಷಮೆ ಯಾಚಿಸಿತ್ತು, ಈಗ ಮತ್ತೆ ಅದಕ್ಕೆ ತಯಾರಾಗುತ್ತಿರುವಂತಿದೆ! (‘ಕೊರೋನ ಹೆದರದಿರೋಣ’ದ ಮೊದಲಲ್ಲೇ ಈ ಬಗ್ಗೆ ಬರೆದಿದ್ದೇವೆ)
ಮಾನ್ಯ ಸಚಿವರು ರಾಮನಗರದ ಶಾಲೆಗೆ ಭೇಟಿಯಿತ್ತ ಸಂದರ್ಭದ ಈ ವಿಡಿಯೋದ 9 ನಿ 35 ಸೆ ನಲ್ಲಿ ನೋಡಿ 1-12 ರವರೆಗೆ ಎಲ್ಲಾ ತರಗತಿಗಳನ್ನು ಕೂಡಲೇ ತೆರೆಯಬೇಕು, ಬಿಸಿಯೂಟ ಕೊಡಲೇ ಬೇಕು ಎಂಬ ನಮ್ಮ ಬೇಡಿಕೆಯಿರುವುದು ಇದೇ ಕಾರಣಕ್ಕೆ. ನೀವೂ ದನಿಗೂಡಿಸಿ.
January 3, 2021
India, which is currently experiencing one of the world’s fastest-growing outbreaks of COVID-19, was among the world’s worst performing countries in tackling inequality going into the pandemic. India’s health budget is the fourth lowest in the world and only half of the population has access to even the most basic healthcare services. Several state governments have used COVID-19 as a pretext to increase daily working hours from 8 to 12 hours a day and suspend minimum pay legislation, devastating the livelihoods of millions of poor workers now battling hunger.
‘ಆ ಕೊರೋನಾ’ ತೋರಿಸಿಕೊಟ್ಟ ದೋಚುವ ಮಾರ್ಗ ಇನ್ನೇನು ಕೊನೆಯಾಗುತ್ತೆ ಅನ್ನುವಾಗ ಬ್ರಿಟನ್ನಿನಿಂದ ಬಂದ ‘ಈ ರೂಪಾಂತರ ಕೊರೋನಾ’ ಇನ್ನಷ್ಟು “ದೋಚಲು” ಹೊಸ ದಾರಿಯಾದೀತು ಅಂತ ರಾಜಕಾರಣಿಗಳು/ಸರಕಾರಿ ಇಲಾಖೆಗಳು ಯೋಚಿಸುತ್ತಿದ್ದರೆ..
ಮಾರಿ,ಮಹಾಮಾರಿ,ರಾಕ್ಷಸಿ ಅಂತೆಲ್ಲ ಇದ್ದ ಬದ್ದ ವಿಶೇಷಣಗಳ ಸ್ಟಾಕು ಬಳಸಿ ಆ ಕೋರೋನಾದ ಬಗ್ಗೆ ಇನ್ನಿಲ್ಲದಷ್ಟು ಭಯ ಹುಟ್ಟಿಸಿ 24×7 ಜನರ ನಿದ್ದೆಗೆಡಿಸಿ TRP ರುಚಿ ನೋಡಿದ ನಮಗೆ,ಈ ರೂಪಾಂತರ ಕೊರೋನಾ- ಮತ್ತೊಮ್ಮೆ TRP ಹೆಚ್ಚಿಸಲು ಯಾವ ಭಯಾನಕ ವಿಶೇಷಣಗಳನ್ನು ಬಳಸಿ ಹೆದರಿಸಬಹುದು ಅಂತ ನಮ್ಮ ಟಿವಿ ಮಾಧ್ಯಮಗಳ ಸಂಶೋಧನಾ ತಂಡ ತಲೆಕೆರೆದುಕೊಳ್ಳುತ್ತಿದ್ದರೆ..
ಇತ್ತ..
ಈ ಕಕ್ಕಿಲ್ಲಾಯ ಡಾಕ್ಟ್ರು “ಈ ರೂಪಾಂತರ ಕೊರೋನಾಗೆ ಹೆದರಬೇಕಾದ್ದೇ ಇಲ್ಲ..ಸಾಮಾನ್ಯ ಚಿಕಿತ್ಸೆಯೇ ಸಾಕು” ಅಂತೆಲ್ಲ “ಅಪಪ್ರಚಾರ” ಮಾಡಿ ಜನರ ತಲೆಯೊಳಗೆ ಸುಮ್ ಸುಮ್ನೇ ಧೈರ್ಯದ ಹುಳ ಬಿಡ್ತಿದಾರಲ್ಲ..ಛೇ!
ಈ ಕಕ್ಕಿಲ್ಲಾಯ ಡಾಕ್ಟ್ರು ಸರಿ ಇಲ್ಲಪ್ಪ..!!
January 3, 2021
The Indian government must explain why mandatory protocols and verification of data from stage-3 trials have been dispensed with while granting permission for the emergency use of the two COVID-19 vaccines, the Congress party asked today. The issue is pertinent since no other country has apparently dispensed with these key processes, the opposition party said.
ಕೇಂದ್ರ ಸರಕಾರವು ಹೊಸ ಲಸಿಕೆಗಳಿಗೆ ಅವಸರವಸರವಾಗಿ ಅನುಮತಿ ನೀಡಿರುವುದನ್ನು ಎಲ್ಲಾ ಪ್ರಮುಖ ಪತ್ರಿಕೆಗಳು ಪ್ರಶ್ನಿಸಿರುವುದು ಸಮಾಧಾನಕರ ಸಂಗತಿಯಾಗಿದೆ. ಮೋದಿ ಮಾಡಿದ್ದೆಲ್ಲವೂ ಸರಿ ಎಂಬ ಭ್ರಮೆಯಲ್ಲಿ ಲಾಕ್ ಡೌನ್, ಕ್ಲೋರೋಕ್ವಿನ್, ಚಪ್ಪಾಳೆ, ದೀಪಜ್ವಲನ, ಪುಷ್ಪವೃಷ್ಟಿ ಎಲ್ಲವನ್ನೂ ಹಾಡಿ ಹೊಗಳಿದ್ದ ಮಾಧ್ಯಮಗಳು ಈಗಲಾದರೂ ಎಚ್ಚೆತ್ತುಕೊಂಡು ಸರಕಾರದ ತಪ್ಪನ್ನು ಪ್ರಶ್ನಿಸುತ್ತಿರುವುದು ನಿಜಕ್ಕೂ ಆಶಾದಾಯಕವೇ ಆಗಿದೆ. ಪ್ರಯೋಜನದ ಬಗ್ಗೆಯಾಗಲೀ, ಸುರಕ್ಷತೆಯ ಬಗ್ಗೆಯಾಗಲೀ ಯಾವುದೇ ಆಧಾರವೂ ಇನ್ನೂ ಲಭ್ಯವೇ ಇಲ್ಲದ ಕೋವಾಕ್ಸಿನ್ ಲಸಿಕೆಗೆ ಅನುಮತಿ ನೀಡಿರುವುದನ್ನು ಕಾಂಗ್ರೆಸ್ ಪಕ್ಷವೂ, ಇತರ ನಾಯಕರೂ, ಅನೇಕ ವಿಜ್ಞಾನಿಗಳೂ ಪ್ರಶ್ನಿಸಿದ್ದಾರೆ; ಭಾಜಪದ ಅಧ್ಯಕ್ಷ ನಡ್ಡಾ ಸಹಜವಾಗಿಯೇ ಇವರೆಲ್ಲರನ್ನೂ ಭಾರತದ ವಿರೋಧಿಗಳು ಎಂದು ಜರೆದಿದ್ದಾರೆ.
ನಮ್ಮ ಭಾರತ ಅಂದರೆ ಭಾರತದ ಸಾಮಾನ್ಯ ಜನರು. ಭಾಜಪದ ಭಾರತ ಅಂದರೆ ದೊಡ್ಡ ಖಾಸಗಿ ಬಂಡವಾಳಗಾರರು. ಯಾರು ಯಾರ ಪರ ಎನ್ನುವುದು ಸಂಶಯಾತೀತವಾಗಿ ಮತ್ತೆ ಮತ್ತೆ ಸಾಬೀತಾಗುತ್ತಿದೆ.
A bare reading of the minutes of the three meetings the drug regulator’s expert panel held over the past week to consider accelerated licenses to coronavirus vaccines, indicates what was suspected all along — that the committee perhaps changed its mind on Covaxin overnight due to government pressure to clear a homegrown jab.
ರಾಜ್ಯದ ಕೆಲವು ಶಿಕ್ಷಕರಲ್ಲಿ ಕೊರೋನ ಸೋಂಕು ಪತ್ತೆಯಾಗಿರುವುದನ್ನು ದೊಡ್ಡ ಸುದ್ದಿಯನ್ನಾಗಿಸಿ, ಶಾಲೆಗಳು ಆರಂಭಗೊಂಡು ಅವರಲ್ಲಿ ಕೊರೋನ ಸೋಂಕುಂಟಾಗಿದೆ ಎಂಬಂತೆ ಬಿಂಬಿಸುವ ಪ್ರಯತ್ನಗಳಾಗುತ್ತಿವೆ. ಇದು ಕುಟಿಲ ಕಾರ್ಯವಾಗಿದ್ದು ಮಕ್ಕಳ ನಡೆ-ಶಾಲೆಯ ಕಡೆ ಅಭಿಯಾನದ ವತಿಯಿಂದ ನಾವು ಇದನ್ನು ಬಲವಾಗಿ ಖಂಡಿಸುತ್ತೇವೆ.
ಶಾಲೆಗಳನ್ನು ತೆರೆಯುವ ಮೊದಲೇ ಶಿಕ್ಷಕರಲ್ಲಿ ಕೊರೋನ ಪತ್ತೆಯ ಪರೀಕ್ಷೆಗಳನ್ನು ಸರಕಾರವು ನಡೆಸಿದ್ದು, ಅವುಗಳ ವರದಿಗಳಷ್ಟೇ ಈಗ ಬರುತ್ತಿವೆ. ಜೊತೆಗೆ, ಕೊರೋನ ಸೋಂಕು ಪತ್ತೆಯಾಗಲು ಸೋಂಕು ತಗಲಿದ ಬಳಿಕ 2-14 ದಿನಗಳಾಗುವುದರಿಂದ, ಶಾಲೆಗಳನ್ನು ತೆರೆಯುವ ಮೊದಲೇ ಈ ಪರೀಕ್ಷೆಗಳನ್ನು ನಡೆಸಲಾಗಿರುವುದರಿಂದ, ಶಾಲೆಗಳನ್ನು ತೆರೆದು ಒಂದೆರಡು ದಿನಗಳಷ್ಟೇ ಆಗಿರುವುದರಿಂದ, ಮತ್ತು ಹೀಗೆ ಸೋಂಕಿತರಾದ ಶಿಕ್ಷಕರು ಈಗ ತೆರೆದಿರುವ ಶಾಲೆಗಳಿಗೆ ಹೋಗಿಯೇ ಇಲ್ಲವಾದ್ದರಿಂದ ಅವರಲ್ಲಿ ಸೋಂಕುಂಟಾಗಿರುವುದಕ್ಕೆ ಶಾಲೆಗಳನ್ನು ತೆರೆದಿರುವುದು ಯಾವ ರೀತಿಯಲ್ಲೂ ಕಾರಣವಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಈ ಎಲ್ಲಾ ಸೋಂಕುಗಳೂ ಶಾಲೆಗಳು ಆರಂಭಗೊಳ್ಳುವ ಮೊದಲೇ ತಗಲಿರುವುದು ಸುಸ್ಪಷ್ಟವಾಗಿದೆ. ನಾವು ಈ ಹಿಂದೆಯೇ ಹಲವು ಬಾರಿ ಹೇಳಿರುವಂತೆ ಶಿಕ್ಷಕರೂ ಸೇರಿದಂತೆ ವಯಸ್ಕರು ಶಾಲೆಗಳ ಮಕ್ಕಳಿಂದ ಸೋಂಕಿತರಾಗುವ ಸಾಧ್ಯತೆಗಳು ಅತಿ ಕಡಿಮೆ ಇದ್ದು, ಹೊರಗಡೆಯೇ ಸೋಂಕಿತರಾಗುವ ಸಾಧ್ಯತೆಗಳು ಹೆಚ್ಚು; ಶಾಲೆ ಆರಂಭಕ್ಕೆ ಮೊದಲೇ ನಡೆಸಲಾಗಿರುವ ಪರೀಕ್ಷೆಗಳಲ್ಲಿ ಕೆಲವು ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿರುವುದು ನಾವು ಹೇಳುತ್ತಾ ಬಂದಿರುವುದನ್ನು ಸಂಪೂರ್ಣವಾಗಿ ಪುಷ್ಟೀಕರಿಸುತ್ತದೆ.
ಎರಡನೆಯದಾಗಿ, ಸರಕಾರವು ಕೈಗೊಂಡ ಈ ಮುಂಜಾಗ್ರತಾ ಕ್ರಮದಿಂದಾಗಿ ಸೋಂಕಿತ ಶಿಕ್ಷಕರು ಗುರುತಿಸಲ್ಪಟ್ಟು ಶಾಲೆಗಳ ಕರ್ತವ್ಯಕ್ಕೆ ಹಾಜರಾಗದೇ ಉಳಿದಿರುವುದರಿಂದ ಆ ಶಿಕ್ಷಕರಿಂದ ಇತರ ಶಿಕ್ಷಕರಿಗಾಗಲೀ, ಮಕ್ಕಳಿಗಾಗಲೀ, ಶಾಲೆಗೆ ಬರುವ ಇತರರಿಗಾಗಲೀ ಸೋಂಕು ಹರಡದಂತೆ ತಡೆಯಲು ಸಹಾಯವಾಗಿದೆ. ಆದ್ದರಿಂದ ಹೀಗೆ ಪತ್ತೆಯಾಗಿರುವುದು ಶಾಲೆಗಳನ್ನು ತೆರೆಯುವಾಗ ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಕ್ಕೆ ಸಾಕ್ಷಿಯಾಗಿದೆ, ಮಾತ್ರವಲ್ಲ, ಶಾಲೆಗಳು ಸುರಕ್ಷಿತವಾಗಿವೆ ಎನ್ನುವುದನ್ನು ದೃಢಪಡಿಸುತ್ತದೆ.
ಮೂರನೆಯದಾಗಿ, ರಾಜ್ಯದ ಎರಡು ಲಕ್ಷಕ್ಕೂ ಹೆಚ್ಚು ಶಿಕ್ಷಕರಲ್ಲಿ ಇಂತಹ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೇವಲ ಬೆರಳೆಣಿಕೆಯಷ್ಟು ಸಂಖ್ಯೆಯ ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿದೆ, ಮತ್ತು ಅವರೆಲ್ಲರೂ ಶಾಲೆಗಳಿಂದ ದೂರವೇ ಉಳಿದಿದ್ದಾರೆ.
ಒಟ್ಟಿನಲ್ಲಿ, ಸರಕಾರದ ಮುಂಜಾಗ್ರತಾ ಕ್ರಮಗಳ ಕಾರಣದಿಂದ, ಶಾಲೆಗಳು ತೆರೆಯುವ ಮೊದಲೇ ಕೆಲವು ಶಿಕ್ಷಕರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆಯೇ ಹೊರತು ಶಾಲೆಗಳನ್ನು ತೆರೆದಿರುವುದರಿಂದಲ್ಲ, ಮತ್ತು ಈಗ ತೆರೆಯಲಾಗಿರುವ ಶಾಲೆಗಳು ಮಕ್ಕಳಿಗೂ, ಶಿಕ್ಷಕರಿಗೂ ಅತ್ಯಂತ ಸುರಕ್ಷಿತವೇ ಆಗಿವೆ.
ಆದ್ದರಿಂದ ಮಾಧ್ಯಮಗಳು ಇಂಥ ಅವಿವೇಕದ ಅಪಪ್ರಚಾರವನ್ನು ತಕ್ಷಣವೇ ನಿಲ್ಲಿಸಿ, ರಾಜ್ಯದ ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಶಾಲೆಗಳನ್ನು ತೆರೆದಿರುವುದನ್ನು ಬೆಂಬಲಿಸಬೇಕು ಎಂದು ಆಗ್ರಹಿಸುತ್ತೇವೆ. ಮಾತ್ರವಲ್ಲ, ಒಂದನೇ ತರಗತಿಯಿಂದ ಎಲ್ಲಾ ತರಗತಿಗಳನ್ನೂ ಕೂಡಲೇ ಪೂರ್ಣವಾಗಿ ತೆರೆಯಬೇಕೆಂದೂ, ಎಲ್ಲಾ ಮಕ್ಕಳಿಗೆ ಶಾಲಾ ಬಿಸಿಯೂಟವನ್ನೂ ಒದಗಿಸಬೇಕೆಂದೂ, ಈ 19-20ರ ಶೈಕ್ಷಣಿಕ ವರ್ಷವನ್ನು ಜೂನ್ ಅಂತ್ಯದವರೆಗೆ ನಡೆಸಿ ಎಲ್ಲಾ ಶಿಕ್ಷಣವನ್ನು ಪೂರ್ಣಗೊಳಿಸಬೇಕೆಂದೂ ಮತ್ತೊಮ್ಮೆ ಆಗ್ರಹಿಸುತ್ತೇವೆ.
ರಾಜ್ಯದಲ್ಲಿ ಒಂದರಿಂದ ಒಂಬತ್ತನೇ ತರಗತಿಗಳಿಗೆ ಪಠ್ಯಗಳಲ್ಲಿ ಯಾವುದೇ ಕಡಿತ ಮಾಡಲಾಗುವುದಿಲ್ಲವೆಂದೂ, ಅವನ್ನು ಸಂಪೂರ್ಣವಾಗಿ ಕಲಿಸಿಕೊಡುವ ನಿಟ್ಟಿನಲ್ಲಿ ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿಯನ್ನು ರೂಪಿಸಲಾಗಿದೆ ಎಂದೂ ಸರಕಾರದ ವತಿಯಿಂದ ಇಂದಿನ ಪತ್ರಿಕೆಗಳಲ್ಲಿ ವರದಿಯಾಗಿದೆ.
ಸರಕಾರದ ಈ ನಿರ್ಧಾರವನ್ನು *ಮಕ್ಕಳ ನಡೆ – ಶಾಲೆಯ ಕಡೆ ಅಭಿಯಾನದ* ನಾವು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ. ಮಕ್ಕಳು ಈಗಾಗಲೇ 9 ತಿಂಗಳು ಕಲಿಕೆಯಿಂದ ವಂಚಿತರಾಗಿ ಹಲವನ್ನು ಮರೆತಿರುವ ಸಾಧ್ಯತೆಗಳಿರುವಾಗ, ಪಠ್ಯಗಳನ್ನು ಕಡಿತ ಮಾಡಿ ಮುಂದಿನ ತರಗತಿಗಳಿಗೆ ದೂಡಿದರೆ ಅವರ ಭವಿಷ್ಯಕ್ಕೆ ಇನ್ನಷ್ಟು ಹಾನಿಯೇ ಆಗಲಿದೆ.
ಜೊತೆಗೆ ಗ್ರಾಮೀಣ ಮತ್ತು ನಗರದಲ್ಲಿನ ಮಕ್ಕಳ ಕಲಿಕೆಯ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದೆ.
ಶಿಕ್ಷಣ ಹಕ್ಕು ಕಾಯಿದೆ ಅನ್ವಯ ಪ್ರತಿಯೊಂದು ಮಗುವು ಆಯಾ ತರಗತಿಯಲ್ಲಿ ನಿಗದಿತ ಕಲಿಕಾ ಮಟ್ಟವನ್ನು ಮುಟ್ಟುವುದು ನ್ಯಾಯಸಮ್ಮತ ಹಕ್ಕಿನ ಭಾಗವಾಗಿರುತ್ತದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಪ್ರಾಧಿಕಾರವಾದ ಡಿ ಎಸ್ ಇ ಆರ್ ಟಿ ಸೂಕ್ತ ಬದಲಾವಣೆ ಮಾಡಿ ಪ್ರಕಟಿಸಿದೆ
ಆದ್ದರಿಂದ ಶೈಕ್ಷಣಿಕ ವರ್ಷವನ್ನು ವಿಸ್ತರಿಸಿ ಎಲ್ಲಾ ಪಾಠಗಳನ್ನು ಕಲಿಸುವುದೇ ಸರಿಯಾದ ನಿರ್ಧಾರವಾಗಿದೆ. ನಮ್ಮ ರಾಜ್ಯದ ಎಲ್ಲಾ ಶಿಕ್ಷಕರೂ ಈ ಸತ್ಕಾರ್ಯದಲ್ಲಿ ಖಂಡಿತಕ್ಕೂ ಸಹಕರಿಸುತ್ತಾರೆಂಬ ದೃಢವಾದ ಭರವಸೆಯೂ ನಮಗಿದೆ.
ಆದ್ದರಿಂದ ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡದ್ದಕ್ಕಾಗಿ ಮಾನ್ಯ ಶಿಕ್ಷಣ ಸಚಿವರನ್ನೂ, ಇಲಾಖೆಯ ಅಧಿಕಾರಿಗಳನ್ನೂ, ಎಲ್ಲಾ ಶಿಕ್ಷಕರನ್ನೂ ಅಭಿನಂದಿಸುತ್ತೇವೆ, ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
ಮಕ್ಕಳ ನಡೆ-ಶಾಲೆಯ ಕಡೆ ಅಭಿಯಾನ-ಕರ್ನಾಟಕ
January 7, 2021
January 8, 2021
Despite Sweden’s having kept schools and preschools open, we found a low incidence of severe Covid-19 among schoolchildren and children of preschool age during the SARS-CoV-2 pandemic. Among the 1.95 million children who were 1 to 16 years of age, 15 children had Covid-19, MIS-C, or both conditions and were admitted to an ICU, which is equal to 1 child in 130,000.
“Pfizer CEO Albert Bourla recently heaped praise on “the almost 44,000 people who selflessly raised their hands to participate in our trial.” … Bourla wrote in an open letter to volunteers who took part in Pfizer’s Covid-19 vaccine research, which was conducted in Argentina, South Africa, Brazil, Germany, and Turkey as well as the U.S. His letter was published on November 9, the same day Pfizer announced that the vaccine was more than 90 percent effective at preventing the disease, and Bourla laid this considerable accomplishment at the feet of the medical volunteers: “You are the true heroes, and the whole world owes you a tremendous debt of gratitude.”
But Argentina, South Africa, Brazil, and Turkey will have to be satisfied with Pfizer’s gratitude, because (like most countries in the world) they won’t be receiving enough of the vaccine to inoculate their populations, at least not anytime soon. …”
ಕೊರೋನದಿಂದ ಜಗತ್ತನ್ನೇ ಉಳಿಸಲು ನಮ್ಮ ನಮಸ್ತೆ ಆಯಿತು,
ಅರಿಶಿನ, ಸೆಗಣಿ ಆಯಿತು,
ಕ್ಲೋರೋಕ್ವಿನ್ ಆಯಿತು,
ಇನ್ನು ಪರೀಕ್ಷೆಯೇ ಆಗದ ಲಸಿಕೆಯ ಸರದಿ
January 10, 2021
ರಾಜ್ಯದಲ್ಲಿ ಈಗಾಗಲೇ ಅರ್ಧಕ್ಕರ್ಧ ಜನತೆ ಸೋಂಕಿತರಾಗಿದ್ದು, ಸೋಂಕಿಗಿದಿರಾಗಿ ರಕ್ಷಣೆಯನ್ನು ಪಡೆದಿರುವುದರಿಂದ ಹೊಸ ಬಗೆಯ ಕೊರೋನ ಇಲ್ಲಿ ಹರಡುತ್ತಿಲ್ಲ ಎಂದು ‘ತಜ್ಞರು’ ಹೇಳಿದ್ದಾರಂತೆ.
COVID-19 experts said the fact that no cluster formations have been reported so far indicates that the State has managed to tide over the new strain spread and is unlikely to witness a surge beyond what it has already witnessed, they said. This is mainly because nearly half the population in the State has already been exposed to COVID-19 by now and has developed immunity.
ಕೊರೋನ ಸೋಂಕಿನಿಂದ ಪೀಡಿತರಾಗಿದ್ದವರಲ್ಲಿ ಒಂದು ವಾರದ ಜ್ವರ, ಬಾಯಿ ರುಚಿ ನಷ್ಟ, ಭೇದಿ ಅಥವಾ ಹೊಟ್ಟೆ ನೋವು ಉಂಟಾಗಿದ್ದರೆ, ಹೆಚ್ಚು ಪ್ರಬಲವಾದ ರೋಗ ನಿರೋಧಕ ಶಕ್ತಿಯು ಬೆಳೆದಿರುತ್ತದೆ ಎಂದು ಅಧ್ಯಯನವೊಂದು ತೋರಿಸಿದೆ. ಅಂಥವರು ಲಸಿಕೆಯನ್ನು ದೂರವಿಟ್ಟರೆ ಸಮಸ್ಯೆಯಿಲ್ಲ
Fever for a week, loss of appetite, diarrhoea and abdominal cramps indicate a better immunogenic covid 19
The Special Expert Committee had granted permission to Bharat Biotech’s Covaxin under these terms:
2) Grant of permission for restricted use in emergency situation in public interest as an abundant precaution, in clinical trial mode, specially in the context of infection by mutant strains, to M/s Bharat Biotech International Ltd., Hyderabad.
Today, Union Health Secretary Rajesh Bhushan … said all the orders – 1.1 crore doses of Covishield from the Serum Institute of India and 55 lakh doses of Covaxin from Bharat Biotech – will be received by January 14…. and that the COVID vaccine recipients will not have the option to choose from the two vaccines recently approved for restricted emergency use in India.
Does that mean that the govt has ordered 55 lakh doses of a product that has been permitted to be used “as an abundant precaution in clinical trial mode” and the same will now be used on 27.5 lakh HCWs and the recipients of this vaccine will have no choice but to take the product assigned to them?
ಚಿಕ್ಕಮಗಳೂರು, ಹಾಸನ, ಬಳ್ಳಾರಿ, ಶಿವಮೊಗ್ಗ, ಚಾಮರಾಜನಗರ ಮತ್ತು ದಾವಣಗೆರೆ ಜಿಲ್ಲಾಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಮೊದಲು 4ನೆ, ಬಳಿಕ 3ನೆ, ಬಳಿಕ 2ನೆ, ಬಳಿಕ ಒಂದನೇ ವರ್ಗದವರಿಗೆ ಸರತಿಯಲ್ಲಿ ಲಸಿಕೆಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆಯಂತೆ.
ಸರಕಾರಿ ಖರ್ಚಿನಲ್ಲಿ ಪರೀಕ್ಷಾರ್ಥವಾಗಿ ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಪಡೆಯುವವರು ಇಲ್ಲಿ ಲಗತ್ತಿಸಿರುವಂಥ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಬೇಕಾಗುತ್ತದೆ. ಲಸಿಕೆಯಿಂದ ಪ್ರಯೋಜನವಾಗಬಹುದೆಂಬ ಯಾವುದೇ ಖಾತರಿ ಅದರಲ್ಲಿಲ್ಲ, ಸಂಭಾವ್ಯ ಅಡ್ಡ ಪರಿಣಾಮಗಳು ಯಾವುವು ಎಂಬ ಮಾಹಿತಿಯೂ ಇಲ್ಲ, ಯಾವುದೇ ಪರಿಣಾಮಗಳು ಗೋಚರಿಸಿದರೆ ವರದಿ ಮಾಡಬೇಕು, ಅದು ಲಸಿಕೆಗೆ ಸಂಬಂಧಿಸಿದ್ದೋ ಅಲ್ಲವೋ ಎಂದು ಲಸಿಕೆ ತಯಾರಿಸಿದವರು ನಿರ್ಧರಿಸಿ, ಆ ಮೇಲೆ ಚಿಕಿತ್ಸೆಯ ಬಗ್ಗೆ ನಿರ್ಧರಿಸಿ, ಆ ಮೇಲೆ ಪರಿಹಾರದ ಬಗ್ಗೆ ನಿರ್ಧರಿಸುತ್ತಾರೆ ಎಂದು ಈ ಒಪ್ಪಿಗೆ ಪತ್ರದಲ್ಲಿರುವುದನ್ನು ಅರ್ಥೈಸಿಕೊಳ್ಳಬಹುದು.
ಕಳೆದ 9 ತಿಂಗಳು ನಿಸ್ವಾರ್ಥದಿಂದ, ಪ್ರಾಮಾಣಿಕವಾಗಿ ಹಗಲಿರುಳೆನ್ನದೆ ದುಡಿದಿರುವ ಕೊರೋನ ಯೋಧರಿಗೆ ಒಳ್ಳೆಯದಾಗಲಿ ಎಂದು ಹಾರೈಸೋಣ.
January 16, 2021
“It is imperative that relevant data from the larger Phase-3 trial become available before administering the vaccine to large numbers of people. Providing a vaccine without adequate efficacy data can lead to a false sense of security among vaccine recipients”.
My analysis shows that the rate of growth will be (-)25 per cent in the current financial year because during lockdown (during April-May), only essential production was taking place and even in agriculture, there was no growth,” he told PTI in an interview.
ವಿಷಯ: ಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕಾಗಿ ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಎಲ್ಲಾ ತರಗತಿಗಳನ್ನು ಕೂಡಲೇ ತೆರೆಯಲೇ ಬೇಕು, ಬಿಸಿಯೂಟವನ್ನೂ ನೀಡಬೇಕು ಹಾಗೂ ಎಲ್ಲಾ ಪಾಠಗಳನ್ನು ಮುಗಿಸಬೇಕು – ಶಿಕ್ಷಣ ಸಚಿವರಿಗೊಂದು ಬಹಿರಂಗ ಮನವಿ
ಮಕ್ಕಳ ನಡೆ ಶಾಲೆಯ ಕಡೆ ಅಭಿಯಾನ, ಮುದ್ರಣ ಮಾಧ್ಯಮಗಳ ಒತ್ತಾಸೆ ಹಾಗೂ ಎಲ್ಲಾ ಜನಪರ ಚಳುವಳಿಗಳ ಹಕ್ಕೊತ್ತಾಯದ ಫಲವಾಗಿ ಜನವರಿ 1ರಿಂದ 6-9ರವರೆಗಿನ ತರಗತಿಗಳಿಗೆ ವಿದ್ಯಾಗಮವನ್ನು ಆರಂಭಿಸಲಾಗಿತ್ತು ಮತ್ತು 10 ಹಾಗೂ 12ನೇ ತರಗತಿಗಳನ್ನು ತೆರೆಯಲಾಗಿತ್ತು. ಜನವರಿ 15ರಿಂದ 1-5ನೇ ತರಗತಿಗಳಿಗೆ ವಿದ್ಯಾಗಮವನ್ನು ಆರಂಭಿಸುವುದಾಗಿ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಜೊತೆಗೆ, 1-9ನೇ ತರಗತಿಗಳಿಗೆ ಪಠ್ಯದಲ್ಲಿ ಯಾವುದೇ ಕಡಿತವಿರುವುದಿಲ್ಲವೆಂದೂ, ಅದಕ್ಕನುಸಾರವಾಗಿ ಶೈಕ್ಷಣಿಕ ವೇಳಾಪಟ್ಟಿಯನ್ನು ಪುನರ್ ರೂಪಿಸಿ, ಪಾಠಗಳನ್ನು ಮುಗಿಸಿ, ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ ಪರೀಕ್ಷೆಗಳ ಆಧಾರದಲ್ಲಿ ಎಲ್ಲಾ ಮಕ್ಕಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಲಾಗುವುದೆಂದು ತಿಳಿಸಲಾಗಿತ್ತು.
ಶಾಲೆಗಳನ್ನು ತೆರೆದು ಮೂರು ವಾರಗಳು ಕಳೆದಿದ್ದು ಈವರೆಗೆ ಶಾಲೆಗಳಿಗೆ ಬಂದಿರುವ ಮಕ್ಕಳಿಗಾಗಲೀ, ಶಿಕ್ಷಕರಿಗಾಗಲೀ, ಹೆತ್ತವರಿಗಾಗಲೀ ಕೊರೋನ ಸೋಂಕು ಬಾಧಿಸಿಲ್ಲ, ಶಾಲೆಗಳನ್ನು ತೆರೆಯುವುದರಿಂದ ಯಾವುದೇ ಸಮಸ್ಯೆಗಳೂ ಆಗುವುದಿಲ್ಲ ಎಂಬ ಮಕ್ಕಳ ನಡೆ ಶಾಲೆಯ ಕಡೆ ಅಭಿಯಾನದ ನಿಲುವು ಈಗ ಸುಸ್ಪಷ್ಟವಾಗಿ ಸಾಬೀತಾಗಿದೆ. ಜನವರಿ ಮೊದಲಲ್ಲಿ ಶಾಲಾರಂಭಕ್ಕೆ ಮೊದಲು ರಾಜ್ಯದಲ್ಲಿ ಸರಾಸರಿಯಾಗಿ ಪ್ರತಿನಿತ್ಯ 1600 ಕೊರೋನ ಪ್ರಕರಣಗಳು ವರದಿಯಾಗುತ್ತಿದ್ದರೆ, ಶಾಲಾರಂಭದ 2 ವಾರಗಳ ಬಳಿಕ ಅದೀಗ 400ಕ್ಕೆ ಇಳಿದಿದೆ. ಶಾಲೆಗಳನ್ನು ಸಂಪೂರ್ಣವಾಗಿ ತೆರೆಯುವುದಕ್ಕೆ ಎಲ್ಲಾ ವಿದ್ಯಾರ್ಥಿಗಳು, ಹೆತ್ತವರು ಹಾಗೂ ಸಮುದಾಯವಿಡೀ ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ. ಎಲ್ಲಾ ಶಿಕ್ಷಕರೂ ಇದೇ ಒತ್ತಾಯವನ್ನು ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲೂ ಇದಕ್ಕೆ ಬಲವಾದ ಬೆಂಬಲವು ವ್ಯಕ್ತವಾಗಿದೆ.
ಆದರೆ ಇಂದು ಜನವರಿ 19ನೇ ತಾರೀಕು ಬಂದರೂ ಸರಕಾರದಿಂದ ಯಾವುದೇ ನಿರ್ಧಾರವೂ ಪ್ರಕಟವಾಗಿಲ್ಲ ಹಾಗೂ ಎಲ್ಲಾ ಶಾಲೆಗಳೂ, ತರಗತಿಗಳೂ ಪೂರ್ಣವಾಗಿ ತೆರೆದಿಲ್ಲ ಎನ್ನುವುದು ಮಕ್ಕಳಿಗೆ ಮತ್ತು ಪೋಷಕರಿಗೆ ತೀವ್ರ ನಿರಾಶೆ ಹಾಗೂ ಆತಂಕವನ್ನು ಹುಟ್ಟಿಸುತ್ತಿದೆ. ಸರ್ಕಾರದ ಈ ಬೇಜವಾಬ್ದಾರಿ ಮತ್ತು ಗೊಂದಲಮಯ ನಡೆಯು ನಿಜಕ್ಕೂ ವಿಷಾದನೀಯವಾಗಿದೆ.
ಜೊತೆಗೆ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ಜನವರಿ 13, 2021ರಂದು ಮಹತ್ವದ ತೀರ್ಪನ್ನು ನೀಡಿ ಅಂಗನವಾಡಿಗಳನ್ನು ಕೂಡಲೇ ತೆರೆದು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ನೀಡಬೇಕೆಂದು ಆದೇಶಿಸಿದೆ. ಇಲ್ಲವಾದಲ್ಲಿ ಅದು ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ 2013 ರ ಉಲ್ಲಂಘನೆಯಾಗಲಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಎಚ್ಚರಿಸಿದೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಮಕ್ಕಳ ನಡೆ ಶಾಲೆಯ ಕಡೆ ಅಭಿಯಾನವು ಈ ಕೆಳಕಂಡ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸುತ್ತದೆ:
1. 1-12ನೇ ತರಗತಿಯವರೆಗೆ ಎಲ್ಲಾ ತರಗತಿಗಳನ್ನು ಹಾಗೂ ಎಲ್ಲಾ ಅಂಗನವಾಡಿಗಳನ್ನು ಕೂಡಲೇ ತೆರೆಯಬೇಕು
2. ಪಾಠದ ಜೊತೆಗೆ ಮಕ್ಕಳಿಗೆ ಬಿಸಿಯೂಟ ಹಾಗು ಪೌಷ್ಠಿಕ ಆಹಾರವನ್ನು ನೀಡಬೇಕು
3. ಜೂನ್ ಅಂತ್ಯದವರೆಗೆ 2020-2021ನೇ ಶೈಕ್ಷಣಿಕ ವರ್ಷವನ್ನು ನಡೆಸಿ, ಎಲ್ಲಾ ಪಠ್ಯಗಳನ್ನೂ ಪೂರ್ಣಗೊಳಿಸಬೇಕು
4. ಮುಂದಿನ 2021-2022ರ ಶೈಕ್ಷಣಿಕ ವರ್ಷವನ್ನು ಜುಲೈ 15ರಿಂದ ಆರಂಭಿಸಬೇಕು
ಈ ಮೇಲಿನ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಸರ್ಕಾರವನ್ನು ಅಭಿಯಾನವು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತದೆ. ಈ ಬಗ್ಗೆ ಇದೇ ಶುಕ್ರವಾರ, ಜನವರಿ 22ರೊಳಗೆ ಸರಕಾರವು ಈ ನಿರ್ಧಾರವನ್ನು ಪ್ರಕಟಿಸದಿದ್ದರೆ ಜನವರಿ 25, ಸೋಮವಾರದಿಂದ ಮತ್ತೆ ಮಕ್ಕಳು –ಪಾಲಕರು-ಶಿಕ್ಷಕರು ಒಗ್ಗೂಡಿ ಎಲ್ಲಾ ತರಗತಿಗಳನ್ನು ಪ್ರಾರಂಭಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗುವುದೆಂದು ಈ ಮೂಲಕ ತಿಳಿಸುತ್ತಿದ್ದೇವೆ.
ಮಕ್ಕಳ ನಡೆ -ಶಾಲೆಯ ಕಡೆ ಅಭಿಯಾನದ ಸಮಿತಿಯ ಪರವಾಗಿ
ಶಾಲೆ, ಶಿಕ್ಷಕರು ಮತ್ತು ವಿದ್ಯಾರ್ಥಿ-ಯುವಜನ ಸಂಘಟನೆಗಳು
1. ಶ್ರೀ ಮೊಹಿದ್ದೀನ್ ಕುಟ್ಟಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ.
2. ಶ್ರೀ ವಿ ಎಂ ನಾರಾಯಣ ಸ್ವಾಮಿ ಎನ್‌ಎಸ್ ಮತ್ತು ಶ್ರೀ ಚಂದ್ರಶೇಖರ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
3. ಶ್ರೀ ಬಸವರಾಜ ಗುರುಕಾರ, ಉಪಾಧ್ಯಕ್ಷರು, ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್
4. ಜ್ಯೋತಿ ಕೆ, ರಾಜ್ಯ ಅಧ್ಯಕ್ಷರು, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್ಎಫ್),
5. ವಾಸುದೇವ ರೆಡ್ಡಿ ಕೆ, ರಾಜ್ಯ ಕಾರ್ಯದರ್ಶಿ, ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ)
6. ಸರೋವರ್ ಬೆಂಕೀಕೆರೆ, ರಾಜ್ಯ ಸಂಚಾಲಕರು, ಕರ್ನಾಟಕ ವಿದ್ಯಾರ್ಥಿ ಸಂಘಟನೆ (ಕೆವಿಎಸ್)
7. ಡಾ.ಶ್ರೀನಿವಾಸ್, ರಾಜ್ಯ ಸಂಚಾಲಕರು, ಭಾರತೀಯ ವಿದ್ಯಾರ್ಥಿ ಸಂಘಟನೆ (ಬಿವಿಎಸ್)
8. ತೋಳಿ ಭರಮಣ್ಣ, ರಾಜ್ಯ ಸಂಚಾಲಕರು, ವಿದ್ಯಾರ್ಥಿ ಬಂಧುತ್ವ ವೇದಿಕೆ
9. ತಿಪ್ಪೇಸ್ವಾಮಿ ಕೆಟಿ, ರಾಜ್ಯ ಸಂಚಾಲಕರು, ಕರ್ನಾಟಕ ಯುವ ಸಮನ್ವಯ
10. ಪುಷ್ಪರಾಜ್ ಬೋಳೂರು, ಅಧ್ಯಕ್ಷರು, ಅಖಿಲ ಭಾರತ ಯುವಜನ ಫೆಡರೇಶನ್ (ಎಐವೈಎಫ್),ಮಂಗಳೂರು
ಅಭಿಯಾನವನ್ನು ವೈಯುಕ್ತಿಕ ನೆಲೆಯಲ್ಲಿ ಬೆಂಬಲಿಸುತ್ತಿರುವ ತಜ್ಞರು
11. ಡಾ. ನಿರಂಜನಾರಾಧ್ಯ ವಿಪಿ, ಅಭಿವೃದ್ಧಿ ಶಿಕ್ಷಣ ತಜ್ಞರು
12. ಡಾ॥ ಶ್ರೀನಿವಾಸ ಕಕ್ಕಿಲ್ಲಾಯ, ವೈದ್ಯಕೀಯ ತಜ್ಞರು, ಲೇಖಕರು
13. ಡಾ॥ ಯೋಗಾನಂದ ರೆಡ್ಡಿ ವೈಸಿ, ಶಿಶು ತಜ್ಞರು, ಕರ್ನಾಟಕ ಐಎಂಎ ಮಾಜಿ ಅಧ್ಯಕ್ಷರು
14. ಡಾ. ಸಿದ್ದನಗೌಡ ಪಾಟೀಲ, ಸಂಪಾದಕರು, ಹೊಸತು ಮಾಸ ಪತ್ರಿಕೆ, ಪ್ರಗತಿಪರ ಚಿಂತಕರು.
15. ಡಾ. ವಡ್ಡಗೆರೆ ನಾಗರಾಜಯ್ಯ, ಕವಿ, ಸಾಂಸ್ಕೃತಿಕ ಚಿಂತಕರು, ಸಾಮಾಜಿಕ ಕಾರ್ಯಕರ್ತರು
16. ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)
17. ಶ್ರೀಪಾದ ಭಟ್, ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಹೋರಾಟಗಾರರು, ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ
18. ಬಿಆರ್ ಭಾಸ್ಕರ್ ಪ್ರಸಾದ್, ಪ್ರಧಾನ ಸಂಪಾದಕ ನ್ಯೂಸ್ 14, ರಾಜ್ಯಾಧ್ಯಕ್ಷ, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ.
19. ಡಾ. ಬಿಆರ್ ಮಂಜುನಾಥ್, ರಾಜ್ಯ ಅಧ್ಯಕ್ಷರು, ಸಮಕಾಲೀನ ಸಾಮಾಜಿಕ ಸಾಂಸ್ಕೃತಿಕ ವೇದಿಕೆ.
20. ಡಾ.ಕೆಎಸ್ ಜನಾರ್ಧನ, ರಾಜ್ಯ ಮಂಡಳಿ ಅಧ್ಯಕ್ಷರು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಉನ್ನತ ಪದವೀಧರರ ಒಕ್ಕೂಟ
21. ಪ್ರೊ. ನರೇಂದ್ರ ನಾಯಕ್, ಅಧ್ಯಕ್ಷರು, ಭಾರತೀಯ ವಿಚಾರವಾದಿ ಸಂಘಗಳ ಒಕ್ಕೂಟ
22. ಡಾ॥ ಹೆಚ್ ಜಿ ಜಯಲಕ್ಷ್ಮಿ, ವೈದ್ಯರು, ಲೇಖಕರು, ಮಹಿಳಾ ಪರ ಹೋರಾಟಗಾರರು.
23. ಡಾ॥ ಪಿವಿ ಭಂಡಾರಿ, ಮನೋರೋಗ ತಜ್ಞರು
24. ಡಾ॥ ವಾಣಿ ಕೋರಿ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು
25. ಡಾ॥ ಬಾಲಸರಸ್ವತಿ, ಚರ್ಮ ತಜ್ಞರು
26. ಡಾ॥ ಭಾನು ಪ್ರಕಾಶ್ ಎಎಸ್, ನರಶಸ್ತ್ರಚಿಕಿತ್ಸೆ ವೈದ್ಯರು, ಸತ್ಯ ಆರೋಗ್ಯ.
27. ರಾಜಾರಾಂ ತಲ್ಲೂರು, ಪತ್ರಕರ್ತರು, ಲೇಖಕರು
28. ಜಿ ರವಿ, ವಿಕಲಚೇತನ ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕುಗಳ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು
29. ಪಾರ್ಥಸಾರಥಿ ಕೆಎಸ್, ನಿವೃತ್ತ ಬಿಎಸ್ಎನ್‌ಎಲ್ ಅಧಿಕಾರಿ ಹಾಗೂ ಲೇಖಕರು.
30. ಭಾರತಿ ಪ್ರಶಾಂತ್, ಸಾಮಾಜಿಕ ಹೋರಾಟಗಾರ್ತಿ
ಪ್ರತಿ: ಎಲ್ಲಾ ವಾರ್ತಾಪತ್ರಿಕೆಗಳು, ಸಮೂಹ ಮಾಧ್ಯಮಗಳು
January 19, 2021
“Upsetting That Some Healthcare Workers Declining Vaccine,” Says Centre
“A lot of efforts have gone into making the vaccines. If our healthcare workers, especially doctors and nurses are declining it (vaccination), then it’s very upsetting. We never know what form this pandemic could take, how big it could get, so please get vaccinated,” NITI Aayog member on health Dr VK Paul told reporters today, the fourth day since COVId-19 vaccination began in India.
—–
Hello Mr Paul, if you do not know, please quit your position. No one needs to take the vaccine merely because some people have developed it.
Third death post vaccination Without autopsies, without enough information available on possible adverse events, how can the officials claim that these are unrelated to the vaccinations?
ಈ ಸರಕಾರ ಮುಟ್ಟಿದ್ದೆಲ್ಲವೂ ಭಸ್ಮವಾಗುತ್ತದೆ, ಈ ಲಸಿಕೆ ಹಾಕುವ ಯೋಜನೆಯೂ ಅದಕ್ಕೆ ಹೊರತಾಗಿಲ್ಲ ಅಂತ ಆರಂಭದಲ್ಲೇ ಹೇಳಿದ್ದೆವು, ಹಾಗೆಯೇ ಆಗಿದೆ. ಸುಳ್ಳು, ಅಪಪ್ರಚಾರ ಅಂತೆಲ್ಲ ಬೇರೆಯವರ ಮೇಲೆ ಗೂಬೆ ಕೂರಿಸುವ ಬದಲಿಗೆ ಆತ್ಮವಿಮರ್ಶೆ ಮಾಡಿಕೊಂಡು ತಾನು ಮಾಡಿರುವ ತಪ್ಪುಗಳನ್ನು ಸರಕಾರವು ಒಪ್ಪಿಕೊಳ್ಳಲಿ. ಪರೀಕ್ಷೆಗಳೇ ಮುಗಿಯದ, ಯಾವ ವಿವರಗಳನ್ನೂ ವೈಜ್ಞಾನಿಕ ವಲಯದಲ್ಲಿ ಪ್ರಕಟಿಸದ ಲಸಿಕೆಗಳಿಗೆ ಒತ್ತಾಯದಿಂದ ಅನುಮೋದನೆ ಕೊಡಿಸಿ, ಲಸಿಕೆ ನೀಡಿಕೆಯ ಕಾರ್ಯಕ್ರಮವನ್ನು ಸರಿಯಾದ ಸಿದ್ಧತೆಗಳನ್ನೂ ಮಾಡದೆ ಅತಿ ತುರ್ತಾಗಿ ಆರಂಭಿಸಿ, ಲಸಿಕೆ ಪಡೆಯುವವರಿಗೆ ಲಸಿಕೆಗಳ ಸಾಧಕ-ಬಾಧಕಗಳ ಬಗ್ಗೆ ಮಾಹಿತಿಯನ್ನೇ ನೀಡದೆ, ಈಗ ಅವರನ್ನೇ ದೂರುತ್ತಿರುವುದು ಈ ಸರಕಾರದ ಎಂದಿನ ಕಾರ್ಯವೈಖರಿಯನ್ನೇ ತೋರಿಸುತ್ತದೆ.
ಲಸಿಕೆಯನ್ನು ಹಾಕಿಸಿಕೊಳ್ಳಬಯಸುವವರು ಅದರ ಒಳಿತು-ಕೆಡುಕುಗಳ ಹೊಣೆಯನ್ನು ತಾವೇ ಹೊರಬೇಕಾಗುತ್ತದೆ. ಆ ಕೋ ವಿನ್ ಆಪ್ ನ ಕಥೆಯೂ ಅಷ್ಟೇ; ಅದಕ್ಕೆ ಮಾಹಿತಿ ಒದಗಿಸುವವರು ಅದರ ಗೋಪ್ಯತೆ, ಸುರಕ್ಷತೆಗಳ ಬಗ್ಗೆ ತಾವೇ ಹೊಣೆ ಹೊರಬೇಕಾಗುತ್ತದೆ.
January 22, 2021
Karnataka doctors demand clarity on post-vaccine deaths
Many medical experts have been dismissive of natural immunity due to prior infection, but there is overwhelming data showing that covid-19 reinfections are rare, and when they do occur, the infection is often mild. A Public Health England study released last week found that less than 1 percent of 6,614 people who tested positive for covid-19 antibodies developed a reinfection within the five months studied.
ಮನೆಗಳಲ್ಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳೆಲ್ಲರೂ ತಮ್ಮತಮ್ಮ ಸಂಸ್ಥೆ/ಕಚೇರಿಗಳಿಗೆ ಮರಳುವುದಕ್ಕೆ ಇನ್ನೂ ತಡಮಾಡಬೇಕಿಲ್ಲ. ಉದ್ಯೋಗಿಗಳನ್ನು ಮನೆ-ಕಚೇರಿಗಳಿಗೆ ಪ್ರತಿನಿತ್ಯವೂ ಒಯ್ಯುವ ಕಾಯಕದಲ್ಲಿರುವವರೂ ಮತ್ತೆ ಚೇತರಿಸಿಕೊಳ್ಳಬಹುದು.
ಇನ್ನು ಹಂತ ಹಂತ, ಇವರ ತಜ್ಞರ ಸಲಹೆ ಇತ್ಯಾದಿ ಯಾವುದೂ ಬೇಕಿಲ್ಲ. ನಾಳೆಯಿಂದ 1-12 ತರಗತಿಗಳ ಎಲ್ಲಾ ಮಕ್ಕಳು ತಾವಾಗಿ ಶಾಲೆಗಳಿಗೆ ಹೋಗಿ ಪಾಠಗಳನ್ನು ಮಾಡುವಂತೆ ಒತ್ತಾಯಿಸಬೇಕು, ಅಷ್ಟೇ.
ಇವರ ತಜ್ಞರ ತಜ್ಞತೆಯನ್ನು ಮಾರ್ಚ್ ನಿಂದಲೇ ನೋಡುತ್ತಿದ್ದೇವೆ; ಅವರು ಹೇಳಿದ ಒಂದೇ ಒಂದು ವಾಕ್ಯವಾಗಲೀ, ನೀಡಿದ ಒಂದೇ ಒಂದು ಸಲಹೆಯಾಗಲೀ ಸರಿಯಾಗಿರಲಿಲ್ಲ ಎನ್ನುವುದು ಈ 9 ತಿಂಗಳಲ್ಲಿ ಶತಸ್ಸಿದ್ಧಗೊಂಡಿದೆ. ಈ ಸರಕಾರಕ್ಕೆ ಯಾವುದೇ ನಿರ್ಧಾರವನ್ನು ವೈಜ್ಞಾನಿಕವಾಗಿ, ವೈಚಾರಿಕವಾಗಿ ಕೈಗೊಳ್ಳುವ ಸಾಮರ್ಥ್ಯವೇ ಇಲ್ಲ, ಅವರ ಮೇಲೆ, ಇವರ ಮೇಲೆ, ಮಾಧ್ಯಮಗಳ ಮೇಲೆ ಭಾರ ಹಾಕಿ ತಪ್ಪಿಸಿಕೊಳ್ಳುವುದಷ್ಟೇ ಇವರಿಗೆ ಗೊತ್ತಿರುವುದು ಎನ್ನುವುದೂ ಶತಸ್ಸಿದ್ಧಗೊಂಡಿದೆ. ನಮ್ಮ ಮಕ್ಕಳ ಭವಿಷ್ಯದ ಭಾರವನ್ನು ನಾವೇ ಎತ್ತಬೇಕು, ಇವರಿಂದಾಗದು. ನಾಳೆಯಿಂದ ಎಲ್ಲಾ ಮಕ್ಕಳೂ ಶಾಲೆಗಳಿಗೆ ಹೋಗಬೇಕೆಂಬ ನಿರ್ಧಾರವನ್ನು ನಾವೇ ಮಾಡಿ, ನಾವೇ ಮಕ್ಕಳನ್ನು ಶಾಲೆಗಳೊಳಕ್ಕೆ ಸೇರಿಸಬೇಕು, ಅಷ್ಟೇ.
There are two more reports of severe vascular events post vaccination. Here are the links.
It indicates that the anti COVID vaccines have the potential to trigger vascular events in the middle aged, with or without previously identified vascular disease, and also in those who may already have vascular disease and other co morbidities.
May be it’s time to halt this so called ’emergency vaccination’, ‘with precautions’, one in ‘clinical trial mode’, particularly in India where there’s no emergency at all, with the clear reduction in transmission after 60-70% of the population having already been infected.
“At least 40% of doctors here are unsure and want to wait,” said Vinod Kumar, a resident doctor at the All India Institute of Medical Sciences of Patna, in the eastern state of Bihar. “Carrying out a vaccine trial on us when India is short of doctors, health-care workers doesn’t make sense.”
Ranked comparison of the average performance over time of countries in managing the COVID-19 pandemic in the 36 weeks following their hundredth confirmed case of the virus – In total, 98 countries were evaluated, based on the availability of data across the six indicators used to construct this Index.
NZ did the best at No.1.
India at No 86, worst among Asian countries, the US at 94 and Brazil at the bottom, at 98.
ನಮ್ಮ ಶಿಕ್ಷಣ ಸಚಿವರು ಜನವರಿ 1ರಂದು 10,12ನೇ ತರಗತಿಗಳನ್ನು ತೆರೆದಾಗ ಜನವರಿ 15ರಿಂದ ಎಲ್ಲಾ ತರಗತಿಗಳನ್ನೂ ತೆರೆಯುವ ಬಗ್ಗೆ, ಶೈಕ್ಷಣಿಕ ವೇಳಾಪಟ್ಟಿಯನ್ನು ಬದಲಿಸಿ ಇಡೀ ವರ್ಷದ ಪಾಠಗಳನ್ನೆಲ್ಲ ಕಲಿಸುವ ವ್ಯವಸ್ಥೆಯನ್ನು ಮಾಡುವ ಬಗ್ಗೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ ಜನವರಿ ಮುಗಿಯುತ್ತಿರುವಾಗ ಆಗಿರುವುದೇ ಬೇರೆ – ಜನವರಿ 15ಕ್ಕೆ ಎಲ್ಲಾ ತರಗತಿಗಳನ್ನು ತೆರೆಯುವ ನಿರೀಕ್ಷೆಗಳನ್ನು ಹುಟ್ಟಿಸಿದ್ದ ಸಚಿವರು ಕೇವಲ 9ನೇ ತರಗತಿಯನ್ನು ಮಾತ್ರವೇ ಪೂರ್ಣವಾಗಿ ತೆರೆಯುವುದಾಗಿ ಹೇಳಿದ್ದಾರೆ. ಜನವರಿ 1ರಂದು 10ನೇ ತರಗತಿ ತೆರೆದು, ಫೆಬ್ರವರಿ 1ರಿಂದ 9ನೇ ತರಗತಿಯನ್ನು ಮಾತ್ರ ತೆರೆಯುವ ನಿರ್ಧಾರವನ್ನು ನೋಡಿದರೆ ಇವರು ಪ್ರತೀ ತಿಂಗಳೂ ಒಂದೊಂದೇ ತರಗತಿಗಳನ್ನು ತೆರೆಯುತ್ತಾ ಹೋಗಿ 2021ರ ಅಂತ್ಯವಾಗುವಾಗ ಬಹುಷಃ 1ನೇ ತರಗತಿಯನ್ನು ತೆರೆಯಬಹುದೋ ಏನೋ ಎಂಬ ಸಂಶಯ ಮೂಡುತ್ತಿದೆ.
ಈ ನಿರ್ಧಾರಗಳನ್ನು ಸರಕಾರದ ಕಾರ್ಯಪಡೆಯ ಸಲಹೆಯ ಮೇರೆಗೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಕಾರ್ಯಪಡೆಯ ಈ ಸಲಹೆಗೆ ವೈಜ್ಞಾನಿಕ ಆಧಾರಗಳೇನು ಎಂದು ತಿಳಿಯುವ ಹಕ್ಕು ನಮ್ಮೆಲ್ಲರಿಗೂ, ವಿಶೇಷವಾಗಿ ರಾಜ್ಯದ ಮಕ್ಕಳೆಲ್ಲರಿಗೂ, ಇದೆಯಾದ್ದರಿಂದ ಸರಕಾರವು ಕಾರ್ಯಪಡೆಯ ವರದಿಯನ್ನು ಈ ಕೂಡಲೇ ಬಹಿರಂಗಪಡಿಸಬೇಕು. ದೇಶದಲ್ಲಿ ಕೊರೋನ ಸೋಂಕು ಕೇವಲ ಎರಡೇ ರಾಜ್ಯಗಳಲ್ಲಿ ಹರಡುತ್ತಿದ್ದು, ಎಲ್ಲೆಡೆ ಸಿನಿಮಾ ಮಂದಿರಗಳನ್ನು ಕೂಡ ತೆರೆಯಬಹುದು ಎಂದು ಕೇಂದ್ರ ಸರಕಾರವು ಹೇಳಿರುವ ದಿನದಂದೇ ಶಾಲೆಗಳನ್ನು ತೆರೆಯುವಷ್ಟು ಕೊರೋನ ಸ್ಥಿತಿಯು ಸುಧಾರಿಸಿಲ್ಲ ಎನ್ನುವುದಾದರೆ ಅದೆಂಥ ಮಹಾ ವಿಪತ್ತು ಶಾಲೆಗಳಿಗೆ ಅಥವಾ ಶಾಲೆಗಳಿಂದ ಆಗುತ್ತದೆ ಎನ್ನುವುದನ್ನು ಈ ಸರಕಾರವು ಈ ಕೂಡಲೇ ಸ್ಪಷ್ಟವಾಗಿ ಹೇಳಲೇಬೇಕಾಗಿದೆ. ಜನವರಿ 1ರಿಂದ 10, 12 ತೆರೆದು, 6-9ರ ವಿದ್ಯಾಗಮ ಆರಂಭಿಸಿದ ಬಳಿಕ ರಾಜ್ಯದಲ್ಲಿ ಕೊರೋನ ಪ್ರಕರಣಗಳು 4 ಪಟ್ಟು ಇಳಿದಿವೆ, ಸಾವುಗಳು ನಗಣ್ಯವಾಗಿವೆ, ಮಕ್ಕಳಿಗಾಗಲೀ, ಶಿಕ್ಷಕರಿಗಾಗಲೀ, ಪೋಷಕರಿಗಾಗಲೀ, ಮನೆಯ ಹಿರಿಯರಿಗಾಗಲೀ ಯಾವುದೇ ಸಮಸ್ಯೆಗಳಾಗಿಲ್ಲ ಎನ್ನುವುದು ಅತಿ ಸ್ಪಷ್ಟವಾಗಿರುವಾಗ ಶಾಲೆಗಳನ್ನು ಪೂರ್ಣವಾಗಿ ತೆರೆಯುವುದಕ್ಕೆ, ಬಿಸಿಯೂಟವನ್ನು ನೀಡುವುದಕ್ಕೆ ಅಡ್ಡಿ ಏನು ಎನ್ನುವುದನ್ನು ಸರಕಾರವು ಕೂಡಲೇ ತಿಳಿಸಬೇಕಾಗಿದೆ.
ಶಾಲೆಗಳನ್ನು ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದವರಲ್ಲಿ ಕೆಲವರು ಯಾವುದೋ ಒತ್ತಡಕ್ಕೆ ಸಿಲುಕಿ ತಮ್ಮ ದನಿಯನ್ನು ಒಂದಿಷ್ಟು ಇಳಿಸಿರುವಂತೆ ಕಾಣಿಸುತ್ತಿರುವುದು ಬಹುಷಃ ಶಾಲೆಗಳನ್ನು ತೆರೆಯದಿರುವ ಯೋಜನೆಯ ಭಾಗವಾಗಿರಬಹುದೇನೋ ಎಂದೇ ಅನಿಸುತ್ತಿದೆ. ರಾಜ್ಯದ ಜನರು ತಮ್ಮ ಮಕ್ಕಳ ಪರವಾಗಿ ದನಿಯೆತ್ತದಿದ್ದರೆ ಮಕ್ಕಳ ಭವಿಷ್ಯಕ್ಕೆ ಅವರೇ ಕೊಡಲಿಯೇಟು ಹಾಕಿದಂತಾಗಲಿದೆ, ಮಕ್ಕಳೆಲ್ಲರಿಗೂ ಅನ್ಯಾಯ ಮಾಡಿದಂತಾಗಲಿದೆ.
ಆದ್ದರಿಂದ ಫೆಬ್ರವರಿ 1ರಿಂದ ಎಲ್ಲಾ ತರಗತಿಗಳನ್ನು ಪೂರ್ಣವಾಗಿ ಆರಂಭಿಸುವಂತೆ, ಬಿಸಿಯೂಟವನ್ನೂ ನೀಡುವಂತೆ ಎಲ್ಲಾ ಪ್ರಜ್ಞಾವಂತರೂ ಸರಕಾರವನ್ನು ಒತ್ತಾಯಿಸಲೇಬೇಕಾಗಿದೆ. ಇಲ್ಲದಿದ್ದರೆ ಇತಿಹಾಸ ನಮ್ಮನ್ನು ಯಾರನ್ನೂ ಕ್ಷಮಿಸದು. ಕೊರೋನದಿಂದ ಮಕ್ಕಳಿಗೆ ಏನೂ ಆಗಿಲ್ಲ, ಆಗುವುದೂ ಇಲ್ಲ; ಆದರೆ ನಮ್ಮ ಮೌನದಿಂದ, ಸರಕಾರದ ಅನಿಶ್ಚಿತತೆಯಿಂದ ಮಕ್ಕಳ ಮಾನಸಿಕ, ದೈಹಿಕ, ಶೈಕ್ಷಣಿಕ, ಪೌಷ್ಠಿಕ ಬೆಳವಣಿಗೆಗಳ ಮೇಲೆ ಶಾಶ್ವತವಾದ ಹಾನಿಯಾಗಲಿದೆ.
January 29, 2021
These tests have some significance, but right now we have no confirmed data enabling us to rely on their results to determine if a certain person is immune to COVID-19,” he said. “This craze of running to serology tests to see if the vaccine works or if an individual has recovered is completely baseless and shouldn’t be done.
ವಿಶ್ವಕ್ಕೇ ಮಾದರಿಯಾಗುವಂತೆ ಕೊರೋನ ನಿಯಂತ್ರಿಸಿದವರು ವಿಶ್ವದೆಲ್ಲೆಡೆ ಶಾಲೆ ತೆರೆದು ತಿಂಗಳುಗಳಾದರೂ ಇಲ್ಲೇಕೆ ತೆರೆಯುತ್ತಿಲ್ಲ?
February 1, 2021
ಆರೋಗ್ಯ ಸೇವೆಗಳಿಗೆ ’19-20ರಲ್ಲಿ 62397 ಕೋಟಿ, ’20-21 ರಲ್ಲಿ 65012 ಕೋಟಿ ವ್ಯಯವಾಗಿದ್ದರೆ 20-21ರಲ್ಲಿ ಕೊರೋನ ವ್ಯಾಧಿಗೆ ಮಾಡಿದ ಹೆಚ್ಚುವರಿ ವೆಚ್ಚವೆಷ್ಟು?
February 2, 2021
In reality, the total additional expenditure is way below what other countries have provided in the COVID-driven recession. India is amongst the worst-affected economies this year. If the government believes that it has done enough in this budget, then it is trapped in an illusion of its own creation.
Pankaj Kumar Pandey, commissioner, health department admitted the response to the vaccine at Arogya Soudha is similar to the statewide trend. Covid vaccination has become like a horror movie which people want to watch, but are scared also,” Pandey said. “Hesitancy is seen in our own department too. Most of us seniors have taken the vaccine. We have been reiterating from Day I that it is completely safe, but still there is hesitancy.”
ಪಿಪಿಇ, ಪಿಪಿಇ ಅಂತ ಬೊಬ್ಬೆ ಹೊಡೆಯಲಾರಂಭಿಸಿ 1 ವರ್ಷದ ಬಳಿಕ; ಆರೋಗ್ಯ ಕಾರ್ಯಕರ್ತರು, ಲ್ಯಾಬ್ ಸಿಬ್ಬಂದಿ, ದಾದಿಯರು-ವೈದ್ಯರು ದಿನವಿಡೀ ಪಿಪಿಇ ದಿರಿಸು ಹಾಕುವುದು, ತೆಗೆಯುವುದು ಮಾಡಿ, ಅದೆಲ್ಲ ದೊಡ್ಡ ಸುದ್ದಿಯೂ ಆಗಿ 9 ತಿಂಗಳಾದ ಬಳಿಕ; ಕೊರೋನದಿಂದ ಮೃತರಾದವರ ಅಂತ್ಯಕ್ರಿಯೆಗಳಿಗೂ ಪಿಪಿಇ ಹಾಕಿಸಿ ಕಷ್ಟ ಕೊಟ್ಟದ್ದೆಲ್ಲ ಮುಗಿದ ಬಳಿಕ; ವಿಮಾನ ಯಾತ್ರಿಗಳಿಗೂ ಪಿಪಿಇ ಏಪ್ರನ್ ಹಾಕಿಸುತ್ತಿರುವಾಗ, ಎಐಐಎಂಎಸ್ ಹೇಳಿಕೆ ಹೊರಡಿಸಿ ಪಿಪಿಇ ದಿರಿಸು ಹಾಕಿ ಯಾವುದೇ ಪ್ರಯೋಜನ ಇಲ್ಲ, ಕೆಲವು ವಿಶೇಷ ಚಿಕಿತ್ಸಾ ಕ್ರಿಯೆಗಳ ಸಂದರ್ಭದಲ್ಲಷ್ಟೇ ಹಾಕಿದರೆ ಸಾಕು (ಅವಕ್ಕೆ ಮೊದಲಿನಿಂದಲೂ ಪಿಪಿಇ ಹಾಕಲಾಗುತ್ತಿತ್ತು, ಏನೂ ಹೊಸತಲ್ಲ) ಎಂದಿದೆ.
ನಾನು ಎಲ್ಲೂ ಈ ಪಿಪಿಇ ದಿರಿಸನ್ನು ಎಂದೂ ಹಾಕಿಯೇ ಇಲ್ಲ; ನಾನು ಕೊರೋನ ಸೋಂಕಿತರಿದ್ದಲ್ಲಿ ಹಾಗೆಯೇ ಕೆಲಸ ಮಾಡುತ್ತಿದ್ದಾಗ ಪಿಳಿಪಿಳಿ ನೋಡುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿರಬೇಕು.
February 4, 2021
After the European Union authorized the AstraZeneca-Oxford vaccine last week, adding a third shot to the bloc’s arsenal, Germany, Italy, France, Belgium, Lithuania, Poland, Austria and Sweden all said they would restrict it to younger people or were considering doing so, citing a scarcity of data on the vaccine’s efficacy in older people.
–—–
ಭಾರತದಲ್ಲಿ ಕೊಡಲಾಗುತ್ತಿರುವ ಆಕ್ಸ್ ಫರ್ಡ್ ಲಸಿಕೆ (ಕೋವಿಶೀಲ್ಡ್) ಯ ಬಗ್ಗೆ ವಿವರಗಳಿನ್ನೂ ಲಭ್ಯವಿಲ್ಲದಿರುವ ಕಾರಣಕ್ಕೆ ಯೂರೋಪಿನಲ್ಲಿ ಅದನ್ನು ಹಿರಿವಯಸ್ಕರಿಗೆ ನೀಡದೆ ಯುವಜನರಿಗಷ್ಟೇ ನೀಡಲು ನಿರ್ಧರಿಸಲಾಗಿದೆಯಂತೆ; ಕೊರೋನದಿಂದ ಸಮಸ್ಯೆಗೀಡಾಗಬಲ್ಲ ಹೆಚ್ವ್ಹಿನ ಅಪಾಯವುಳ್ಳ ಹಿರಿಯರಿಗೆ ಸದ್ಯಕ್ಕೆ ಅಲ್ಲಿ ಲಸಿಕೆ ಇಲ್ಲ ಎಂದಾಯಿತು. ನಮ್ಮಲ್ಲಿ ಇದೇ ಲಸಿಕೆಯನ್ನು ಎಲ್ಲರಿಗೂ ನೀಡಲಾಗುತ್ತಿದೆ.
From the United States to India, from the United Kingdom to Brazil, people feel vulnerable and betrayed by the failure of their leaders. The over 400 000 deaths from covid-19 in the US, 250 000 in Brazil, 150 000 each in India and Mexico, and 100 000 in the UK comprise half of the world’s covid death toll—on the hands of only five nations. Donald Trump was a political determinant of health who damaged scientific institutions. He suffered electoral defeat, but does Trump remain accountable now that he is out of office? Bolsonaro, Modi, and Johnson have had their competence questioned in differing ways, and McKee and colleagues argue that populist leaders have undermined pandemic responses. The prospect of accountability in autocracies such as China and Russia is more distant still and relies on strong international institutions and the bravery of citizens.
Pfizer on Tuesday said it expects to generate $15 billion, or about a quarter of its total revenue this year, from sales of its COVID-19 vaccine co-developed with German partner BioNTech SE.
The large allocation to India may raise eyebrows given that, unlike many places, India seems to have plenty of shots currently but few takers. Only around half of those eligible to get vaccinated in its inoculation drive have come forward, and local media reports say that India producer Serum Institute of India is sitting on over 55 million doses and has temporarily halted production
India Gets Lion’s Share of Covax Shots Despite Tepid Demand
Indians not only have innate immunity, but also innate wisdom
February 6, 2021
People are not vaccinated for many reasons. The detailed information regarding Covid vaccines came very late and is also incomplete. Not much of expertise, knowledge or resources are available to resolve queries. Instead of resolving queries that people have, a paternalistic approach of ‘take vaccines, they are good’ won’t help. Listening is more important than speaking here
“I worry especially that some of these premature sweeping conclusions being made could rob people of hope,” said Angela Rasmussen, a virologist at Georgetown University’s Center for Global Health Science and Security. “I worry the message they may receive is that we’re never going to be rid of this. When in fact that’s not what the data suggests.”
She and others emphasized the apparent lack of severe health repercussions from reinfection – and no evidence that reinfection is common.
—–//
It’s saddening that some big names are also trying to frighten people on behalf of vaccine makers Vaccines are highly unlikely to offer better protection than natural infections.
ಆಗಸ್ಟ್ 2020ರ ವೇಳೆಗೆ ಕರ್ನಾಟಕದಲ್ಲಿ 46.7%, ಅಂದರೆ 3 ಕೋಟಿಗೂ ಹೆಚ್ಚು, ಜನರು ಕೊರೋನದಿಂದ ಸೋಂಕಿತರಾಗಿರಬಹುದು ಎಂದು ಜರ್ನಲ್ ಆಫ್ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ನಲ್ಲಿ ಪ್ರಕಟವಾದ ವರದಿಯಲ್ಲಿ ಹೇಳಲಾಗಿದೆ. ಆಗ ಅಷ್ಟಿದ್ದರೆ ಈಗ ಎಷ್ಟಾಗಿರಬಹುದು?
The adjusted seroprevalence of SARS-CoV-2 across Karnataka was 46.7%, suggesting approximately 31.5 million residents were infected, far greater than the 327 076 cases reported by August 29, 2020.
ರಾಜ್ಯದಲ್ಲಿ 1ರಿಂದ 8ರವರೆಗೆ ಎಲ್ಲಾ ತರಗತಿಗಳನ್ನು ಕೂಡಲೇ ತೆರೆಯಬೇಕೆಂದು ಕೋರಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ರಿಟ್ ಅರ್ಜಿಯ ವಿಚಾರಣೆಯು ಆರಂಭಗೊಂಡಿದ್ದು, ಮಾನ್ಯ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ವಿದ್ಯಾರ್ಥಿಗಳ ನಡೆ ಶಾಲೆಯ ಕಡೆ
February 10, 2021
Stop blaming children for COVID and open the school’s immediately
ಕೊರೋನ ಸೋಂಕಿಗೆ ಏನೇನೋ ಚಿಕಿತ್ಸೆ ನೀಡುವ ಅಗತ್ಯವಿಲ್ಲ ಎಂದು ಮಾರ್ಚ್ ನಿಂದಲೇ ಹೇಳುತ್ತಲೇ ಬಂದಿದ್ದೆ, ಕರ್ನಾಟಕ ಸರಕಾರವು ಮೇ 15ರಂದು ಪ್ರಕಟಿಸಿದ್ದ ಚಿಕಿತ್ಸಾ ಕ್ರಮವು ಪ್ರಯೋಜನಕ್ಕಿಂತ ಹೆಚ್ಚು ಹಾನಿಯನ್ನೇ ಉಂಟು ಮಾಡಬಹುದು ಎಂದು ಬರೆದಿದ್ದೆ. ‘ಕೊರೋನ ಹೆದರದಿರೋಣ’ದಲ್ಲಿ ಈ ಬಗ್ಗೆ ಇನ್ನಷ್ಟು ವಿವರಗಳನ್ನು ಬರೆದಿದ್ದೆವು. ಆದರೆ ಯಾವುದೇ ವೈದ್ಯಕೀಯ ಸಂಘಟನೆಗಳು ದನಿಗೂಡಿಸಲಿಲ್ಲ.
ಜನವರಿ 16ರಂದು ಲಸಿಕೆ ಹಾಕಿಸಿಕೊಂಡಿದ್ದ 2,07,229 ಮಂದಿಯಲ್ಲಿ ಕೇವಲ 23628 ಮಂದಿ, ಅಂದರೆ ಶೇ. 10ರಷ್ಟು, ಮಾತ್ರ, 28 ದಿನಗಳ ಬಳಿಕ ಪಡೆಯಬೇಕಿದ್ದ ಎರಡನೇ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಲಸಿಕೆಗಳ ಪರೀಕ್ಷೆಗಳು ಪೂರ್ಣಗೊಳ್ಳುವ ಮೊದಲೇ ಅವನ್ನು ನೀಡಲಾರಂಭಿಸಿದ್ದು, ಅಡ್ಡ ಪರಿಣಾಮಗಳ ಬಗ್ಗೆ ಉಂಟಾಗಿದ್ದ ಭಯ ಮತ್ತು ಗೊಂದಲಗಳನ್ನು ನಿವಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾದದ್ದು, ಲಸಿಕೆ ಹಾಕುವುದನ್ನು ದೊಡ್ಡ ಮೇಳದಂತೆ ತೋರಿಸುವುದಕ್ಕಷ್ಟೇ ಪ್ರಾಮುಖ್ಯತೆ ನೀಡಿದ್ದು ಈ ವೈಫಲ್ಯಕ್ಕೆ ಕಾರಣವಾಗಿದ್ದು, ಕೇಂದ್ರ ಸರಕಾರವೇ ಇದಕ್ಕೆ ಹೊಣೆಯಾಗಿದೆ.
ರಾಜ್ಯದ ಮಕ್ಕಳ ಭವಿಷ್ಯವನ್ನು ಹಾಳುಗೆಡವಿದ್ದಕ್ಕೆ ಕಾರ್ಯವರಿಯದ ಕಾರ್ಯಪಡೆ ಮತ್ತು ಧೈರ್ಯವಿಲ್ಲದ ಸರ್ಕಾರಗಳೇ ಕಾರಣ
February 20, 2021
With only about 50% of the 2.15 crore vaccine doses supplied having been used so far, states are awaiting Centre’s instructions on inoculating senior citizens and those who are 50 years and above with comorbidities.
A Chennai-based business consultant has moved the Madras High Court claiming that he suffered severe side effects and had to be hospitalised due to a dose of Serum Institute of India’s COVIDSHIELD COVID-19 vaccine in its third phase (Asif Riaz v Government of India and ors).
ಪ್ರಯೋಗಾರ್ಥ ಬಳಕೆಗೆ ತರಾತುರಿಯಿಂದ ಅನುಮತಿ ನೀಡಿ ಆರೋಗ್ಯ ಸೇವೆಗಳವರನ್ನು ಪ್ರಯೋಗಪಶುಗಳಾಗಿಸಿ ಚುಚ್ಚಲೆತ್ನಿಸಿದ್ದ ಕೊವಾಕ್ಸಿನ್ ಲಸಿಕೆಯನ್ನು ಹೆಚ್ಚಿನವರು ಪಡೆದಿಲ್ಲವಂತೆ. ಬೇರೆಯವರನ್ನು ಶಿಕ್ಷಿಸುವುದಕ್ಕೆ ಈ ಸರಕಾರಕ್ಕೆ ಓಟು ಕೊಟ್ಟವರು ತಮ್ಮ ಮೈಗೆ ಚುಚ್ಚಿಸಿಕೊಳ್ಳುವಾಗ ಎಚ್ಚರಿಕೆ ವಹಿಸಿಕೊಂಡಂತೆ ಕಾಣುತ್ತಿದೆ!
The report suggests that most recipients enlisted for covaxin, permitted for emergency use in clinical trial mode, did not take it. It’s easy to vote and elect a govt with the intention of punishing the other, but completely different when it comes to getting some unproven vaccine pricked into one’s own body!
On a single Sunday, India vaccinates roughly 17 crore children with polio drops. Even when the vaccine is an injection, coverage is in crores; in a drive against measles-mumps-rubella two years back, most big states vaccinated 1-2 crore kids in a month. But amid the Covid pandemic that’s claimed over 1.5 lakh lives, progress is slow — it has taken 39 days to inoculate 1.19 crore across the country.
Pfizer has been accused of “bullying” Latin American governments in COVID-19 vaccine negotiations and has asked some countries to put up sovereign assets, such as embassy buildings and military bases, as a guarantee against the cost of any future legal cases, the Bureau of Investigative Journalism can reveal.
ಬಿಹಾರದಲ್ಲಿ ಮಾರ್ಚ್ 1ರಿಂದ 1-5 ತರಗತಿಗಳೂ ಆರಂಭ; ಕರ್ನಾಟಕದಲ್ಲಿ ಚಿಂತಕರು, ಬುದ್ಧಿವಂತರು ಈಗಾಗಲೇ ಬಹಳಷ್ಟಿರುವ ಕಾರಣಕ್ಕೆ ಸದ್ಯಕ್ಕೆ ಶಾಲೆಗಳ ಅಗತ್ಯವಿಲ್ಲ.
February 26, 2021
The emerging consensus is that schools do not seem to be amplifiers of transmission, and that cases in schools simply reflect prevalence within the local community.
Closing schools risks detrimental effects on children’s educational attainment and their social and mental development..
…with primary school aged children prioritised for returning to the classroom to minimise both transmission within schools and the disruption caused by school closures.
School closures have been implemented internationally1 with insufficient evidence for their role in minimising covid-19 transmission and insufficient consideration of the harms to children.
The overall risk to children and young people from covid-19 is very small, and hyperinflammatory syndrome is extremely rare. Studies are under way to gauge the effect of post-covid syndrome among children.
Although school closures reduce the number of contacts children have, and may decrease transmission, a study of 12 million adults in the UK found no difference in the risk of death from covid-19 in households with or without children. Only 3% of people aged over 65 live with children..
Children have least to gain and most to lose from school closures. This pandemic has seen an unprecedented intergenerational transfer of harm and costs from elderly socioeconomically privileged people to disadvantaged children.
The reason, according to Prof. Agrawal, is because around 60% of India’s population had already been exposed to the virus and the country had reached herd immunity, or where the number of susceptible individuals were too few to allow the virus to exponentially grow.
Chief among the reasons for the lower acceptance of the Oxford/AstraZeneca vaccine was a policy choice made by many countries to restrict its use for older people until more data on its efficacy became available. In France, that meant the shot is being offered only to people aged between 50 and 64 with comorbidities and healthcare workers, while Spain has advised it not be used on those older than 55 years old. Germany and Italy are offering the jab to everyone younger than 65.
Health experts say negative headlines have damaged the vaccine’s reputation, bolstering the perception that it is a lesser option to BioNTech/Pfizer and Moderna jabs, which both rely on so-called mRNA technology and boast higher protection rates. A study suggesting the AstraZeneca vaccine was less effective against the variant that has emerged in South Africa caused healthcare workers’ unions in several European countries to demand that their members get the mRNA-based vaccines instead.
Centre fails to finalise COVID vaccination details ahead of next phase of inoculation
Most of the states said they did not know how many vaccine doses—or which one—will they receive as the vaccination opens up for people above 60 years and over 45 with specific comorbidities.
——//
It starts tomorrow, but no plan in place, only flashy announcements and claims. Bound for failure again. Don’t blame the people, but the govt.
ನಾಳೆಯಿಂದ ಎರಡನೇ ಸುತ್ತಿನ ಲಸಿಕೆ ನೀಡುವಿಕೆ ಆರಂಭ, ಆದರೆ ಏನು, ಯಾರಿಗೆ, ಹೇಗೆ, ಎಲ್ಲಿ ಎಂಬುದು ಸ್ಪಷ್ಟವಿಲ್ಲ. ಈ ಸರ್ಕಾರದ್ದು ಕೇವಲ ಘೋಷಣೆಗಳು, ಬೊಬ್ಬೆ ಮಾತ್ರ, ಸರಿಯಾದ ಕಾರ್ಯತಂತ್ರವೇ ಇಲ್ಲ. ಈ ಕಾರ್ಯಕ್ರಮವೂ ವಿಫಲವಾಗುವುದು ನಿಶ್ಚಿತ, ಸರ್ಕಾರವೇ ಅದಕ್ಕೆ ಹೊಣೆಯೇ ಹೊರತು ಬೇರಾರೂ ಅಲ್ಲ.
168 empty desks. 168 unused backpacks. 168 million futures hanging in the balance.
This pandemic classroom installation at the United Nations in New York is a powerful reminder of the global education crisis. The desks and backpacks represent the 168 million children whose schools have been completely closed for nearly a year due to COVID-19. Our message to world leaders is clear: no effort should be spared to reopen schools.
March 4, 2021
Online education is not an option for all as only one in four children has access to digital devices and Internet connectivity, the study says.
Closure of 1.5 million schools due to coronavirus pandemic and the resultant lockdowns in 2020 impacted 247 million children enrolled in elementary and secondary schools in India, a UNICEF report has found.
75% ಮಕ್ಕಳಿಗೆ ಆನ್ ಲೈನ್ ಕಲಿಕೆ ಅಸಾಧ್ಯ
ಕೊರೋನ ಭೀತಿಯಿಂದ 15 ಲಕ್ಷ ಶಾಲೆಗಳನ್ನು ಮುಚ್ಚಿರುವ ಕಾರಣಕ್ಕೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 25 ಕೋಟಿ ಮಕ್ಕಳ ಮೇಲೆ ದುಷ್ಪರಿಣಾಮಗಳಾಗಿವೆ.
HYDERABAD: People who use public transport and those involved in high-contact work have a lower risk of Covid-19 reinfection. This is because a large pool of people from such groups have already had Covid-19 infection and they have a high seropositivity for the virus.
ಬೆಂಗಳೂರಿನಲ್ಲಿ ಕೊರೋನ ವೈರಸಿನ ಮಾದರಿಗಳಲ್ಲಿ ಸರಾಸರಿಯಾಗಿ 11 ರೂಪಾಂತರಿತ ಬಗೆಗಳನ್ನು ಗುರುತಿಸಲಾಗಿದೆ, ಇದು ವಿಶ್ವದ ಇತರೆಡೆಗಳಿಗೆ ಹೋಲಿಸಿದರೆ ಅತಿ ಹೆಚ್ಚು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಯನದಲ್ಲಿ ಕಾಣಲಾಗಿದೆ. ಡಿ614ಜಿ ವಿಧವು ಇಲ್ಲಿ ಅತಿ ಸಾಮಾನ್ಯವಾಗಿದೆ ಎಂದೂ ಈ ಅಧ್ಯಯನದಲ್ಲಿ ಗುರುತಿಸಲಾಗಿದೆ. ಈ ವಿಧವು ಕಳೆದ ಸೆಪ್ಟೆಂಬರ್ ನಲ್ಲಿ ಆಗ್ನೇಯ ಏಷ್ಯಾಕ್ಕೆ ಇಲ್ಲಿಂದ ಹೋದವರಲ್ಲಿ ಗುರುತಿಸಲ್ಪಟ್ಟಿತ್ತೆನ್ನುವುದನ್ನು ನೆನಪಿಸಿಕೊಳ್ಳಬಹುದು.
—–//
ನಮ್ಮಲ್ಲೇ ಅತಿ ಹೆಚ್ಚು ಬಗೆಯ ಕೊರೋನ ವೈರಾಣುಗಳಿವೆ, ನಾವು ಅವನ್ನು ಇತರ ದೇಶಗಳಿಗೆ ಕಳುಹಿಸುತ್ತಲೂ ಇದ್ದೇವೆ. ಬ್ರಿಟನ್, ಬ್ರೆಜಿಲ್, ಆಫ್ರಿಕಾ, ಅಮೆರಿಕಾ, ಎರಡನೇ ಅಲೆ ಅಂತೆಲ್ಲ ಹೆದರಿಸಿ, ಮಕ್ಕಳ ಶಾಲೆಗಳನ್ನು ಮುಚ್ಚಿಡುವ ಧೂರ್ತತನ ಇನ್ನಾದರೂ ಕೊನೆಗೊಳ್ಳಲಿ. ಬಾಯಿ ಮುಚ್ಚಿ ಕೂತವರು ಇನ್ನಾದರೂ ನಮ್ಮ ಮಕ್ಕಳಿಗಾಗಿ ಬಾಯಿ ತೆರೆಯಿರಿ
23 ಮಕ್ಕಳಿಗೆ ಸೋಂಕಂತೆ, ಅವರಲ್ಲಿ 6 ಮಕ್ಕಳನ್ನು ಆಸ್ಪತ್ರೆಗೆ ತಳ್ಳಿದ್ದಾರಂತೆ, ಆದರೆ ಒಬ್ಬರಿಗೂ ರೋಗಲಕ್ಷಣವೇ ಇಲ್ಲವಂತೆ!
ಈ ಹುಚ್ಚಾಟಕ್ಕೆ ಕೊನೆಯಿದ್ದಂತೆ ಕಾಣುವುದಿಲ್ಲ. ಎಲ್ಲರೂ ಬಾಯಿ ಮುಚ್ಚಿಕೊಂಡಿರುವಾಗ ಬೇರೇನೂ ಆಗಲು ಸಾಧ್ಯವೂ ಇಲ್ಲ. ಹೀಗೆಯೇ ಇರಿ, ಬಾಯಿ, ಕಿವಿ, ಕಣ್ಣು, ಮೂಗು, ಮಿದುಳು ಎಲ್ಲ ಮುಚ್ಚಿ ಕೊಂಡೇ ಇರಿ.
ಇದು ಮಾರ್ಚ್ 9, 2020ರಂದು ವಾರ್ತಾಭಾರತಿಯಲ್ಲಿ ಮಾಡಿದ್ದ ಕೊರೋನ ಕುರಿತಾದ ಮೊದಲ ವಿಡಿಯೋ
—-//
ಮರುದಿನ ಅದಕ್ಕೆ ಬಂದ ಪ್ರತಿಕ್ರಿಯೆಗಳ ಬಗ್ಗೆ ಮಾರ್ಚ್ 11ರಂದು ಬರೆದದ್ದು ಹೀಗೆ:
—–//
ಅಲ್ಲ ಸಾರ್, ಕೋಳಿ, ಮೀನು ತಿನ್ನಬಹುದು ಅಂತ ಹೇಳಿದ್ದೀರಲ್ಲಾ, ತಿಂದು ನಾವು ಸಾಯಬೇಕಾ?
ಓ, ಯಾಕೆ?
ಕೊರೊನಾ ಹರಡುವಾಗ ತಿನ್ನಬಹುದು ಅಂತ ಹೇಳಿದ್ದೀರಲ್ಲಾ, ಅದಕ್ಕೆ ಕೇಳಿದೆ
ಅದು ಗೊತ್ತಾಯ್ತು. ತಿಂದರೆ ಸಾಯುವುದು ಯಾಕೆ ಅಂತ ನಾನು ಕೇಳುತ್ತಿರುವುದು
ಎಲ್ಲರೂ ಹಾಗೆ ಹೇಳುತ್ತಿದ್ದಾರೆ, ಆದರೆ ನೀವು ಮಾತ್ರ ಅದನ್ನು ತಿನ್ನಬಹುದು ಅಂತ ಹೇಳುತ್ತಿದ್ದೀರಲ್ಲಾ?
ಎಲ್ಲರೂ ಅಂದರೆ ಯಾರು? ತಜ್ಞರಾ? ವಿಶ್ವ ಆರೋಗ್ಯ ಸಂಸ್ಥೆಯಾ? ಸಿ.ಡಿ.ಸಿ.ಯಾ? ಚೀನಾದವರಾ? ಯಾರು ಹೇಳಿದ್ದಾರೆ?
ಅವರಲ್ಲ
ಮತ್ತೆ ಯಾರು?
ಗೊತ್ತಿಲ್ಲ
ಹಾಗಾದರೆ ಕೋಳಿ ತಿನ್ನಬಾರದು ಅಂತ ಯಾರಾದರೂ ತಜ್ಞರಾಗಲೀ ಅಥವಾ ಸಂಸ್ಥೆಗಳಾಗಲೀ ಹೇಳಿದ್ದಾರೆಯೇ ಅಂತ ಸ್ವಲ್ಪ ಹುಡುಕಿಕೊಳ್ಳಿ. ತಿನ್ನಬಾರದು ಎಂದು ಅಂಥವರು ಯಾರೂ ಹೇಳಿಲ್ಲ ಎಂದಾದರೆ ತಿನ್ನಬಹುದು ಎಂದು ನಾನು ಹೇಳಿದ್ದು ಸರಿ ಅಂತಾಯಿತಲ್ಲ? ಒಂದೋ ತಜ್ಞರ ಸಲಹೆಗಳನ್ನು ಪಾಲಿಸಿ, ಅಥವಾ ಏನೂ ಅರಿವಿಲ್ಲದೆ ಸುಮ್ಮನೆ ಸುಳ್ಳುಗಳನ್ನು, ಭಯವನ್ನು ಹರಡುತ್ತಿರುವವರನ್ನು ನಂಬಿ ಮನೆಯೊಳಗೆ ಏನೂ ತಿನ್ನದೆ ಕುಳಿತುಕೊಳ್ಳಿ.
ನಮಸ್ಕಾರ ಸರ್.
—-//
ವರ್ಷ ಒಂದಾಯಿತು.
March 10, 2021
All the exemptions being given to corona vaccinees must be extended to corona infected ones too.
ಕೊರೋನ ಲಸಿಕೆ ಹಾಕಿಸಿಕೊಂಡವರಿಗೆ ನೀಡಹೊರಟಿರುವ ಎಲ್ಲಾ ವಿನಾಯಿತಿಗಳನ್ನು ಕೊರೋನ ಸೋಂಕಿತರಾಗಿದ್ದವರಿಗೂ ನೀಡಲೇಬೇಕು.
Denmark, Iceland and Norway have suspended use of the AstraZeneca COVID-19 vaccine as a precaution amid reports of blood clotting in some people who have received it.
Quite a few medical professionals circulated such messages, that ‘sambar’, spices, namaste etc., would protect Indians. The very same people later claimed that banging plates and lighting diyas would chase away corona, and now, most of them are actively promoting vaccination as a nationalistic duty
March 12, 2021
India Today falsely claims Indian COVID-19 vaccine prices are the lowest in the world
ಕೊರೋನಾ: ಐಸಿಯು ಕೋಣೆಯ ಹೃದಯ ಹಿಂಡುವ ಅನುಭವಗಳು | SANMARGA NEWS
March 13, 2021
ಕಳೆದ ವರ್ಷ, ಇದೇ ಮಾರ್ಚ್ 13ರ ದಿನ
————-//
ಮಾರ್ಚ್ 13, 2020ರ ಸಂಜೆ ಕರ್ನಾಟಕದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ರಾಜ್ಯದಾದ್ಯಂತ ಶಾಲೆ-ಕಾಲೇಜು, ಮಳಿಗೆಗಳು, ಸಿನಿಮಾ ಮಂದಿರಗಳು, ಮದುವೆ ಸಮಾರಂಭಗಳು ಮುಂತಾದವನ್ನು ಕೊರೋನ ಭೀತಿಯ ಕಾರಣಕ್ಕೆ ಮುಚ್ಚುವ ನಿರ್ಧಾರವನ್ನು ಕೈಗೊಂಡಾಗ ನಾನು ಬರೆದದ್ದು ಹೀಗಿತ್ತು.
ನಾನು ಹಾಗೆ ಬರೆಯಲು ಮೂರು ಪ್ರಮುಖ ಕಾರಣಗಳಿದ್ದವು. ಮೊದಲನೆಯದಾಗಿ, ಆ ದಿನಕ್ಕೆ ರಾಜ್ಯದಲ್ಲಿ ಕಲ್ಬುರ್ಗಿಯ ಹಿರಿಯರೊಬ್ಬರು ಮೃತರಾಗಿದ್ದರು, ಒಟ್ಟು ಕೊರೋನ ಪ್ರಕರಣಗಳ ಸಂಖ್ಯೆಯು ಕೇವಲ 11 ಆಗಿತ್ತು, ಮತ್ತು ಅವರೆಲ್ಲರೂ ಆಸ್ಪತ್ರೆಗಳಲ್ಲೇ ಪ್ರತ್ಯೇಕಿಸಲ್ಪಟ್ಟಿದ್ದರು, ಸಮುದಾಯದಲ್ಲಿ ಕೊರೋನ ಹರಡುವಿಕೆಯು ಇರಲೇ ಇಲ್ಲ, ಶಾಲೆ-ಕಾಲೇಜು-ಮಳಿಗೆ- ಚಿತ್ರಮಂದಿರಗಳಲ್ಲಿ ಕೊರೋನ ಹರಡಬಲ್ಲವರು ಯಾರೂ ಇರಲೇ ಇಲ್ಲ, ಆದ್ದರಿಂದ ಆ ಹಂತದಲ್ಲಿ ಅವನ್ನೆಲ್ಲ ಮುಚ್ಚುವುದರಿಂದ ಯಾವ ಪ್ರಯೋಜನವೂ ಆಗುವ ಸಾಧ್ಯತೆಯೇ ಇರಲಿಲ್ಲ. ಎರಡನೆಯದಾಗಿ, ಕೊರೋನ ಸೋಂಕು ಮನೆಯೊಳಗೆ, ಮನೆ ಮಂದಿಗೆ, ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಗಳೇ ಹೆಚ್ಚು, ಅದನ್ನು ತಡೆಯಬೇಕಾದರೆ ಸೋಂಕಿತರು ಮನೆಯವರಿಂದ ಪ್ರತ್ಯೇಕವಾಗಿ ಮೂರರಿಂದ ಆರಡಿ ಅಂತರವನ್ನು ಕಾಯ್ದುಕೊಳ್ಳುವುದು ಅತಿ ಮುಖ್ಯ, ಕೊರೋನ ಸೋಂಕಿನಿಂದ ಹೆಚ್ಚಿನವರಲ್ಲಿ ಅತಿ ಸೌಮ್ಯವಾದ ರೋಗವುಂಟಾಗುತ್ತದೆ, ಹಿರಿವಯಸ್ಕರು ಮತ್ತು ಅನ್ಯ ಗಂಭೀರ ಸಮಸ್ಯೆಗಳಿದ್ದವರಲ್ಲಷ್ಟೇ ಅದು ಉಲ್ಬಣಿಸುತ್ತದೆ, ಆದ್ದರಿಂದ ಅಂಥವರನ್ನು ಸುರಕ್ಷಿತವಾಗಿರಿಸುವುದೇ ಅತಿ ಮುಖ್ಯ ಎಂಬ ಮಾಹಿತಿಯು ಚೀನಾ ಮತ್ತು ಇಟೆಲಿಗಳ ಅನುಭವದಿಂದ ಲಭ್ಯವಾಗಿತ್ತು. ಮೂರನೆಯದಾಗಿ, ಆ ಸಭೆಯಲ್ಲಿ ಓರ್ವ ಹೃದಯದ ಸರ್ಜನರು ವಿಪರೀತವಾದ ಭಯವನ್ನು ಹುಟ್ಟಿಸಿದ್ದು ಮತ್ತು ಸರಕಾರವು ಏನಾದರೂ ಮಾಡಿ ತೋರಿಸಲೇಬೇಕು ಎಂದು ಮಾಧ್ಯಮಗಳು ಎಗರಾಡುತ್ತಿದ್ದು ಆ ನಿರ್ಧಾರಕ್ಕೆ ಕಾರಣವಾಯಿತೆನ್ನುವ ಮಾಹಿತಿಯು ಆ ಸಭೆಯಲ್ಲಿ ಭಾಗಿಯಾಗಿದ್ದ ನನ್ನ ಸಹೋದ್ಯೋಗಿಗಳಿಂದ ನನಗೆ ದೊರೆತಿತ್ತು.
ಮಾರನೇ ದಿನ ಸರ್ಕಾರದ ನಿರ್ಧಾರವು ಪತ್ರಿಕೆಗಳಲ್ಲಿ ಪ್ರಕಟವಾದಾಗ ವಾರ್ತಾಭಾರತಿ ಪತ್ರಿಕೆಯ ಮುಖಪುಟದಲ್ಲಿ ನನ್ನ ಹೇಳಿಕೆಯನ್ನೂ ಪ್ರಕಟಿಸಿದ್ದರು. ಅನೇಕರು ನನ್ನ ಹೇಳಿಕೆಗೆ ಬೆಂಬಲವನ್ನೂ ವ್ಯಕ್ತಪಡಿಸಿದ್ದರು. ಅದಾಗಿ ಒಂದೆರಡು ದಿನಗಳಾಗುವಾಗ ವಾರ್ತಾಭಾರತಿಯ ಆ ಪ್ರಕಟಣೆಯು ಎಲ್ಲೆಡೆ ಸುತ್ತುತ್ತಿದೆ, ಸರ್ಕಾರದ ಕಟ್ಟಾ ಬೆಂಬಲಿಗರಿಂದ ಟೀಕೆಗಳ ಸುರಿಮಳೆಯಾಗುತ್ತಿದೆ ಎಂದು ತಿಳಿಯಿತು! ಅದರೊಂದಿಗೆ ದೇಶಪ್ರೇಮ, ರಾಜಕೀಯ, ಮೋದಿ, ಯೋಗ, ಎಲ್ಲವೂ ಬೆರಕೆಯಾಗುತ್ತಿದೆ ಎನ್ನುವುದೂ ತಿಳಿಯಿತು! (ರಾಜ್ಯ ಸರ್ಕಾರದ ನಿರ್ಧಾರದ ವಿಷಯಕ್ಕೆ ಮೋದಿಯವರನ್ನೇಕೆ ಎಳೆದರು ಎನ್ನುವುದು ಇಂದಿಗೂ ಅರ್ಥವಾಗಿಲ್ಲ) ಮೇಲ್ಜಾತಿಯವರ ವಾಟ್ಸಾಪ್ ಬಳಗವೊಂದರಲ್ಲಿ ಭಯಂಕರ ಚರ್ಚೆ ನಡೆಯುತ್ತಿದೆಯೆಂದೂ, ಪೊಲೀಸರಿಗೆ ದೂರು ಸಲ್ಲಿಕೆಯಾಗುವ ಸಾಧ್ಯತೆಗಳಿವೆಯೆಂದೂ ಮಾಹಿತಿ ಬಂತು!
ಆ ನಡುವೆ ಆಡಳಿತ ಪಕ್ಷದ ಹಿರಿಯ ನಾಯಕರೊಬ್ಬರು ನನ್ನ ಹೇಳಿಕೆಯನ್ನು ಮೆಚ್ಚಿ, ‘ಡಾಕ್ಟ್ರೇ, ವೈಜ್ಞಾನಿಕವಾಗಿ ನೀವೊಬ್ಬರೇ ಹೇಳಿದ್ದೀರಿ, ದಯವಿಟ್ಟು ಕೊರೋನ ನಿಯಂತ್ರಣೋಪಾಯಗಳ ಬಗ್ಗೆ ನಿಮ್ಮಅನಿಸಿಕೆಯನ್ನು ಬರೆದು ಕೊಡಿ, ಮುಖ್ಯಮಂತ್ರಿಗಳಿಗೆ ತಲುಪಿಸುತ್ತೇನೆ’ ಎಂದರು. ಮಾರ್ಚ್ 17ರಂದು ಅದನ್ನು ಕಳಿಸಿಕೊಟ್ಟೆ. ಅದೇ ದಿನ ಪ್ರಜಾವಾಣಿಯ ವರದಿಗಾರರು ಕೂಡ ಅದನ್ನೇ ಕೇಳಿದ್ದರು, ಅವರಿಗೂ ಕಳಿಸಿದೆ. ಅದಾಗಿ ಎರಡು ದಿನಗಳಲ್ಲಿ ಪುತ್ತೂರು ಪೊಲೀಸ್ ಠಾಣೆಯಿಂದ ಕರೆ ಬಂತು – ನಿಮ್ಮ ಮೇಲೆ ದೂರು ದಾಖಲಾಗಿದೆ, ನಾಳೆಯೇ ಬರಬೇಕು ಎಂದು ಹೇಳಲಾಯಿತು. ‘ನೋಡಿ, ನಾನೊಬ್ಬ ವೈದ್ಯ, ಯಾವ ಸರಕಾರಕ್ಕೆ ವಿರೋಧವಾಗಿ ಬರೆದಿದ್ದೇನೆ ಎಂದು ದೂರು ಕೊಡಲಾಗಿದೆಯೋ, ಅದೇ ಸರಕಾರದ ಪರವಾಗಿ ಅದೇ ಆಡಳಿತ ಪಕ್ಷದ ನಾಯಕರು ಮೊನ್ನೆಯೇ ನಾನು ಬರೆದದ್ದನ್ನು ಮೆಚ್ಚಿ ವಿವರಗಳನ್ನು ಬರೆಸಿಕೊಂಡಿದ್ದಾರೆ, ನಾಳೆ ಪತ್ರಿಕೆಯಲ್ಲೂ ಬರಲಿದೆ, ಕೆಲಸದ ಒತ್ತಡವಿದೆ, ಕೊರೋನ ಬಗ್ಗೆ ಇನ್ನಷ್ಟು ಓದಿ ಬರೆಯುವುದಿದೆ, ಠಾಣೆಗೆ ಬರಲು ಕಷ್ಟ’ ಎಂದೆ. ‘ಸರ್, ಹಾಗಾದರೆ ಅವರಿಗೆ ಬರೆದದ್ದನ್ನೇ ನಮಗೆ ಕಳಿಸಿಕೊಡಿ, ಅಷ್ಟೇ ಸಾಕು’ ಎಂದರವರು. ‘ದೂರಿನ ಪ್ರತಿಯನ್ನು ನನಗೆ ಕಳಿಸಿಕೊಟ್ಟರೆ ಕೂಡಲೇ ಉತ್ತರ ಬರೆಯುತ್ತೇನೆ’ ಎಂದೆ, ‘ಸರಿ ಸರ್, ಇನ್ಸ್ ಪೆಕ್ಟರ್ ಅವರಲ್ಲಿ ಹೇಳ್ತೇನೆ’ ಅಂತ ಉತ್ತರಿಸಿದರು, ಆ ಮೇಲೆ ಅಲ್ಲಿಂದೇನೂ ಬರಲಿಲ್ಲ. ಅದಾಗಿ ಎರಡು ದಿನಗಳಲ್ಲಿ ಅಲ್ಲಿನ ಪತ್ರಿಕೆಯಲ್ಲಿ ದೂರಿನ ಬಗ್ಗೆ ವರದಿಯೊಂದು ಪ್ರಕಟವಾಯಿತು, ಅದರಲ್ಲಿಯೂ, ‘ತಜ್ಞ ವೈದ್ಯರಾಗಿ, ಎಲ್ಲ ವಿಷಯಗಳನ್ನು ತಿಳಿದವರಾಗಿ’ ಅಂತೆಲ್ಲ ಹೊಗಳಿಕೆಗಳೂ ಇದ್ದವು! ಅದು ಒಂದಷ್ಟು ಸುತ್ತಿತು, ಸಂಗಾತಿಗಳೂ, ಮಿತ್ರರೂ ಆ ಬಗ್ಗೆ ಕೇಳಿದ್ದರು, ಆತಂಕವಿಲ್ಲ ಎಂದು ಧೈರ್ಯ ಹೇಳಿದ್ದೆ.
ಅದರ ಬೆನ್ನಿಗೇ ವಾರ್ತಾಭಾರತಿಯ Mohammed Muslimm Koppa ಅವರಿಗೆ ಕರೆ ಮಾಡಿ, ಇದನ್ನೆಲ್ಲ ಹೇಳಿ, ‘ಇನ್ನು ಕೊರೋನ ಬಗ್ಗೆ ಏನೇನು ವಿಷಯಗಳು ಲಭ್ಯವಾಗುತ್ತವೋ, ಬರೆಯುತ್ತಲೇ ಹೋಗುತ್ತೇನೆ, ಆಗಬಹುದೇ?’ ಅಂತ ಕೇಳಿದೆ. ‘ಖಂಡಿತ ಸರ್, ಬರೆದು ಕಳಿಸಿ, ಕೂಡಲೇ ಪ್ರಕಟಿಸುತ್ತೇವೆ’ ಎಂದರವರು. ಉಳಿದದ್ದು ನಿಮಗೆಲ್ಲ ಗೊತ್ತೇ ಇದೆ.
March 14, 2021
ಮಾರ್ಚ್ 14, 2020ರಂದು ಹೇಳಿದ್ದನ್ನು ಕೇಳಿದ್ದರೆ…
15000 ಕೋಟಿ ತೆರಿಗೆ ನಷ್ಟ, ರಾಜ್ಯದ ಒಟ್ಟು ಉತ್ಪನ್ನದಲ್ಲಿ 2.6% ಇಳಿಕೆ, ಸಂಬಳ ಕೊಡಲಿಕ್ಕೂ ಸಾಲ ಎತ್ತಬೇಕಾದ ದುಸ್ಥಿತಿ ಬರುತ್ತಲೇ ಇರಲಿಲ್ಲ.
March 14, 2021
AstraZeneca Plc’s European vaccine nightmare is worsening, with a number of countries halting shots over safety fears as further delivery delays prompt governments around the world to hoard doses they’ve already got.At least 10 countries including Italy and Norway reacted after Austria, and later Denmark, raised concerns over the possible side effects from two batches. While Europe’s medicines regulator said there was no indication of issues, it led to a spate of suspensions stretching as far as Thailand.
The study, published in the journal PLOS Biology, assessed hundreds of thousands of sequenced genomes of the SARS-CoV-2 virus and found that for the first 11 months of the COVID-19 pandemic, there has been very little ”important genetic change” observed in the coronavirus.
Dr Gagandeep Kang had pointed out in January itself that publication of the results of studies done in India on OxAZ vaccine is important for similar reasons.
Even as the ongoing COVID pandemic has affected blood banks with very few donors coming forward, a recent order by the National Blood Transfusion Council (NBTC) may just make it worse. NBTC states that blood can be donated only 28 days after a person takes the COVID vaccination.
—///
ಈ ಸರಕಾರ, ಅದರ ಸಮಿತಿಗಳು, ಅಧೀನ ಸಂಸ್ಥೆಗಳು ತೋರಿಸುತ್ತಿರುವ ಮೂರ್ಖತನಕ್ಕೆ ಎಣೆಯೂ ಇಲ್ಲ, ಕೊನೆಯೂ ಇಲ್ಲ. ಎಲ್ಲಾ ತಂತ್ರ-ಕುತಂತ್ರಗಳಿಂದ ಲಸಿಕೆ ವಹಿವಾಟು ಹೆಚ್ಚಿಸಲೇ ಬೇಕು ಎನ್ನುವ ಹಠವಿದ್ದರೆ ಬೇರೆ ದಾರಿ ಹುಡುಕಿಕೊಳ್ಳಿ, ಇದು ಬೇಡ.
There seems to be no limit, no end to the utter foolishness of the govt, it’s so called committees and its agencies. If vaccines are to be forced by hook or crook, find other means, not this.
Still reeling from the effect of last year’s lockdown, the economically weaker sections are suffering the most due to the jump in prices of food items, which is caused by fuel price hike.
500 ಮಂದಿ ಮದುವೆಗೆ, ಸಾವಿರಾರು ಮಂದಿ ಜಾತ್ರೆಗೆ ಹೋಗಬಹುದು,
50 ಮಕ್ಕಳು ಶಾಲೆಗೆ ಹೋಗಕೂಡದು!
#ಕಾರ್ಯ_ಪಡೆ!
March 16, 2021
ಕೊರೊನ ಎರಡನೇ ಅಲೆ ಆತಂಕ ಡಾಕ್ಟರ್ ಶ್ರೀನಿವಾಸ್ ಕಕ್ಕಿಲಾಯ ಸಲಹೆ…!| #Rajadhani Suddi
March 16, 2021
During the hearing the bench orally observed that “Right to Education is a Fundamental right under Article 21A. The provision of mid-day meal will become a fundamental right, as you cannot ask them to study on an empty stomach.
ಅಂಗನವಾಡಿಯ ಮಕ್ಕಳಿಗೆ ಬಿಸಿಯೂಟ ನೀಡಬೇಕು, ಹಸಿದ ಹೊಟ್ಟೆಯಲ್ಲಿ ಮಕ್ಕಳು ಕಲಿಯಲು ಸಾಧ್ಯವಿಲ್ಲ; ಶಾಲೆಗಳನ್ನು ಆರಂಭಿಸುವ ಬಗ್ಗೆ ತಿಳಿಸಬೇಕು – ಉಚ್ಚ ನ್ಯಾಯಾಲಯ
March 17, 2021
In England, SARS-CoV-2 infection rates were low in primary schools following their partial and full reopening in June and September, 2020.
ಪ್ರಾಥಮಿಕ ಶಾಲೆಗಳನ್ನು ತೆರೆದುದರಿಂದ ಕೊರೋನ ಹರಡುವಿಕೆ ಹೆಚ್ಚಲಿಲ್ಲ, ಅದು ಕಡಿಮೆಯೇ ಇತ್ತು ಎಂದು ಇನ್ನೊಂದು ದೊಡ್ಡ ಅಧ್ಯಯನ ತೋರಿಸಿದೆ. ಆದರೆ ಇಂಥವು ಎಷ್ಟೇ ಪ್ರಕಟಗೊಂಡರೂ ಸರ್ಕಾರವಾಗಲೀ, ಮಾಧ್ಯಮಗಳಾಗಲೀ, ಅದೇನೋ ಕಾರ್ಯಪಡೆ ಅಂತಿದೆಯಲ್ಲ, ಆದಾಗಲೀ, ಪೋಷಕರಾಗಲೀ ಬದಲಾಗುವುದಿಲ್ಲ, ಮಕ್ಕಳ ಭವಿಷ್ಯವನ್ನು ಸರ್ವನಾಶ ಮಾಡುವುದಕ್ಕೆ ಇವರೆಲ್ಲರೂ ನಿರ್ಧರಿಸಿಯಾಗಿದೆ.
SARS-CoV-2 infection and transmission in primary schools in England in June–December, 2020 (sKIDs): an active, prospective surveillance study
Financial issues brought by last year’s coronavirus pandemic have pushed about 32 million Indians out of the middle class, undoing years of economic gains, a report showed today, while job losses pushed millions into poverty.
ಕಳೆದ ವರ್ಷ ಮಾರ್ಚ್ 19ರಂದು ಚಪ್ಪಾಳೆ ತಟ್ಟುವಂತೆ ಬೆರಳೆತ್ತಿ ಹೇಳಿದಾಗ ಬರೆದದ್ದು ಕೆಳಗಿದೆ. ಈ ಒಅಂದು ವರ್ಷದಲ್ಲಿ ನಡೆದದ್ದು ಹೀಗಿದೆ:
ಒಂದು ವರ್ಷದಲ್ಲಿ ಪರೀಕ್ಷೆಗಳಿಗೆ ಖರ್ಚು ಮಾಡಿಸಿದ್ದು 60000 ಕೋಟಿ, ಆಸ್ಪತ್ರೆ, ಆರೋಗ್ಯ ಸೇವೆಗಳಿಗೆ ಮಾಡಿದ್ದು 15000 ಕೋಟಿ!
ವೈದ್ಯರ ಸಂಬಳಕ್ಕೆ 75% ಕತ್ತರಿ, ದಾದಿಯರದ್ದಕ್ಕೆ 50%, ಉಳಿದ ಸಿಬ್ಬಂದಿಯವರದ್ದಕ್ಕೆ 30% ಕತ್ತರಿ. ಹೀಗೆ ಆರೋಗ್ಯ ಸೇವೆಗಳಲ್ಲಿದ್ದವರಿಗೆ ಸಂಬಳವನ್ನೂ ಕೊಡದೆ ಚಪ್ಪಾಳೆ ತಟ್ಟಿಸಿ ಮೋಸ ಮಾಡಿದ್ದು ಇಲ್ಲಿ ಮಾತ್ರ!
“ಸ್ವಾಮಿ, ನಮಗೆ ಒಳ್ಳೆಯ ಆಸ್ಪತ್ರೆ, ಉಪಕರಣಗಳು, ಸಿಬಂದಿ ಕೊಡಿ, ಸಾಕು. ಅದನ್ನು ಕೊಡದೆ ಬೇರೆಯವರಿಂದ ಶಿಳ್ಳೆ, ಚಪ್ಪಾಳೆ ಯಾಕೆ? ಅದೆಲ್ಲ ನಿಮಗೇ ಇಟ್ಟುಕೊಳ್ಳಿ.”
March 19, 2021
ಆಗ ಕೊರೋನ ತಗಲಿ ತಾವಾಗಿ ವಾಸಿಯಾದವರಿಗೆ ಹೂಮಾಲೆ, ಈಗ ಲಸಿಕೆ ಹಾಕಿಸಿಕೊಂಡವರಿಗೆ ಹೂಮಾಲೆ 😁