ಫ್ಲೂ ಎಂದು ಹೆದರುವಿರೇಕೆ?

ಹೊಸ 2009 ಹೆಚ್1 ಎನ್ 1  ಫ್ಲೂ ಸೋಂಕಿನ ಬಗ್ಗೆ ಜಗತ್ತಿನಾದ್ಯಂತ ಹುಟ್ಟಿಸಲಾಗಿರುವ ಭಯ-ಆತಂಕಗಳ ಹಿನ್ನೆಲೆಯಲ್ಲಿ, ಫ್ಲೂ ರೋಗದ ವೈಜ್ಞಾನಿಕ ಸತ್ಯಗಳ ಬಗ್ಗೆ ಬರೆಯಲಾಗಿರುವ ಪುಸ್ತಕವಿದು. ನನ್ನ ಸ್ವಂತ ಬರವಣಿಗೆಯಲ್ಲಿ ಪ್ರಕಟವಾಗಿರುವ ಮೊದಲ ಪುಸ್ತಕವೂ ಹೌದು.

ಫ್ಲೂ ಸೋಂಕು ಸಾಮಾನ್ಯವಾಗಿರುವುದಷ್ಟೇ ಅಲ್ಲ, ಅದನ್ನುಂಟು ಮಾಡುವ ವೈರಸ್ ಆಗಾಗ ರೂಪು ಬದಲಿಸಿಕೊಳ್ಳುವುದೂ ಹೊಸ ವಿಚಾರವೇನಲ್ಲ. ಹಾಗೆಯೇ ಹೊಸ ರೂಪ ಧರಿಸಿ ಬಂದ ಫ್ಲೂ ವೈರಸ್ ಬಗ್ಗೆ ವಿಪರೀತವಾದ ಭೀತಿಯನ್ನು ಹುಟ್ಟಿಸಿ, ಅದರ ಪತ್ತೆಗಾಗಿ ದುಬಾರಿಯಾದ ಪರೀಕ್ಷೆಗಳನ್ನೂ, ಪ್ರಯೋಜನಕ್ಕಿಲ್ಲದ ಔಷಧಗಳನ್ನೂ, ಪ್ರಶ್ನಾರ್ಹವಾದ ಲಸಿಕೆಗಳನ್ನೂ ಅಮಾಯಕರ ಮೇಲೆ ಹೇರಲು ಬಹುರಾಷ್ಟ್ರೀಯ ದೈತ್ಯ ಕಂಪೆನಿಗಳು  ನಡೆಸಿದ ತಂತ್ರಗಾರಿಕೆಯನ್ನು ಎಳೆ-ಎಳೆಯಾಗಿ, ಆಧಾರ ಸಹಿತವಾಗಿ ಬಿಚ್ಚಿಡುವ ಪುಸ್ತಕ ಇದು. ಈ ಕೄತಿಗೆ ಶಿವಮೊಗ್ಗದ  ಕರ್ನಾಟಕ ಸಂಘವು 2010ರ ಡಾ. ಎಚ್.ಡಿ. ಚಂದ್ರಪ್ಪ ಗೌಡ ಅತ್ಯುತ್ತಮ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು ನೀಡಿದೆ.

ಮೊದಲ ಮುದ್ರಣ: 2010; ಪರಿಷ್ಕೃತ ಎರಡನೇ ಮುದ್ರಣ: 2011

ISBN: 9788184671551; NKP: 001536;  40/-

http://navakarnataka.com/

ಪುಸ್ತಕ ವಿಮರ್ಶೆಗಳು: ಹೊಸದಿಗಂತ, ಅಕ್ಟೋಬರ್ 24, 2010; ಪ್ರಜಾವಾಣಿ, ಸೆಪ್ಟೆಂಬರ್ 18, 2011